Karunadu Studio

ಕರ್ನಾಟಕ

OTT Malayalam Movies: ಈ ವಾರ ಒಟಿಟಿಗೆ ಬಂದಿವೆ ಒಂದಲ್ಲ.. ಎರಡಲ್ಲ 20ಕ್ಕೂ ಅಧಿಕ ಸಿನಿಮಾಗಳು – Kannada News | Lall Salam to Jaat Top Movies in OTT this week


ಒಟಿಟಿಯಲ್ಲಿ ಹೊಸ ಸಿನಿಮಾಗಳನ್ನು (OTT Movies) ಹುಡುಕುತ್ತಿದ್ದೀರಾ?. ಕ್ರೈಮ್ ಥ್ರಿಲ್ಲರ್‌ಗಳಿಂದ ಹಿಡಿದು ಭಾವನಾತ್ಮಕ ಡ್ರಾಮಗಳವರೆಗೂ, ಹಲವಾರು ರೋಮಾಂಚಕಾರಿ ಸಿನಿಮಾಗಳು ಈ ವಾರ ಒಟಿಟಿಯಲ್ಲಿ ಬಿಡುಗಡೆ ಆಗಿವೆ. ನೆಟ್‌ಫ್ಲಿಕ್ಸ್, ಪ್ರೈಮ್ ವಿಡಿಯೋ, ಜಿಯೋ ಹಾಟ್‌ಸ್ಟಾರ್ ಮತ್ತು ಇನ್ನೂ ಹೆಚ್ಚಿನ ವೇದಿಕೆಗಳಲ್ಲಿ ಇವುಗಳು ಸ್ಟ್ರೀಮಿಂಗ್‌ ಆಗುತ್ತಿವೆ. ಕಾಮಿಡಿ ಜತೆಗೆ ಸಸ್ಪೆನ್ಸ್‌ ಸಿನಿಮಾಗಳೂ ಸ್ಟ್ರೀಮಿಂಗ್‌ ಆರಂಭಿಸಿವೆ. ಚಿತ್ರಮಂದಿರಗಳಲ್ಲಿ ಹಿಟ್‌ ಪಟ್ಟ ಪಡೆದು, ಒಟಿಟಿಯಲ್ಲಿಯೂ ಕಮಾಲ್‌ ಮಾಡುತ್ತಿರುವ ಸಿನಿಮಾಗಳ ಪಟ್ಟಿ ಇಲ್ಲಿದೆ ನೋಡಿ.

ಲಾಲ್ ಸಲಾಂ

ರಜನಿಕಾಂತ್ ನಟನೆಯ ಲಾಲ್ ಸಲಾಂ ಸಿನಿಮಾ ಅಂತೂ ಇಂತೂ ಓಟಿಟಿಗೆ ಬಂದಿದೆ. ಸನ್‌ ನೆಕ್ಸ್ಟ್‌ನಲ್ಲಿ ಸಿನಿಮಾ ವೀಕ್ಷಣೆಗೆ ಲಭ್ಯವಿದೆ. ಕಳೆದ ವರ್ಷ ಫೆಬ್ರವರಿ 9ಕ್ಕೆ ಈ ಸ್ಪೋರ್ಟ್ಸ್ ಡ್ರಾಮಾ ತೆರೆಗೆ ಬಂದಿತ್ತು. ಸಿನಿಮಾ ಬಾಕ್ಸ್ ಆಫೀಸ್​ನಲ್ಲಿ ಅಟ್ಟರ್ ಫ್ಲಾಪ್ ಆಗಿತ್ತು. ರಜನೀಕಾಂತ್ ಸಿನಿಮಾ ಆದರೂ ಯಾವ ಒಟಿಟಿಗಳೂ ಸಹ ಖರೀದಿ ಮಾಡಿರಲಿಲ್ಲ. ಆದರೆ ಇದೀಗ ಕೊನೆಗೆ ಸನ್​ ನೆಕ್ಸ್ಟ್​​ ಒಟಿಟಿಯಲ್ಲಿ ಇದೇ ವಾರ ಬಿಡುಗಡೆ ಆಗಿದೆ. ವಿಷ್ಣು ವಿಶಾಲ್ ಹಾಗೂ ವಿಕ್ರಾಂತ್ ಚಿತ್ರದ ಲೀಡ್ ರೋಲ್‌ಗಳಲ್ಲಿ ನಟಿಸಿದ್ದಾರೆ.

ಜಾಟ್

ಸನ್ನಿ ಡಿಯೋಲ್ ನಟನೆಯ ಆಕ್ಷನ್ ಸಿನಿಮಾ ಜಾಟ್ ಸಿನಿಮಾ ಕೆಲ ದಿನಗಳ ಹಿಂದಷ್ಟೆ ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಿ ಹಿಟ್ ಎನಿಸಿಕೊಂಡಿತು. ಕಳೆದ ವಾರವೇ ಒಟಿಟಿಗೆ ಬರಬೇಕಿದ್ದ ಈ ಸಿನಿಮಾ ಈ ವಾರ ಒಟಿಟಿಗೆ ಬಂದಿದೆ. ನೆಟ್​ಫ್ಲಿಕ್ಸ್​​ನಲ್ಲಿ ವೀಕ್ಷಣೆಗೆ ಲಭ್ಯವಿದೆ. ಏಪ್ರಿಲ್ 10ಕ್ಕೆ ಈ ಆಕ್ಷನ್ ಥ್ರಿಲ್ಲರ್ ತೆರೆಗೆ ಬಂದಿತ್ತು.

ವಾಡಕ್ಕನ್

ಕನ್ನಡದ ನಟ ಕಿಶೋರ್ ಪ್ರಮುಖ ಪಾತ್ರದಲ್ಲಿ ನಟಿಸಿರುವ ವಾಡಕ್ಕನ್ ತಮಿಳು ವೆಬ್ ಸರಣಿ ಇದೇ ವಾರ ಒಟಿಟಿಗೆ ಬಂದಿದೆ. ಕೇರಳದಲ್ಲಿ ನಡೆಯುವ ಸರಣಿ ಕೊಲೆಗಳ ಜಾಡು ಹಿಡಿದು ಹೋಗುವ ಪೊಲೀಸ್ ಅಧಿಕಾರಿಯ ಕತೆಯನ್ನು ಈ ವೆಬ್ ಸರಣಿ ಒಳಗೊಂಡಿದೆ.

ಭೂಲ್ ಚುಕ್ ಮಾಫ್

ರಾಜ್​ಕುಮಾರ್ ರಾವ್, ತೃಪ್ತಿ ದಿಮ್ರಿ ನಟನೆಯ ಭೂಲ್ ಚುಕ್ ಮಾಫ್ ಸಿನಿಮಾ ಅಮೆಜಾನ್ ಪ್ರೈಂನಲ್ಲಿ ಇದೇ ವಾರ ತೆರೆಗೆ ಬಂದಿದೆ. ಒಟಿಟಿಗೆ ನೇರವಾಗಿ ಬಿಡುಗಡೆ ಆಡುವುದಾಗಿ ಘೋಷಣೆ ಮಾಡಲಾಗಿತ್ತು. ಆದರೆ ಚಿತ್ರಮಂದಿರದಲ್ಲಿ ಫ್ಲಾಫ್ ಆದ ಬಳಿಕ ಒಟಿಟಿಗೆ ಬಂದಿದೆ.

ಅಮೇಜಾನ್ ಪ್ರೈಮ್

ಸ್ಟೋಲೆನ್(ಹಿಂದಿ ಸಿನಿಮಾ)

ಭೂಲ್ ಚುಕ್ ಮಾಫ್(ಹಿಂದಿ ಸಿನಿಮಾ)

ಜಿಯೋ ಹಾಟ್‌ಸ್ಟರ್

ಗಜಾನಾ(ತಮಿಳು ಸಿನಿಮಾ)

ದೇವಿಕಾ ಅಂಡ್ ಡ್ಯಾನಿ(ತೆಲುಗು ವೆಬ್ ಸೀರಿಸ್)

ಝೀ-5

ಚಾಲ್ ಕಪಟ್(ಹಿಂದಿ ವೆಬ್ ಸೀರಿಸ್)

ನೆಟ್‌ಫ್ಲಿಕ್ಸ್

ಒನ್ ಆಫ್ ದೆಮ್ ಡೇಸ್(ಇಂಗ್ಲೀಷ್ ಸಿನಿಮಾ)

ದಿ ಸರ್ವೈವರ್ಸ್(ವೆಬ್ ಸೀರಿಸ್)

ಗಿನ್ನಿ & ಜಾರ್ಜಿಯಾ ಸೀಸನ್- 3(ವೆಬ್ ಸೀರಿಸ್)

ಟೈರ್ಸ್- ಸೀಸನ್-2 (ವೆಬ್ ಸೀರಿಸ್)

ಮೆರ್ಸಿ ಫರ್ ನನ್(ಇಂಗ್ಲೀಷ್ ಸಿನಿಮಾ)

ಕ್ರಿಮಿನಲ್ ಕೋಡ್-ಸೀಸನ್-4(ವೆಬ್ ಸೀರಿಸ್)

ದಿ ಮಾರ್ಟಿಷಿಯನ್(ಡಾಕ್ಯುಮೆಂಟರಿ)

Ranjani Raghavan: ಕಮಲ್ ಹಾಸನ್​ಗೆ ರಂಜನಿ ರಾಘವನ್ ಕನ್ನಡ ಪುಸ್ತಕ ಕೊಟ್ಟಿದ್ದೇಕೆ?: ಕೊನೆಗೂ ಸಿಕ್ಕಿತು ಉತ್ತರ



Source link

ADMIN

About Author

Leave a comment

Your email address will not be published. Required fields are marked *

You may also like

ಕರ್ನಾಟಕ

Microsoft: Empowering the Digital World

Microsoft is a global technology company known for shaping the modern digital experience. From its iconic Windows operating system to
ಕರ್ನಾಟಕ

Microsoft: Empowering the Digital World

Microsoft is a global technology company known for shaping the modern digital experience. From its iconic Windows operating system to
Translate »