Karunadu Studio

ಕರ್ನಾಟಕ

T20 Mumbai League 2025: ಐಪಿಎಲ್‌ ಮುಗಿದರೂ ನಿಲ್ಲದ ಸೂರ್ಯಕುಮಾರ್‌ ಬ್ಯಾಟಿಂಗ್‌ ಆರ್ಭಟ – Kannada News | T20 Mumbai League 2025: Suryakumar Yadav hits 50 off 25 balls for Triumph Knights


ಮುಂಬಯಿ: 18ನೇ ಆವೃತ್ತಿಯ ಐಪಿಎಲ್‌(IPL 2025) ಟೂರ್ನಿ ಮುಕ್ತಾಯಗೊಂಡು 2 ದಿನಗಳು ಕಳೆದಿವೆ. ಆದರೆ ಸೂರ್ಯಕುಮಾರ್‌ ಯಾದವ್‌(Suryakumar Yadav) ಅವರ ಬ್ಯಾಟಿಂಗ್‌ ಅಬ್ಬರ ಮಾತ್ರ ಮುಂದುವರಿದಿದೆ. ಟಿ20 ಮುಂಬೈ ಲೀಗ್‌ನಲ್ಲಿ(T20 Mumbai League 2025) ಸಿಡಿಲಬ್ಬರದ ಬ್ಯಾಟಿಂಗ್‌ ನಡೆಸಿರುವ ಅವರು ಕೇವಲ 25 ಎಸೆತಗಳಿಂದ 50 ರನ್‌ ಬಾರಿಸಿ ಮಿಂಚಿದ್ದಾರೆ. ಇವರ ಈ ಬ್ಯಾಟಿಂಗ್‌ ಹೊರತಾಗಿಯೂ ತಂಡ 5 ವಿಕೆಟ್‌ ಅಂತರದ ಸೋಲು ಕಂಡಿತು.

ಬುಧವಾರ ರಾತ್ರಿ ನಡೆದಿದ್ದ ಪಂದ್ಯದಲ್ಲಿ ಟ್ರಯಂಫ್ ನೈಟ್ಸ್ ಮುಂಬೈ ನಾರ್ತ್ ಈಸ್ಟ್ ಪರ ಆಡಿದ್ದ ನಾಯಕ ಸೂರ್ಯಕುಮಾರ್‌, ಈಗಲ್ ಥಾಣೆ ಸ್ಟ್ರೈಕರ್ಸ್ ವಿರುದ್ಧ ಅಜೇಯ ಅರ್ಧಶತಕ ಸಿಡಿಸಿದರು. ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ನಡೆಸಿದ ಟ್ರಯಂಫ್ ನೈಟ್ಸ್ ಮುಂಬೈ ನಿಗದಿತ 20 ಒವರ್‌ಗಳಲ್ಲಿ 7 ವಿಕೆಟ್‌ಗೆ 179 ರನ್‌ ಬಾರಿಸಿತು. ಗುರಿ ಬೆನ್ನಟ್ಟಿದ ಈಗಲ್ ಥಾಣೆ 19.2 ಓವರ್‌ಗಳಲ್ಲಿ 5 ವಿಕೆಟ್‌ ನಷ್ಟಕ್ಕೆ 181 ರನ್‌ ಬಾರಿಸಿ ಗೆಲುವು ತನ್ನದಾಗಿಸಿಕೊಂಡಿತು.

ಐಪಿಎಲ್‌ ಟೂರ್ನಿಯಲ್ಲಿಯೂ ಸೂರ್ಯಕುಮಾರ್‌ ಅಮೋಘ ಬ್ಯಾಟಿಂಗ್‌ ಪ್ರದರ್ಶನ ತೋರಿದ್ದರು. ಆಡಿದ 16 ಪಂದ್ಯಗಳಿಂದ 717 ರನ್‌ ಬಾರಿಸಿ ಟೂರ್ನಿಯ 2ನೇ ಗರಿಷ್ಠ ಸ್ಕೋರರ್‌ ಎನಿಸಿಕೊಂಡಿದ್ದರು.

ಇದನ್ನೂ ಓದಿ IPL 2025: ʻನಾವು ತೀವ್ರ ದುಖಃದಲ್ಲಿದ್ದೇವೆʼ-ಕಾಲ್ತುಳಿತದ ಪ್ರಕರಣದ ಬಗ್ಗೆ ಆರ್‌ಸಿಬಿ ಪ್ರತಿಕ್ರಿಯೆ!

ಆಗಸ್ಟ್‌ನಲ್ಲಿ ಬಾಂಗ್ಲಾದೇಶ ವಿರುದ್ಧದ ಮೂರು ಪಂದ್ಯಗಳ ಟಿ20 ಸರಣಿಯಲ್ಲಿ ಸೂರ್ಯಕುಮಾರ್ ಭಾರತ ಪರ ಆಡಲಿದ್ದಾರೆ. ಈ ಸರಣಿಗೂ ಮುನ್ನ ಬ್ಯಾಟಿಂಗ್‌ ಫಾರ್ಮ್‌ ಉಳಿಸಿಕೊಳ್ಳುವ ಸಲುವಾಗಿ ಅವರು ವಿಶ್ರಾಂತಿ ಕೂಡ ಪಡೆಯದೆ ಐಪಿಎಲ್‌ ಮುಗಿದ ತಕ್ಷಣ ತಮ್ಮ ರಾಜ್ಯದ ಟಿ20 ಲೀಗ್‌ನಲ್ಲಿ ಆಡುಲು ಆರಂಭಿಸಿದ್ದಾರೆ.



Source link

ADMIN

About Author

Leave a comment

Your email address will not be published. Required fields are marked *

You may also like

ಕರ್ನಾಟಕ

Microsoft: Empowering the Digital World

Microsoft is a global technology company known for shaping the modern digital experience. From its iconic Windows operating system to
ಉತ್ತರ ಕರ್ನಾಟಕ ಕರ್ನಾಟಕ

“ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವದ ದಿನಾಚರಣೆಯಲ್ಲಿ ವಿಭಿನ್ನ ಹಾಗೂ ವಿಶೇಷತೆಯಿಂದ ಆಚರಣೆ”

  • September 16, 2024
ಧಾರವಾಡ ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವದ ದಿನಾಚರಣೆಯಲ್ಲಿ ವಿಭಿನ್ನ ಹಾಗೂ ವಿಶೇಷತೆಯಿಂದ ಆಚರಣೆ ಮಾಡುವ ಮೂಲಕ 95 ಸಾವಿರ ಜನರು ಪ್ರತ್ಯಕ್ಷವಾಗಿ ಭಾಗವಹಿಸಿ ರಾಜ್ಯದಲ್ಲಿಯೇ ನಂಬರ್ 1 ಸ್ಥಾನ ಪಡೆದ
Translate »