Karunadu Studio

ಕರ್ನಾಟಕ

French Open final: ದಾಖಲೆ ಬರೆದ ಅಲ್ಕರಾಜ್‌-ಸಿನ್ನರ್‌ ನಡುವಿನ ಫೈನಲ್‌ ಪಂದ್ಯ – Kannada News | Alcaraz vs Sinner Match Became Longest-Ever French Open Final


ಪ್ಯಾರಿಸ್‌: ಭಾನುವಾರ ತಡರಾತ್ರಿ ನಡೆದಿದ್ದ ಫ್ರೆಂಚ್‌ ಓಪನ್‌ ಟೆನಿಸ್‌ ಪುರುಷರ ಸಿಂಗಲ್ಸ್‌ ಫೈನಲ್‌(French Open Final) ಪಂದ್ಯ ದಾಖಲೆಯೊಂದನ್ನು ನಿರ್ಮಿಸಿದೆ. ಸುದೀರ್ಘ ಮ್ಯಾರಥಾನ್‌ ಓಟದ ಫೈನಲ್‌ ಪಂದ್ಯದಲ್ಲಿ ವಿಶ್ವ ನಂ.2 ಕಾರ್ಲೊಸ್‌ ಅಲ್ಕರಾಜ್‌(Carlos Alcaraz) ಅವರು ವಿಶ್ವ ನಂ.1 ಇಟಲಿಯ ಜನ್ನಿಕ್‌ ಸಿನ್ನರ್‌(Jannik Sinner)ಗೆ ಸೋಲುಣಿಸಿ ಸತತ ಎರಡನೇ ಬಾರಿಗೆ ಫ್ರೆಂಚ್‌ ಓಪನ್‌ ಪ್ರಶಸ್ತಿಗೆ ಮುತ್ತಿಕ್ಕಿದರು. ಉಭಯ ಆಟಗಾರರ ಫೈನಲ್‌ ಫೈಟ್‌ ಬರೋಬ್ಬರಿ 5 ಗಂಟೆ 29 ನಿಮಿಷದ ನಡೆಯಿತು. ಇದು ಟೆನಿಸ್‌ ಯುಗದಲ್ಲಿ ರೋಲ್ಯಾಂಡ್‌ ಗ್ಯಾರಸ್‌ನಲ್ಲಿ(Roland Garros) ನಡೆದ ಸುದೀರ್ಘ ಫೈನಲ್‌ ಎನಿಸಿದೆ. 1982ರಲ್ಲಿ ವಿಲಾಂಡರ್‌-ಗಿಲ್ಲೆರ್ವೊ ವಿಲಾಸ್‌ ನಡುವಿನ ಪಂದ್ಯ 4 ಗಂಟೆ 42 ನಿಮಿಷ ನಡೆದಿತ್ತು.

5 ಸೆಟ್‌ಗಳ ಅತ್ಯಂತ ಜಿದ್ದಾಜಿದ್ದಿನ ಫೈನಲ್‌ ಕಾದಾಟದಲ್ಲಿ 23 ವರ್ಷದ ಸಿನ್ನರ್‌, ಆರಂಭಿಕ ಸೆಟ್‌ ಅನ್ನು ಸುಲಭವಾಗಿ ಗೆದ್ದರು. ದ್ವಿತೀಯ ಸೆಟ್‌ನಲ್ಲಿ ಅಲ್ಕರಾಜ್‌ ತೀವ್ರ ಪೈಪೋಟಿ ನೀಡಿದ ಕಾರಣ ಟೈ ಬ್ರೇಕರ್‌ಗೆ ಸಾಗಿದ ಈ ಸೆಟ್‌ನಲ್ಲಿ ಕೊನೆಗೂ ಸಿನ್ನರ್‌ ಗೆಲುವು ಸಾಧಿಸಿದರು. ಆದರೆ ಮೂರನೇ ಸೆಟ್‌ನಲ್ಲಿ ತಿರುಗಿ ಬಿದ್ದ ಅಲ್ಕರಾಜ್‌ 6-4 ಅಂತರದಿಂದ ಗೆದ್ದು ಹೋರಾಟವನ್ನು ಜೀವಂತವಿರಿಸಿದರು. ನಾಲ್ಕನೇ ಸೆಟ್‌ನಲ್ಲಿ ಇನ್ನೇನು ಸಿನ್ನರ್‌ ಗೆದ್ದೇ ಬಿಟ್ಟರು ಎನ್ನುವಾಗ ಫಿನಿಕ್ಸ್‌ನಂತೆ ಎದ್ದು ನಿಂತ ಅಲ್ಕರಾಜ್‌ ಸತತ ಅಂಕಗಳ ಮೂಲಕ ಈ ಸೆಟನ್ನು ಟೈ ಬ್ರೇಕರ್‌ ಮೂಲಕ ಗೆದ್ದರು.

ಅಂತಿಮ ಹಾಗೂ ನಿರ್ಣಾಯಕ ಸೆಟ್‌ನಲ್ಲಿಯೂ ಅಮೋಘ ಆಟವಾಡಿದ ಅಲ್ಕರಾಜ್‌ ಈ ಸೆಟ್‌ನಲ್ಲಿಯೂ ಮೇಲುಗೈ ಸಾಧಿಸಿ ಪಂದ್ಯವನ್ನು ಗೆದ್ದು ಬೀಗಿದರು. ಸೋಲಿನ ಭೀತಿಯಲ್ಲಿದ್ದ ಅವರು ಸತತ ಮೂರು ಸೆಟ್‌ ಗೆದ್ದು ಚಾಂಪಿಯನ್‌ ಪಟ್ಟ ಉಳಿಸಿಕೊಂಡರು. ಒಂದು ವೇಳೆ ಸಿನ್ನರ್‌ ಗೆಲುವು ಸಾಧಿಸುತ್ತಿದ್ದರೆ, ಮೊದಲ ಫ್ರೆಂಚ್‌ ಓಪನ್‌ ಗೆದ್ದ ಸಾಧನೆ ಮಾಡುತ್ತಿದ್ದರು. ಆರಂಭಿಕ ಎರಡು ಸೆಟ್‌ನಲ್ಲಿ ಗೆಲುವು ಸಾಧಿಸಿದರೂ ಆ ಬಳಿಕದ ಸೆಟ್‌ನಲ್ಲಿ ಇದೇ ಲಯ ಮುಂದುವರಿಸುವಲ್ಲಿ ಎಡವಿದ ಅವರು ಆಘಾತಕಾರಿ ಸೋಲು ಕಂಡರು. ಅಲ್ಕರಾಜ್‌, 22 ವರ್ಷ ವಯಸ್ಸಿನಲ್ಲಿ 5ನೇ ಗ್ರ್ಯಾನ್‌ಸ್ಲಾಮ್‌ ಗೆದ್ದ ಎರಡನೇ ಆಟಗಾರ ಎಂಬ ಹಿರಿಮೆಗೆ ಪಾತ್ರರಾದರು. ಸ್ಪೇನ್‌ ದಿಗ್ಗಜ ರಫೆಲ್‌ ನಡಾಲ್‌ ಮೊದಲಿಗ.



Source link

ADMIN

About Author

Leave a comment

Your email address will not be published. Required fields are marked *

You may also like

ಕರ್ನಾಟಕ

Microsoft: Empowering the Digital World

Microsoft is a global technology company known for shaping the modern digital experience. From its iconic Windows operating system to
ಉತ್ತರ ಕರ್ನಾಟಕ ಕರ್ನಾಟಕ

“ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವದ ದಿನಾಚರಣೆಯಲ್ಲಿ ವಿಭಿನ್ನ ಹಾಗೂ ವಿಶೇಷತೆಯಿಂದ ಆಚರಣೆ”

  • September 16, 2024
ಧಾರವಾಡ ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವದ ದಿನಾಚರಣೆಯಲ್ಲಿ ವಿಭಿನ್ನ ಹಾಗೂ ವಿಶೇಷತೆಯಿಂದ ಆಚರಣೆ ಮಾಡುವ ಮೂಲಕ 95 ಸಾವಿರ ಜನರು ಪ್ರತ್ಯಕ್ಷವಾಗಿ ಭಾಗವಹಿಸಿ ರಾಜ್ಯದಲ್ಲಿಯೇ ನಂಬರ್ 1 ಸ್ಥಾನ ಪಡೆದ
Translate »