Karunadu Studio

ಕರ್ನಾಟಕ

IND vs ENG: ಕನ್ನಡಿಗನನ್ನು ಕೈ ಬಿಟ್ಟು ಮೊದಲನೇ ಟೆಸ್ಟ್‌ಗೆ ಭಾರತದ ಪ್ಲೇಯಿಂಗ್‌ XI ಆರಿಸಿದ ಆಕಾಶ್‌ ಚೋಪ್ರಾ! – Kannada News | Karun Nair OUT; Sai Sudharsan In: Ex-Opener Aakash chopra Names Predicted India Playing XI For 1st Test Vs England


ನವದೆಹಲಿ: ಇಂಗ್ಲೆಂಡ್‌ ವಿರುದ್ಧ ಜೂನ್‌ 20 ರಂದು ಭಾರತ ತಂಡ ಐದು ಪಂದ್ಯಗಳ ಟೆಸ್ಟ್‌ ಸರಣಿಯನ್ನು (IND vs ENG) ಆರಂಭಿಸಲಿದೆ. ಈ ಸರಣಿಯ ಮೂಲಕ ಈ ಎರಡೂ ತಂಡಗಳು 2025-27ರ ಸಾಲಿನ ವಿಶ್ವ ಟೆಸ್ಟ್‌ ಚಾಂಪಿಯನ್‌ಷಿಪ್‌ (WTC 2025-27) ಅಭಿಯಾನವನ್ನು ಆರಂಭಿಸಲಿದೆ. ವಿರಾಟ್‌ ಕೊಹ್ಲಿ ಹಾಗೂ ರೋಹಿತ್‌ ಶರ್ಮಾ ಅವರು ಟೆಸ್ಟ್‌ ಕ್ರಿಕೆಟ್‌ಗೆ ವಿದಾಯ ಹೇಳಿರುವ ಕಾರಣ, ಈ ಸರಣಿಯಲ್ಲಿ ಹಲವು ಯುವ ಪ್ರತಿಭೆಗಳು ಟೆಸ್ಟ್‌ ಕ್ರಿಕೆಟ್‌ಗೆ ಪದಾರ್ಪಣೆ ಮಾಡಲಿದ್ದಾರೆ. ಅಲ್ಲದೆ ಶುಭಮನ್‌ ಗಿಲ್‌ (Shubman Gill) ನಾಯಕತ್ವದಲ್ಲಿ ಭಾರತ ತಂಡ ಈ ಸರಣಿಯನ್ನು ಆಡುತ್ತಿರುವುದು ಅತ್ಯಂತ ವಿಶೇಷವಾಗಿದೆ. ಅಂದ ಹಾಗೆ ಮಾಜಿ ಕ್ರಿಕೆಟಿಗ ಆಕಾಶ್‌ ಚೋಪ್ರಾ, ಮೊದಲನೇ ಟೆಸ್ಟ್‌ ಪಂದ್ಯಕ್ಕೆ ತಮ್ಮ ನೆಚ್ಚಿನ ಭಾರತ ತಂಡದ ಪ್ಲೇಯಿಂಗ್‌ xiಅನ್ನು ಆಯ್ಕೆ ಮಾಡಿದ್ದಾರೆ.

ಭಾರತ ಹಾಗೂ ಇಂಗ್ಲೆಂಡ್‌ ತಂಡಗಳ ನಡುವಣ ಮೊದಲನೇ ಟೆಸ್ಟ್‌ ಪಂದ್ಯ ಲೀಡ್ಸ್‌ನಲ್ಲಿ ಜೂನ್‌ 20 ರಂದು ಆರಂಭವಾಗಲಿದೆ. ಇದಕ್ಕೂ ಮುನ್ನ ಭಾರತ ಎ ಹಾಗೂ ಇಂಗ್ಲೆಂಡ್‌ ಲಯನ್ಸ್‌ ತಂಡಗಳು ಎರಡು ಪಂದ್ಯಗಳ ಅನಧೀಕೃತ ಟೆಸ್ಟ್‌ ಪಂದ್ಯಗಳಲ್ಲಿ ಕಾದಾಟ ನಡೆಸುತ್ತಿವೆ. ಭಾರತ ಟೆಸ್ಟ್‌ ತಂಡದಲ್ಲಿರುವ ಬಹುತೇಕ ಆಟಗಾರರ ಈ ಸರಣಿಯಲ್ಲಿ ಆಡುತ್ತಿದ್ದಾರೆ. ಮೊದಲನೇ ಅನಧಿಕೃತ ಟೆಸ್ಟ್‌ ಪಂದ್ಯದಲ್ಲಿ ದ್ವಿಶತಕ ಬಾರಿಸಿದ್ದ ಕನ್ನಡಿಗ ಕರುಣ್‌ ನಾಯರ್‌ ಅವರನ್ನು ಭಾರತ ತಂಡದ ಪ್ಲೇಯಿಂಗ್‌ XIನಿಂದ ಕೈ ಬಿಡುವ ಮೂಲಕ ಆಕಾಶ್‌ ಚೋಪ್ರಾ ಅಚ್ಚರಿ ಮೂಡಿಸಿದ್ದಾರೆ.

IND vs ENG: ʻಚಾಂಪಿಯನ್ಸ್‌ ಟ್ರೋಫಿ ಗೆದ್ದ ಹೊರತಾಗಿಯೂ ನನ್ನ ಮೇಲೆ ಒತ್ತಡವಿತ್ತುʼ-ಗೌತಮ್‌ ಗಂಭೀರ್‌!

ತಮ್ಮ ಅಧಿಕೃತ ಯೂಟ್ಯೂಬ್‌ ಚಾನೆಲ್‌ನಲ್ಲಿ ಅಪ್‌ಲೋಡ್‌ ಮಾಡಿರುವ ವಿಡಿಯೊದಲ್ಲಿ ಮಾತನಾಡಿದ ಆಕಾಶ್‌ ಚೋಪ್ರಾ, ಆರಂಭಿಕ ಬ್ಯಾಟ್ಸ್‌ಮನ್‌ಗಳನ್ನಾಗಿ ಯಶಸ್ವಿ ಜೈಸ್ವಾಲ್‌ ಹಾಗೂ ಕೆಎಲ್‌ ರಾಹುಲ್‌ ಅವರನ್ನು ಆಯ್ಕೆ ಮಾಡಿದ್ದಾರೆ. ಮೂರನೇ ಕ್ರಮಾಂಕಕ್ಕೆ ಸಾಯಿ ಸುದರ್ಶನ್‌ ಅವರನ್ನು ಆರಿಸಿದ್ದಾರೆ. ನಾಯಕ ಶುಭಮನ್‌ ಗಿಲ್‌ಗೆ ನಾಲ್ಕನೇ ಕ್ರಮಾಂಕದಲ್ಲಿ ಚಾನ್ಸ್‌ ಕೊಟ್ಟಿದ್ದಾರೆ. ಶಾರ್ದುಲ್‌ ಠಾಕೂರ್‌ ಹಾಗೂ ನಿತೀಶ್‌ ಕುಮಾರ್‌ ರೆಡ್ಡಿ ಸೇರಿ ಇಬ್ಬರು ಸೀಮ್‌ ಬೌಲಿಂಗ್‌ ಆಲ್‌ರೌಂಡರ್‌ಗಳಿಗೆ ಆಕಾಶ್‌ ಚೋಪ್ರಾ ಅವಕಾಶವನ್ನು ನೀಡಿದ್ದಾರೆ. ಒಟ್ಟಾರೆ ಇವರು ಐವರು ಫಾಸ್ಟ್‌ ಬೌಲರ್‌ಗಳು ಹಾಗೂ ರವೀಂದ್ರ ಜಡೇಜಾ ರೂಪದಲ್ಲಿ ಒಬ್ಬರು ಸ್ಪಿನ್ನರ್‌ ಅನ್ನು ಆಯ್ಕೆ ಮಾಡಿದ್ದಾರೆ.

“ಶುಭಮನ್‌ ಗಿಲ್‌ ನಾಯಕ. ಯಶಸ್ವಿ ಜೈಸ್ವಾಲ್‌ ಹಾಗೂ ಕೆಎಲ್‌ ರಾಹುಲ್‌ ಆರಂಭಿಕರು, ಮೂರನೇ ಕ್ರಮಾಂಕಕ್ಕೆ ಸಾಯಿ ಸುದರ್ಶನ್‌ ಹಾಗೂ ನಾಲ್ಕನೇ ಕ್ರಮಾಂಕದಲ್ಲಿ ಶುಭಮನ್‌ ಗಿಲ್‌ ಆಡಲಿದ್ದಾರೆ. ನಂತರ ರಿಷಭ್‌ ಪಂತ್‌ ಐದನೇ ಕ್ರಮಾಂಕದಲ್ಲಿ ಆಡುತ್ತಾರೆ. ಇನ್ನೂ ನಿತೀಶ್‌ ಕುಮಾರ್‌ ರೆಡ್ಡಿ ಅವರನ್ನೇ ಆರನೇ ಕ್ರಮಾಂಕಕ್ಕೆ ಆಲ್‌ರೌಂಡರ್‌ ಆಗಿ ಆಡಿಸುತ್ತೇನೆ,” ಎಂದು ಆಕಾಶ್‌ ಚೋಪ್ರಾ ತಿಳಿಸಿದ್ದಾರೆ.

IND vs ENG Test: ಭಾರತದ ನೂತನ ಕಂಡೀಷನಿಂಗ್ ಕೋಚ್ ಆಗಿ ಆಡ್ರಿಯನ್ ಲೆ ರೌಕ್ಸ್ ನೇಮಕ

“ಆಲ್‌ರೌಂಡರ್‌ ಆಗಿ ರವೀಂದ್ರ ಜಡೇಜಾ ಆಡಲಿದ್ದಾರೆ. ಶಾರ್ದುಲ್‌ ಠಾಕೂರ್‌ ನನ್ನ ಆಲ್‌ರೌಂಡರ್‌ ಆಗಿ ತಂಡಕ್ಕೆ ಎರಡೂ ವಿಭಾಗದಲ್ಲಿ ಕೊಡುಗೆ ನೀಡಲಿದ್ದಾರೆ. ಇಂಗ್ಲಿಷ್‌ ಕಂಡೀಷನ್ಸ್‌ನಲ್ಲಿ ಅವರು ಬ್ಯಾಟ್‌ ಮಾಡಬಲ್ಲರು. ಆದರೆ, ಇವರನ್ನು ನಾನು ಪೂರ್ಣ ಪ್ರಮಾಣದ ಬೌಲರ್‌ ಆಗಿ ನಾನು ಪರಿಗಣಿಸುತ್ತೇವೆ. ನಂತರ ಜಸ್‌ಪ್ರೀತ್‌ ಬುಮ್ರಾ, ಮೊಹಮ್ಮದ್‌ ಸಿರಾಜ್‌ ಹಾಗೂ ಪ್ರಸಿಧ್‌ ಕೃಷ್ಣ ಆಡಲಿದ್ದಾರೆ,” ಎಂದು ತಿಳಿಸಿದ್ದಾರೆ.

ಇಂಗ್ಲೆಂಡ್‌ ವಿರುದ್ಧದ ಮೊದಲನೇ ಟೆಸ್ಟ್‌ ಪಂದ್ಯಕ್ಕೆ ಭಾರತದ ಪ್ಲೇಯಿಂಗ್‌ XI ಆರಿಸಿದ ಆಕಾಶ್‌ ಚೋಪ್ರಾ

ಯಶಸ್ವಿ ಜೈಸ್ವಾಲ್‌, ಕೆಎಲ್‌ ರಾಹುಲ್‌, ಸಾಯಿ ಸುದರ್ಶನ್‌, ಶುಭಮನ್‌ ಗಿಲ್‌ (ನಾಯಕ), ರಿಷಭ್‌ ಪಂತ್‌ (ವಿ.ಕೀ), ನಿತೀಶ್‌ ಕುಮಾರ್‌ ರೆಡ್ಡಿ, ರವೀಂದ್ರ ಜಡೇಜಾ, ಶಾರ್ದುಲ್‌ ಠಾಕೂರ್‌, ಜಸ್‌ಪ್ರೀತ್‌ ಬುಮ್ರಾ, ಮೊಹ್ಮಮ್ಮದ್‌ ಸಿರಾಜ್‌, ಪ್ರಸಿಧ್‌ ಕೃಷ್ಣ



Source link

ADMIN

About Author

Leave a comment

Your email address will not be published. Required fields are marked *

You may also like

ಕರ್ನಾಟಕ

Microsoft: Empowering the Digital World

Microsoft is a global technology company known for shaping the modern digital experience. From its iconic Windows operating system to
ಉತ್ತರ ಕರ್ನಾಟಕ ಕರ್ನಾಟಕ

“ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವದ ದಿನಾಚರಣೆಯಲ್ಲಿ ವಿಭಿನ್ನ ಹಾಗೂ ವಿಶೇಷತೆಯಿಂದ ಆಚರಣೆ”

  • September 16, 2024
ಧಾರವಾಡ ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವದ ದಿನಾಚರಣೆಯಲ್ಲಿ ವಿಭಿನ್ನ ಹಾಗೂ ವಿಶೇಷತೆಯಿಂದ ಆಚರಣೆ ಮಾಡುವ ಮೂಲಕ 95 ಸಾವಿರ ಜನರು ಪ್ರತ್ಯಕ್ಷವಾಗಿ ಭಾಗವಹಿಸಿ ರಾಜ್ಯದಲ್ಲಿಯೇ ನಂಬರ್ 1 ಸ್ಥಾನ ಪಡೆದ
Translate »