Karunadu Studio

ಕರ್ನಾಟಕ

Tumkur (Chikkanayakanahalli) News: ನಿರಂತರ ಸಭೆಗಳಿಂದ ಅಧಿಕಾರಿಗಳು ಹೈರಾಣ, ಆಡಳಿತಕ್ಕೆ ಹಿನ್ನಡೆಯ ಆತಂಕ ! – Kannada News | Officials are being harassed by constant meetings, fearing setbacks for the administration!


ಧನಂಜಯ್

ಚಿಕ್ಕನಾಯಕನಹಳ್ಳಿ :ತಾಲ್ಲೂಕಿನಲ್ಲಿ ನಡೆಯುತ್ತಿರುವ ನಿರಂತರ ಸಭೆಗಳಿಂದಾಗಿ ಸರ್ಕಾರಿ ಅಧಿಕಾರಿಗಳು ತೀವ್ರ ಹೈರಾಣಾಗಿದ್ದಾರೆ. ದಿನ ನಿತ್ಯದ ಆಡಳಿತಾತ್ಮಕ ಕಾರ್ಯಗಳಿಗೆ ಸಮಯ ಸಿಗದೆ ಯೋಜನೆಗಳ ಅನುಷ್ಠಾನದಲ್ಲಿ ವಿಳಂಬವಾಗುತ್ತಿದೆ ಎಂಬ ದೂರುಗಳು ಕೇಳಿ ಬರುತ್ತಿದೆ.

ಶಾಸಕರ ನೇತೃತ್ವದಲ್ಲಿ ಪ್ರತಿ ಸೋಮವಾರ ಪಟ್ಟಣದ ತೀನಂಶ್ರೀ ಭವನದಲ್ಲಿ ರೈತರ ಹಾಗು ಸಾರ್ವಜನಿಕರ ಕುಂದು ಕೊರತೆ ಸಭೆ ಹಾಗು ಪ್ರತಿ ಶುಕ್ರವಾರ ಮನೆ ಬಾಗಿಲಿಗೆ-ಮನೆ ಮಗ ಎಂಬ ಜನಸಂಪರ್ಕ ಸಭೆಯನ್ನು ಗ್ರಾಮೀಣ ಭಾಗದಲ್ಲಿ ಆಯೋಜಿಸಲಾಗುತ್ತಿದೆ. ಈ ಎರಡು ಸಭೆಗಳು ಪ್ರತಿವಾರ ನಡೆಯುತ್ತಿದೆ. ವಿವಿಧ ಇಲಾಖೆಗಳ ಮುಖ್ಯಸ್ಥರು, ಮತ್ತು ಕೆಳಹಂತದ ಅಧಿಕಾರಿಗಳು ದಿನದ ಬಹುಪಾಲು ಸಮಯವನ್ನು ಸಭೆಗಳಲ್ಲೇ ಕಳೆಯಬೇಕಿದೆ. ಇನ್ನು ಜಿಲ್ಲಾಧಿಕಾರಿಗಳು, ಸಿಇಓ ಮತ್ತು ಇಲಾಖೆಗಳ ಮುಖ್ಯಸ್ಥರು, ಉನ್ನತ ಅಧಿಕಾರಿಗಳು ನಡೆಸುವ  ಸಭೆಗಳು ಜೊತೆಗೆ ಜಿಲ್ಲಾ, ತಾಲ್ಲೂಕು ಕೆಡಿಪಿ ಸಭೆ  ನಡೆಯುತ್ತದೆ. ಹೀಗೆ ಒಂದರ ನಂತರ ಒಂದು ಇರುವುದರಿಂದ ಕಚೇರಿ ಗಳಲ್ಲಿ ಕುಳಿತು ಕಡತ ವಿಲೇವಾರಿ ಮಾಡಲು, ಸಾರ್ವಜನಿಕರ  ಸಮಸ್ಯೆ ಆಲಿಸಲು ಮತ್ತು ಮನವಿಯ ವಾಸ್ತವ ಪರಿಸ್ಥಿತಿಯನ್ನು ಪರಿಶೀಲಿಸಲು ನಮಗೆ ಸಮಯವೇ ಸಿಗುತ್ತಿಲ್ಲ ಎಂದು ಅನೇಕ ಅಧಿಕಾರಿಗಳು ಅಳಲು ತೋಡಿಕೊಂಡಿದ್ದಾರೆ.

ಇದನ್ನೂ ಓದಿ: Chikkaballapur News: ಸ್ತ್ರೀ ಚೇತನ ಮತ್ತು ದುಡಿಯೋಣ ಬಾ ಅಭಿಯಾನ, ಗ್ರಾಮೀಣ ಜನರಿಗೆ ಸಹಕಾರಿ

ಯೋಜನೆ ಅನುಷ್ಠಾನದಲ್ಲಿ ವಿಳಂಬ
ಈ ನಿರಂತರ ಸಭೆಗಳಿಂದಾಗಿ ಸರಕಾರದ ಮಹತ್ವದ ಯೋಜನೆಗಳ ಅನುಷ್ಠಾನಕ್ಕೆ ಹಿನ್ನಡೆಯಾಗು ತ್ತಿದೆ ಎಂಬ ಆತಂಕ ವ್ಯಕ್ತವಾಗಿದೆ. ಸಭೆಗಳಲ್ಲಿ ಚರ್ಚಿಸಿದ ವಿಷಯಗಳನ್ನು ಕಾರ್ಯರೂಪಕ್ಕೆ ತರಲು ಬೇಕಾದ ಸಮಯ ಮತ್ತು ಮಾನವ ಸಂಪನ್ಮೂಲದ ಕೊರತೆ ಎದುರಾಗಿದೆ. ಇದು ಅಂತಿಮವಾಗಿ ಸಾರ್ವಜನಿಕರಿಗೆ ತಲುಪಬೇಕಾದ ಸೇವೆಗಳ ವಿತರಣೆಯ ಮೇಲೆ ನೇರ ಪರಿಣಾಮ ಬೀರುತ್ತಿದೆ.

ಅಧಿಕಾರಿಗಳ ಅಹವಾಲು
ನಾವು ಸಭೆಗಳಲ್ಲಿ ಭಾಗವಹಿಸುವುದಲ್ಲದೆ, ಪೂರ್ವಭಾವಿ ಸಿದ್ದತೆಗಳನ್ನು ಮಾಡಿಕೊಳ್ಳಬೇಕು. ಇದರಿಂದ ನಮ್ಮ ಮೂಲ ಕರ್ತವ್ಯಗಳ ನಿರ್ವಹಣೆಗೆ ಅಡ್ಡಿಯಾಗುತ್ತಿದೆ ಎಂದು ಹೆಸರು ಹೇಳಲಿ ಚ್ಚಿಸದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಸಭೆಗಳಲ್ಲಿ ಅಧಿಕಾರಿಗಳ ಭಾಗವಹಿಸುವಿಕೆಯನ್ನು ಮತ್ತು ಸಮಯವನ್ನು ವ್ಯವಸ್ಥಿತವಾಗಿ ನಿಗದಿಪಡಿಸುವ ಮೂಲಕ ಅಧಿಕಾರಿಗಳಿಗೆ ತಮ್ಮ ದೈನಂದಿನ ಕಾರ್ಯಗಳನ್ನು ನಿರ್ವಹಿಸಲು ಅವಕಾಶ ಕಲ್ಪಿಸಬೇಕು ಎಂಬುದು ಅಧಿಕಾರಿ ವಲಯದ ಪ್ರಮುಖ ಮನವಿಯಾಗಿದೆ.

ಪ್ರಗತಿಗೆ ಅಡ್ಡಿಯಾಗುವ ಆತಂಕ !
ಅಧಿಕಾರಿಗಳ ಮೇಲಿನ ಸಭೆಗಳ ಭಾರವನ್ನು ಕಡಿಮೆ ಮಾಡುವ ಮೂಲಕ ಆಡಳಿತ ಯಂತ್ರವನ್ನು ಮತ್ತಷ್ಟು ಚುರುಕುಗೊಳಿಸಬೇಕು ಎಂಬ ಒತ್ತಾಯ ಕೇಳಿಬರುತ್ತಿದೆ. ಇಲ್ಲವಾದರೆ, ನಿರಂತರ ಸಭೆಗಳು ಆಡಳಿತದ ದಕ್ಷತೆಯನ್ನು ಕುಗ್ಗಿಸಿ ಪ್ರಗತಿಗೆ ಅಡ್ಡಿಯಾಗುವ ಸಾಧ್ಯತೆಯಿದೆ.



Source link

ADMIN

About Author

Leave a comment

Your email address will not be published. Required fields are marked *

You may also like

ಕರ್ನಾಟಕ

Microsoft: Empowering the Digital World

Microsoft is a global technology company known for shaping the modern digital experience. From its iconic Windows operating system to
ಕರ್ನಾಟಕ

Microsoft: Empowering the Digital World

Microsoft is a global technology company known for shaping the modern digital experience. From its iconic Windows operating system to
Translate »