ಗೌರಿಬಿದನೂರು: ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದ ಹೊರಗೆ ಆರ್.ಸಿ.ಬಿ ವಿಜಯೋ ತ್ಸವದ ಸಂದರ್ಭದಲ್ಲಿ ಸಂಭವಿಸಿದ ಭೀಕರ ಕಾಲ್ತುಳಿತದ ದುರಂತ ಪ್ರಕರಣಕ್ಕೆ,ಪೋಲೀಸರನ್ನು ಹೊಣೆಯಾಗಿಸಿ ಬೆಂಗಳೂರು ನಗರ ಪೊಲೀಸ್ ಆಯುಕ್ತರಾದ ಬಿ.ದಯಾನಂದ್ ಹಾಗೂ ಇನ್ನಿತರ ರನ್ನು ರಾಜ್ಯ ಸರ್ಕಾರಅಮಾನತ್ತು ಮಾಡಿರುವುದು ಸರಿಯಲ್ಲ ಎಂದು ಆರೋಪಿಸಿ ಗೌರಿಬಿದ ನೂರು ನಾಗರೀಕರ ಹಿತ ರಕ್ಷಣಾ ಸಮಿತಿ ತೀವ್ರವಾಗಿ ಖಂಡಿಸಿತು.
ನಗರದಲ್ಲಿ ಈ ಸಂಬಂಧ ನಡೆದ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಸಮಿತಿ ಮುಖಂಡರು ಈ ಕೂಡಲೆ ಪೋಲಿಸ್ ಅಧಿಕಾರಿಗಳ ಅಮಾನತ್ತು ಆದೇಶವನ್ನು ಸರಕಾರ ಹಿಂಪಡೆಯಬೇಕೆAದು ಸರ್ಕಾರವನ್ನು ಒತ್ತಾಯಿಸಿದರು.
ಇದನ್ನೂ ಓದಿ: IPL 2025: ಈ ಒಂದೇ ಒಂದು ಕಾರಣದಿಂದಾಗಿ ಭಾರತಕ್ಕೆ ಮರಳಲು ಸಾಧ್ಯವಾಗಿಲ್ಲ ಎಂದ ಮಿಚೆಲ್ ಸ್ಟಾರ್ಕ್!
ಸಮಾಜ ಸೇವಕ ಎಸ್‌ಟಿಡಿ ರಾಮಣ್ಣ ಮಾತನಾಡುತ್ತಾ, ಐಪಿಎಲ್ ವಿಜಯಿಯಾದ ಆರ್.ಸಿ.ಬಿ ಕ್ರಿಕೆಟ್ ತಂಡವನ್ನು ರಾಜ್ಯ ಸರ್ಕಾರ ಪೊಲೀಸ್ ಇಲಾಖೆಯ ಅಭಿಪ್ರಾಯಕ್ಕೆ ವ್ಯತಿರಿಕ್ತವಾಗಿ ಯಾವುದೇ ರೀತಿಯ ಪೂರ್ವ ತಯಾರಿ ಇಲ್ಲದೆ,ತರಾತುರಿಯಲ್ಲಿ ಸನ್ಮಾನಿಸುವ ಅಗತ್ಯವಾದರೂ ಏನಿತ್ತು? ಎಂದು ಪ್ರಶ್ನಿಸಿದರು.
ಕಾಲ್ತುಳಿತ ಘಟನೆಯ ದುರಂತದಲ್ಲಿ ಸಾವಿಗೀಡಾದವರ ಸಾವಿಗೆ ನ್ಯಾಯ ಕೊಡಿಸುವವರು ಯಾರು? ಈ ಹಿಂದೆ ಕೇರಳದಲ್ಲಿ ಆನೆಯ ಕಾಲ್ತುಲಿತಕ್ಕೆ ಬಲಿಯಾದವನಿಗೆ ರಾಜ್ಯ ಸರ್ಕಾರದ ವತಿಯಿಂದ ೨೫ ಲಕ್ಷ ರೂಪಾಯಿಗಳ ಪರಿಹಾರವನ್ನು ನೀಡಿದೆ. ಆದರೆ ಮೊನ್ನೆ ನಡೆದ ಕಾಲ್ತುಳಿತ ದುರಂತದಲ್ಲಿ ಮಡಿದವರಿಗೆ ರಾಜ್ಯ ಸರ್ಕಾರ ಕೇವಲ ಹತ್ತು ಲಕ್ಷ ರೂಪಾಯಿಗಳ ಪರಿಹಾರವನ್ನು ಘೋಷಣೆ ಮಾಡಿರುವುದು ಸರಿಯಲ್ಲ ಎಂದ ಅವರು ಕಾಲ್ತುಲಿತ ದುರಂತದಲ್ಲಿ ಮಡಿದವರ ಕುಟುಂಬಕ್ಕೆ ಕನಿಷ್ಠ ಒಂದು ಕೋಟಿ ರೂಪಾಯಿಗಳ ಪರಿಹಾರವನ್ನು ಘೋಷಿಸಬೇಕು. ಕಾಲ್ತುಳಿತ ಪ್ರಕರಣದ ತನಿಖೆಯನ್ನು ಸಿಬಿಐ ಸಂಸ್ಥೆಗೆ ಒಪ್ಪಿಸಿ,ಪೋಲಿಸ್ ಅಧಿಕಾರಿಗಳ ಅಮಾನತ್ತು ವಾಪಸ್ ಪಡೆಯ ಬೇಕೆಂದು ಸರ್ಕಾರವನ್ನು ಆಗ್ರಹಪಡಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಪುರಸಭೆ ಮಾಜಿ ಉಪಾಧ್ಯಕ್ಷ ಕೆ.ಕಾಂತರಾಜ್,ಹಿAದು ಸಾದರ ಯುವ ವೇದಿಕೆಯ ಅಧ್ಯಕ್ಷ ಜಗದೀಶ್ ಕುಮಾರ್ ಮುಖಂಡರಾದ ಗೋಟಕನಾಪುರ ಮುರುಳೀದರ್, ಸಾಗಾನಹಳ್ಳಿ ಶಿವಕುಮಾರ್, ಶಿವರಾಜ್,ಜಿಕೆ ಪ್ರಸಾದ್,ಎಂಡಿ ರವಿ, ಸದಾಶಿವಪ್ಪ, ಅಶ್ವತ್ಥಗೌಡ, ಚೇತನ್ ಹಾಗೂ ಇನ್ನಿತರರು ಉಪಸ್ಥಿತರಿದ್ದರು.