Karunadu Studio

ಕರ್ನಾಟಕ

Rohit Sharma: ಟೆಸ್ಟ್‌ ನಿವೃತ್ತಿಯಿಂದ ತಂದೆ ನಿರಾಶೆಗೊಂಡರು; ರೋಹಿತ್‌ ಶರ್ಮ – Kannada News | Rohit Sharma’s father was disappointed with his Test retirement, India batter reveals


ಮುಂಬಯಿ: ಇತ್ತೀಚೆಗೆ ಐಪಿಎಲ್‌ 2025ರ ಟೂರ್ನಿ ಮಧ್ಯೆ ದಿಢೀರ್‌ ಅಂತಾರಾಷ್ಟ್ರೀಯ ಟೆಸ್ಟ್‌ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದ ರೋಹಿತ್‌ ಶರ್ಮ(Rohit Sharma) ಅವರು ಇದೇ ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿದ್ದಾರೆ. ನನ್ನ ಈ ನಿವೃತ್ತಿ(Rohit Sharma Test retirement) ತಂದೆಗೆ(ಗುರುನಾಥ್‌ ಶರ್ಮ) ತೀವ್ರ ಬೇಸರ ಮತ್ತು ನಿರಾಶೆ ಉಂಟು ಮಾಡಿತ್ತು ಎಂದು ಹೇಳಿದ್ದಾರೆ. ಚೇತೇಶ್ವರ ಪೂಜಾರ ಅವರ ಪತ್ನಿ ಪೂಜಾ ಅವರ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ರೋಹಿತ್‌ ಈ ವಿಚಾರ ತಿಳಿಸಿದರು.

“ನನ್ನ ತಂದೆ ಟೆಸ್ಟ್ ಕ್ರಿಕೆಟ್‌ನ ದೊಡ್ಡ ಅಭಿಮಾನಿ. ಕೆಂಪು ಚೆಂಡಿನೊಂದಿಗಿನ ಆಟವನ್ನು ಬಹಳಷ್ಟು ನೋಡಿದ್ದಾರೆ. ಏಕದಿನ ಪಂದ್ಯದಲ್ಲಿ ದಾಖಲೆಯ 264 ರನ್ ಗಳಿಸಿದಾಗಲೂ ತಂದೆ ಉತ್ಸುಕನಾಗಿರಲಿಲ್ಲ. ಆದರೆ ನಾನು ಟೆಸ್ಟ್‌ನಿಂದ ನಿವೃತ್ತರಾದಾಗ ಅವರು ನಿರಾಶೆಗೊಂಡರು” ಎಂದು ರೋಹಿತ್‌ ಹೇಳಿದರು. ರೋಹಿತ್‌ ಭಾರತ ಪರ 67 ಟೆಸ್ಟ್‌ ಪಂದ್ಯಗಳನ್ನು ಆಡಿದ್ದು, 40.57 ಸರಾಸರಿಯಲ್ಲಿ 4301 ರನ್ ಗಳಿಸಿದ್ದಾರೆ.

ಕಳೆದೊಂದು ವರ್ಷದಿಂದ ತೀರಾ ಕಳಪೆ ಪ್ರದರ್ಶನ ನೀಡುತ್ತಿದ್ದ ರೋಹಿತ್‌, ವರ್ಷಾಂತ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಸರಣಿಯಲ್ಲೂ ಲಯಕ್ಕೆ ಮರಳಿರಲಿಲ್ಲ. ಆಸ್ಟ್ರೇಲಿಯಾ ವಿರುದ್ಧ 4ನೇ ಟೆಸ್ಟ್‌ನಲ್ಲಿ ಕೊನೆ ಬಾರಿ ಭಾರತವನ್ನು ಪ್ರತಿನಿಧಿಸಿದ್ದ ಅವರು, ಕಳಪೆ ಆಟದಿಂದಾಗಿ 5ನೇ ಪಂದ್ಯದಿಂದ ಹೊರಗುಳಿಯಬೇಕಾಯಿತು. ಇದರೊಂದಿಗೆ ಅವರ ಟೆಸ್ಟ್‌ ಬದುಕೇ ಮುಗಿಯಿತು ಎಂದು ವಿಶ್ಲೇಷಿಸಲಾಗಿತ್ತು. ಆದರೆ ಸರಣಿ ಬಳಿಕ ರೋಹಿತ್‌ ತಮ್ಮ ನಿವೃತ್ತಿ ಸುದ್ದಿಯನ್ನು ಅಲ್ಲಗಳೆದಿದ್ದರು.

ಇದನ್ನೂ ಓದಿ IPL 2025: ಸಿಕ್ಸರ್‌ ದಾಖಲೆ ಬರೆದ ಹಿಟ್‌ಮ್ಯಾನ್‌ ರೋಹಿತ್‌

ಟೆಸ್ಟ್‌ನಲ್ಲಿ ರೋಹಿತ್‌ ಸಾಧನೆ

ಪಂದ್ಯ: 67

ರನ್‌: 4301

ಗರಿಷ್ಠ ಸ್ಕೋರ್‌: 212

ಶತಕ: 12

ಅರ್ಧಶತಕ: 18

ಸಿಕ್ಸರ್: 88



Source link

ADMIN

About Author

Leave a comment

Your email address will not be published. Required fields are marked *

You may also like

ಕರ್ನಾಟಕ

Microsoft: Empowering the Digital World

Microsoft is a global technology company known for shaping the modern digital experience. From its iconic Windows operating system to
ಕರ್ನಾಟಕ

Microsoft: Empowering the Digital World

Microsoft is a global technology company known for shaping the modern digital experience. From its iconic Windows operating system to
Translate »