ಚಂಡೀಗಢ: ಸೋಶಿಯಲ್ ಮೀಡಿಯಾದಲ್ಲಿ ಫೇಮಸ್ ಆಗಲು ಜನರು ಯಾವುದ್ಯಾವುದೋ ರೀಲ್‌ಗಳನ್ನು ಮಾಡುತ್ತಿರುತ್ತಾರೆ. ಇದೀಗ ಅಂಥದ್ದೇ ಒಂದು ವಿಡಿಯೊ ಸಿಕ್ಕಾಪಟ್ಟೆ ವೈರಲ್ ಆಗಿದೆ. ವಿದೇಶಿ ಯುವತಿಯೊಬ್ಬಳು ಸೈಕಲ್‍ನಲ್ಲಿ ನಿಂತಿದ್ದ ಹರಿಯಾಣದ ಹುಡುಗನಿಗೆ ವಿಶೇಷ ಆಫರ್ ಅನ್ನು ನೀಡಿ ಅಚ್ಚರಿ ಮೂಡಿಸಿದ್ದಾಳೆ. ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ (Viral Video) ಆಗಿದೆ. ಈ ವಿಡಿಯೊವನ್ನು ಸ್ವತಃ ರೂಬಿ ಹೆಕ್ಸ್ ಎಂಬ ಯುವತಿ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾಳೆ. ಈ ವಿಡಿಯೊದಲ್ಲಿ ಆಕೆ ಅಪರಿಚಿತರ ಬಳಿ ಹೋಗಿ ಹಣ ಬೇಕೆ ಅಥವಾ ತನ್ನ ಜತೆ ಡೇಟಿಂಗ್(Dating) ಇವೆರಡರಲ್ಲಿ ಯಾವುದನ್ನು ಆಯ್ಕೆ ಮಾಡುತ್ತೀರಾ ಎಂದು ಕೇಳಿದ್ದಾಳೆ. ಹೆಚ್ಚಿನ ಜನರು ಹಣವನ್ನು ಆಯ್ಕೆ ಮಾಡಿದ್ದಾರೆ. ಆದರೆ ಹರಿಯಾಣದ ಈ ಹುಡುಗ ನೀಡಿದ ಉತ್ತರದಿಂದ ಆಕೆ ಶಾಕ್ ಆಗಿದ್ದಾಳೆ.
ವೈರಲ್ ವಿಡಿಯೊದಲ್ಲಿ ರೂಬಿ ಕೈಯಲ್ಲಿ ಮೈಕ್ ಹಿಡಿದು ಸೈಕಲ್‍ನಲ್ಲಿ ನಿಂತು ಫೋನ್‍ನಲ್ಲಿ ಸಹೋದರನೊಂದಿಗೆ ಮಾತನಾಡುತ್ತಿದ್ದ ಹುಡುಗನ ಬಳಿ ಹೋಗಿ “ನಿಮಗೆ 100 ಡಾಲರ್ (8,500 ರೂ.) ಬೇಕೇ ಅಥವಾ ನನ್ನ ಜೊತೆ ಡೇಟಿಂಗ್ ಮಾಡಲು ಇಷ್ಟಪಡುತ್ತೀರಾ?ʼʼ ಎಂದು ಕೇಳಿದ್ದಾಳೆ. ಆದರೆ ಆ ಹುಡುಗ ಅವಳು ನೀಡಿದ ಎರಡೂ ಆಯ್ಕೆಯನ್ನು ತಿರಸ್ಕರಿಸುವ ಮೂಲಕ ಶಾಕ್ ನೀಡಿದ್ದಾನೆ.