Karunadu Studio

ಕರ್ನಾಟಕ

Chirag Paswan: ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುವುದಾಗಿ ಚಿರಾಗ್‌ ಪಾಸ್ವಾನ್‌ ಘೋಷಣೆ; ಬದಲಾಗುತ್ತಾ ರಾಜಕೀಯ ಚಿತ್ರಣ? – Kannada News | Yes, I Will Contest From Bihar Says Chirag Paswan


ಪಾಟ್ನಾ: ಈ ವರ್ಷಾಂತ್ಯದಲ್ಲಿ ಬಿಹಾರ ವಿಧಾನಸಭಾ ಚುನಾವಣೆ (Bihar Assembly Polls) ನಡೆಯಲಿದ್ದು, ಈಗಾಗಲೇ ಕುತೂಹಲ ಕೆರಳಿಸಿದೆ. ಇದು ರಾಷ್ಟ್ರ ರಾಜಕೀಯದ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ ಎಂದು ತಜ್ಞರು ಊಹಿಸಿದ್ದು, ಈಗಾಗಲೇ ವಿವಿಧ ಪಕ್ಷಗಳು ಕಸರತ್ತು ಆರಂಭಿಸಿವೆ. ಈ ಮಧ್ಯೆ ಕೇಂದ್ರ ಸಚಿವ, ಲೋಕ ಜನಶಕ್ತಿ ಪಕ್ಷದ (ರಾಮ್ ವಿಲಾಸ್) ಮುಖ್ಯಸ್ಥ ಚಿರಾಗ್‌ ಪಾಸ್ವಾನ್‌ (Chirag Paswan) ಮುಂಬರುವ ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುವುದಾಗಿ ಘೋಷಿಸಿದ್ದಾರೆ. ಆ ಮೂಲಕ ರಾಜಕೀಯ ಲೆಕ್ಕಾಚಾರವನ್ನೇ ಬದಲಾಯಿಸುವ ಸೂಚನೆ ನೀಡಿದ್ದಾರೆ.

ಭೋಜ್‌ಪುರ ಜಿಲ್ಲೆಯ ಅರಾದಲ್ಲಿ ನಡೆದ ಚುನಾವಣಾ ರ್‍ಯಾಲಿಯಲ್ಲಿ ಮಾತನಾಡಿದ ಅವರು, ʼʼನಾನು ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುತ್ತೇನೆ. ಬಿಹಾರದ ಜನರಿಗಾಗಿ ಕಣಕ್ಕಿಳಿಯುತ್ತೇನೆ. ಬಿಹಾರದ ಚಿತ್ರಣವನ್ನೇ ಬದಲಾಯಿಸಲು ಕೆಲಸ ಮಾಡುತ್ತೇನೆʼʼ ಎಂದು ಘೋಷಿಸಿದ್ದಾರೆ.

“ನಾನು ರಾಮ್ ವಿಲಾಸ್ ಪಾಸ್ವಾನ್ ಅವರ ಮಗ. ನನ್ನ ತಂದೆಯ ಕನಸುಗಳನ್ನು ನನಸಾಗಿಸುತ್ತೇನೆ ಮತ್ತು ಬಿಹಾರವನ್ನು ಬದಲಾಯಿಸಲು ‘ಮೊದಲು ಬಿಹಾರ, ಮೊದಲು ಬಿಹಾರಿ’ ಎಂಬುದಕ್ಕಾಗಿ ಕೆಲಸ ಮಾಡುತ್ತೇನೆ” ಎಂದು ಅವರು ತಿಳಿಸಿದ್ದಾರೆ.

ಈ ಸುದ್ದಿಯನ್ನೂ ಓದಿ: Savitha S: ಇದೆಂಥಾ ವರ್ತನೆ?! ಅಧಿಕಾರಿಯತ್ತ ಪುಷ್ಪಗುಚ್ಛ ಎಸೆದ ಆಂಧ್ರ ಪ್ರದೇಶದ ಸಚಿವೆ ಸವಿತಾ; ನೆಟ್ಟಿಗರಿಂದ ಆಕ್ರೋಶ

ಜನರೇ ನಿರ್ಧರಿಸಲಿ

“ನಾನು ರಾಜ್ಯದ ಯಾವ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಬೇಕು ಎಂಬುದನ್ನು ಬಿಹಾರದ ಜನರು ನಿರ್ಧರಿಸಬೇಕು. ನಾನು ರಾಜಕೀಯ ನಿರ್ಧಾರಗಳನ್ನು ರಾಜ್ಯ ಮತ್ತು ಜನರ ಹಿತದೃಷ್ಟಿಯಿಂದ ತೆಗೆದುಕೊಳ್ಳುತ್ತೇನೆ” ಎಂದು 42 ವರ್ಷದ ಅವರು ಹೇಳಿದ್ದಾರೆ. ತಂದೆಯನ್ನು ಕಳೆದುಕೊಂಡ ತಮಗೆ ಬಿಹಾರದ ಜನರೇ ಏಕೈಕ ಕುಟುಂಬ ಎಂದು ಭಾವುಕರಾಗಿ ನುಡಿದಿದ್ದಾರೆ.

ಎನ್‌ಡಿಎಗಾಗಿ ಸ್ಪರ್ಧೆ

“ನನ್ನ ಮೈತ್ರಿ ಬಿಹಾರದ ಜನರೊಂದಿಗೆ ಮಾತ್ರ. ಎನ್‌ಡಿಎಯನ್ನು ಬಲಪಡಿಸಲು ನಾವು ಎಲ್ಲ 243 ಸ್ಥಾನಗಳಲ್ಲಿ ಸ್ಪರ್ಧಿಸುತ್ತೇವೆ. ನಾನು ಬಿಹಾರಕ್ಕಾಗಿ ಮತ್ತು ರಾಜ್ಯದ ಜನರಿಗಾಗಿ ಬದುಕುತ್ತೇನೆ ಮತ್ತು ಸಾಯುತ್ತೇನೆ” ಎಂದು ಅವರು ತಿಳಿಸಿದ್ದಾರೆ. “ನಾನು ಒಂದು ವಿಷಯವನ್ನು ಸ್ಪಷ್ಟಪಡಿಸುತ್ತೇನೆ. ನನ್ನ ಸ್ಪರ್ಧೆ ಪಕ್ಷಕ್ಕೆ ನೆರವಾಗಲು ಮಾತ್ರ. ನಮ್ಮ ಸ್ಪರ್ಧೆ ಎನ್‌ಡಿಎಗೆ ಸಹಾಯ ಮಾಡುತ್ತದೆ” ಎಂದು ಚಿರಾಗ್‌ ಪಾಸ್ವಾನ್‌ ಹೇಳಿದ್ದಾರೆ.

ಯಾರಾ ಪಾಲಾಗಲಿದೆ ಬಿಹಾರ?

ಬಿಹಾರದಲ್ಲಿ ಆಡಳಿತರೂಢ ಎನ್‌ಡಿಎ ಮಿತ್ರ ಪಕ್ಷದ ಭಾಗವಾಗಿರುವ ಎಲ್‌ಜೆಪಿ (ರಾಮ್‌ ವಿಲಾಸ್‌) ಬಿಜೆಪಿ ನೇತೃತ್ವದಲ್ಲಿ ಚುನಾವಣೆ ಎದುರುಸಲಿದೆ. ಸಿಎಂ ನಿತೀಶ್‌ ಕುಮಾರ್‌ ಅವರ ಜನತಾ ದಳ (ಯು೦, ಜಿತನ್‌ ರಾಮ್‌ ಮಾಂಝಿ ಅವರ ಹಿಂದೂಸ್ತಾನಿ ಅವಾಮಿ ಮೋರ್ಚಾ (HAM) ಮತ್ತು ಉಪೇಂದ್ರ ಕುಶ್ವಾಹಾ ಅವರ ರಾಷ್ಟ್ರೀಯ ಲೋಕ ಮೋರ್ಚಾ (RLM)ಎನ್‌ಡಿಎಯ ಮಿತ್ರಪಕ್ಷಗಳು. 2024ರ ಲೋಕಸಭಾ ಚುನಾವಣೆಯಲ್ಲಿ ಎನ್‌ಡಿಎ ಮೈತ್ರಿಕೂಟವು 5 ಕ್ಷೇತ್ರಗಳಲ್ಲಿ ಜಯ ಗಳಿಸಿತ್ತು. ಈ ಬಾರಿ ಚಿರಾಗ್‌ ಪಾಸ್ವಾನ್‌ ಮುಖ್ಯಮಂತ್ರಿ ಗಾದಿಯ ಮೇಲೆ ಕಣ್ಣಟ್ಟೇ ಕಣಕ್ಕೆ ಧುಮುಕುತಿದ್ದಾರೆ ಎನ್ನಲಾಗಿದೆ. ಈ ಕಾರಣದಿಂದಲೇ ರಾಜಕೀಯ ಅಖಾಡ ಕುತೂಹಲ ಕೆರಳಿಸಿದ್ದು, ಚುನಾವಣಾ ದಿನಾಂಕ ಇನ್ನಷ್ಟೇ ಘೋಷಣೆಯಾಗಬೇಕಿದೆ.



Source link

ADMIN

About Author

Leave a comment

Your email address will not be published. Required fields are marked *

You may also like

ಕರ್ನಾಟಕ

Microsoft: Empowering the Digital World

Microsoft is a global technology company known for shaping the modern digital experience. From its iconic Windows operating system to
ಕರ್ನಾಟಕ

Microsoft: Empowering the Digital World

Microsoft is a global technology company known for shaping the modern digital experience. From its iconic Windows operating system to
Translate »