Karunadu Studio

ಕರ್ನಾಟಕ

Chikkaballapur News: ಕಾಂಗ್ರೆಸ್ ಆಡಳಿತದಲ್ಲಿ ಪ್ರಗತಿಯ ಚಕ್ರ ನಿಂತಿದೆ: ಜನಸಾಮಾನ್ಯರು ಬೆಲೆ ಏರಿಕೆಯಿಂದ ತತ್ತರಿಸಿದ್ದಾರೆ : ಬಿಜೆಪಿ ರಾಜ್ಯ ವಕ್ತಾರ ಭಾಸ್ಕರ್ ರಾವ್ ಆರೋಪ – Kannada News | The wheel of progress has come to a standstill under the Congress regime: Common people are suffering due to price hikes: BJP state spokesperson Bhaskar Rao alleges


ಚಿಕ್ಕಬಳ್ಳಾಪುರ : ಕಾಂಗ್ರೆಸ್ ಆಡಳಿತದಲ್ಲಿ ಕರ್ನಾಟಕದ ಪ್ರಗತಿಯ ಚಕ್ರ ನಿಂತಿದೆ. ಬೆಲೆ ಏರಿಕೆಯು ಗಗನಕ್ಕೇರಿದೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣವಾಗಿ ಕುಸಿದಿದೆ. ಈ ಸರ್ಕಾರ ಕೇವಲ ಪೊಳ್ಳು ಭಾಷಣ ಮತ್ತು ಆರೋಪ-ಪ್ರತ್ಯಾರೋಪಗಳಲ್ಲಿ ಕಾಲ ಕಳೆಯುತ್ತಿದೆ ಎಂದು ಮಾಜಿ ಐಪಿಎಸ್ ಅಧಿಕಾರಿ ಹಾಗೂ ಬಿಜೆಪಿ ರಾಜ್ಯ ವಕ್ತಾರ ಭಾಸ್ಕರ್ ರಾವ್ ಆರೋಪಿಸಿದರು.

ನಗರದ ಕಾರ್ಯನಿರತ ಪತ್ರಕರ್ತರ ಭವನದಲ್ಲಿ ಬುಧವಾರ ನಡೆದ ಸುದ್ದಿಗೋಷ್ಟಿಯನ್ನುದ್ದೇಶಿಸಿ ಮಾತನಾಡಿದರು. ನಮ್ಮ ಬಿಜೆಪಿ ಪಕ್ಷದ ಯಾವುದೇ ಕಾರ್ಯಕರ್ತ ನಿರ್ಭೀತಿಯಿಂದ ಕಾಂಗ್ರೆಸ್ ಸರಕಾರದ ವಿರುದ್ದ ಟೀಕೆ ಟಿಪ್ಪಣಿ ಮಾಡಿ, ನಿಮ್ಮ ಪರವಾಗಿ ಪಕ್ಷ ಇರಲಿದೆ ಎಂದು ಧೈರ್ಯ ಹೇಳಿದರು.

ಇದನ್ನೂ ಓದಿ: Chinnaswamy Stadium Stampede: ಚಿನ್ನಸ್ವಾಮಿ ಸ್ಟೇಡಿಯಂ ಕಾಲ್ತುಳಿತದಲ್ಲಿ 11 ಮಂದಿ ಸಾವು; ಮೃತರ ಕುಟುಂಬಕ್ಕೆ 10 ಲಕ್ಷ ಪರಿಹಾರ ಘೋಷಿಸಿದ ಸಿಎಂ

ಜನರ ಕಷ್ಟಗಳಿಗೆ ಸ್ಪಂದಿಸದೆ, ಅಭಿವೃದ್ಧಿಯನ್ನು ಮರೆತು, ಕೇವಲ ರಾಜಕೀಯ ಮಾಡುತ್ತಿರುವ ಕಾಂಗ್ರೆಸ್ ಸರ್ಕಾರದ ಈ ವರ್ತನೆಯೇ ಅದರ ನಿಜವಾದ ಜನವಿರೋಧಿ ಮುಖವನ್ನು ಬಯಲು ಮಾಡಿದೆ.

ಪಂಚ ಗ್ಯಾರಂಟಿಗಳನ್ನು ತೋರಿಸಿ ಅತಿ ಹೆಚ್ಚು ಸ್ಥಾನಗಳಲ್ಲು ಗೆದ್ದು ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರ ರಾಜಧಾನಿ ಕೋಗಳತೆ ದೂರದಲ್ಲಿರುವ ಚಿಕ್ಕಬಳ್ಳಾಪುರ ಜಿಲ್ಲೆಯನ್ನು ಒಂದು ಮುನ್ನೋಟ ವಿಟ್ಟು ಕೊಂಡು ಬೇರೆ ಬೇರೆ ರಾಜ್ಯಗಳ ರಾಜಧಾನಿಗಳ ಅಕ್ಕಪಕ್ಕದ ಜಿಲ್ಲೆಗಳನ್ನು ಆಭಿವೃದ್ದಿ ನಾಡಿದಂತೆ ಕೈಗಾರಿಕೆ,ಟೌನ್ ಶಿಫ್,ಸ್ಯಾಟಲೈಟ್ ಸಿಟಿಯಂತೆ ಅಭಿವೃದ್ದಿ ಪಡಿಸಬಹುದಿತ್ತು ಎಂದರು.

ಇಲ್ಲಿಯ ಸ್ಥಳೀಯ ರೈತರಿಗೆ ಬೆಳೆ ಬೆಳೆಯಲು ನೀರಾವರಿ ಯೋಜನೆಗಳು. ನಿರುದ್ಯೋಗಿಗಳಿಗೆ ಉದ್ಯೋಗ, ರಸ್ತೆಗಳ ಅಭಿವೃದ್ದಿ ಮಾಡಬಹುದಿತ್ತು. ಆದರೆ ಪಂಚ ಗ್ಯಾರಂಟಿಗಳು ಸಮರ್ಪಕವಾಗಿ ಅರ್ಹರಿಗೆ ತಲುಪುತ್ತದೆಯೋ ಇಲ್ಲವೂ ಎಂಬುದನ್ನು ಮಾಡುತ್ತಿಲ್ಲಾ. ಹೋಗಲಿ ಒಂದು ಕಿಲೋ ಮೀಟರ್ ರಸ್ತೆಯನ್ನಾದರೂ ಹಾಕಿದೆ ಎಂದರೆ ಅದೂ ಇಲ್ಲಾ.ಅಭಿವೃದ್ದಿಯಂತೂ ಶೂನ್ಯವಾಗಿದೆ ಎಂದು ಕಿಡಿ ಕಾರಿದರು.    

ಕರ್ನಾಟಕ ರಾಜ್ಯಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯ ಗೆಲುವಿನ ನಂತರ ‘ಪಾಕಿಸ್ತಾನ ಜಿಂದಾಬಾದ್’ ಘೋಷಣೆಯನ್ನು , ‘ನಾಸೀರ್ ಸಾಬ್ ಜಿಂದಾಬಾದ್’ ಎಂದು ಸಮರ್ಥಿಸಿದ ಕಾಂಗ್ರೆಸ್ ಸರ್ಕಾರ, ಈ ಘಟನೆ ಕಾಂಗ್ರೆಸ್ ಪಕ್ಷದ ನಿಜವಾದ ಬಣ್ಣವನ್ನು ತೋರಿಸುತ್ತದೆ. ಇಂತಹ ಘಟನೆಗಳು ಮತ್ತು ಅವುಗಳನ್ನು ಸಮರ್ಥಿಸಿಕೊಳ್ಳುವ ಪ್ರಯತ್ನಗಳು ಸಾರ್ವಜನಿಕರಲ್ಲಿ ಆತಂಕ ಮತ್ತು ಅನುಮಾನಗಳನ್ನು ಮೂಡಿಸುತ್ತವೆ ಎಂದರು.

ಕಾನೂನು ರಕ್ಷಿಸಬೇಕಾದ ಕಾಂಗ್ರೆಸ್ ಸರ್ಕಾರವೇ, ಪೊಲೀಸ್ ಠಾಣೆಗಳಿಗೆ ಬೆಂಕಿ ಹಚ್ಚಿದ ದುಷ್ಕರ್ಮಿ ಗಳನ್ನು ಓಲೈಸುತ್ತಿದೆ. ಹುಬ್ಬಳ್ಳಿ ಗಲಭೆ ಪ್ರಕರಣದಲ್ಲಿ ಆರೋಪಿಗಳ ಮೇಲಿನ ಕೇಸುಗಳನ್ನು ವಾಪಸ್ ಪಡೆದಿರುವುದು, ಹಾಗೂ ಡಿ.ಜಿ. ಹಳ್ಳಿ-ಕೆ.ಜಿ. ಹಳ್ಳಿ ಗಲಭೆಯಲ್ಲಿ ಗಲಭೆಕೋರರ ತುಷ್ಟಿಕರಣ ಮಾಡಿದ್ದೇ ಕಾಂಗ್ರೆಸ್ಸಿನ ಅಸಲಿ ಮುಖವಾಗಿದೆ. ಕರ್ನಾಟಕದಲ್ಲಿ ಪೊಲೀಸ್ ಠಾಣೆಗಳು ಇಂದು ಕಾಂಗ್ರೆಸ್ ಕಚೇರಿಗಳಾಗಿ ಮಾರ್ಪಟ್ಟಿವೆ. ಸರ್ಕಾರದ ವಿರುದ್ಧ ದನಿ ಎತ್ತುವವರ ಮೇಲೆ ಎಫ್‌ಐಆರ್‌ ಗಳ ಅಸ್ತ್ರ ಪ್ರಯೋಗಿಸಲಾಗುತ್ತಿದೆ ಎಂದರು.

ಛಲವಾದಿ ನಾರಾಯಣಸ್ವಾಮಿ, ಸಿ.ಟಿ. ರವಿ, ಹರೀಶ್ ಪೂಂಜಾ, ವಿಪಕ್ಷ ನಾಯಕರ ಮೇಲಿನ ಪ್ರಕರಣಗಳೇ ಇದಕ್ಕೆ ಜೀವಂತ ಸಾಕ್ಷಿಯಾಗಿವೆ. ಕಲಬುರಗಿಯಲ್ಲಿ ವಾಕಿಸ್ತಾನ ಧ್ವಜ ತುಳಿದ ಹಿಂದೂ ಕಾರ್ಯಕರ್ತರ ಮೇಲೆ ಸರ್ಕಾರದ ಸೂಚನೆಯಂತೆ ಪ್ರಕರಣ ದಾಖಲಿಸಿರುವ ರಾಜ್ಯ ಪೊಲೀಸ್ ಇಲಾಖೆಯವರು ಕಾಂಗ್ರೆಸ್ ಪಕ್ಷದಕಾರ್ಯಕರ್ತರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕರ್ನಾಟಕದಲ್ಲಿ ಕಾನೂನು ಸುವ್ಯವಸ್ಥೆ ಹಳ್ಳ ಹಿಡಿದು, ಜನತೆ ನಿತ್ಯ ಭಯದಲ್ಲಿ ಬದುಕುತ್ತಿದ್ದರೆ, ‘ನನಗೇನೂ ಮಾಹಿತಿ ಇಲ್ಲ, ಅವರಾಧ ನಡೆದರೆ ನನಗೇನೂ ಗೊತ್ತಿಲ್ಲ’ ಎಂದು ಜಾರಿಕೊಳ್ಳುತ್ತಾರೆ ನಮ್ಮ ಗೃಹ ಸಚಿವರು. ಅತ್ಯಾಚಾರ, ಹೆಣ್ಣುಮಕ್ಕಳ ಮೇಲಿನ ದೌರ್ಜನ್ಯಗಳನ್ನು ‘ದೊಡ್ಡ ನಗರಗಳಲ್ಲಿ ಇದೆಲ್ಲಾ ಸಾಮಾನ್ಯ’ ಎನ್ನುವ ಇಂತಹ ಬೇಜವಾಬ್ದಾರಿ ಮಂತ್ರಿಗಳಿಂದ ರಾಜ್ಯಕ್ಕೆ ರಕ್ಷಣೆ ಸಿಗುತ್ತದೆಂಬ ಯಾವ ಭರವಸೆಯೂ ಉಳಿದಿಲ್ಲ ಎಂದು ಹೇಳಿದರು.

ಕರ್ನಾಟಕದಲ್ಲಿ ಗೃಹ ಮಂತ್ರಿಗಳು ಪ್ರತಿ ಜಿಲ್ಲೆಗಳಲ್ಲಿಯೂ ಇದ್ದಾರೆ. ರಿಪಬ್ಲಿಕ್ ಆಫ್ ಕಲಬುರ್ಗಿ ಜಿಲ್ಲೆಗೆ ಪ್ರಿಯಾಂಕ ಖರ್ಗೆ,ರಿಪಬ್ಲಿಕ್ ಆಫ್ ದಕ್ಷಿಣ ಕನ್ನಡ ಜಿಲ್ಲೆಗೆ – ಯು.ಟಿ ಖಾದರ್, ರಿಪಬ್ಲಿಕ್ ಆಫ್ ಹುಬ್ಬಳಿ,ಧಾರವಾಡ ಜಿಲ್ಲೆಗೆ ಸಂತೋಷ್ ಲಾಡ್ ಇದ್ದಾರೆ.ಹೀಗಿರುವಾಗ ಅಭಿವೃದ್ದಿ ಶಾಂತಿ ಸುವ್ಯವಸ್ಥೆ ಹೇಗೆ ಸಾಧ್ಯ ಎಂದ ಅವರು,ಕರ್ನಾಟಕ ಪೊಲೀಸ್ ಠಾಣೆಗಳು ಇಂದು ಕಾಂಗ್ರೆಸ್ ಕಛೇರಿಗಳಾಗಿ ಬದಲಾಗಿವೆ.ದರಕಾರದ ವಿರುದ್ಧ ದನಿ ಎತ್ತುವರರ ವಿರುದ್ಧ ಎಫ್‌ಐಆರ್ ಅಸ್ತ್ರ ಪ್ರಯೋಗಿಸಲಾಗುತ್ತಿದೆ.ಇದು ಸರಿಯಾದ ಕ್ರಮವಲ್ಲ ಎಂದು ಹರಿಹಾಯ್ದರು.

ಬೆಂಗಳೂರಿಗೆ ಸಮೀಪವಿರುವ ಚಿಕ್ಕಬಳ್ಳಾಪುರ ಯಾವುದೇ ವಿಷನ್ ಇಲ್ಲದೆ ಸೊರಗಿದೆ.ಇಲ್ಲಿನ ಶಾಸಕರು ಪ್ರಚಾರಕ್ಕೆ ಸೀಮಿತರಾಗಿದ್ದಾರೆ ವಿನಃ ೨ ವರ್ಷಗಳಲ್ಲಿ ಯಾವುದೇ ಹೊಸ ಯೋಜನೆ ತಂದಿಲ್ಲ ಎಂದರು.

ಸುದ್ದಿಗೋಷ್ಟಿಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ರಾಮಲಿಂಗಪ್ಪ, ಪ್ರಧಾನ ಕಾರ್ಯದರ್ಶಿಗಳಾದ ಹೆಚ್.ಎಸ್.ಮುರಳೀಧರ್, ಕೆ.ಬಿ.ಮುರಳಿ,ಮಧು ಸೂಧನ ನಾರಾಯಣ ,ಮುಖಂಡರಾದ ಎ.ವಿ. ಬೈರೆಗೌಡ,ಅಶೋಕ್ ಕುಮಾರ್,ಮಧುಚಂದ್ರ,ಶ್ರೀನಾಥ್, ಎಬಿಕೆ ಬಾಲು ಇದ್ದರು.



Source link

ADMIN

About Author

Leave a comment

Your email address will not be published. Required fields are marked *

You may also like

ಕರ್ನಾಟಕ

Microsoft: Empowering the Digital World

Microsoft is a global technology company known for shaping the modern digital experience. From its iconic Windows operating system to
ಕರ್ನಾಟಕ

Microsoft: Empowering the Digital World

Microsoft is a global technology company known for shaping the modern digital experience. From its iconic Windows operating system to
Translate »