Karunadu Studio

ಕರ್ನಾಟಕ

Pralhad Joshi: ಕೇಂದ್ರದ ಪುರಸ್ಕಾರಗಳು ನೈಜ ಸಾಧಕರಿಗೆ ಸಲ್ಲುತ್ತಿವೆ: ಪ್ರಲ್ಹಾದ್‌ ಜೋಶಿ – Kannada News | Pralhad Joshi Union Minister Pralhad Joshi congratulates Padma Shri awardee Dr Vijayalakshmi in Bengaluru


ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರ ಆಡಳಿತದಲ್ಲಿ ʼಪದ್ಮಶ್ರೀʼ ನಿಜ ಸಾಧಕರನ್ನು ಅರಸಿ ಪುರಸ್ಕರಿಸುತ್ತಿದ್ದು, ಪ್ರಶಸ್ತಿ ಮತ್ತು ಸಾಧಕರ ಮೌಲ್ಯವನ್ನು ವೃದ್ಧಿಸಿದೆ ಎಂದು ಕೇಂದ್ರ ಆಹಾರ ಮತ್ತು ನಾಗರೀಕ ಸರಬರಾಜು ಸಚಿವ ಪ್ರಲ್ಹಾದ್‌ ಜೋಶಿ (Pralhad Joshi)‌ ತಿಳಿಸಿದರು. ಬೆಂಗಳೂರಿನಲ್ಲಿ ಶನಿವಾರ ಅಬಲಾಶ್ರಮದ 120ನೇ ವರ್ಷಾಚರಣೆ ಹಾಗೂ ಸಂಸ್ಥೆ ಅಧ್ಯಕ್ಷೆ, ಪದ್ಮಶ್ರೀ ಪುರಸ್ಕೃತೆ ಡಾ.ವಿಜಯಲಕ್ಷ್ಮೀ ಅವರ ಅಭಿನಂದನೆ ಸಮಾರಂಭದಲ್ಲಿ ಮಾತನಾಡಿದ ಅವರು, ಮೊದಲೆಲ್ಲಾ ಪ್ರಶಸ್ತಿ-ಪುರಸ್ಕಾರಕ್ಕೆ ಅರ್ಜಿ, ಶಿಫಾರಸ್ಸು ಪಾತ್ರ ವಹಿಸುತ್ತಿತ್ತು. ಆದರೆ ಇಂದು ಕೇಂದ್ರ ಮಟ್ಟದ ಗೌರವ-ಪುರಸ್ಕಾರಗಳು ನೈಜ ಸಾಧಕರನ್ನು ಅರಸಿ ಸಲ್ಲುತ್ತಿವೆ ಎಂದು ಜೋಶಿ ಹೆಮ್ಮೆ ವ್ಯಕ್ತಪಡಿಸಿದರು.

ಸ್ಥಳೀಯ ಆಡಳಿತ, ಅಧಿಕಾರಿಗಳಿಗೇ ನೈಜ ಸಾಧಕರ ಬಗ್ಗೆ ಮಾಹಿತಿ ಇರುವುದಿಲ್ಲ. ಅಂಥ ಸಮಾಜ ಸೇವಕರನ್ನು, ಸಾಧಕರನ್ನು ಪ್ರಧಾನಿ ನರೇಂದ್ರ ಮೋದಿ ಅವರು ಗುರುತಿಸಿ ಪದ್ಮಶ್ರೀಯಂತಹ ಅತ್ಯುನ್ನತ ಪ್ರಶಸ್ತಿ ನೀಡಿ ಪುರಸ್ಕರಿಸುತ್ತಿದ್ದಾರೆ. ಈ ಮೂಲಕ ಅವರ ಸೇವಾ ಕೈಂಕರ್ಯಗಳಿಗೆ ಮತ್ತಷ್ಟು ಪ್ರೋತ್ಸಾಹ ನೀಡುತ್ತ ಬೆಂಬಲವಾಗಿ ನಿಂತಿದ್ದಾರೆ ಎಂದು ಹೇಳಿದರು.

ನಿರಂತರ 120 ವರ್ಷಗಳಿಂದ ಸಮಾಜದ ಅಬಲೆಯರ ಸೇವೆಯಲ್ಲಿ ನಿರತವಾಗಿರುವ ಅಬಲಾಶ್ರಮದ ಅಧ್ಯಕ್ಷೆ ಡಾ.ವಿಜಯಲಕ್ಷ್ಮೀ ದೇಶಮಾನೆ ಅವರ ಸೇವಾ ಕೈಂಕರ್ಯ ನಿಜಕ್ಕೂ ಇಂದಿನ ಸಮಾಜಕ್ಕೆ ಮಾದರಿ ಮತ್ತು ಆದರ್ಶನೀಯ. ಇವರು ಅಬಲೆಯರಿಗೆ ʼಸ್ತ್ರೀಶಕ್ತಿʼಯಾಗಿ ನಿಂತಿದ್ದು, ಅತ್ಯುನ್ನತ ʼಪದ್ಮಶ್ರೀʼ ಗೌರವ ಪುರಸ್ಕಾರಕ್ಕೆ ಭಾಜನರಾಗಿರುವುದು ನಿಜಕ್ಕೂ ಹೆಮ್ಮೆಯ ಸಂಗತಿ ಎಂದು ಪ್ರಶಂಸೆ ವ್ಯಕ್ತಪಡಿಸಿದರು.

ಮಹಿಳೆ ಇಂದು ರೈಫಲ್‌ ಹಿಡಿಯುವುದರಿಂದ ಹಿಡಿದು ಯುದ್ಧ ಡ್ರೋನ್‌, ಕ್ಷಿಪಣಿ ಉಡಾಯಿಸುವಂತಹ ಮಹತ್ತರ ಎತ್ತರಕ್ಕೆ ಬೆಳೆದಿದ್ದಾರೆ. ಕೀಳರಿಮೆ, ಅವಹೇಳನವನ್ನೆಲ್ಲ ಮೆಟ್ಟಿ ನಿಂತು ಸಮಾಜದಲ್ಲಿ ಸಮಾನತೆ ಸಾಧಿಸುತ್ತಿದ್ದಾರೆ. ಅವಕಾಶ ಕೊಟ್ಟರೆ ಮುಗಿಲೆತ್ತರ ತಲುಪುತ್ತೇವೆ ಎಂಬುದನ್ನು ಸಾಧಿಸುತ್ತಿದ್ದಾರೆ. ʼಆಪರೇಷನ್‌ ಸಿಂಧೂರ್‌ʼ ಮೂಲಕ ಭಾರತೀಯ ಮಹಿಳೆಯರು ಇಂದು ಜಗತ್ಪ್ರಸಿದ್ಧರಾಗಿದ್ದಾರೆ. ಪ್ರಧಾನಿ ಮೋದಿ ಅವರ ನೇತೃತ್ವದಲ್ಲಿ ಭಾರತ ಮಹಿಳೆಯರನ್ನು ಅತ್ಯುನ್ನತ ಎತ್ತರಕ್ಕೆ ಕೊಂಡೊಯ್ಯುತ್ತಿದೆ ಎಂದು ಸಚಿವ ಜೋಶಿ ತಿಳಿಸಿದರು.

ಜಗತ್ತಿನಲ್ಲಿ ಮಹಿಳೆಯರಿಗೆ ಅತ್ಯಂತ ಉಚ್ಛ ಸ್ಥಾನ ಕೊಟ್ಟ ಸಂಸ್ಕೃತಿ ನಮ್ಮ ಹಿಂದೂ ಸಂಸ್ಕೃತಿ, ಭಾರತೀಯ ಸಂಸ್ಕೃತಿಯಾಗಿದೆ. ಹೀಗಾಗಿ ಭಾರತೀಯ ಮಹಿಳೆಯರು ಉನ್ನತ ಶಿಕ್ಷಣ, ವಿಜ್ಞಾನ, ಸಂಸ್ಕೃತಿ, ಪರಂಪರೆ ಹೀಗೆ ಸರ್ವದರಲ್ಲೂ ಮುಂಚೂಣಿಯಲ್ಲಿದ್ದಾರೆ. ನಾಯಕತ್ವದಲ್ಲೂ ಹಿಂದೆ ಬಿದ್ದಿಲ್ಲ ಎಂದು ಹೇಳಿದರು.

ಸೇವಾ ಪರಿಶ್ರಮಿಗೆ ಸಂದ ಪದ್ಮಶ್ರೀ

ಧರ್ಮ ಮಾರ್ಗದಲ್ಲಿ ಸಾಗುವವರನ್ನು ಸರ್ವರೂ ಗೌರವಿಸುತ್ತಾರೆ ಎಂಬುದಕ್ಕೆ ಡಾ.ವಿಜಯಲಕ್ಷ್ಮೀ ಉತ್ತಮ ನಿದರ್ಶನ. ಇವರು ತಂದೆ-ತಾಯಿ ಜತೆ ತರಕಾರಿ ಮಾರಿ ಜೀವನ ಸಾಗಿಸುತ್ತಲೇ ವೈದ್ಯಕೀಯ ಶಿಕ್ಷಣ ಪಡೆದು ಇಂದು ಉನ್ನತ ಹಂತಕ್ಕೆ ಏರಿದವರು. ಬಡತನ ಸಾಧನೆಗೆ ಯಾವತ್ತೂ ಅಡ್ಡಿ ಬರುವುದಿಲ್ಲ ಎಂಬುದನ್ನು ಸಾಧಿಸಿ ತೋರಿಸಿದವರು. ತಮ್ಮ ಕಷ್ಟದ ಅನುಭವದ ಹಿನ್ನೆಲೆಯಲ್ಲಿ ಅಬಲಾಶ್ರಮದ ಮೂಲಕ ಅಬಲೆಯರನ್ನು ಸಬಲೆಯರನ್ನಾಗಿ ರೂಪಿಸುತ್ತಿದ್ದಾರೆ. ವೃತ್ತಿಯಲ್ಲಿ ತಜ್ಞವೈದ್ಯರಾದರೂ ಸ್ವಂತ ಆಸ್ಪತ್ರೆ ಕಟ್ಟದೆ, 70 ಜನರಿರುವ ಅಬಲಾಶ್ರಮದ ಹೊಣೆ ಹೊತ್ತು ಮುನ್ನಡೆಸುತ್ತಿದ್ದಾರೆ. ಸಮಾಜದಲ್ಲಿ ಸದ್ದಿಲ್ಲದೆ ಮಹಿಳಾ ಸಬಲೀಕರಣದಲ್ಲಿ ತೊಡಗಿ ಅನನ್ಯ ಸೇವೆಗೈಯ್ಯುತ್ತಿದ್ದಾರೆ. ಬಡವರ ಪರವಾದ ನಿಜವಾದ ಸೇವೆಯನ್ನು ಗುರುತಿಸಿಯೇ ಭಾರತ ಸರ್ಕಾರ ಡಾ.ವಿಜಯಲಕ್ಷ್ಮಿ ಅವರಿಗೆ ಪದ್ಮಶ್ರೀ ಪುರಸ್ಕಾರ ನೀಡಿ ಗೌರವಿಸಿದೆ. ಈ ಸುಸಂದರ್ಭದಲ್ಲಿ 120 ವರ್ಷದ ಅಬಲಾಶ್ರಮ ಇವರ ಸಾರಥ್ಯದಲ್ಲಿ ವಿಶೇಷವಾಗಿ ಅಬಲೆಯರಿಗೆ ಆಶಾಕಿರಣವಾಗಿ ಬೆಳಗಲಿ ಎಂದು ಸಚಿವ ಪ್ರಲ್ಹಾದ್‌ ಜೋಶಿ ಹಾರೈಸಿದರು.

ಈ ಸುದ್ದಿಯನ್ನೂ ಓದಿ | SSC Recruitment 2025: ಎಸ್ಸೆಸ್ಸೆಲ್ಸಿ ಪಾಸಾದವರಿಗೆ ಗುಡ್‌ನ್ಯೂಸ್‌; ಸ್ಟಾಫ್‌ ಸೆಲೆಕ್ಷನ್‌ ಕಮಿಷನ್‌ನಿಂದ 2,423 ಹುದ್ದೆಗಳ ಭರ್ತಿ

ಬೆಂಗಳೂರಿನ ಎಸ್‌ಬಿಐ ಮುಖ್ಯ ಆಡಳಿತಾಧಿಕಾರಿ ಜೂಹಿ ಸ್ಮಿತಾ ಸಿನ್ಹಾ, ಕ್ಲೂಬೆರ್‌ ಲೂಬ್ರಿಕೇಷನ್‌ ಇಂಡಿಯಾ ಪ್ರೈವೇಟ್‌ ಲಿಮಿಟೆಡ್‌ನ ಹಣಕಾಸು ಮುಖ್ಯಸ್ಥ ವಿಶಾಲ್‌ ಅಲ್‌ಮಲ್‌, ಅಬಲಾಶ್ರಮದ ಗೌರವ ಕಾರ್ಯದರ್ಶಿ ಡಾ.ಆರ್‌.ಎಸ್‌. ಭಾರತೀಶ ರಾವ್‌ ಹಾಗೂ ಆಡಳಿತ ಮಂಡಳಿ ಸದಸ್ಯರು ಉಪಸ್ಥಿತರಿದ್ದರು.



Source link

ADMIN

About Author

Leave a comment

Your email address will not be published. Required fields are marked *

You may also like

ಕರ್ನಾಟಕ

Microsoft: Empowering the Digital World

Microsoft is a global technology company known for shaping the modern digital experience. From its iconic Windows operating system to
ಉತ್ತರ ಕರ್ನಾಟಕ ಕರ್ನಾಟಕ

“ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವದ ದಿನಾಚರಣೆಯಲ್ಲಿ ವಿಭಿನ್ನ ಹಾಗೂ ವಿಶೇಷತೆಯಿಂದ ಆಚರಣೆ”

  • September 16, 2024
ಧಾರವಾಡ ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವದ ದಿನಾಚರಣೆಯಲ್ಲಿ ವಿಭಿನ್ನ ಹಾಗೂ ವಿಶೇಷತೆಯಿಂದ ಆಚರಣೆ ಮಾಡುವ ಮೂಲಕ 95 ಸಾವಿರ ಜನರು ಪ್ರತ್ಯಕ್ಷವಾಗಿ ಭಾಗವಹಿಸಿ ರಾಜ್ಯದಲ್ಲಿಯೇ ನಂಬರ್ 1 ಸ್ಥಾನ ಪಡೆದ
Translate »