Karunadu Studio

ಕರ್ನಾಟಕ

Stock Market: ಈ 10 ಸ್ಟಾಕ್ಸ್‌ನಲ್ಲಿ ಹೂಡಿಕೆ ಮಾಡಿದ್ರೆ 40% ತನಕ ಲಾಭ? – Kannada News | Can you earn up to 40% profit by investing in these 10 stocks?


ಕೇಶವ ಪ್ರಸಾದ್‌ ಬಿ.

ಮುಂಬೈ: ಡಿಕ್ಸಾನ್‌ ಟೆಕ್ನಾಲಜೀಸ್‌, ಎಲ್‌ಐಸಿ ಹೌಸಿಂಗ್‌ ಫೈನಾನ್ಸ್‌, ಅರಬಿಂದೋ ಫಾರ್ಮಾ, ಕ್ರಾಂಪ್ಟನ್‌ ಗ್ರೀವ್ಸ್‌ , ಎಸಿಸಿ ಸೇರಿದಂತೆ 10 ಮಿಡ್‌ ಕ್ಯಾಪ್‌ ಸ್ಟಾಕ್ಸ್‌, ಹೂಡಿಕೆದಾರರಿಗೆ 40% ತನಕ ಲಾಭ ನೀಡುವ ಸಾಧ್ಯತೆ ಇದೆ ಎಂದು ಟ್ರೆಂಡ್‌ಲೈನ್‌ ಸಂಸ್ಥೆಯ ವರದಿ ತಿಳಿಸಿದೆ (Stock Market). ಬ್ರೋಕರೇಜಸ್‌ ಈಗ ಮಿಡ್-ಕ್ಯಾಪ್‌ ವಲಯದ ಆಯ್ದ ಸ್ಟಾಕ್ಸ್‌ಗಳ ಬಗ್ಗೆ ಬುಲ್ಲಿಶ್‌ ಆಗಿವೆ ಎಂದು ವರದಿ ತಿಳಿಸಿದೆ. ಟ್ರೆಂಡ್‌ ಲೈನ್‌ ಮುಖ್ಯವಾಗಿ 10 ಬಿಎಸ್‌ಇ ಮಿಡ್-ಕ್ಯಾಪ್‌ ಸ್ಟಾಕ್ಸ್‌ಗಳನ್ನು ಪಟ್ಟಿ ಮಾಡಿದ್ದು, ಇವುಗಳು ಹೂಡಿಕೆದಾರರಿಗೆ 40 ಪರ್ಸೆಂಟ್‌ ತನಕ ಲಾಭ ನೀಡುವ ನಿರೀಕ್ಷೆ ಇದೆ.

ಈಗ ವಿವರಗಳನ್ನು ನೋಡೋಣ.

ಅರಬಿಂದೋ ಫಾರ್ಮಾ-Aurobindo Pharma

ಷೇರಿನ ಈಗಿನ ದರ: 1,161/-

ಟಾರ್ಗೆಟ್‌ ದರ: 1,494/-

Upside: 29%

ಕ್ರಾಂಪ್ಟನ್‌ ಗ್ರೀವ್ಸ್‌-Crompton Greaves

ಷೇರಿನ ಈಗಿನ ದರ: 352/-

ಟಾರ್ಗೆಟ್‌ ದರ: 462/-

Upside: 31%

ಎಸಿಸಿ-ACC

ಷೇರಿನ ಈಗಿನ ದರ: 1904/-

ಟಾರ್ಗೆಟ್‌ ದರ: 2,317/-

Upside: 22%

ಅಸ್ಟ್ರಾಲ್‌-Astral

ಷೇರಿನ ಈಗಿನ ದರ: 1,526/-

ಟಾರ್ಗೆಟ್‌ ದರ: 1,919

Upside: 26%

ಡಿಕ್ಸಾನ್‌ ಟೆಕ್ನಾಲಜೀಸ್‌-Dixon Technologies

ಷೇರಿನ ಈಗಿನ ದರ: 14,855/-

ಟಾರ್ಗೆಟ್‌ ದರ: 19,457/-

Upside: 31%

ಇಮಾಮಿ-Emami

ಷೇರಿನ ಈಗಿನ ದರ: 583/-

ಟಾರ್ಗೆಟ್‌ ದರ: 821/-

Upside: 40%

ಆಯಿಲ್‌ ಇಂಡಿಯಾ-Oil India

ಷೇರಿನ ಈಗಿನ ದರ: 424/-

ಟಾರ್ಗೆಟ್‌ ದರ: 590/-

Upside: 39%

ಐಪಿಸಿಎ ಲ್ಯಾಬೊರೇಟರೀಸ್-Ipca Laboratories

ಷೇರಿನ ಈಗಿನ ದರ: 1,370/-

ಟಾರ್ಗೆಟ್‌ ದರ: 1,815/-

Upside: 33%

ಸ್ಟಾರ್‌ ಹೆಲ್ತ್‌-Star Health

ಷೇರಿನ ಈಗಿನ ದರ: 470/-

ಟಾರ್ಗೆಟ್‌ ದರ: 601/-

Upside: 28%

ಎಲ್‌ ಐಸಿ ಹೌಸಿಂಗ್‌ ಫೈನಾನ್ಸ್‌-LIC Housing Finance

ಷೇರಿನ ಈಗಿನ ದರ: 613/-

ಟಾರ್ಗೆಟ್‌ ದರ: 737/-

Upside: 20%

ಈ ಸುದ್ದಿಯನ್ನೂ ಓದಿ: Stock Market: ಜಿಯೊ ಫೈನಾನ್ಷಿಯಲ್‌ ಸ್ಟಾಕ್‌ 1 ತಿಂಗಳಿನಲ್ಲಿ 18% ಹೈ ಜಂಪ್

ಟಾಟಾ ಗ್ರೂಪ್‌ನ 5 ಷೇರುಗಳಿಗೆ ಮತ್ತು ಅದಾನಿ ಗ್ರೂಪ್‌ನ 5 ಷೇರುಗಳಿಗೆ ಮುಂದಿನ ವಾರ ex-dividend ಬರುತ್ತಿದೆ. ಅಂದರೆ ಎಕ್ಸ್‌ ಡಿವಿಡೆಂಡ್‌ಗಿಂತ ಮೊದಲು ಷೇರು ಖರೀದಿಸಿದವರಿಗೆ ಮಾತ್ರ ಡಿವಿಡೆಂಡ್‌ ಸಿಗಲಿದೆ.

ಟಾಟಾ ಗ್ರೂಪ್‌ನ ನೆಲ್ಕೊ, ಟಾಟಾ ಇನ್ವೆಸ್ಟ್‌ ಮೆಂಟ್‌ ಕಾರ್ಪೊರೇಷನ್‌, ಟಾಟಾ ಎಲೆಕ್ಸಿ, ಟಾಟಾ ಕೆಮಿಕಲ್ಸ್‌ ಮತ್ತು ಟ್ರೆಂಡ್‌ ಷೇರುಗಳಿಗೆ ಮುಂದಿನ ವಾರ ಎಕ್ಸ್-ಡಿವಿಡೆಂಡ್‌ ಬರಲಿದೆ. ಅದಾನಿ ಗ್ರೂಪ್‌ನ ಎಸಿಸಿ, ಅದಾನಿ ಎಂಟರ್‌ಪ್ರೈಸಸ್‌, ಅದಾನಿ ಪೋರ್ಟ್ಸ್‌, ಅಂಬುಜಾ ಸಿಮೆಂಟ್ಸ್‌ ಮತ್ತು ಅದಾನಿ ಟೋಟಲ್‌ ಗ್ಯಾಸ್‌ ಷೇರಿಗೆ ಮುಂದಿನ ವಾರ ಎಕ್ಸ್‌ ಡಿವಿಡೆಂಡ್‌ ಡೇಟ್‌ ಬರಲಿದೆ.

ಬಜಾಜ್‌ ಫೈನಾನ್ಸ್‌ ಷೇರುದಾರರಿಗೆ ಒಂದು ಗುಡ್‌ ನ್ಯೂಸ್‌ ಇದೆ. ಬಜಾಜ್‌ ಫೈನಾನ್ಸ್‌ ಷೇರು ವಿಭಜನೆಯಾಗುತ್ತಿದ್ದು, ಷೇರುದಾರರಿಗೆ ಪ್ರತಿ ಒಂದು ಷೇರು ಎರಡಾಗಿ ವಿಭಜನೆಯಾಗಲಿದೆ. ಇದರ ರೆಕಾರ್ಡ್‌ ಡೇಟ್‌ ಜೂನ್‌ 16 ಆಗಿದೆ. ಜತೆಗೆ 4:1 ಅನುಪಾತದಲ್ಲಿ ಬೋನಸ್‌ ಷೇರು ಕೂಡ ಸಿಗಲಿದೆ. ಅಂದರೆ ಪ್ರತಿ ಒಂದು ಷೇರಿಗೆ 4 ಬೋನಸ್‌ ಷೇರು ಸಿಗಲಿದೆ. ಹೀಗಾಗಿ ಬೋನಸ್‌ ಷೇರು ಸಿಗೋದು ಅಂದ್ರೆ ಷೇರುದಾರರಿಗೆ ಗುಡ್‌ ನ್ಯೂಸ್‌ ಆಗಲಿದೆ. ಬಹಳ ಉಪಯುಕ್ತ ಆಗಲಿದೆ.

ಜನವರಿ-ಮಾರ್ಚ್‌ ತ್ರೈಮಾಸಿಕದಲ್ಲಿ ಬಜಾಜ್‌ ಫೈನಾನ್ಸ್‌ ಉತ್ತಮ ರಿಸಲ್ಟ್‌ ದಾಖಲಿಸಿತ್ತು. ಈ ನಾಲ್ಕನೇ ತ್ರೈಮಾಸಿಕದಲ್ಲಿ ಕಂಪನಿಯು 4546 ಕೋಟಿ ರುಪಾಯಿ ನಿವ್ವಳ ಲಾಭ ಗಳಿಸಿತ್ತು. ನಿವ್ವಳ ಬಡ್ಡಿ ಆದಾಯವು 9807 ಕೋಟಿ ರುಪಾಯಿಗೆ ಏರಿತ್ತು.

ನಿಫ್ಟಿ ಸೂಚ್ಯಂಕವು ಕಳೆದ ಶುಕ್ರವಾರ 25,000 ಅಂಕಗಳ ಮಟ್ಟದಲ್ಲಿ ವಹಿವಾಟು ಮುಕ್ತಾಯಗೊಳಿಸಿದೆ. ಇತ್ತೀಚೆಗೆ ಮಧ್ಯಂತರ ವಹಿವಾಟಿನಲ್ಲಿ ಹಲವು ಸಲ 25,000 ಅಂಕಗಳ ಗಡಿ ಮುಟ್ಟಿ ಹಿಂದೆ ಜಾರಿತ್ತು. ಹೀಗಾಗಿ ಮುಂದೇನಾಗಬಹುದು ಎಂಬ ಕುತೂಹಲ ಹೂಡಿಕೆದಾರರಲ್ಲಿದೆ.

ಎಸ್‌ವಿಪಿ ರಿಸರ್ಚ್‌, ರೆಲಿಗೇರ್‌ ಬ್ರೋಕಿಂಗ್‌ನ ಹಿರಿಯ ಉಪಾಧ್ಯಕ್ಷ ಅಜಿತ್‌ ಮಿಶ್ರಾ ಪ್ರಕಾರ, ನಿಫ್ಟಿ ಇಂಡೆಕ್ಸ್‌ 24,500-25,100 ಅಂಕಗಳ ಮಟ್ಟದಲ್ಲಿ ಇರಬಹುದು. 25,200 ಅಂಕಗಳ ಮೇಲಕ್ಕೆ ಹೋದರೆ ಹೊಸ ಅಪ್‌ ಟ್ರೆಂಡ್‌ ಆರಂಭವಾಗಬಹುದು. ಇನ್ನು ಕೆಳಮಟ್ಟಕ್ಕೆ ಅಂದರೆ 24,400-24,600ಕ್ಕೆ ಕುಸಿಯಬಹುದು. ಅಲ್ಲಿ ಸ್ಟ್ರಾಂಗ್‌ ಸಪೋರ್ಡ್‌ ಝೋನ್‌ ಇದೆ ಎಂದು ಅಜಿತ್‌ ಮಿಶ್ರಾ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

Stock Market 1

ಎಲ್‌ಕೆಪಿ ಸೆಕ್ಯುರಿಟೀಸ್‌ನ ರೂಪಕ್‌ ಅವರ ಪ್ರಕಾರ ನಿಫ್ಟಿಗೆ 25,150ರ ಮಟ್ಟದಲ್ಲಿ ರೆಸಿಸ್ಟೆನ್ಸ್‌ ಇದೆ. 25,350 ತನಕ ನಿಫ್ಟಿ ಮೇಲ್ಮುಖವಾಗಿ ಹೋಗಬಹುದು. ಡೌನ್‌ ಸೈಡ್‌ ಆದ್ರೆ 24,850 ತನಕ ಇಳಿಯಬಹುದು.

ಎರಡು ವಾರಗಳ consolidation ಬಳಿಕ ನಿಫ್ಟಿ ಮೇಲ್ಮುಖವಾದ ಟ್ರೆಂಡ್‌ ತೋರಿಸಿದೆ. ಮುಂದೆ 25,100-25,150ರ ಮಟ್ಟದಲ್ಲಿ ರೆಸಿಸ್ಟೆನ್ಸ್‌ ಎದುರಿಸಬಹುದು ಎಂದು ಬಹುತೇಕ ತಜ್ಞರು ಹೇಳುತ್ತಿದ್ದಾರೆ. ಪಿಎಸ್‌ಯು ಬ್ಯಾಂಕ್‌ ಗಳು ಉತ್ತಮ ಪರ್ಫಾಮೆನ್ಸ್ ಕೊಡುತ್ತಿವೆ. ‌

ಮೇ ತಿಂಗಳಿನಲ್ಲಿ ವಿದೇಶಿ ಹೂಡಿಕೆಯ ಒಳ ಹರಿವು ಮತ್ತೆ ಹೆಚ್ಚತೊಡಗಿದೆ. ಭಾರತವನ್ನು ವಿದೇಶಿಹೂಡಿಕೆದಾರರು ಕಡೆಗಣಿಸುವ ಸಾಧ್ಯತೆ ಇಲ್ಲ ಎನ್ನಲು 8 ಪ್ರಮುಖ ಕಾರಣಗಳಿವೆ. ಅದನ್ನು ನೋಡೋಣ.

ಭಾರತದ ಷೇರು ಮಾರುಕಟ್ಟೆಯಲ್ಲಿ ಫಾರಿನ್‌ ಇನ್‌ ಸ್ಟಿಟ್ಯೂಷನಲ್‌ ಇನ್ವೆಸ್ಟರ್ಸ್‌ ಹೂಡಿಕೆ ಕೇವಲ 18.8% ಇದೆ. ಚೀನಾ ಮೊದಲಾದ ಪ್ರಗತಿಪರ ಮಾರುಕಟ್ಟೆಗೆ ಹೋಲಿಸಿದರೆ ಭಾರತದಲ್ಲಿ ಇನ್ನೂ ಹೂಡಿಕೆಗೆ ಅವಕಾಶ ಇದೆ. ಚೀನಾ ಮೊದಲಾದೆಡೆ 30% ತನಕ ವಿದೇಶಿ ಹೂಡಿಕೆ ಇದೆ. ಹೀಗಾಗಿ ಭಾರತದಲ್ಲಿ ಅವಕಾಶ ಇದೆ.

ಎಫ್‌ಐಐಗಳು ಈಗ ನಿಫ್ಟಿ 50ಯಿಂದಾಚೆಗೂ ಹೂಡಿಕೆಯನ್ನು ಬಯಸುತ್ತಿದ್ದಾರೆ. ಬ್ಲೂಚಿಪ್‌ ಷೇರು ಹೊರತುಪಡಿಸಿ ಇತರ ಸ್ಟಾಕ್ಸ್‌ ಅವರ ಗಮನ ಸೆಳೆಯುತ್ತಿವೆ.

ಭಾರತೀಯ ಷೇರು ಮಾರುಕಟ್ಟೆ ವಿದೇಶಿ ಹೂಡಿಕೆಯೊಂದನ್ನೇ ಅವಲಂಬಿಸಿಲ್ಲ. ಡೊಮೆಸ್ಟಿಕ್‌ ಲಿಕ್ವಿಡಿಟಿ ಶಾಕ್‌ ಅಬ್ಸರ್ಬರ್‌ ಆಗಿದೆ. ವಿದೇಶಿ ಹೂಡಿಕೆಯ ಹೊರ ಹರಿವು ಉಂಟಾದರೂ, ದೇಶೀಯ ಹೂಡಿಕೆದಾರರು ಕಂಗೆಡುವುದಿಲ್ಲ. ಕೆಮಿಕಲ್ಸ್‌, ಎಎಂಎಸ್‌, ಟೆಲಿಕಾಂ, ಫೈನಾನ್ಷಿಯಲ್ಸ್‌, ಇನ್‌ ಫ್ರಾಸ್ಟ್ರಕ್ಷರ್‌ ಮೊದಲಾದ ಗ್ರೋತ್‌ ಸೆಕ್ಟರ್‌ಗಳಲ್ಲಿ ಎಫ್‌ಐಐಗಳು ಹೂಡಿಕೆ ಮಾಡುತ್ತಿದ್ದಾರೆ. ಡಿಐಐಗಳು ಈ ದಶಕದಲ್ಲಿ 15 ಲಕ್ಷ ಕೋಟಿ ರುಪಾಯಿ ಷೇರುಗಳನ್ನು ಖರೀದಿಸಿದ್ದಾರೆ. ಭಾರತೀಯ ಷೇರು ಪೇಟೆ ಮೇಲೆ ಹಿಡಿತ ಸಾಧಿಸಿದ್ದಾರೆ. ಮಿಡ್-ಕ್ಯಾಪ್‌ ಮತ್ತು ಸ್ಮಾಲ್‌ ಕ್ಯಾಪ್‌ ಷೇರುಗಳೂ ಆಕರ್ಷಿಸುತ್ತಿವೆ. ಗ್ರೋತ್-ರಿಟರ್ನ್-‌ ಡೆಪ್ತ್‌ ಈ ಮೂರೂ ವಿಷಯದಲ್ಲಿ ಭಾರತ ಸರಿಯಾದ ಮಾರುಕಟ್ಟೆಯಾಗಿ ಹೊರಹೊಮ್ಮಿದೆ. ಎಫ್‌ಐಐ ಹೂಡಿಕೆಯ ಹರಿವಿನ ಮೇಲೆ ಕೆರೆನ್ಸಿಗಳ ಪ್ರಭಾವ ತಾತ್ಕಾಲಿಕವಾಗಿರುತ್ತವೆ.



Source link

ADMIN

About Author

Leave a comment

Your email address will not be published. Required fields are marked *

You may also like

ಕರ್ನಾಟಕ

Microsoft: Empowering the Digital World

Microsoft is a global technology company known for shaping the modern digital experience. From its iconic Windows operating system to
ಉತ್ತರ ಕರ್ನಾಟಕ ಕರ್ನಾಟಕ

“ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವದ ದಿನಾಚರಣೆಯಲ್ಲಿ ವಿಭಿನ್ನ ಹಾಗೂ ವಿಶೇಷತೆಯಿಂದ ಆಚರಣೆ”

  • September 16, 2024
ಧಾರವಾಡ ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವದ ದಿನಾಚರಣೆಯಲ್ಲಿ ವಿಭಿನ್ನ ಹಾಗೂ ವಿಶೇಷತೆಯಿಂದ ಆಚರಣೆ ಮಾಡುವ ಮೂಲಕ 95 ಸಾವಿರ ಜನರು ಪ್ರತ್ಯಕ್ಷವಾಗಿ ಭಾಗವಹಿಸಿ ರಾಜ್ಯದಲ್ಲಿಯೇ ನಂಬರ್ 1 ಸ್ಥಾನ ಪಡೆದ
Translate »