Karunadu Studio

ಕರ್ನಾಟಕ

Karikaada Movie: ಐಟಿ ಜಗತ್ತಿನಿಂದ ಕನ್ನಡ ಚಿತ್ರರಂಗಕ್ಕೆ ಕಾಡ ನಟರಾಜ್‌- ಕನ್ನಡಿಗರ ಮನಗೆಲ್ಲಲು ಸಜ್ಜಾಗಿದೆ ‘ಕರಿಕಾಡ’ ಸಿನಿಮಾ – Kannada News | Karikaada Movie teaser released


ಬೆಂಗಳೂರು: ಕನ್ನಡ ಚಿತ್ರರಂಗಕ್ಕೆ (Kannada Cinema) ವಿವಿಧ ಕ್ಷೇತ್ರಗಳಿಂದ ಕನಸುಗಳನ್ನು ಹೊತ್ತು ಬಂದ ಕಲಾವಿದರು (Artists) ತಮ್ಮದೇ ಛಾಪು ಮೂಡಿಸಿದ್ದಾರೆ. ಇದೀಗ ಐಟಿ ವಲಯದಿಂದ ಬಂದ ಕಾಡ ನಟರಾಜ್‌ರ ‘ಕರಿಕಾಡ’ ಚಿತ್ರತಂಡ ಕನ್ನಡಿಗರ ಮನಗೆಲ್ಲಲು ಸಜ್ಜಾಗಿದೆ.

‘ಕರಿಕಾಡ’ ಚಿತ್ರದ ವಿಶೇಷತೆ

‘ಕರಿಕಾಡ’ ಇದೊಂದು ಮ್ಯೂಸಿಕಲ್ ಜರ್ನಿ & ಅಡ್ವೆಂಚರಸ್ ಎಲಿಮೆಂಟ್ಸ್ ಹೊಂದಿರುವ ಸಿನಿಮಾ. ಚಿತ್ರರಂಗದ ಕನಸು ಕಂಡು ಐಟಿ ಕ್ಷೇತ್ರದಲ್ಲಿ ಮಾರ್ಕೆಟಿಂಗ್ ಮತ್ತು ಬ್ರಾಂಡಿಂಗ್‌ನಲ್ಲಿ ಕೆಲಸ ಮಾಡುತ್ತಿರುವ ಕಾಡ ನಟರಾಜ್ ಈ ಚಿತ್ರದ ನಾಯಕ. ವಾರದ ಐದು ದಿನ ಐಟಿ ಕೆಲಸದ ಜೊತೆಗೆ ಶನಿವಾರ-ಭಾನುವಾರ ಚಿತ್ರೀಕರಣದಲ್ಲಿ ತೊಡಗಿ, ತಮ್ಮ ಕನಸಿನ ಗುರಿಯನ್ನು ಸಾಕಾರಗೊಳಿಸಿದ್ದಾರೆ. 2024ರ ಆಗಸ್ಟ್ 15ರಿಂದ ಚಿತ್ರೀಕರಣ ಆರಂಭಿಸಿ, ರಜೆ ಸಿಗುವಾಗಲೆಲ್ಲ ಅಭಿನಯಿಸಿ, ನವೆಂಬರ್ 2024ರೊಳಗೆ ಸಂಭಾಷಣೆ ಭಾಗವನ್ನು ಪೂರ್ಣಗೊಳಿಸಿದ್ದಾರೆ. ವಿಶೇಷವೆಂದರೆ, ಈ ಚಿತ್ರದ ಕಥೆಯನ್ನು ಕಾಡ ನಟರಾಜ್ ಸ್ವತಃ ಬರೆದಿದ್ದಾರೆ.

ಟೀಸರ್‌ ಇಲ್ಲಿದೆ ನೋಡಿ

ನಿರ್ಮಾಣ ಮತ್ತು ತಂಡ

ರಿದ್ಧಿ ಎಂಟರ್‌ಟೈನ್‌ಮೆಂಟ್ಸ್ ಬ್ಯಾನರ್‌ನಡಿ ಚಿತ್ರವನ್ನು ಕಾಡ ನಟರಾಜ್‌ರ ಧರ್ಮಪತ್ನಿ ದೀಪ್ತಿ ದಾಮೋದರ್ ನಿರ್ಮಿಸಿದ್ದು, ಗಂಡನ ಕನಸಿನ ಪಯಣಕ್ಕೆ ಬೆಂಬಲ ನೀಡಿದ್ದಾರೆ. ಸ್ನೇಹಿತ ರವಿಕುಮಾರ್ ಎಸ್.ಆರ್ ಕೂಡ ಸಹನಿರ್ಮಾಣದಲ್ಲಿ ಕೈಜೋಡಿಸಿದ್ದಾರೆ. ಚಿತ್ರದ ನಿರ್ದೇಶನದ ಜವಾಬ್ದಾರಿಯನ್ನು ಕಿರುತೆರೆಯ ರಿಯಾಲಿಟಿ ಶೋಗಳಲ್ಲಿ ಅನುಭವ ಹೊಂದಿರುವ ಗಿಲ್ಲಿ ವೆಂಕಟೇಶ್ ಹೊತ್ತಿದ್ದಾರೆ. ‘ಹುಲಿಬೇಟೆ’ ಚಿತ್ರದಲ್ಲಿ ಸಹನಿರ್ದೇಶನ ಮತ್ತು ಖಳನಾಯಕನ ಪಾತ್ರ ಮಾಡಿರುವ ಇವರು, ‘ತಾಳಟ್ಟಿ’ ಚಿತ್ರವನ್ನೂ ನಿರ್ದೇಶಿಸಿದ್ದಾರೆ. ‘ಕರಿಕಾಡ’ಗೆ ಚಿತ್ರಕಥೆ, ಸಂಭಾಷಣೆ, ಮತ್ತು ನಿರ್ದೇಶನದ ಜವಾಬ್ದಾರಿಯನ್ನ ಹೊತ್ತಿದ್ದಾರೆ.

ಈ ಸುದ್ದಿಯನ್ನೂ ಓದಿ: Dipika Padukone: ಅಲ್ಲು ಅರ್ಜುನ್‌ ಬಿಗ್‌ ಬಜೆಟ್‌ ಸಿನಿಮಾಕ್ಕೆ ದೀಪಿಕಾ ಹೀರೋಯಿನ್‌- ಶೂಟಿಂಗ್‌ ಶುರುವಾಯ್ತಾ? ವಿಡಿಯೊ ಫುಲ್‌ ವೈರಲ್‌

ತಾಂತ್ರಿಕ ತಂಡ

ಚಿತ್ರಕ್ಕೆ ಅತೀಶಯ್ ಜೈನ್ ಮತ್ತು ಶಶಾಂಕ್ ಶೇಷಾಗಿರಿ ಸಂಗೀತ ಸಂಯೋಜನೆ ನೀಡಿದ್ದು, ಶಶಾಂಕ್ ಶೇಷಾಗಿರಿ ಜಬರ್ದಸ್ತ್ ಹಿನ್ನೆಲೆ ಸಂಗೀತವನ್ನೂ ಒದಗಿಸಿದ್ದಾರೆ. ಜೀವನ್ ಗೌಡ ಛಾಯಾಗ್ರಾಹಕರಾಗಿ, ದೀಪಕ್ ಸಿ.ಎಸ್ ಸಂಕಲನಕಾರರಾಗಿ ಕಾರ್ಯನಿರ್ವಹಿಸಿದ್ದಾರೆ. ‘ಕರಿಕಾಡ’ ಚಿತ್ರವನ್ನು ಚಿಕ್ಕಮಗಳೂರು, ಕಳಸ, ಕುದುರೆಮುಖ, ಮಂಡ್ಯ, ಚೆನ್ನರಾಯಪಟ್ಟಣ ಸೇರಿದಂತೆ ಕರ್ನಾಟಕದ ರಮಣೀಯ ಸ್ಥಳಗಳಲ್ಲಿ ಚಿತ್ರೀಕರಿಸಲಾಗಿದೆ. ಸದ್ಯಕ್ಕೆ ಟೈಟಲ್ ಟೀಸರ್ ಬಿಡುಗಡೆಗೊಳಿಸುವ ಮೂಲಕ ಪ್ರೇಕ್ಷಕರ ಗಮನ ಸೆಳೆಯಲು ಚಿತ್ರತಂಡ ಸಿದ್ಧತೆ ನಡೆಸಿದೆ.



Source link

ADMIN

About Author

Leave a comment

Your email address will not be published. Required fields are marked *

You may also like

ಕರ್ನಾಟಕ

Microsoft: Empowering the Digital World

Microsoft is a global technology company known for shaping the modern digital experience. From its iconic Windows operating system to
ಕರ್ನಾಟಕ

Microsoft: Empowering the Digital World

Microsoft is a global technology company known for shaping the modern digital experience. From its iconic Windows operating system to
Translate »