Karunadu Studio

ಕರ್ನಾಟಕ

Neymar: ಫುಟ್‌ಬಾಲ್ ತಾರೆ ನೇಮರ್‌ಗೆ ಕೋವಿಡ್‌ ಸೋಂಕು – Kannada News | Brazil forward Neymar tests positive for Covid-19


ರಿಯೋ ಡಿ ಜನೈರೊ: ಕೋವಿಡ್‌(Covid-19) ಸೋಂಕು ನಿಧಾನಗತಿಯಲ್ಲಿ ಏರಿಕೆ ಕಾಣುತ್ತಿದ್ದು ಖ್ಯಾತ ಫುಟ್‌ಬಾಲ್ ತಾರೆ ಬ್ರೆಜಿಲ್‌ನ ನೇಮರ್‌ಗೆ(Neymar) ಕೋವಿಡ್ ದೃಢಪಟ್ಟಿದೆ. ಕೊರೊನಾ ಸೋಂಕು ದೃಢಪಟ್ಟ ನಂತರ ನೇಮರ್ ಅವರನ್ನು ತಂಡದಿಂದ ಹೊರಗಿಡಲಾಗಿದೆ ಎಂದು ಕ್ಲಬ್ ಸ್ಯಾಂಟೋಸ್(club Santos) ಬ್ರೆಜಿಲ್ ಮಾಧ್ಯಮಕ್ಕೆ ತಿಳಿಸಿದ್ದಾರೆ. ನೇಮರ್‌ಗೆ ಈ ಹಿಂದೆ 2020 ರಲ್ಲಿಯೂ ಕೋವಿಡ್‌ ಸೋಂಕು ತಗುಲಿತ್ತು.

ಸೌದಿ ಪ್ರೊ ಲೀಗ್‌ನಲ್ಲಿ ಅಲ್-ಹಿಲಾಲ್‌ ಪರ ಆಡುವ ವೇಳೆ ಗಾಯಗೊಂಡಿದ್ದ ನೇಮರ್‌ ಈ ವರ್ಷದ ಆರಂಭದಲ್ಲಿ ಸ್ಯಾಂಟೋಸ್ ಕ್ಲಬ್‌ಗೆ ಮರಳಿದ್ದರು. ಅವರು ಗಂಭೀರ ಮೊಣಕಾಲಿನ ಗಾಯಕ್ಕೆ ತುತ್ತಾಗಿದ್ದರು. ಸ್ಯಾಂಟೋಸ್‌ ಕ್ಲಬ್‌ನಲ್ಲಿ ನೇಮಾರ್ ಅವರ ಭವಿಷ್ಯವು ಅನಿಶ್ಚಿತವಾಗಿಯೇ ಉಳಿದಿದೆ. ಅವರ ಪ್ರಸ್ತುತ ಒಪ್ಪಂದವು ಜೂನ್ 30 ರಂದು ಮುಕ್ತಾಯಗೊಳ್ಳಲಿದೆ. ಈ ಋತುವಿನಲ್ಲಿ ಗಾಯಗಳಿಂದಾಗಿ ಕೇವಲ 12 ಪಂದ್ಯಗಳನ್ನು ಆಡಿದ್ದರು. ಅವರಿಂದ ನಿರೀಕ್ಷಿತ ಪ್ರದರ್ಶನ ಕಂಡು ಬಂದಿಲ್ಲ. ಕೇವಲ ಮೂರು ಗೋಲುಗಳು ಮಾತ್ರ ಗಳಿಸಲು ಸಾಧ್ಯವಾಗಿತ್ತು.



ಭಾರತದಲ್ಲೂ ಕೋವಿಡ್‌ ಹೆಚ್ಚಳ

ಭಾರತದಲ್ಲಿಯೂ ಕೋವಿಡ್‌ ಪ್ರಕರಣ ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿದೆ. ಭಾನುವಾರ ಬಿಡುಗಡೆಯಾದ ಕೇಂದ್ರ ಆರೋಗ್ಯ ಸಚಿವಾಲಯದ ಅಂಕಿ-ಅಂಶಗಳ ಪ್ರಕಾರ, ಕಳೆದ 48 ಗಂಟೆಗಳಲ್ಲಿ 769 ಹೊಸ ಕೋವಿಡ್ ಸೋಂಕುಗಳು ವರದಿಯಾಗಿವೆ. ಈ ಮೂಲಕ ಭಾರತದಲ್ಲಿ ಸಕ್ರಿಯ ಕೋವಿಡ್ ಪ್ರಕರಣಗಳ ಸಂಖ್ಯೆ 6,000 ದಾಟಿದೆ.

ಭಾರತದಲ್ಲಿ 6,133 ಸಕ್ರಿಯ ಕೋವಿಡ್ ಪ್ರಕರಣಗಳಿವೆ ಮತ್ತು ಕಳೆದ 24 ಗಂಟೆಗಳಲ್ಲಿ ಇನ್ನೂ ಆರು ಸಾವುಗಳು ವರದಿಯಾಗಿವೆ ಎಂದು ಸಚಿವಾಲಯ ತಿಳಿಸಿದೆ. ಈ ವರ್ಷದ ಜನವರಿಯಿಂದ, ದೇಶದಲ್ಲಿ ಕೋವಿಡ್ ಗೆ ಸಂಬಂಧಿಸಿದಂತೆ 65 ಸಾವುಗಳು ವರದಿಯಾಗಿವೆ.





Source link

ADMIN

About Author

Leave a comment

Your email address will not be published. Required fields are marked *

You may also like

ಕರ್ನಾಟಕ

Microsoft: Empowering the Digital World

Microsoft is a global technology company known for shaping the modern digital experience. From its iconic Windows operating system to
ಉತ್ತರ ಕರ್ನಾಟಕ ಕರ್ನಾಟಕ

“ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವದ ದಿನಾಚರಣೆಯಲ್ಲಿ ವಿಭಿನ್ನ ಹಾಗೂ ವಿಶೇಷತೆಯಿಂದ ಆಚರಣೆ”

  • September 16, 2024
ಧಾರವಾಡ ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವದ ದಿನಾಚರಣೆಯಲ್ಲಿ ವಿಭಿನ್ನ ಹಾಗೂ ವಿಶೇಷತೆಯಿಂದ ಆಚರಣೆ ಮಾಡುವ ಮೂಲಕ 95 ಸಾವಿರ ಜನರು ಪ್ರತ್ಯಕ್ಷವಾಗಿ ಭಾಗವಹಿಸಿ ರಾಜ್ಯದಲ್ಲಿಯೇ ನಂಬರ್ 1 ಸ್ಥಾನ ಪಡೆದ
Translate »