Karunadu Studio

ಕರ್ನಾಟಕ

Hari Paraak Column: ಕರೋನಾ ಪ್ಯಾರ್‌ ಹೈ ! – Kannada News | Corona Pyaar Hai!


ತುಂಟರಗಾಳಿ

ಸಿನಿಗನ್ನಡ

ಕನ್ನಡ ಚಿತ್ರರಂಗ ಒಮ್ಮೊಮ್ಮೆ ವಿಚಿತ್ರ ರೀತಿಯಲ್ಲಿ ವರ್ತಿಸುತ್ತದೆ. ಮೊನ್ನೆ ಆರ್‌ಸಿಬಿ ವಿಜಯೋ ತ್ಸವದ ವೇಳೆ ಕಾಲ್ತುಳಿತಕ್ಕೆ ಸಿಕ್ಕಿ ಹಲವು ಸಾವುಗಳು ಆಗಿದ್ದೇ ತಡ, ಅಂದು ಮತ್ತು ಮರುದಿನ ನಡೆಯಬೇಕಿದ್ದ ಅನೇಕ ಸಿನಿಮಾ ಪತ್ರಿಕಾಗೋಷ್ಠಿಗಳು ಬಂದ್ ಆದವು ಮತ್ತು ಪೋಸ್ಟ್ ಪೋನ್ ಆದವು. ಎಲ್ಲರೂ ಸಾವಿಗೆ ಸಂತಾಪ ವ್ಯಕ್ತಪಡಿಸಿದರು.

ಮಾನವೀಯ ನೆಲೆಯಲ್ಲಿ ನೋಡಿದರೆ ಇದು ಸಹಜ ಮತ್ತು ಸರಿಯೇ. ಆದರೆ ಅದಕ್ಕೂ ಸಿನಿಮಾ ರಂಗಕ್ಕೂ ಯಾವ ಸಂಬಂಧವೂ ಇಲ್ಲ. ಹಾಗೆ ನೋಡಿದರೆ ಪ್ರತಿದಿನ ಸಾವು ನೋವುಗಳು ಸಂಭವಿಸು ತ್ತಲೇ ಇರುತ್ತವೆ. ಅಪಘಾತಕ್ಕೆ ಒಳಗಾಗಿ ಹಲವಾರು ಜನ ಸಾಯುತ್ತಾರೆ. ಇನ್ನು ಪತ್ರಿಕೆಗಳ ಅಪರಾಧ ಕಾಲಂ ನೋಡಿದರೆ ಅಲ್ಲಿ ದಿನನಿತ್ಯ ಸಾಲು ಸಾಲು ಸಾವುಗಳು ಆಗುತ್ತವೆ. ಹಾಗಂತ ಪ್ರತಿದಿನ ಪತ್ರಿಕಾ ಗೋಷ್ಠಿಗಳನ್ನು, ಸಿನಿಮಾ ಚಟುವಟಿಕೆಗಳನ್ನು ಬಂದ್ ಮಾಡೋಕೆ ಆಗುತ್ತಾ? ಸಾವಿಗೆ ಅನುಕಂಪ ವ್ಯಕ್ತಪಡಿಸೋದು ಸರಿಯೇ.

ಆದರೆ ಹೇಗೆ ಮಾಡಬೇಕು ಅನ್ನೋದು ಮುಖ್ಯ ಆಗುತ್ತೆ. ಅತ್ತ ಸಿಎಂ ಸಿದ್ರಾಮಯ್ಯರನ್ನು ನೋಡಿದ್ರೆ ಸತ್ತವರಿಗೆ ‘ರೆಸ್ಟ್ ಇನ್ ಪೀಸ್’ ಎಂದು ಹೇಳಿ ಸುಮ್ಮನಾಗದೆ, ಸಿಕ್ಕ ಸಿಕ್ಕವರನ್ನ ‘ಅರೆ’ ಮಾಡುತ್ತಿದ್ದಾರೆ. ಸಸ್ಪೆಂಡ್ ಮಾಡುತ್ತಿದ್ದಾರೆ. ಕಾಲ್ತುಳಿತ ಆಗಿದ್ದು ಯಾರ ತಪ್ಪು ಅಂತ ಪ್ರಶ್ನೆ ಬಂದ್ರೆ, ನೀರಲ್ಲಿ ಆಳ ಗೊತ್ತಿಲ್ಲದೆ ಈಜೋಕೆ ಹೋಗಿ ಮುಳುಗಿ ಸತ್ತವರಿಗೂ ಇವರಿಗೂ ಏನೂ ವ್ಯತ್ಯಾಸ ಇಲ್ಲ. ಹಾಗಾಗಿ, ಅವರ ಸಾವಿಗೆ ಸಿಕ್ಕ ಸಿಕ್ಕವರನ್ನೆ ತಲೆದಂಡ ಮಾಡೋದು ಎಷ್ಟು ಸರಿ ಅನ್ನೋ ಪ್ರಶ್ನೆ ಕಾಡದೇ ಇರದು.

ಇದನ್ನೂ ಓದಿ: Harish Kera Column: ಮತ್ತೆ ಮಳೆ ಹೊಯ್ಯುತಿದೆ, ಎಲ್ಲ ನೆನಪಾಗುತಿದೆ

ಲೂಸ್‌ ಟಾಕ್‌ -ಕರೋನಾ ವೈರಸ್

ಏನ್ರೀ ಸ್ವಾಮಿ, ಮೊನ್ನೆ ತಾನೇ ಬಂದಿದ್ರಿ, ಮತ್ತೆ ಬರ್ತಾ ಇದ್ದೀರಂತೆ?

– ಏನ್ ಮಾಡೋದು, ನಾನ್ ಬರಲ್ಲ ಅಂದ್ರೂ ನಿಮ್ಮ ಸರಕಾರದೋರು, ಟಿವಿ ಚಾನೆಲ್‌ಗಳವರು ನನ್ನ ಬಿಡಲ್ವಲ್ಲ, ಮತ್ತೆ ಮತ್ತೆ ‘ಕರೋನಾ ಪ್ಯಾರ್ ಹೈ’ ಅಂತಿರ್ತಾರೆ‌

ಏನೋ, ಅಂತೂ ನಮ್ಮ ಜನ ಮತ್ತೆ ನೀನ್ ಬರ್ತೀಯಾ ಅಂತ ಹೆದರಿಕೊಂಡಿದ್ದಾರಲ್ಲ?

– ವ್ಯಾಕ್ಸಿನ್ ಹಾಕಿಸಿಕೊಂಡವರಿಗೆ ಸಮಸ್ಯೆ ಇಲ್ಲ, ಲಸಿಕೆ ಹಾಕಿಸಿಕೊಳ್ಳೋಕೆ ಆಲಸಿಕೆ ತೋರಿಸಿದವರು ಅನುಭವಿಸ್ತಾರೆ

ಲಸಿಕೆ ಹಾಕಿಸಿಕೊಂಡವರು ಇನ್ನೊಂಥರ ಅನುಭವಿಸ್ತಾ ಇದ್ದಾರೆ. ಸರಿ, ನೀನ್ ಯಾಕೆ ಹಿಂಗೆ ಹೇಳದೇ ಕೇಳದೇ ಬರೋದು?

– ‘ಹೇಳಿ ಹೋಗು ಕಾರಣ’ ಥರ, ಇನ್ನೂ ಯಾರೂ ನಂಗೆ ‘ಹೇಳಿ ಬಾ ಕರೋ ನಾ’ ಅಂತ ಹೇಳಿಲ್ಲ ಅದಕ್ಕೇ

ಅದ್ಸರಿ, ಇಯರ್ ಎಂಡ ನಿನ್ ಹವಾ ಜಾಸ್ತಿ ಅಲ್ವಾ. ಈಗ್ಯಾಕೆ ಮಧ್ಯದಲ್ಲೇ?

– ಪ್ರತಿ ಎಂಡಿನಲ್ಲು ಸ್ಟಾರ್ಟು ಇರ್ತದೆ ಅಂತ ಯೋಗ ರಾಜ್ ಭಟ್ರೇ ಹೇಳಿಲ್ವಾ? ಆವಾಗ್ ಸ್ಟಾರ್ಟ್ ಮಾಡಿ ಈವಾಗ ಹವಾ ತೋರಿಸ್ತೀನಿ

ಆದ್ರೂ, ಮತ್ತೆ ಲಾಕ್ ಡೌನು, ಸೀಲ್‌ಡೌನು ಅಂತಾದ್ರೆ ನಮ್ಮ ಜನಗಳಿಗೆ ಕಷ್ಟ ಆಗಲ್ವಾ?

– ನೋಡಪ್ಪಾ, ಕರೋನಾ ಮನುಷ್ಯನಿಗೆ ಬರದೆ, ಮರಕ್ಕಾ ಬರುತ್ತೆ? ಹೃದಯ ಮತ್ತು ಶ್ವಾಸ ಕೋಶ ಎರಡನ್ನೂ ಗಟ್ಟಿ ಮಾಡ್ಕೊಂಡು ಎನೂ ಎದುರಿಸಬೇಕಪ್ಪಾ

(ಕಾಲ್ಪನಿಕ ಸಂದರ್ಶನ)

ನೆಟ್‌ ಪಿಕ್ಸ್

ಒಂದು ದೊಡ್ಡ ರಾಜ್ಯಕ್ಕೆ ಇಬ್ಬರು ಉತ್ತರಾಧಿಕಾರಿಗಳಿದ್ದರು- ಖೇಮು ಮತ್ತು ಸೋಮು. ಅದರಲ್ಲಿ ಖೇಮುವನ್ನು ಆರಿಸಿ ಮೊದಲಿಗೆ ಅವನಿಗೆ ಮದುವೆ ಮಾಡಿದ ಮಹಾರಾಜ. ಅದೇ ಸಮಯಕ್ಕೆ ಸರಿಯಾಗಿ ಶತ್ರುಗಳು ದೇಶದ ಮೇಲೆ ಆಕ್ರಮಣ ಮಾಡಿದರು. ಹಾಗಾಗಿ ಆಗ ತಾನೇ ಮದುವೆ ಆಗಿದ್ದ ಖೇಮು ಅನಿವಾರ್ಯವಾಗಿ ಯುದ್ಧಕ್ಕೆ ಹೋಗಬೇಕಾಯಿತು. ಮಹಾರಾಜ ಕೂಡ “ದೇಶ ಮುಖ್ಯ, ಮೊದಲು ನೀನು ಯುದ್ಧಭೂಮಿಗೆ ಹೋಗಿ ನೀನು ಹೊಸರಾಜ ಅನೋದನ್ನ ಪ್ರೂವ್ ಮಾಡು” ಅಂದ. ಸರಿ ಅಂತ ಖೇಮು ಹೊರಟ.

ಆದರೆ ಅವನಿಗೆ ಹೊಸದಾಗಿ ಮದುವೆ ಆಗಿದ್ದ ಹೆಂಡತಿಯನ್ನ ಬಿಟ್ಟು ಹೋಗೋಕೆ ಮನಸ್ಸಿರಲಿಲ್ಲ. ಆದರೆ ಏನ್ ಮಾಡೋದು, ರಾಜ್ಯದ ನೀತಿ ನಿಯಮದ ಪ್ರಕಾರ ಮಹಾರಾಜರ ಆಜ್ಞೆ ಪಾಲಿಸ ಬೇಕಾಗಿತ್ತು. ಅದರ ಪ್ರಕಾರ ಸೋಮುವನ್ನು ಕರೆದು ಖೇಮು ಹೇಳಿದ, “ನೋಡು ಸೋಮು, ನಾನೀಗ ಯುದ್ಧಭೂಮಿಗೆ ಹೋಗ್ತಾ ಇದ್ದೀನಿ. ನಾನು ಗೆದ್ದು ಬಂದರೆ ಸಂತೋಷ, ಆಕಸ್ಮಾತ್ ನಾನು ಸತ್ತುಹೋದರೆ, ಮುಂದೆ ನೀನೇ ರಾಜ್ಯ ಆಳಬೇಕು. ಅಲ್ಲದೆ, ನಾನು ಮದುವೆ ಆಗಿರುವ ಹುಡುಗಿ ಕೂಡ ನಿನ್ನವಳಾಗುತ್ತಾಳೆ. ಹಾಗಾಗಿ ಆಕೆಯನ್ನು ನನ್ನ ಕೋಣೆಯಲ್ಲಿಟ್ಟು ಬೀಗ ಹಾಕಿದ್ದೇನೆ. ಅದರ ಕೀ ಇಲ್ಲಿದೆ. ನಾನು ವಾಪಸ್ ಬರದೇ ಇದ್ದರೆ ಮಾತ್ರ ಈ ಕೀ ಬಳಸಿ, ಬೀಗ ತೆಗೆ.

ಆಕೆ ನಿನ್ನವಳಾಗುತ್ತಾಳೆ”. ಸರಿ, ಖೇಮು ಕೀ ಕೊಟ್ಟು ಹೊರಟ. ಆದರೆ, ಕುದುರೆ ಹತ್ತಿ ಸ್ವಲ್ಪ ದೂರ ಹೋದ ಮೇಲೆ ಹಿಂದಿನಿಂದ ಯಾರೋ ಕೂಗಿದ ಹಾಗಾಯಿತು. ಕುದುರೆಯಿಂದ ಇಳಿದು ಹಿಂದೆ ನೋಡಿದರೆ, ಯಾರೋ ಧೂಳೆಬ್ಬಿಸಿಕೊಂಡು ಇನ್ನೊಂದು ಕುದುರೆಯ ಮೇಲೆ ಬರ್ತಾ ಇದ್ದುದು ಕಾಣಿಸಿತು. ಸ್ವಲ್ಪ ಹೊತ್ತು ನಿಂತು ನೋಡಿದರೆ ಅಲ್ಲಿ ಬರ್ತಾ ಇದ್ದುದು, ಸೋಮು. ಸೋಮು ತೀರಾ ಅವಸರದಿಂದ ಕುದುರೆಯಿಂದ ಇಳಿದು ಖೇಮು ಬಳಿಗೆ ಬಂದ. “ಏನಾಯ್ತು ಸೋಮು?” ಅಂತ ಖೇಮು ಕೇಳಿದ್ದಕ್ಕೆ ಸೋಮು ಹೇಳಿದ, “ಖೇಮು, ನೀನು ಬೈ ಮಿಸ್ಟೇಕ್ ರಾಂಗ್ ಕೀ ಕೊಟ್ಟಿದ್ದೀಯ’

ಲೈನ್‌ಮ್ಯಾನ್

ಕರೋನಾ ಮತ್ತೆ ಬಂತು

-ಮತ್ತೆ ಮಾ ಕಡ್ಡಾಯ ಅಂತ ರೂಲ್ ಮಾಡಿದ್ರೆ ಕರೋನಾ ಬರುತ್ತೆ ಆರ್‌ಸಿಬಿ ವಿಜಯೋತ್ಸವದ ಕಾಲ್ತುಳಿತದ ಬಗ್ಗೆ ಮಾತಾಡ್ತಾ ಇರೋರ ‘ಬಾಯಿ ಮುಚ್ಚಿಸಬಹುದು’- ಸಿದ್ರಾಮಯ್ಯ

ಕೆಲವರು ಕುಡಿದ ಮೇಲೆ ಫೇಸ್‌ಬುಕ್‌ನಲ್ಲಿ ಪೋಸ್ಟ್ ಹಾಕ್ತಾರೆ, ಆದ್ರೆ ಟ್ವೀಟ್ ಮಾಡಲ್ಲ ಯಾಕೆ?

-ಯಾಕಂದ್ರೆ, ಟ್ವಿಟರ್‌ನಲ್ಲಿ ಹಾಕೋಕೆ ಇಷ್ಟ್ ಅಕ್ಷರ ಅಂತ ‘ಲಿಮಿಟ್’ ಇರುತ್ತೆ. ‌

ಪಾರ್ಕಿನಲ್ಲಿ ಬೆಳೆದು ನಿಂತ ಹೂವುಗಳನ್ನು ಕೀಳುವವರದ್ದು

– ‘ಕೀಳು’ ಜಾತಿ

ಎಲ್ಲದಕ್ಕೂ ‘ಅದೇನ್ ಕಿತ್ಕೊತೀಯಾ ಕಿತ್ಕೋ’ ಅನ್ನೋದು

– ‘ಕೀಳು’ ಅಭಿರುಚಿ

ಕವಿ ಆಗಿ 14 ವರ್ಷ ‌ಅನುಭವ ಇರೋನ ಸಾಧನೆ

– ಕ‘ವನವಾಸ’

ಕೈ ನಡುಗುವ ಕಾಯಿಲೆ ಇರೋನ ಸಮಸ್ಯೆ

– ಯಾರ ಜತೆಗಾದ್ರೂ ‘ಹ್ಯಾಂಡ್ ಶೇಕ್’ ಮಾಡೋದು ಕಷ್ಟ

ಅನುಮಾನದ ಆಧಾರದ ಮೇಲೆ ಮಾಡಿದ ವರದಿ

– Whether ರಿಪೋರ್ಟ್

ಉತ್ತರ ಪ್ರದೇಶದಲ್ಲಿ ಅಷ್ಟೊಂದ್ ಸಮಸ್ಯೆ ಇದ್ರೂ, ರಾಜ್ಯ ಅಭಿವೃದ್ಧಿ ವಿಷಯದಲ್ಲಿ ‘ಮೇಲೆ’ ಹೋಗ್ತಾ ಇದೆ ಅಂತ ಬಿಜೆಪಿಯೋರು ಹೇಳೋದ್ಯಾಕೆ

-ಯಾಕಂದ್ರೆ, ಅದರ ಹೆಸರೇ ’UP’

ಸಾಮಾನ್ಯ ಜನರ ಲೈಫ್‌ ನಿಧಾನವಾಗಿ ಹಾದಿಗೆ ಬರ್ತಾ ಇರೋ ಕಾಲದಲ್ಲಿ ಮತ್ತೆ ಬರ್ತಾ ಇರೋ ಕರೋನಾ ಹೇಳೋ ಮಾತು

– ಹಾದಿಗೆ ಬಂದ ಲೈಫು ಬೀದಿಗೆ ಬಾರದೇ ಇರುತ್ಯೇ



Source link

ADMIN

About Author

Leave a comment

Your email address will not be published. Required fields are marked *

You may also like

ಕರ್ನಾಟಕ

Microsoft: Empowering the Digital World

Microsoft is a global technology company known for shaping the modern digital experience. From its iconic Windows operating system to
ಉತ್ತರ ಕರ್ನಾಟಕ ಕರ್ನಾಟಕ

“ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವದ ದಿನಾಚರಣೆಯಲ್ಲಿ ವಿಭಿನ್ನ ಹಾಗೂ ವಿಶೇಷತೆಯಿಂದ ಆಚರಣೆ”

  • September 16, 2024
ಧಾರವಾಡ ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವದ ದಿನಾಚರಣೆಯಲ್ಲಿ ವಿಭಿನ್ನ ಹಾಗೂ ವಿಶೇಷತೆಯಿಂದ ಆಚರಣೆ ಮಾಡುವ ಮೂಲಕ 95 ಸಾವಿರ ಜನರು ಪ್ರತ್ಯಕ್ಷವಾಗಿ ಭಾಗವಹಿಸಿ ರಾಜ್ಯದಲ್ಲಿಯೇ ನಂಬರ್ 1 ಸ್ಥಾನ ಪಡೆದ
Translate »