Karunadu Studio

ಕರ್ನಾಟಕ

Los Angeles Violence: ಲಾಸ್ ಏಂಜಲೀಸ್ ನಲ್ಲಿ ಭುಗಿಲೆದ್ದ ಗಲಭೆ- 44 ಮಂದಿ ಅರೆಸ್ಟ್‌ – Kannada News | ICE immigration raid: Illegal hiring of workers: Protests erupt in Los Angeles after 44 arrests


ಲಾಸ್ ಏಂಜಲೀಸ್: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (President Donald Trump) ಆದೇಶದ ಬಳಿಕ ಕಾನೂನು ಬಾಹಿರವಾಗಿ ಕಾರ್ಮಿಕರ ನೇಮಕಕ್ಕೆ ನಕಲಿ ದಾಖಲೆಗಳನ್ನು ಬಳಸಿರುವ ಆರೋಪದ ಹಿನ್ನೆಲೆಯಲ್ಲಿ ವಲಸೆ ಮತ್ತು ಕಸ್ಟಮ್ಸ್ ಜಾರಿ ಅಧಿಕಾರಿಗಳು (ICE immigration raid) 44 ಮಂದಿಯನ್ನು ಬಂಧಿಸಿದ ಬಳಿಕ ಲಾಸ್ ಏಂಜಲೀಸ್‌ನಾದ್ಯಂತ (Los Angeles) ಜನರು ಪ್ರತಿಭಟನೆ ನಡೆಸುತ್ತಿದ್ದಾರೆ. ಪ್ರತಿಭಟನಾಕಾರರನ್ನು ಚದುರಿಸಲು ಲಾಸ್ ಏಂಜಲೀಸ್ ಪೊಲೀಸರು ಫ್ಲ್ಯಾಷ್ ಬ್ಯಾಂಗ್ ಮತ್ತು ಜನರು ಒಗ್ಗೂಡುವುದನ್ನು ನಿಯಂತ್ರಿಸಲು ವಿವಿಧ ಕ್ರಮಗಳನ್ನು ಕೈಗೊಳ್ಳುತ್ತಿರುವ ವಿಡಿಯೊಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ (Viral Video) ಆಗಿದೆ.

ನಕಲಿ ದಾಖಲೆಗಳನ್ನು ಹೊಂದಿರುವವರ ಸಾಮೂಹಿಕ ಗಡಿಪಾರಿಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆದೇಶಿಸಿದ ಬಳಿಕ ದೇಶಾದ್ಯಂತ ಫೆಡರಲ್ ವಲಸೆ ಅಧಿಕಾರಿಗಳು ಬಿರುಸಿನ ಕಾರ್ಯಾಚರಣೆಯನ್ನು ನಡೆಸುತ್ತಿದ್ದು, ಈಗಾಗಲೇ ಲಾಸ್ ಏಂಜಲೀಸ್‌ನಾದ್ಯಂತ 44 ಮಂದಿಯನ್ನು ಬಂಧಿಸಿದ್ದಾರೆ. ಈ ಬಂಧನಗಳು ಮತ್ತಷ್ಟು ಹೆಚ್ಚಾಗುವ ಸಾಧ್ಯತೆಗಳಿವೆ.

ಲಾಸ್ ಏಂಜಲೀಸ್‌ನಾದ್ಯಂತ 44 ವ್ಯಕ್ತಿಗಳ ಬಂಧನವನ್ನು ಖಂಡಿಸಲು ಶುಕ್ರವಾರ ಪ್ರತಿಭಟನಾಕಾರರು ಸೇರುತ್ತಿದ್ದಂತೆ ಅನೇಕ ಸ್ಥಳಗಳಲ್ಲಿ ಘರ್ಷಣೆಗಳು ನಡೆದವು. ಪ್ರತಿಭಟನಾಕಾರರನ್ನು ಚದುರಿಸಲು ಪೊಲೀಸ್ ಅಧಿಕಾರಿಗಳು ಫ್ಲ್ಯಾಷ್ ಬ್ಯಾಂಗ್ ಮತ್ತು ಇತರ ತಂತ್ರಗಳನ್ನು ಕೈಗೊಂಡರು.

ಫೆಡರಲ್ ವಲಸೆ ಅಧಿಕಾರಿಗಳು ನಗರದ ಮೂರು ಸ್ಥಳಗಳಲ್ಲಿ ಶೋಧ ಕಾರ್ಯಗಳನ್ನು ನಡೆಸಿ ಎರಡು ಗೋದಾಮು, ಡೋನಟ್ ಅಂಗಡಿ ಸೇರಿದಂತೆ ಏಳು ಸ್ಥಳಗಳಲ್ಲಿ44 ಮಂದಿಯನ್ನು ಬಂಧಿಸಿದರು. ಈ ಕುರಿತು ಪ್ರತಿಕ್ರಿಯಿಸಿರುವ ಯುಎಸ್ ಅಟಾರ್ನಿ ಕಚೇರಿಯ ವಕ್ತಾರ ಸಿಯಾರನ್ ಮೆಕ್‌ಇವೊಯ್, ದಾಖಲೆರಹಿತ ಕಾರ್ಮಿಕರನ್ನು ಬಂಧಿಸಲು ಮತ್ತು ವಲಸೆ ಕಾನೂನುಗಳನ್ನು ಜಾರಿಗೊಳಿಸಲು ಫೆಡರಲ್ ವಲಸೆ ಅಧಿಕಾರಿಗಳು ನಡೆಸಿದ ಬಹುದೊಡ್ಡ ಕಾರ್ಯಾಚರಣೆ ಇದಾಗಿದೆ ಎಂದು ಹೇಳಿದರು.

ಫೆಡರಲ್ ಅಧಿಕಾರಿಗಳ ದಾಳಿ ಕುರಿತು ಮಾಹಿತಿ ಹಬ್ಬುತ್ತಿದ್ದಂತೆ ಹಲವೆಡೆ ಪ್ರತಿಭಟನೆಗಳು ಭುಗಿಲೆದ್ದವು. ಫೆಡರಲ್ ಬಂಧನ ಕೇಂದ್ರಗಳ ಹೊರಗೆ ನೂರಾರು ಪ್ರತಿಭಟನಾಕಾರರು ಸೇರಿ ಬಂಧಿತರನ್ನು ಬಿಡುಗಡೆ ಮಾಡುವಂತೆ ಒತ್ತಾಯಿಸಿದರು. ಇದರ ದೃಶ್ಯಾವಳಿಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಇದರಲ್ಲಿ ಫೆಡರಲ್ ಅಧಿಕಾರಿಗಳು ಬಂಧಿತರನ್ನು ಬಿಳಿ ವ್ಯಾನ್‌ಗಳಿಗೆ ಕರೆದೊಯ್ಯುತ್ತಿರುವುದು ಮತ್ತು ಬಂಧಿತರ ಕೈಗಳನ್ನು ಬೆನ್ನ ಹಿಂದೆ ಕಟ್ಟಿರುವುದನ್ನು ಕಾಣಬಹುದು.





ನಮ್ಮ ನಗರಕ್ಕೆ ಹಲವು ರೀತಿಯಲ್ಲಿ ಕೊಡುಗೆ ನೀಡುವ ವಲಸಿಗರ ಹೆಮ್ಮೆಯ ನಗರದ ಮೇಯರ್ ಆಗಿ ನಡೆದಿರುವ ಈ ಘಟನೆಯಿಂದ ನಾನು ತೀವ್ರವಾಗಿ ಕೋಪಗೊಂಡಿದ್ದೇನೆ. ಈ ತಂತ್ರಗಳು ನಮ್ಮ ಸಮುದಾಯಗಳಲ್ಲಿ ಭಯೋತ್ಪಾದನೆಯನ್ನು ಬಿತ್ತುತ್ತವೆ ಮತ್ತು ನಮ್ಮ ನಗರದಲ್ಲಿ ಸುರಕ್ಷತೆಯ ಮೂಲ ತತ್ತ್ವ ಗಳಿಗೆ ಅಡ್ಡಿಯಾಗುತ್ತದೆ ಎಂದು ತಿಳಿಸಿದ್ದಾರೆ.

ದಾಳಿಯ ಕುರಿತು ಸಮರ್ಥಿಸಿಕೊಂಡಿರುವ ವಲಸೆ ಮತ್ತು ಕಸ್ಟಮ್ಸ್ ಜಾರಿ ಇಲಾಖೆ ನಿರ್ದೇಶಕ ಟಾಡ್ ಲಿಯಾನ್ಸ್, ಈ ದಾಳಿಯು ಅಪಾಯಕಾರಿ ಅಪರಾಧಿಗಳನ್ನು ಗುರಿಯಾಗಿಸಿಕೊಂಡಿದೆ. ವಲಸೆ ಮತ್ತು ಕಸ್ಟಮ್ಸ್ ಜಾರಿ ಅಧಿಕಾರಿಗಳು ದಿನಕ್ಕೆ ಸರಾಸರಿ 1,600 ಮಂದಿಯನ್ನು ಬಂಧಿಸುತ್ತಿದ್ದಾರೆ. ಸಾರ್ವಜನಿಕ ಸುರಕ್ಷತೆಗೆ ಬೆದರಿಕೆಯೊಡ್ಡುವವರನ್ನು ದೇಶದಿಂದ ಹೊರಹಾಕುವುದು ನಮ್ಮ ಕೆಲಸ ಎಂದು ಹೇಳಿದ್ದಾರೆ.





Source link

ADMIN

About Author

Leave a comment

Your email address will not be published. Required fields are marked *

You may also like

ಕರ್ನಾಟಕ

Microsoft: Empowering the Digital World

Microsoft is a global technology company known for shaping the modern digital experience. From its iconic Windows operating system to
ಉತ್ತರ ಕರ್ನಾಟಕ ಕರ್ನಾಟಕ

“ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವದ ದಿನಾಚರಣೆಯಲ್ಲಿ ವಿಭಿನ್ನ ಹಾಗೂ ವಿಶೇಷತೆಯಿಂದ ಆಚರಣೆ”

  • September 16, 2024
ಧಾರವಾಡ ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವದ ದಿನಾಚರಣೆಯಲ್ಲಿ ವಿಭಿನ್ನ ಹಾಗೂ ವಿಶೇಷತೆಯಿಂದ ಆಚರಣೆ ಮಾಡುವ ಮೂಲಕ 95 ಸಾವಿರ ಜನರು ಪ್ರತ್ಯಕ್ಷವಾಗಿ ಭಾಗವಹಿಸಿ ರಾಜ್ಯದಲ್ಲಿಯೇ ನಂಬರ್ 1 ಸ್ಥಾನ ಪಡೆದ
Translate »