ನವದೆಹಲಿ: ತೈವಾನ್ ಓಪನ್ ಇಂಟರ್‌ನ್ಯಾಷನಲ್ ಅಥ್ಲೆಟಿಕ್ಸ್(Taiwan Athletics Open 2025) ಕೂಟದ ಎರಡನೇ ದಿನವೂ ಭಾರತದ ಅದ್ಭುತ ಪ್ರದರ್ಶನ ಮುಂದುವರೆದಿದ್ದು 10 ಪದಕಗಳನ್ನು ಗೆದ್ದಿದೆ. ಆರು ಚಿನ್ನ, ಮೂರು ಬೆಳ್ಳಿ ಮತ್ತು ಒಂದು ಕಂಚಿನ ಪದಕ ಒಳಗೊಂಡಿದೆ. ಶನಿವಾರವೂ 6 ಚಿನ್ನ ಗೆದ್ದಿದ್ದ ಭಾರತ ಇದೀಗ ಒಟ್ಟು 12 ಪದಕ(India wins 12th gold medal) ಗೆದ್ದ ಸಾಧನೆ ಮಾಡಿದೆ.
ಭಾನುವಾರ ನಡೆದ ಪುರುಷರ ವಿಭಾಗದ ಜಾವೆಲಿನ್ ಎಸೆತದಲ್ಲಿ ಭಾರತದ ರೋಹಿತ್ ಯಾದವ್ 74.42 ಮೀ. ದೂರ ಎಸೆದು ಚಿನ್ನದ ಪದಕವನ್ನು ಗೆದ್ದು ಭಾರತಕ್ಕೆ 7ನೇ ಪದಕ ತಂದುಕೊಟ್ಟರು. ತೈಪೆಯ ಯುವಾಂಗ್ ಶಿಹ್–ಫೆಂಗ್ (74.04 ಮೀ.) ಹಾಗೂ ಶೆಂಗ್ ಶಾಯೊ–ಸುನ್ (73.95 ಮೀ.) ಕ್ರಮವಾಗಿ ಬೆಳ್ಳಿ ಹಾಗೂ ಕಂಚಿನ ಪದಕಕ್ಕೆ ತೃಪ್ತಿಪಟ್ಟರು.
🚨 GOLD for Rohit Yadav in Men’s Javelin at the Taiwan Athletics Open 2025! 🇮🇳
Rohit sealed the top spot with a best throw of 74.42m in his final attempt — despite attempting only 4 throws!
Yes, it’s way below his potential, but hey — a GOLD is a GOLD!!! 🏆
And with that,… pic.twitter.com/eiPYAoEgGu
— nnis Sports (@nnis_sports) June 8, 2025
ರೋಹಿತ್ ಯಾದವ್ ದಿನದ ಆರಂಭದಲ್ಲಿ ಚಿನ್ನದ ಖಾತೆ ತೆರೆದ ಬೆನ್ನಲ್ಲೇ ಮಹಿಳೆಯರ ವಿಭಾಗದ ಸ್ಪರ್ಧೆಯಲ್ಲಿ ಅನ್ನು ರಾಣಿ ಅವರು (56.82 ಮೀ.) ಚಿನ್ನದ ಪದಕ ಪಡೆದುಕೊಂಡರು. ಶ್ರೀಲಂಕಾದ ಹತರಬಗೆ ಲೆಕಮಾಲಾಗೆ (56.62 ಮೀ.) ಬೆಳ್ಳಿ ಹಾಗೂ ಆತಿಥೇಯ ತೈಪೆಯ ಪಿನ್–ಸುನ್ ಶು (53.03 ಮೀ.) ಕಂಚಿನ ಪದಕ ಗೆದ್ದರು.
ರಿಲೆಯಲ್ಲಿ ಚಿನ್ನದ ಬೇಟೆ
ಪುರುಷರ 4×400 ಮೀ. ರಿಲೆ ಸ್ಪರ್ಧೆಯಲ್ಲಿ ಭಾರತ ತಂಡವು ನೂತನ ಕೂಟ ದಾಖಲೆಯೊಂದಿಗೆ ಸ್ವರ್ಣ ಪದಕಕ್ಕೆ ಕೊರಳೊಡ್ಡಿತು. ಸಂತೋಷ್ ಟಿ., ವಿಶಾಲ್ ಟಿ.ಕೆ., ಧರ್ಮವೀರ್ ಚೌಧರಿ ಹಾಗೂ ಮನು ಟಿ.ಎಸ್. ಅವರನ್ನೊಳಗೊಂಡ ತಂಡ 3 ನಿಮಿಷ, 5.58 ಸೆಕೆಂಡುಗಳಲ್ಲಿ ಗುರಿ ತಲುಪಿತು.
KRISHAN KUMAR WINS GOLD FOR INDIA 🥇
Krisan clinched the Gold Medal by breaking Championship Record timing of 1:48:46s in Men’s 800m at Taiwan Athletics Open 2025 💪💥
INCREDIBLY WELL DONE, KRISHAN 🇮🇳⭐
pic.twitter.com/mGNDZOZeAF— The Khel India (@TheKhelIndia) June 8, 2025
ಮೂರು ಬಾರಿ ರಾಷ್ಟ್ರೀಯ ಚಾಂಪಿಯನ್ ಆಗಿರುವ ವಿದ್ಯಾ ರಾಮರಾಜ್ ಅವರು ಮಹಿಳೆಯರ 400 ಮೀ. ಹರ್ಡಲ್ಸ್‌ನಲ್ಲಿ 56.53 ಸೆಕೆಂಡುಗಳನ್ನುಗುರಿ ತಲುಪಿ ಚಿನ್ನದ ಪದಕ ಪಡೆದುಕೊಂಡರು. ಈ ವರ್ಷದಲ್ಲಿ ಅವರ ಮೂರನೇ ವೈಯಕ್ತಿಕ ಶ್ರೇಷ್ಠ ಸಾಧನೆಯಾಗಿದೆ. ಇದಕ್ಕೂ ಮೊದಲು, ಫೆಡರೇಷನ್ ಕಪ್ ಫೈನಲ್‌ನಲ್ಲಿ 56.04 ಸೆಕೆಂಡುಗಳಲ್ಲಿ ಹಾಗೂ ಏಷ್ಯನ್ ಚಾಂಪಿಯನ್‌ಷಿಪ್ ಫೈನಲ್‌ನಲ್ಲಿ 56.46 ಸೆಕೆಂಡುಗಳಲ್ಲಿ ಗುರಿ ತಲುಪಿದ್ದರು.
ಇದನ್ನೂ ಓದಿ IPL 2025: ಆರ್‌ಸಿಬಿಗೆ ಕಪ್ ಗೆದ್ದುಕೊಡಬಲ್ಲ ನಾಲ್ವರು ಸ್ಟಾರ್‌ಗಳನ್ನು ಆರಿಸಿದ ವಿಜಯ್ ಮಲ್ಯ!
ಮಹಿಳೆಯರ 800 ಮೀ. ಓಟದ ಸ್ಪರ್ಧೆಯಲ್ಲಿ ಪೂಜಾ ಅವರು ಕೂಟ ದಾಖಲೆಯೊಂದಿಗೆ (2 ನಿ., 02.79 ಸೆ.) ಸ್ವರ್ಣ ಪದಕ ಜಯಿಸಿದರು. ಭಾರತದವರೇ ಆದ ಟ್ವಿಂಕಲ್ ಚೌಧರಿ ಅವರು 2 ನಿಮಿಷ, 6.96 ಸೆಕೆಂಡುಗಳಲ್ಲಿ ಗುರಿ ತಲುಪಿ, ಬೆಳ್ಳಿ ಪದಕ ಗೆದ್ದರು.
VITHYA RAMRAJ WINS GOLD IN WOMEN’S 400m HURDLES AT TAIWAN ATHLETICS OPEN 🥇
Good timing of 56.53s, Well Done 🇮🇳⭐
pic.twitter.com/UmfeAt9OUY— The Khel India (@TheKhelIndia) June 8, 2025
ಪುರುಷರ ವಿಭಾಗದ 800 ಮೀ. ಸ್ಪರ್ಧೆಯಲ್ಲಿ ಕೃಷ್ಣ ಕುಮಾರ್ 1 ನಿಮಿಷ, 48.46 ಸೆಕೆಂಡುಗಳಲ್ಲಿ ಗುರಿ ತಲುಪಿ, ಕೂಟ ದಾಖಲೆಯೊಂದಿಗೆ ಚಿನ್ನದ ಪದಕ ಗೆದ್ದರು. ಪುರುಷರ ವಿಭಾಗದ 400 ಮೀ. ಸ್ಪರ್ಧೆಯಲ್ಲಿ ಯಶಸ್ ಫಾಲಾಕ್ಷ ಅವರು ವೈಯಕ್ತಿಕ ಶ್ರೇಷ್ಠ ಸಾಧನೆಯೊಂದಿಗೆ (49.22 ಸೆ.) ಬೆಳ್ಳಿ ಪದಕ ಪಡೆದುಕೊಂಡರು. ಮಹಿಳೆಯರ ವಿಭಾಗದ ಉದ್ದ ಜಿಗಿತ ಸ್ಪರ್ಧೆಯಲ್ಲಿ ಭಾರತದ ಶೈಲಿ ಸಿಂಗ್ (6.41 ಮೀ.) ಆ್ಯನ್ಸಿ ಸೋಜನ್ (6.39 ಮೀ.) ಕ್ರಮವಾಗಿ ಬೆಳ್ಳಿ ಹಾಗೂ ಕಂಚಿನ ಪದಕಕ್ಕೆ ಕೊರಳೊಡ್ಡಿದರು.