Karunadu Studio

ಕರ್ನಾಟಕ

Chowkidar Movie: ಅಪ್ಪ-ಮಗನ ಬಾಂಧವ್ಯದ ಮನ ಮುಟ್ಟುವ ʼಚೌಕಿದಾರ್ʼ ಚಿತ್ರದ ಹಾಡಿಗೆ ಭರಪೂರ ಮೆಚ್ಚುಗೆ: 1 ಮಿಲಿಯನ್ಸ್‌ ವೀಕ್ಷಣೆ – Kannada News | Chowkidar Movie Pruthvi Ambaar starring Chowkidar Movie Appa Anthem Lyrical song


ಬೆಂಗಳೂರು: ʼರಥಾವರʼ ಖ್ಯಾತಿಯ ಚಂದ್ರಶೇಖರ್‌ ಬಂಡಿಯಪ್ಪ ಸಾರಥ್ಯದ ʼಚೌಕಿದಾರ್‌ʼ ಸಿನಿಮಾ (Chowkidar Movie) ಈಗಾಗಲೇ ನಾನಾ ರೀತಿಯಲ್ಲಿ ಸುದ್ದಿಯಾಗುತ್ತಿದೆ. ಟೈಟಲ್‌, ಟೀಸರ್‌ ಈಗ ಹಾಡಿನ ಮೂಲಕ ಪ್ರೇಕ್ಷಕರ ನಿರೀಕ್ಷೆ ಹೆಚ್ಚಿಸಿದೆ. ಇತ್ತೀಚೆಗಷ್ಟೇ ಬಿಡುಗಡೆಯಾಗಿದ್ದ ಅಪ್ಪ-ಮಗನ ಬಾಂಧವ್ಯ ಗೀತೆಗೆ ಭರಪೂರ ಮೆಚ್ಚುಗೆ ವ್ಯಕ್ತವಾಗಿದೆ. ಅಪ್ಪನ ಆಂಥೆಮ್‌ ಗೀತೆಗೆ ಬರೋಬ್ಬರಿ ಒಂದು ಮಿಲಿಯನ್ಸ್‌ ವೀಕ್ಷಣೆ ಕಂಡಿದ್ದು, ʼಚೌಕಿದಾರ್‌ʼ ಸಿನಿಮಾ ಪ್ರೇಕ್ಷಕರಿಗೆ ನಿರೀಕ್ಷೆ ಹೆಚ್ಚಿಸುತ್ತಿದೆ.

ವಿ. ನಾಗೇಂದ್ರ ಪ್ರಸಾದ್ ಬರೆದ ಈ ಹಾಡಿನ ಸಾಲುಗಳು ಅಪ್ಪನ ಮಹತ್ವವನ್ನು ಸಾರಿ ಹೇಳುತ್ತದೆ. ಅಪ್ಪನ ಶಕ್ತಿ ಎಂತಹದ್ದು ಅನ್ನೋ ವಿಷಯವನ್ನು ಪದಗಳಲ್ಲಿ ಕಟ್ಟಿಕೊಟ್ಟಿದ್ದು, ವಿಜಯ್ ಪ್ರಕಾಶ್ ಅವರ ಧ್ವನಿ ಹಾಡಿನ ತೂಕ ಹೆಚ್ಚಿಸಿದೆ. ಎಲ್ಲರಿಗೂ ತಟ್ಟುವ ರೀತಿನೇ ಹಾಡಿನ್ನು ಹಾಡಿದ್ದಾರೆ. ಸಚಿನ್‌ ಬಸ್ರೂರ್‌ ಸಂಗೀತ ನಿರ್ದೇಶನ ಸೊಗಸಾಗಿದೆ. ʼಚೌಕಿದಾರ್ʼ ಸಿನಿಮಾದಲ್ಲಿ ಪೃಥ್ವಿ ಅಂಬಾರ್ ನಾಯಕನಾಗಿ ಅಭಿನಯಿಸಿದ್ದಾರೆ. ಸಾಯಿ ಕುಮಾರ್ ತಂದೆ ಪಾತ್ರ ಮಾಡಿದ್ದಾರೆ.

ಧನ್ಯಾ ರಾಮ್‌ಕುಮಾರ್ ಈ ಚಿತ್ರದ ನಾಯಕಿಯಾಗಿ ನಟಿಸಿದ್ದಾರೆ. ಹಿರಿಯ ನಟಿ ಶ್ವೇತಾ, ಸುಧಾರಾಣಿ ತಾರಾಬಳಗದಲ್ಲಿದ್ದಾರೆ. ʼಚೌಕಿದಾರ್ʼ ಸಿನಿಮಾವನ್ನು ಕಲ್ಲಹಳ್ಳಿ ಚಂದ್ರಶೇಖರ್ ನಿರ್ಮಾಣ ಮಾಡುತ್ತಿದ್ದು, ವಿದ್ಯಾದೇವಿ ಸಹ ನಿರ್ಮಾಪಕರಾಗಿ ಸಾಥ್ ಕೊಟ್ಟಿದ್ದಾರೆ. ಸಚಿನ್‌ ಬಸ್ರೂರು ಅವರ ಸಂಗೀತವಿದ್ದರೆ, ವಿ. ನಾಗೇಂದ್ರ ಪ್ರಸಾದ್‌, ಪ್ರಮೋದ್‌ ಮರವಂತೆ ಸಾಹಿತ್ಯ ಬರೆಯುತ್ತಿದ್ದಾರೆ. ‘ಚೌಕಿದಾರ್’ ಬಹುಭಾಷೆಯಲ್ಲಿ ಮೂಡಿಬರುತ್ತಿದ್ದು, ಲವರ್‌ ಬಾಯ್‌ ಆಗಿದ್ದ ಪೃಥ್ವಿ ಅಂಬಾರ್ ಮಾಸ್ ಲುಕ್ ಕೊಡಲಿದ್ದಾರೆ.‌

ಈ ಸುದ್ದಿಯನ್ನೂ ಓದಿ | Eco Friendly Fashion 2025: ಗ್ಲಾಮರಸ್ ವಿನ್ಯಾಸದಲ್ಲಿ ಕಾಲಿಟ್ಟ ಪರಿಸರ ಸ್ನೇಹಿ ಉಡುಪುಗಳು

‘ಚೌಕಿದಾರ್’ ಬಹುಭಾಷೆಗಳಲ್ಲಿ ಮೂಡಿಬರುತ್ತಿದೆ. ಈವರೆಗೆ ಕ್ಲಾಸ್ ಪಾತ್ರಗಳಲ್ಲಿ ಕಾಣಿಸಿಕೊಂಡಿರುವ ಪೃಥ್ವಿ ಅಂಬಾರ್ ತಮ್ಮ ಈ ಚಿತ್ರದ ಮೂಲಕ ಮಾಸ್ ಲುಕ್‌ನಲ್ಲಿ ಎಂಟ್ರಿ ಕೊಡಲು ಸಜ್ಜಾಗಿದ್ದು, ಸಿನಿಮಾ ನೋಡಲು ಅಭಿಮಾನಿಗಳು ಎದುರು ನೋಡುತ್ತಿದ್ದಾರೆ.



Source link

ADMIN

About Author

Leave a comment

Your email address will not be published. Required fields are marked *

You may also like

ಕರ್ನಾಟಕ

Microsoft: Empowering the Digital World

Microsoft is a global technology company known for shaping the modern digital experience. From its iconic Windows operating system to
ಉತ್ತರ ಕರ್ನಾಟಕ ಕರ್ನಾಟಕ

“ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವದ ದಿನಾಚರಣೆಯಲ್ಲಿ ವಿಭಿನ್ನ ಹಾಗೂ ವಿಶೇಷತೆಯಿಂದ ಆಚರಣೆ”

  • September 16, 2024
ಧಾರವಾಡ ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವದ ದಿನಾಚರಣೆಯಲ್ಲಿ ವಿಭಿನ್ನ ಹಾಗೂ ವಿಶೇಷತೆಯಿಂದ ಆಚರಣೆ ಮಾಡುವ ಮೂಲಕ 95 ಸಾವಿರ ಜನರು ಪ್ರತ್ಯಕ್ಷವಾಗಿ ಭಾಗವಹಿಸಿ ರಾಜ್ಯದಲ್ಲಿಯೇ ನಂಬರ್ 1 ಸ್ಥಾನ ಪಡೆದ
Translate »