Karunadu Studio

ಕರ್ನಾಟಕ

Chikkaballapur News: ಸ್ತ್ರೀ ಚೇತನ ಮತ್ತು ದುಡಿಯೋಣ ಬಾ ಅಭಿಯಾನ, ಗ್ರಾಮೀಣ ಜನರಿಗೆ ಸಹಕಾರಿ – Kannada News | Women’s spirit and Let’s work campaign, helpful for rural people


ಗುಡಿಬಂಡೆ: ತಾಲ್ಲೂಕಿನ ವರ್ಲಕೊಂಡ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸಮುದಾಯ ಭವನ ದಲ್ಲಿ ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆಯಡಿ ದುಡಿಯೋಣ ಬಾ ಹಾಗೂ ಸ್ತ್ರೀ ಚೇತನ ಅಭಿಯಾನ ಕಾರ್ಯಕ್ರಮದಲ್ಲಿ ಸಾರ್ವಜನಿಕರಿಗೆ ನರೇಗಾ ಜಾಗೃತಿ ಕರಪತ್ರ ವಿತರಣೆ ಮಾಡಿ ಜಾಗೃತಿ ಮೂಡಿಸಲಾಯಿತು.

ತಾಲ್ಲೂಕು ಅಭಿಯಾನ ನಿರ್ವಹಣಾ ಘಟಕ, ಪರಿವರ್ತನ ಅಭಿಯಾನ ಘಟಕ ಮತ್ತು  ವರ್ಲಕೊಂಡ ಗ್ರಾಮ ಪಂಚಾಯಿತಿಯಲ್ಲಿ ಹಮ್ಮಿಕೊಂಡಿದ್ದ ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ  ಯೋಜನೆ ಸ್ತ್ರೀ ಚೇತನ ವಿಶೇಷ ಅಭಿಯಾನ ಕಾರ್ಯಕ್ರಮದಲ್ಲಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಶ್ರೀನಿವಾಸಮೂರ್ತಿ ರವರು ಮಾತನಾಡಿ, ಕೂಲಿಕಾರರಿಗೆ ನಿರಂತರ ಕೆಲಸ ನೀಡಲಾಗು ತ್ತಿದೆ. ಜತೆಗೆ ಮಹಿಳೆಯರ ಪಾಲ್ಗೊಳ್ಳುವಿಕೆ ಹೆಚ್ಚಿಸಲು ಸ್ತ್ರೀ ಚೇತನ ಅಭಿಯಾನ ಕೈಗೊಳ್ಳಲಾಗಿದೆ. ಎಲ್ಲರೂ ಈ ಅಭಿಯಾನಗಳ ಸೌಲಭ್ಯ ಸದುಪಯೋಗ ಪಡೆದುಕೊಳ್ಳಬೇಕು. ಗ್ರಾಮ ಪಂಚಾಯಿತಿ ಸಿಬ್ಬಂದಿ ದಿನಕ್ಕೆ ಎರಡು ಬಾರಿ ಎನ್‌ಎಂಎAಎಸ್ ಹಾಜರಿ ಕಡ್ಡಾಯವಾಗಿ ಮಾಡಬೇಕು. ಸಾರ್ವ ಜನಿಕರ ಕುಂದುಕೊರತೆಗಾಗಿ ಏಕೀಕೃತ ಸಹಾಯವಾಣಿ ಸಂಖ್ಯೆ ೮೨೭೭೫ ೦೬೦೦೦ ಗೆ ಕರೆ ಮಾಡಬಹುದು ಎಂದರು.

ಇದನ್ನೂ ಓದಿ: IPL 2025: ʻಫೈನಲ್‌ನಲ್ಲಿ ಅಪರಾಧವೆಸಗಿದ ಶ್ರೇಯಸ್‌ ಅಯ್ಯರ್‌ʼ-ಯೋಗರಾಜ್‌ ಸಿಂಗ್‌ ಆರೋಪ!

ಗ್ರಾಮೀಣ ಪ್ರದೇಶದ ಅಕುಶಲ ಕರ್ಮಿಗಳಿಗೆ ಬೇಸಿಗೆಯಲ್ಲಿ ನಿರಂತರ ಉದ್ಯೋಗ ಒದಗಿಸುವ ಉದ್ದೆ?ಶದಿಂದ ಜೂ.೩೦ ರ ವರೆಗೆ ಈ ಯೋಜನೆಯು ಕ್ರಿಯಾಶೀಲವಾಗಿ ನಡೆಯಲಿದೆ.

ಮಹಾತ್ಮ ಗಾಂಧಿ ನರೇಗಾ ಯೋಜನೆಯಲ್ಲಿ ಮಹಿಳೆಯರ ಭಾಗವಹಿಸುವಿಕೆ ಹೆಚ್ಚಿಸಲು ಸ್ತ್ರಿ ಚೇತನಾ ಅಭಿಯಾನದ ಮೂಲಕ ಪ್ರಯತ್ನ ನಡೆಸಿದೆ. ಮ-ನರೇಗಾ ಸಂಪೂರ್ಣವಾಗಿ ಮಹಿಳಾ ಸ್ನೇಹಿ ಎಂಬುದಾಗಿ ಪರಿಚಯಿಸುವ ಉದ್ದೇಶವನ್ನು ಸ್ತ್ರೀ ಚೇತನ ಅಭಿಯಾನ ಒಳಗೊಂಡಿದೆ. ಮ-ನರೇಗಾ ದಲ್ಲಿ ಶೇ.50 ರಷ್ಟಿರುವ ಮಹಿಳಾ ಕೂಲಿ ಕಾರ್ಮಿಕರ ಸಂಖ್ಯೆಯನ್ನು  ಹೆಚ್ಚಿಸುವುದು ಅಭಿಯಾನದ ಉದ್ದೇಶವಾಗಿದೆ.

ತಾಯಿ ಮತ್ತು ಮಕ್ಕಳಿಗೆ ಅನುಕೂಲ ವಾಗುವಂತೆ ಮಕ್ಕಳಿಗಾಗಿ ಕೂಸಿನ ಮನೆ, ವೈಯಕ್ತಿಕ ಕಾಮಗಾರಿಗಳಾದ ಇಂಗುಗುಂಡಿ, ವೈಯಕ್ತಿಕ ಶೌಚಾಲಯ, ಪೌಷ್ಟಿಕ ಕೈತೋಟ, ದನ ಮತ್ತು ಕುರಿ ಕಾಮಗಾರಿಗಳನ್ನು ನೀಡುವುದಾಗಿದೆ. ಮ-ನರೇಗಾ ಯೋಜನೆ ಮೂಲಕ ಮಹಿಳಾ ಸಬಲೀಕರಣ ಕೈಗೊಳ್ಳುವ ಬಹುಮುಖ್ಯ ಉದ್ದೇಶವನ್ನು ಸ್ತ್ರೀ ಚೇತನ ಕಾರ್ಯಕ್ರಮ ಹೊಂದಿದೆ ಎಂದು ತಿಳಿಸಿ ದರು.

ತಾಲ್ಲೂಕು ಮಾಹಿತಿ ಶಿಕ್ಷಣ ಸಂಯೋಜಕ ರಾಮಾಂಜಿ ಮಾತನಾಡಿ, ಮಹಾತ್ಮಗಾಂಧಿ ನರೇಗಾ ಯೋಜನೆಯಡಿ ಒಳಗೊಳ್ಳದ ಇರುವ ಕುಟುಂಬಗಳನ್ನು ಸಮೀಕ್ಷೆ ಮಾಡಿ ಅರ್ಹರಿಗೆ ಜಾಬ್‌ಕಾರ್ಡ್ (ಉದ್ಯೋಗ ಚೀಟಿ) ನೀಡಲಾಗುವುದು. ಸ್ವ-ಸಹಾಯ ಗುಂಪುಗಳ ಮಹಿಳೆಯರಲ್ಲಿ ಯೋಜನೆಯ ಕುರಿತು ಅರಿವು ಮೂಡಿಸಿ, ಸಕ್ರಿಯವಾಗಿ ಪಾಲ್ಗೊಳ್ಳುವಂತೆ ಮಾಡಲಾಗುವುದು. ಯೋಜನೆಯಿಂದ ಹೊರಗುಳಿದ ದುರ್ಬಲ ಕುಟುಂಬಗಳನ್ನು ಗುರುತಿಸಿ, ಯೋಜನೆಯ ಸೌಲಭ್ಯಗಳನ್ನು ದೊರಕಿಸಿ ಕೊಡಲಾಗುತ್ತದೆ.

ಮಹಾತ್ಮಗಾಂಧಿ ನರೇಗಾ ಯೋಜನೆಯಡಿ ಗ್ರಾಮೀಣ ಜನರಿಗೆ ಬೇಸಿಗೆ ಅವಧಿಯಲ್ಲಿ ನಿರಂತರವಾಗಿ ಕೆಲಸ ಒದಗಿಸುವುದು, ಗ್ರಾಮೀಣ ಜನರಿಗೆ ಸ್ಥಳೀಯವಾಗಿ ಕೆಲಸ ನೀಡಿ ಸ್ವಾವಲಂಬಿಗಳಾಗಿ ಬದುಕುವಂತೆ ಮಾಡುವುದು, ಅರ್ಹ ಫಲಾನುಭವಿಗಳಿಗೆ ವೈಯಕ್ತಿಕ ಆಸ್ತಿಗಳನ್ನು ಸೃಜನೆ ಮಾಡುವ ಮೂಲಕ ಪರ್ಯಾಯ ಉದ್ಯೋಗ ಅವಕಾಶಗಳನ್ನು ಸೃಷ್ಟಿಸುವುದು, ವಿಶೇಷ ಚೇತನರು, ಮಹಿಳೆ ಯರು, ಹಿರಿಯ ನಾಗರಿಕರು, ಮಂಗಳ ಮುಖಿಯರು ಸೇರಿದಂತೆ ದುರ್ಬಲ ವರ್ಗಗಳಿಗೆ ಆದ್ಯತೆಯ ಮೇರೆಗೆ ಜಾ???ಕಾರ್ಡ್ ಮತ್ತು ಕೆಲಸ ಒದಗಿಸಲಾಗುತ್ತದೆ.

ಎಂ.ನರೇಗಾ ಜಾಬ್ ಕಾರ್ಡ್ ಎಂದರೇನು?
ಎಂನರೇಗಾ ಜಾಬ್ ಕಾರ್ಡ್ ಎಲ್ಲಾ ಫಲಾನುಭವಿಗಳಿಗೆ ಒದಗಿಸಲಾದ ದಾಖಲೆಯಾಗಿದ್ದು, ಫಲಾನುಭವಿಯು ಮಾಡಿದ ಕೆಲಸದ ಬಗ್ಗೆ ಮಾಹಿತಿಯನ್ನು ಒಳಗೊಂಡಿರುತ್ತದೆ. ಫಲಾನುಭವಿಯ ಕಾರ್ಡ್ನಲ್ಲಿ ನೀಡಬೇಕಾದ ಮಾಹಿತಿ- ಹೆಸರು, ವಿಳಾಸ, ಪೋಷಕರ ಹೆಸರು, ಜಾಬ್ ಕಾರ್ಡ್ ಸಂಖ್ಯೆ. ಒಓಖಇಉಂ ನಲ್ಲಿ ಕೆಲಸ ಮಾಡುವ ವ್ಯಕ್ತಿಗೆ 100 ದಿನಗಳ ಉದ್ಯೋಗವನ್ನು ನೀಡುವ ಹಕ್ಕನ್ನು ಒದಗಿಸಲಾಗುತ್ತದೆ.

ಎಂನರೇಗಾ ಯೋಜನೆಗೆ ಅರ್ಹತೆ

ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಗ್ರಾಮೀಣ ಪ್ರದೇಶ ದಲ್ಲಿ ವಾಸಿಸುವ ಕುಟುಂಬದ ಒಬ್ಬ ವ್ಯಕ್ತಿಗೆ ೧೦೦ ದಿನಗಳ ಉದ್ಯೋಗ ಖಾತ್ರಿ ನೀಡಲಾಗುವುದು. ಆದರೆ, ಈ ಯೋಜನೆಗೆ ಅರ್ಜಿ ಸಲ್ಲಿಸಲು, ಅರ್ಜಿದಾರರು ಈ ಕೆಳಗಿನ ಅರ್ಹತೆಗಳನ್ನು ಹೊಂದಿರ ಬೇಕು. ಭಾರತದ ಪ್ರಜೆಯಾಗಿರಬೇಕು, ಅದರಲ್ಲೂ ಗ್ರಾಮೀಣ ಪ್ರದೇಶದ ನಿವಾಸಿ ಯಾಗಿರಬೇಕು ವಯಸ್ಸು ೧೮ ವರ್ಷಕ್ಕಿಂತ ಮೇಲ್ಪಟ್ಟಿರಬೇಕು ಅರ್ಜಿದಾರರು ಈ ಯೋಜನೆಯಲ್ಲಿ ಸ್ವಯಂ ಪ್ರೇರಣೆಯಿಂದ ಕೆಲಸ ಮಾಡಲು ಸಿದ್ಧರಿರಬೇಕು.

ಎಂ.ನರೇಗಾದಲ್ಲಿ ಕೂಲಿ ಎಷ್ಟು?

ಈ ಯೋಜನೆಯಡಿ ಆಯಾ ರಾಜ್ಯಗಳಿಗೆ ಅನುಗುಣವಾಗಿ ಕೂಲಿಯನ್ನು ನಿಗದಿ ಮಾಡಲಾಗಿದ್ದು ಕರ್ನಾಟಕದಲ್ಲಿ ಇದುವರೆಗೂ ೩೪೯ ರೂ. ಕೂಲಿ ಪಡೆಯುತ್ತಿದ್ದವರು ಏಪ್ರಿಲ್ ೧ ರಿಂದ ೩೭೦ ರೂ. ಪಡೆಯಲಿದ್ದಾರೆ. ಏಪ್ರಿಲ್ ೧ ರಿಂದಲೇ ಜಾರಿಗೆ ಬರುವಂತೆ ಕೂಲಿ ಹೆಚ್ಚಳವಾಗಲಿದ್ದು, ಈ ಕುರಿತು ಆದೇಶ ಪ್ರಕಟವಾಗಿದೆ ಎಂದು ಮಾಹಿತಿ ತಿಳಿಸಿದರು.

ಎನ್.ಆರ್.ಎಲ್.ಎಂ ಯೋಜನೆಯ ತಾಲ್ಲೂಕು ಕಾರ್ಯಕ್ರಮ ವ್ಯವಸ್ಥಾಪಕ ಆಂಜನೇಯಪ್ಪ ರವರು ಮಾತನಾಡಿ, ಗ್ರಾಮೀಣ ಪ್ರದೇಶದ ಮಹಿಳೆಯರ ಜೀವನ ಮಟ್ಟ ಸುಧಾರಣೆಗೆ ಮತ್ತು ಅವರ ಕುಟುಂಬಕ್ಕೆ ಆರ್ಥಿಕವಾಗಿ ಶಕ್ತಿ ನೀಡಲು ಮನರೇಗಾ ಹಾಗೂ ಗ್ರಾಮ ಪಂಚಾಯಿತಿ ಮಟ್ಟದ ಸ್ವ ಸಹಾಯ ಸಂಘಗಳಲ್ಲಿ ವಿಶೇಷ ಮತ್ತು ರಿಯಾಯಿತಿ ಸೌಲಭ್ಯಗಳನ್ನು ಕಲ್ಪಿಸಲಾಗಿದೆ, ಮಹಿಳೆಯರು ಇದರ ಸದುಪಯೋಗ ಪಡೆದುಕೊಂಡು ಆರ್ಥಿಕವಾಗಿ ಸಬಲರಾಗಬೇಕು ಎಂದು ಹೇಳಿದರು.

ಖಾಸಗಿ ಬ್ಯಾಂಕ್ ಗಳಲ್ಲಿ ಹೆಚ್ಚು ಬಡ್ಡಿ ವಿಧಿಸಲಾಗುತ್ತಿದೆ ಹಾಗಾಗಿ ಸ್ವ ಸಹಾಯ ಸಂಘಗಳಲ್ಲಿ ಕಡಿಮೆ ಬಡ್ಡಿಯಲ್ಲಿ ಸಾಲ ಪಡೆದುಕೊಂಡು ಕುಟುಂಬ ಹಾಗೂ ಮಕ್ಕಳ ವಿದ್ಯಾಭ್ಯಾಸದ ಜೊತೆಗೆ  ಕೈಗಾರಿಕೆ, ಉದ್ದಿಮೆಯಲ್ಲಿ ಸೇರಿದಂತೆ ಎಲ್ಲಾ ರಂಗದಲ್ಲೂ ಮಹಿಳೆಯರು ಸಬಲರಾಗಬೇಕು ಎಂದು ತಿಳಿಸಿದರು.

ಹಳ್ಳಿಗಳ ಮಹಿಳೆಯರಲ್ಲಿ ಅಪಾರ ಪ್ರತಿಭೆ ಇದೆ ಆದ್ದರಿಂದ ಮಹಿಳಾ ಸ್ವಸಹಾಯ ಸಂಘಗಳು ಸರ್ಕಾರದಿಂದ ಕಡಿಮೆ ಬಡ್ಡಿ ದರದಲ್ಲಿ ಸಾಲ ಸೌಲಭ್ಯ ಪಡೆದು ಗೃಹ ಕೈಗಾರಿಕೆ ಸ್ಥಾಪಿಸುವ ಮೂಲಕ ಆರ್ಥಿಕ ಸ್ವಾವಲಂಬನೆ ಸಾಧಿಸಬೇಕು ಎಂದು ಹೇಳಿದರು.

ಈ ಸಂದರ್ಭದಲ್ಲಿ ಎಫ್,ಎಲ್.ಸಿ ಅಶ್ವಥ್ ನಾರಾಯಣ, ಎನ್.ಆರ್.ಎಲ್.ಎಂ. ವಲಯ ಮೇಲ್ವಿ ಚಾರಕಿ ಮೀನ ಡಿ.ಎ, ಕೃಷಿಯೇತರ ವ್ಯವಸ್ಥಾಪಕ ಚೇತನ್ ರವರು ಸೇರಿದಂತೆ ಸ್ವ ಸಹಾಯ ಸಂಘದ ಮಹಿಳೆಯರು ಮತ್ತಿತರರು ಉಪಸ್ಥಿತರಿದ್ದರು.



Source link

ADMIN

About Author

Leave a comment

Your email address will not be published. Required fields are marked *

You may also like

ಕರ್ನಾಟಕ

Microsoft: Empowering the Digital World

Microsoft is a global technology company known for shaping the modern digital experience. From its iconic Windows operating system to
ಕರ್ನಾಟಕ

Microsoft: Empowering the Digital World

Microsoft is a global technology company known for shaping the modern digital experience. From its iconic Windows operating system to
Translate »