Karunadu Studio

ಕರ್ನಾಟಕ

Murder attempt: ಅಕ್ರಮ ಸಂಬಂಧಕ್ಕೆ ಅಡ್ಡಿ ಅಂತ ಕುಟುಂಬಸ್ಥರಿಗೆ ಊಟದಲ್ಲಿ ವಿಷ ಹಾಕಿದ ಮಹಿಳೆ ಅರೆಸ್ಟ್‌! – Kannada News | Woman arrested for poisoning food for family members


ಹಾಸನ: ಅಕ್ರಮ ಸಂಬಂಧಕ್ಕೆ ಅಡ್ಡಿಯಾದರೆಂದು ಪತಿ, ಮಕ್ಕಳು ಹಾಗೂ ಅತ್ತೆ-ಮಾವನನ್ನು ವಿಷ ಹಾಕಿ ಕೊಲೆ ಮಾಡಲು (Murder attempt: ) ಯತ್ನಿಸಿದ ಆರೋಪದ ಮೇಲೆ ಮಹಿಳೆಯೊಬ್ಬಳನ್ನು ಬೇಲೂರು ಪೊಲೀಸರು ಬಂಧಿಸಿದ್ದಾರೆ. ಬೇಲೂರು ತಾಲೂಕಿನ ಕೆರಳೂರು ಗ್ರಾಮದ ಚೈತ್ರಾ (33) ಬಂಧಿತ ಆರೋಪಿ. ಗಂಡ ನೀಡಿದ ದೂರಿನ ಮೇರೆಗೆ ಮಹಿಳೆಯನ್ನು ಪೊಲೀಸರು ಬಂಧಿಸಿದ್ದಾರೆ.

ಚೈತ್ರಾ ಹನ್ನೊಂದು ವರ್ಷಗಳ ಹಿಂದೆ ಗಜೇಂದ್ರ ಎಂಬಾತನನ್ನು ವಿವಾಹವಾಗಿದ್ದಳು. ದಂಪತಿಗೆ ಇಬ್ಬರು ಗಂಡು ಮಕ್ಕಳಿದ್ದು, ಕೆಲವು ವರ್ಷಗಳ ಕಾಲ ಅನ್ಯೋನ್ಯವಾಗಿದ್ದರು. ಆದರೆ, ಕಳೆದ ಮೂರು ವರ್ಷಗಳಿಂದ ಸಣ್ಣಪುಟ್ಟ ವಿಷಯಗಳಿಗೆ ಗಂಡನೊಂದಿಗೆ ಜಗಳವಾಡುತ್ತಿದ್ದ ಚೈತ್ರಾ, ವ್ಯಕ್ತಿಯೊಬ್ಬನ ಜತೆ ಅಕ್ರಮ ಸಂಬಂಧ ಬೆಳೆಸಿದ್ದಳು. ಈ ವಿಷಯ ಗಜೇಂದ್ರನಿಗೆ ತಿಳಿದು, ಚೈತ್ರಾಳ ತಂದೆ-ತಾಯಿಗೆ ಮಾಹಿತಿ ನೀಡಿದ್ದರು. ಕುಟುಂಬಸ್ಥರ ರಾಜಿ ಪಂಚಾಯಿತಿಯ ನಂತರ ದಂಪತಿ ಕೆಲಕಾಲ ಅನ್ಯೋನ್ಯವಾಗಿದ್ದರು ಎನ್ನಲಾಗಿದೆ.

ರಾಜಿ ಪಂಚಾಯಿತಿಯಾದ ಕೆಲ ದಿನಗಳ ಬಳಿಕ ಚೈತ್ರಾ, ಅದೇ ಗ್ರಾಮದ ಶಿವು ಎಂಬಾತನೊಂದಿಗೆ ಮತ್ತೊಂದು ಅನೈತಿಕ ಸಂಬಂಧ ಹೊಂದಿದ್ದಾಳೆ. ಈ ವಿಷಯ ಕುಟುಂಬಸ್ಥರಿಗೆ ತಿಳಿಯುವ ಮೊದಲೇ, ತನ್ನ ಸಂಬಂಧಕ್ಕೆ ಪತಿ, ಮಕ್ಕಳು ಹಾಗೂ ಅತ್ತೆ-ಮಾವ ಅಡ್ಡಿಯಾಗಬಹುದೆಂದು, ಎಲ್ಲರನ್ನೂ ಸಾಮೂಹಿಕವಾಗಿ ಕೊಲೆ ಮಾಡಲು ಯೋಜನೆ ರೂಪಿಸಿದ್ದಳು. ಶಿವು ಸಹಕಾರದೊಂದಿಗೆ, ಚೈತ್ರಾ ಊಟ, ತಿಂಡಿಗಳಲ್ಲಿ ವಿಷಕಾರಿ ಮಾತ್ರೆಗಳನ್ನು ಬೆರೆಸುತ್ತಿದ್ದಳು. ಕುಟುಂಬಸ್ಥರಿಗೆ ಆರೋಗ್ಯದಲ್ಲಿ ಸಮಸ್ಯೆ ಉಂಟಾದಾಗ ವಿಷಪ್ರಾಶನ ಮಾಡಿರುವ ಕೃತ್ಯ ಗೊತ್ತಾಗಿದೆ.

ಈ ಸುದ್ದಿಯನ್ನೂ ಓದಿ | Moral Policing: ಬೈಕ್‌ನಲ್ಲಿ ಹೋಗುತ್ತಿದ್ದ ಹಿಂದೂ ಯುವಕ, ಮುಸ್ಲಿಂ ಯುವತಿ ಮೇಲೆ ನೈತಿಕ ಪೊಲೀಸ್‌ ಗಿರಿ

ಈ ಬಗ್ಗೆ ಮಹಿಳೆಯ ಪತಿ ಗಜೇಂದ್ರ ಬೇಲೂರು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ತಕ್ಷಣ ಕಾರ್ಯಪ್ರವೃತ್ತರಾದ ಬೇಲೂರು ಪೊಲೀಸರು ಚೈತ್ರಾಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಶಿವು ವಿರುದ್ಧವೂ ಪೊಲೀಸ್​​ ತನಿಖೆ ಆರಂಭವಾಗಿದೆ.

ಮಕ್ಕಳಿದ್ದ ಆಟೋವನ್ನು ನ್ಯೂಟ್ರಲ್‌ ಮಾಡಿ ಹಿಂದಕ್ಕೆ ತಳ್ಳಿದ ಬೈಕ್‌ ಸವಾರ; ಮುಂದೇನಾಯ್ತು?

Hassan News

ಹಾಸನ: ಯುವಕನೊಬ್ಬ ರಸ್ತೆಯಲ್ಲಿ ಮಕ್ಕಳಿದ್ದ ಆಟೋವನ್ನು ನ್ಯೂಟ್ರಲ್​ ಮಾಡಿ ಹಿಂದೆ ತಳ್ಳಿದ ಅಮಾನವೀಯ ಘಟನೆ ಜಿಲ್ಲೆಯ ಬೇಲೂರು ಪಟ್ಟಣದ ನೆಹರು ನಗರದಲ್ಲಿ ನಡೆದಿದ್ದು, ಅದೃಷ್ಟವಶಾತ್‌ ಚಾಲಕನ ಸಮಯಪ್ರಜ್ಞೆಯಿಂದ ಅನಾಹುತ ತಪ್ಪಿದೆ. ಆಟೋ ಹಿಂದಕ್ಕೆ ಹೋಗುತ್ತಿರುವುದನ್ನು ಗಮನಿಸಿದ ಚಾಲಕ ತಕ್ಷಣ ಓಡಿ ಹೋಗಿ ನಿಲ್ಲಿಸಿದ್ದಾನೆ. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ.

ಶುಕ್ರವಾರ ಬೆಳಗ್ಗೆ ಅಂಗಡಿಯಲ್ಲಿ ದಿನಸಿ ಖರೀದಿಸಲು ಚಾಲಕ ಆಟೋವನ್ನು ರಸ್ತೆ ಬದಿ ನಿಲ್ಲಿಸಿ ತೆರಳಿದ್ದರು. ರಸ್ತೆ ಬದಿಯ ಪಾರ್ಕಿಂಗ್ ಸ್ಥಳದಲ್ಲಿ ಯುವಕ ಬೈಕ್ ನಿಲ್ಲಿಸಿದ್ದನು. ಬೈಕ್​ ಹಿಂದೆ ಆಟೋ ಪಾರ್ಕ್​ ಮಾಡಲಾಗಿತ್ತು. ಇದರಿಂದ ಬೈಕ್ ತೆಗೆಯಲಾಗದೆ ಯುವಕ ಪರದಾಡಿದ್ದಾನೆ. ಆಗ, ಸಿಟ್ಟಿನಿಂದ ಯುವಕ ಆಟೋ ಬಳಿ ಹೋಗಿ ಮಕ್ಕಳಿರುವುದು ನೋಡಿಯೂ ನ್ಯೂಟ್ರಲ್​ ಮಾಡಿ ಹಿಂದೆ ತಳ್ಳಿದ್ದಾನೆ. ಆಟೋ ವೇಗವಾಗಿ ಹಿಂದೆ ಚಲಿಸುವುದನ್ನು ಕಂಡು ಸ್ಥಳದಲ್ಲಿದ್ದವರು ಕೂಗಾಡಿದ್ದಾರೆ. ಕೂಡಳೇ ಸ್ಥಳಕ್ಕೆ ಓಡಿ ಬಂದ ಚಾಲಕ ಆಟೋ ನಿಲ್ಲಿಸಿದ್ದಾನೆ.

ಈ ಸುದ್ದಿಯನ್ನೂ ಓದಿ | Bengaluru Stampede: ಕಬ್ಬನ್ ಪಾರ್ಕ್‌ನ ಗಿಡ-ಮರಗಳಿಗೆ ಹಾನಿ; ಆರ್‌ಸಿಬಿ, ಕೆಎಸ್‌ಸಿಎ ವಿರುದ್ಧ ದೂರು ದಾಖಲು

ಘಟನೆಯ ಸಂಪೂರ್ಣ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು ವೀಡಿಯೋ ಪರಿಶೀಲನೆ ನಡೆಸಿದ ಪೊಲೀಸರು ಯುವಕನನ್ನು ಕರೆಸಿ ಎಚ್ಚರಿಕೆ ನೀಡಿದ್ದಾರೆ. ವಾಹನ ಸವಾರರು ವಾಹನ ಪಾರ್ಕಿಂಗ್ ವೇಳೆ ನಿಯಮ ಪಾಲನೆ ಮಾಡುವಂತೆಯೂ ಎಚ್ಚರಿಸಿದ್ದಾರೆ.



Source link

ADMIN

About Author

Leave a comment

Your email address will not be published. Required fields are marked *

You may also like

ಕರ್ನಾಟಕ

Microsoft: Empowering the Digital World

Microsoft is a global technology company known for shaping the modern digital experience. From its iconic Windows operating system to
ಉತ್ತರ ಕರ್ನಾಟಕ ಕರ್ನಾಟಕ

“ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವದ ದಿನಾಚರಣೆಯಲ್ಲಿ ವಿಭಿನ್ನ ಹಾಗೂ ವಿಶೇಷತೆಯಿಂದ ಆಚರಣೆ”

  • September 16, 2024
ಧಾರವಾಡ ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವದ ದಿನಾಚರಣೆಯಲ್ಲಿ ವಿಭಿನ್ನ ಹಾಗೂ ವಿಶೇಷತೆಯಿಂದ ಆಚರಣೆ ಮಾಡುವ ಮೂಲಕ 95 ಸಾವಿರ ಜನರು ಪ್ರತ್ಯಕ್ಷವಾಗಿ ಭಾಗವಹಿಸಿ ರಾಜ್ಯದಲ್ಲಿಯೇ ನಂಬರ್ 1 ಸ್ಥಾನ ಪಡೆದ
Translate »