Karunadu Studio

ಕರ್ನಾಟಕ

Mahua Moitra: ವಿದೇಶದಲ್ಲಿ ಮಾಜಿ ಸಂಸದನ ಜತೆ ವೈವಾಹಿಕ ಜೀವನಕ್ಕೆ ಕಾಲಿಟ್ಟ ತೃಣಮೂಲ ಕಾಂಗ್ರೆಸ್ ಸಂಸದೆ ಮಹುವಾ ಮೊಯಿತ್ರಾ – Kannada News | Mahua Moitra Marries Former BJD MP Pinaki Misra


ನವದೆಹಲಿ: ತೃಣಮೂಲ ಕಾಂಗ್ರೆಸ್ (TMC) ಸಂಸದೆ ಮಹುವಾ ಮೊಯಿತ್ರಾ (Mahua Moitra) ಬಿಜು ಜನತಾ ದಳ (BJD) ಮಾಜಿ ಸಂಸದ ಪಿನಾಕಿ ಮಿಶ್ರಾ (Pinaki Misra) ಅವರೊಂದಿಗೆ ವಿದೇಶದಲ್ಲಿ ನಡೆದ ಖಾಸಗಿ ಸಮಾರಂಭದಲ್ಲಿ ವಿವಾಹವಾಗಿದ್ದಾರೆ ಎಂದು ಹಲವು ಮಾಧ್ಯಮ ವರದಿಗಳು ತಿಳಿಸಿವೆ. 50 ವರ್ಷದ ಮೊಯಿತ್ರಾ ಮತ್ತು 65 ವರ್ಷದ ಮಿಶ್ರಾ ಕೈಹಿಡಿದು ನಗುತ್ತಿರುವ ಫೋಟೊವೊಂದು ವಿವಾಹದ್ದೆಂದು ಹರಿದಾಡಿದೆ. ಆದರೆ ಇಬ್ಬರಿಂದಲೂ ಈ ವಿವಾಹದ ಬಗ್ಗೆ ಅಧಿಕೃತ ಮಾಹಿತಿ ಬಂದಿಲ್ಲ.

ಮಹುವಾ ಮೊಯಿತ್ರಾ ಯಾರು?

1974ರ ಅ. 12ರಂದು ಅಸ್ಸಾಂನಲ್ಲಿ ಜನಿಸಿದ ಮಹುವಾ ಮೊಯಿತ್ರಾ ರಾಜಕೀಯಕ್ಕೆ ಬರುವ ಮೊದಲು ಇನ್ವೆಸ್ಟ್‌ಮೆಂಟ್ ಬ್ಯಾಂಕರ್ ಆಗಿದ್ದರು. ಅವರು ಅಮೆರಿಕ ಮಾಸಚೂಸೆಟ್ಸ್‌ನ ಮೌಂಟ್ ಹೊಲಿಯೊಕ್ ಕಾಲೇಜಿನಿಂದ ಆರ್ಥಶಾಸ್ತ್ರ ಮತ್ತು ಗಣಿತದಲ್ಲಿ ಬಿಎ ಪದವಿಯನ್ನು ಮ್ಯಾಗ್ನಾ ಕಮ್ ಲಾಡ್‌‌ನಲ್ಲಿ ಪಡೆದಿದ್ದಾರೆ. 2010ರಲ್ಲಿ ಮಮತಾ ಬ್ಯಾನರ್ಜಿ ನೇತೃತ್ವದ ಟಿಎಂಸಿಗೆ ಸೇರಿದ ಅವರು, 2019ರಲ್ಲಿ ಪಶ್ಚಿಮ ಬಂಗಾಳದ ಕರೀಂಪುರ ವಿಧಾನಸಭಾ ಕ್ಷೇತ್ರದಿಂದ ಗೆದ್ದು ಮೊದಲ ಚುನಾವಣಾ ಜಯ ಸಾಧಿಸಿದರು.

ಕೃಷ್ಣಾನಗರ ಲೋಕಸಭಾ ಕ್ಷೇತ್ರದಿಂದ ಎರಡು ಬಾರಿ ಆಯ್ಕೆಯಾದ ಅವರು, ‘ಕ್ಯಾಶ್-ಫಾರ್-ಕ್ವೇರಿ’ ಆರೋಪದಿಂದ ಮೊದಲ ಅವಧಿಯಲ್ಲಿ ಸಂಸದ ಸ್ಥಾನ ಕಳೆದುಕೊಂಡಿದ್ದರು. ಸಂಸತ್‌ನಲ್ಲಿ ತೀಕ್ಷ್ಣ ಭಾಷಣಗಳಿಗೆ ಹೆಸರಾದ ಮೊಯಿತ್ರಾ, ಬಿಜೆಪಿ ನೇತೃತ್ವದ ಸರ್ಕಾರವನ್ನು ತೀವ್ರವಾಗಿ ಟೀಕಿಸುವ ಮೂಲಕ ರಾಷ್ಟ್ರ ಗಮನ ಸೆಳೆದಿದ್ದಾರೆ.

ಈ ಸುದ್ದಿಯನ್ನೂ ಓದಿ: Rahul Gandhi: ಆಪರೇಷನ್ ಸಿಂದೂರ್‌ನಲ್ಲಿ ಟ್ರಂಪ್ ಆದೇಶಕ್ಕೆ ಶರಣಾದ ಮೋದಿ: ರಾಹುಲ್ ಗಾಂಧಿ ಆರೋಪ

ಪಿನಾಕಿ ಮಿಶ್ರಾ ಯಾರು?

1959ರ ಅಕ್ಟೋಬರ್ 23ರಂದು ಒಡಿಶಾದ ಪುರಿಯಲ್ಲಿ ಜನಿಸಿದ ಮಿಶ್ರಾ ದಿಲ್ಲಿಯ ಸೇಂಟ್ ಸ್ಟೀಫನ್ಸ್ ಕಾಲೇಜಿನಿಂದ ಇತಿಹಾಸದಲ್ಲಿ ಬಿಎ (ಆನರ್ಸ್) ಮತ್ತು ದಿಲ್ಲಿ ವಿಶ್ವವಿದ್ಯಾಲಯದ ಕಾನೂನು ವಿಭಾಗದಿಂದ ಎಲ್‌ಎಲ್‌ಬಿ ಪದವಿ ಪಡೆದಿದ್ದಾರೆ. 1996ರಲ್ಲಿ ಒಡಿಶಾದ ಪುರಿ ಲೋಕಸಭಾ ಕ್ಷೇತ್ರದಿಂದ ಕಾಂಗ್ರೆಸ್‌ನಿಂದ ಮೊದಲ ಗೆಲುವು ಸಾಧಿಸಿದ ಅವರು, ನಂತರ ನವೀನ್ ಪಟ್ನಾಯಕ್‌ ಅವರ ಬಿಜೆಡಿಗೆ ಸೇರಿ 2009, 2014 ಮತ್ತು 2019ರಲ್ಲಿ ಮರು ಆಯ್ಕೆಯಾದರು. ಹಣಕಾಸು ಸ್ಥಾಯಿ ಸಮಿತಿ, ರಕ್ಷಣಾ ಸಚಿವಾಲಯದ ಸಲಹಾ ಸಮಿತಿ, ನಾಗರಿಕ ವಿಮಾನಯಾನ ಸಮಿತಿ, ಮತ್ತು ಕಾನೂನು ಸಚಿವಾಲಯದ ಸಲಹಾ ಸಮಿತಿಯಲ್ಲಿ ಸದಸ್ಯರಾಗಿದ್ದರು.



Source link

ADMIN

About Author

Leave a comment

Your email address will not be published. Required fields are marked *

You may also like

ಕರ್ನಾಟಕ

Microsoft: Empowering the Digital World

Microsoft is a global technology company known for shaping the modern digital experience. From its iconic Windows operating system to
ಉತ್ತರ ಕರ್ನಾಟಕ ಕರ್ನಾಟಕ

“ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವದ ದಿನಾಚರಣೆಯಲ್ಲಿ ವಿಭಿನ್ನ ಹಾಗೂ ವಿಶೇಷತೆಯಿಂದ ಆಚರಣೆ”

  • September 16, 2024
ಧಾರವಾಡ ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವದ ದಿನಾಚರಣೆಯಲ್ಲಿ ವಿಭಿನ್ನ ಹಾಗೂ ವಿಶೇಷತೆಯಿಂದ ಆಚರಣೆ ಮಾಡುವ ಮೂಲಕ 95 ಸಾವಿರ ಜನರು ಪ್ರತ್ಯಕ್ಷವಾಗಿ ಭಾಗವಹಿಸಿ ರಾಜ್ಯದಲ್ಲಿಯೇ ನಂಬರ್ 1 ಸ್ಥಾನ ಪಡೆದ
Translate »