ಝೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಹೆಚ್ಚಿನ ಧಾರಾವಾಹಿಗಳಿಗೆ ಉತ್ತಮ ಟಿಆರ್ಪಿ ಇದೆ. ಪ್ರತಿವಾರದ ಟಿಆರ್ಪಿ ಗಮನಿಸಿದರೆ ಅದರಲ್ಲಿ ಟಾಪ್ ಲಿಸ್ಟ್ನಲ್ಲಿ ಕಾಣಿಸುವುದು ಹೆಚ್ಚು ಝೀ ವಾಹಿನಿಯ ಧಾರಾವಾಹಿಗಳೇ. ಅದರಲ್ಲೂ ಈ ವಾಹಿನಿಯ ಧಾರಾವಾಹಿ ಪಟ್ಟಿಯಲ್ಲಿ ದೊಡ್ಡ ದಾಖಲೆ ನಿರ್ಮಿಸಿದ್ದು ಎಂದರೆ ಅದು ಪುಟ್ಟಕ್ಕನ ಮಕ್ಕಳು (Puttakkana Makkalu). ಜನಪ್ರಿಯ ನಟಿ ಉಮಾಶ್ರೀ ಮುಖ್ಯಪಾತ್ರದಲ್ಲಿ ನಟಿಸಿರುವುದು ಇದಕ್ಕೆ ಪ್ರಮುಖ ಕಾರಣ ಎಂದರೆ ತಪ್ಪಾಗುವುದಿಲ್ಲ. ಇದೀಗ ಈ ಧಾರಾವಾಹಿ ಬರೋಬ್ಬರಿ 1000 ಸಂಚಿಕೆ ಪೂರೈಸಿದೆ.
ತಂದೆ ದೂರವಾಗಿ ತಬ್ಬಲಿಯಾದ ಮೂವರು ಹೆಣ್ಣು ಮಕ್ಕಳನ್ನು ಸಾಕಿ ಸಲಹಿ ಅವರಿಗೆ ಬದುಕಿನ ದಾರಿ ತೋರಿಸಲು ಹೋರಾಡುವ ಗಟ್ಟಿಗಿತ್ತಿ ಪುಟ್ಟಕ್ಕನ ಕಥೆ ಇದು. ತೆಲುಗಿನ ರಾಧಮ್ಮ ಕೂತುರು ಧಾರಾವಾಹಿ ರೀಮೆಕ್ ಆಗಿದ್ದರೂ ಕನ್ನಡದ ನೇಟಿವಿಟಿಗೆ ತಕ್ಕಂತೆ ಬದಲಿಸಿಕೊಂಡು ಕಥೆಯನ್ನು ಬೆಳೆಸಲಾಗಿತ್ತು. 2021, ಡಿಸೆಂಬರ್ 13ರಂದು ಪುಟ್ಟಕ್ಕನ ಮಕ್ಕಳು ಧಾರಾವಾಹಿ ಪ್ರಸಾರ ಆರಂಭವಾಗಿತ್ತು. ಅಲ್ಲಿಂದ ಒಂದು ಹಂತದ ವರೆಗೆ ಈ ಧಾರಾವಾಹಿ ನಂಬರ್ ಒನ್ ಪಟ್ಟದಲ್ಲಿತ್ತು. ಆದರೆ, ನಿರ್ದೇಶಕರ ಆ ಒಂದು ತೀರ್ಮಾನ ಧಾರಾವಾಹಿ ಹಳಿ ತಪ್ಪುವಂತೆ ಮಾಡಿತು.
ಹಿಂದೆ ಕನ್ನಡ ಧಾರಾವಾಹಿಗಳ ಟಿಆರ್ಪಿ ಲಿಸ್ಟ್ನಲ್ಲಿ ನಂಬರ್ ಸ್ಥಾನದಲ್ಲಿದ್ದು ಕಿರುತೆರೆ ಲೋಕವನ್ನು ಆಳುತ್ತಿದ್ದ ಪುಟ್ಟಕ್ಕನ ಮಕ್ಕಳು ಧಾರಾವಾಹಿ ಈಗಂತು ಸಂಪೂರ್ಣವಾಗಿ ಕುಸಿದುಬಿದ್ದಿದೆ. ಸೀರಿಯಲ್‌ನಲ್ಲಿ ಆದ ಪಾತ್ರಗಳ ಬದಲಾವಣೆ, ಸಮಯ ಬದಲಾವಣೆ ಹಾಗೂ ಕಥೆಯಲ್ಲಿ ಏನೂ ದೊಡ್ಡ ಬದಲಾವಣೆ ಇಲ್ಲದ ಕಾರಣ ದೊಡ್ಡ ಹೊಡೆತ ಬಿದ್ದಿತು. ರೇಟಿಂಗ್ ಪಾತಾಳಕ್ಕೆ ಕುಸಿದ ಬಳಿಕ ನಿರ್ದೇಶಕರು ಧಾರಾವಾಹಿಯನ್ನು ಮೇಲಕ್ಕೆತ್ತಲು ನಾನಾ ಟ್ವಿಸ್ಟ್ ನೀಡಿ ಪ್ರಯತ್ನ ಪಟ್ಟರು, ಆದರೆ ಅದು ಯಾವುದೂ ಸಾಧ್ಯವಾಗಲಿಲ್ಲ.
ಪುಟ್ಟಕ್ಕನ ಮಕ್ಕಳು ಸೀರಿಯಲ್‌ನಲ್ಲಿ ಸ್ನೇಹಾ ಪಾತ್ರ ಕಣ್ಮುಚ್ಚುತ್ತಿದ್ದಂತೆ, ಕಿರುತೆರೆ ವೀಕ್ಷಕರಿಗೆ ಈ ಸಾವಿನ ಸುದ್ದಿ ಅರಗಿಸಿಕೊಳ್ಳಲು ಸಾಧ್ಯವಾಗಿರಲಿಲ್ಲ. ಸೋಷಿಯಲ್ ಮೀಡಿಯಾದಲ್ಲಿ ನಿರ್ದೇಶಕರ ನಡೆಯ ಬಗ್ಗೆಯೂ ವಿರೋಧ ವ್ಯಕ್ತಪಡಿಸಿದ್ದರು. ಕಥಾ ನಾಯಕಿ ಸಂಜನಾ ಬುರ್ಲಿ ಅವರು ಧಾರಾವಾಹಿಯಿಂದ ಹೊರ ನಡೆದಿದ್ದು ಈ ಸೀರಿಯಲ್ ಡೌನ್ ಆಗಲು ಕಾರಣ ಎನ್ನಲಾಯಿತು.
Sarigamapa: ಸರಿಗಮಪ ವಿನ್ನರ್ ಶಿವಾನಿ ಸ್ವಾಮಿಗೆ ಸಿಕ್ಕ ಹಣ ಎಷ್ಟು ಲಕ್ಷ ಗೊತ್ತೇ?
ಈ ಎಲ್ಲದರ ಮಧ್ಯೆ ಧಾರಾವಾಹಿ ಈಗ 1000 ಸಂಚಿಕೆ ಪೂರೈಸಿದೆ. ಆದರೆ, ಇಲ್ಲಿದೆ ಧಾರಾವಾಹಿ ಮುಕ್ತಾಯ ಆಗುವುದಿಲ್ಲ ಎಂಬ ಸ್ಪಷ್ಟನೆಯನ್ನು ಕೂಡ ನಿರ್ದೇಶಕರು ಕೊಟ್ಟಿದ್ದಾರೆ. ‘‘ಪುಟ್ಟಕ್ಕನ ಮಕ್ಕಳು ಧಾರಾವಾಹಿ ಝೀ-5 ಮಾರ್ಕೆಟಿಂಗ್‌ನಲ್ಲಿ ಮುಂದಿದೆ. ಹಾಗಾಗಿ ಸದ್ಯಕ್ಕೆ ನಡೆದುಕೊಂಡು ಹೋಗುತ್ತಿದೆ. ಎಷ್ಟು ದಿನ ಮುಂದುವರೆಯುತ್ತದೆ ಎನ್ನುವುದು ವಾಹಿನಿಗೆ ಬಿಟ್ಟಿದ್ದು. ಇನ್ನು 150-200 ಎಪಿಸೋಡ್ ಮಾಡಲು ನಮಗೆ ವಾಹಿನಿಯಿಂದ ಆಶ್ವಾಸನೆ ಸಿಕ್ಕಿದೆ. ಮಾರ್ಕೆಟಿಂಗ್ ಲೀಡ್ ಇರುವಾಗ ವಾಹಿನಿ ಅದನ್ನು ಟಚ್ ಮಾಡುವುದಿಲ್ಲ’’ ಎಂದು ಆರೂರು ಜಗದೀಶ್ ಹೇಳಿದ್ದಾರೆ.