Karunadu Studio

ಕರ್ನಾಟಕ

Bhagya Lakshmi Serial: ಪೂಜಾ-ಕಿಶನ್ ಮದುವೆ ನಿಲ್ಲಿಸಬೇಕೆಂದು ಭಾಗ್ಯಾಳ ಮೇಲೆ ಹಣದ ಮಳೆ ಸುರಿಸಿದ ಆದೀಶ್ವರ್ – Kannada News | Bhagya Lakshmi Kannada Serial June 09th Episode Colors Kannada


ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ‘ಭಾಗ್ಯಲಕ್ಷ್ಮೀ’ (Bhagya Lakshmi) ಧಾರಾವಾಹಿಯಲ್ಲಿ ಭಾಗ್ಯ ತಂಗಿ ಪೂಜಾ ಹಗೂ ಕಿಶನ್ ಮದುವೆ ಪ್ರಸಂಗದ ಸಂಚಿಕೆ ​ಗಳು ಸಖತ್ ಇಂಟ್ರೆಸ್ಟಿಂಗ್ ಆಗಿ ಸಾಗುತ್ತಿವೆ. ಆದೀಶ್ವರ್ ಕಾಮತ್ ಎಂಬ ಹೊಸ ಪಾತ್ರ ಧಾರಾವಾಹಿಯ ದಿಕ್ಕನ್ನೇ ಬದಲಾಯಿಸಿದ್ದು, ಭರ್ಜರಿ ಟಿಆರ್​ಪಿ ಬರುವುದು ಖಚಿತ ಎನ್ನಲಾಗುತ್ತಿದೆ. ಆದೀಶ್ವರ್ ಕಾಮತ್ ಹಾಗೂ ಭಾಗ್ಯ ಕುಟುಂಬದ ಜುಗಲ್​ಬಂದಿ ನೋಡಲು ಸಖತ್ ಮಜಾ ನೀಡುತ್ತಿದೆ. ಕಿಶನ್-ಪೂಜಾ ಮದುವೆ ನಿಲ್ಲಿಸಲು ಆದೀಶ್ವರ್ ಕಾಮತ್ ಎಲ್ಲಿಲ್ಲದ ಪ್ರಯತ್ನ ನಡೆಸುತ್ತಿದ್ದಾನೆ. ಹೇಗಾದರು ಮಾಡಿ ಈ ಮದುವೆ ನಿಲ್ಲಿಸಿಯೇ ತೀರುತ್ತೇನೆಂದು ಆದೀ ಪಣ ತೊಟ್ಟಿದ್ದಾನೆ. ಇದಕ್ಕಾಗಿ ಭಾಗ್ಯಾಳೀಗೆ ಹಣ ಕೊಡಲು ಮುಂದಾಗಿದ್ದಾನೆ.

ಭಾಗ್ಯ ಮನೆಯವರು ಒಳ್ಳೆಯವರಲ್ಲ, ಸಂಸ್ಕಾರವಂತರಲ್ಲ ಎಂದು ಪ್ರೂವ್ ಮಾಡಲು ಹೊರಟಿದ್ದಾನೆ. ಕಿಶನ್ ಬಂದು ಎಷ್ಟೇ ಮನವೊಲಿಸಲು ಪ್ರಯತ್ನಿಸಿದರೂ ಆದೀ ಮನಸ್ಸು ಕರಗುತ್ತಿಲ್ಲ. ನಾನು ಎಷ್ಟೋ ಮಿಡಲ್-ಕ್ಲಾಸ್ ಫ್ಯಾಮಿಲಿನ ಅವರ ನಡತೆಯನ್ನು ನೋಡಿದ್ದೇನೆ.. ಇವರು ಅವರಿಗಿಂತ ಬೇರೆ ಇಲ್ಲ.. ಅವಳಿಗೆ ನಮ್ಮ ಹೈ-ಫೈ ಲೈಫ್ ನೋಡಿ ಲವ್ ಆಗಿದೆಯಷ್ಟೆ ಎಂದು ಆದೀ ಹೇಳಿದ್ದಾನೆ. ಈಗಿನ ಕಾಲದ ಹುಡುಗಿಯರಿಗೆ ಹುಡುಗನ ನೋಡಿದ ಕೂಡಲೇ ಗೊತ್ತಾಗುತ್ತೆ ಅವನ ಹತ್ರ ದುಡ್ಡು ಇದೆಯೊ, ಇಲ್ಲವೋ ಅಂತ.. ನೀನು ನಂಗೆ ಇರಿಟೆಟ್ ಮಾಡ್ಬೇಡ.. ಯಾವುದೇ ಕಾರಣಕ್ಕು ಈ ಮದುವೆ ನಡೆಯಲ್ಲ ಎಂದು ನೇರವಾಗಿ ಹೇಳಿದ್ದಾನೆ.

ಆದರೆ, ಆದೀಯ ಮಾತನ್ನು ಕಿಶನ್ ಒಪ್ಪಲು ರೆಡಿಯಿಲ್ಲ. ನೀನು ಏನೇನೋ ಹೇಳಬೇಡ.. ಅವರಿಗೆ ನಾನು ಕಾಮತ್ ಫ್ಯಾಮಿಲಿ ಅವನು ಅಂತ ಗೊತ್ತಾಗಿದ್ದೆ ಮೊನ್ನೆ.. ಅಷ್ಟರ ತನಕ ನಾನು ಯಾರಂತನೇ ಗೊತ್ತಿರಲಿಲ್ಲ. ಎಲ್ಲ ನಿನ್ನ ಮೂಗಿನ ನೇರಕ್ಕೆ ಯೋಚನೆ ಮಾಡಬೇಡ.. ಫಸ್ಟ್ ಆಫ್ ಆಲ್ ನಿನ್ಗೆ ಮಿಡ್ ಕ್ಲಾಸ್ ಮೆಂಟಾಲಿಟಿ ಬಗ್ಗೆನೇ ಗೊತ್ತಿಲ್ಲ.. ಸುಮ್ನೆ ಕ್ಯಾನ್ಸಲ್ ಕ್ಯಾನ್ಸಲ್ ಅಂದ್ರೆ ನಾನು ಒಪ್ಪುವುದಿಲ್ಲ.. ಮದುವೆ ವಿಚಾರದಲ್ಲಿ ಪ್ರೀತಿ ನೋಡುತ್ತಾರೆಯೆ ಹೊರತು ದುಡ್ಡು ಯಾರೂ ನೋಡಲ್ಲ ಎಂದು ಕೋಪದಲ್ಲಿ ಹೇಳಿದ್ದಾನೆ.

ಕಿಶನ್ ಮಾತು ಕೇಳಿ ಆದೀಗೂ ಕೋಪಬಂದಿದೆ. ಬಾ ನನ್ನ ಜೊತೆ ನಿನ್ಗೆ ವಿಥ್ ಪ್ರೂಫ್ ತೋರಿಸುತ್ತೇನೆ ಎಂದು ಕಿಶನ್​ನನ್ನು ಆದೀ ತನ್ನ ರೂಮ್​ಗೆ ಕರೆದುಕೊಂಡು ಹೋಗಿದ್ದಾನೆ. ಅಲ್ಲಿ ಸೂಟ್ ಕೇಸ್​ ಓಪನ್ ಮಾಡಿ ತನ್ನ ಹಳೆಯ ಮದುವೆ ಕಾರ್ಡ್ ಅನ್ನು ಆದೀ ತೋರಿಸಿದ್ದಾನೆ. ಈ ಮದುವೆ ಕಾಗದದಲ್ಲಿ ಆದೀಶ್ವರ್ ಕಾಮತ್ weds ಸುರಭಿ ಎಂದು ಬರೆಯಲಾಗಿದೆ. ನಾನು ಯಾಕೆ ಹಾಗೆ ಹೇಳಿದೆ ಎಂದು ಇದಕ್ಕಿಂತ ಪ್ರೂಫ್ ಬೇಕ ನಿನ್ಗೆ ಎಂದು ಆದೀ ಕಿಶನ್​ಗೆ ಹೇಳಿದ್ದಾನೆ.

ಸದ್ಯ ಈ ಮದುವೆ ಕಾಗದದ ವಿಚಾರದಲ್ಲಿ ಏನೋ ಅಡಕವಾಗಿರುವುದು ಗೊತ್ತಾಗಿದೆ. ಬಹುಶಃ ಆದೀಗೆ ಮೊದಲ ಒಂದು ಮದುವೆ ಆಗಿತ್ತು. ಆಕೆಯೂ ಮಿಡಲ್ ಕ್ಲಾಸ್ ಫ್ಯಾಮಿಲಿಯವಳು.. ಆದರೆ, ಆದೀ ಬಳಿಯಿಂದ ಹಣವನ್ನೆಲ್ಲ ಕಸಿದುಕೊಂಡು ಆಕೆ ಓಡಿ ಹೋಗಿರಬಹುದು. ಈ ಬಗ್ಗೆ ಸತ್ಯಾಂಶ ಮುಂದಿನ ಎಪಿಸೋಡ್​ನಲ್ಲಿ ಬಹಿರಂಗವಾಗಬಹುದು.

ಇದಾದ ಬಳಿಕ ಆದೀಶ್ವರ್ ಈ ಮದುವೆಯ ಮಾತುಕತೆ ಯಾವುದೇ ಕಾರಣಕ್ಕೂ ಮುಂದುವರೆಯಬಾರದು ಎಂದು ನೇರವಾಗಿ ಭಾಗ್ಯಾಗೆ ಕಾಲ್ ಮಾಡಿದ್ದಾನೆ. ‘‘ಈ ಮದುವೆ ಮಾತುಕತೆ ಅಂತ ಬಂದಾಗಿನಿಂದ ನಮ್ಮ ಮನೆಯಲ್ಲಿ ಏನೇನೋ ನಡಿತಾ ಇದೆ.. ಇದನ್ನೆಲ್ಲ ಇಲ್ಲಿಗೆ ಎಂಡ್ ಮಾಡೋಣ ಅಂತ’’ ಹೇಳಿದ್ದಾನೆ. ಅಲ್ಲದೆ ಒಂದು ಸ್ಥಳಕ್ಕೆ ಬಂದು ನನ್ನನ್ನ ಒಮ್ಮೆ ಭೇಟಿ ಮಾಡಿ ಎಂದು ಹೇಳಿದ್ದಾನೆ. ಅದರಂತೆ ಭಾಗ್ಯ ಅಲ್ಲಿಗೆ ಬಂದಿದ್ದಾಳೆ. ಭಾಗ್ಯ ಬಂದೊಡನೆ, ಪೂಜಾ-ಕಿಶನ್ ಮದುವೆನ ನಿಲ್ಲಿಸಬೇಕು ಎಂದು ಹೇಳಿದ್ದಾನೆ.

ಅಷ್ಟೇ ಅಲ್ಲದೆ ಆದೀಶ್ವರ್ ಮೂರು ಸ್ಯೂಟ್ ಕೇಸ್ ತಂದಿದ್ದು, ಇದರಲ್ಲಿ ಒಂದು ಸ್ಯೂಟ್ ಕೇಸ್ ತೆರೆದು ಅದರಲ್ಲಿದ್ದ ದುಡ್ಡನ್ನು ಭಾಗ್ಯಾಳ ಮೈಮೇಲೆ ಸುರಿದಿದ್ದಾನೆ. ಸದ್ಯ ಭಾಗ್ಯ ಲಕ್ಷ್ಮೀ ಧಾರಾವಾಹಿಯ ಇಂದಿನ ಎಪಿಸೋಡ್ ರೋಚಕತೆ ಸೃಷ್ಟಿಸಿದೆ. ಭಾಗ್ಯ ಎಂದೂ ಹಣಕ್ಕೆ ಆಸೆ ಪಟ್ಟವಳಲ್ಲ.. ಎಷ್ಟೇ ಕಷ್ಟ ಬಂದರೂ ಇನ್ನೊಬ್ಬರ ಬಳಿ ಕೈಚಾಚಿದವಳಲ್ಲ.. ಸದ್ಯ ಇಲ್ಲಿ ಆದೀಶ್ವರ್​ನ ಅತಿರೇಕದ ವರ್ತನೆಗೆ ಭಾಗ್ಯ ಯಾವರೀತಿ ತಿರುಗೇಟು ಕೊಡುತ್ತಾಳೆ ಎಂಬುದು ಕುತೂಹಲ ಕೆರಳಿಸಿದೆ.

Puttakkana Makkalu: ಪುಟ್ಟಕ್ಕನ ಮಕ್ಕಳು 1000 ಸಂಚಿಕೆ: ಸದ್ಯಕ್ಕೆ ಧಾರಾವಾಹಿ ಮುಕ್ತಾಯ ಇಲ್ಲ ಎಂದ ನಿರ್ದೇಶಕ



Source link

ADMIN

About Author

Leave a comment

Your email address will not be published. Required fields are marked *

You may also like

ಕರ್ನಾಟಕ

Microsoft: Empowering the Digital World

Microsoft is a global technology company known for shaping the modern digital experience. From its iconic Windows operating system to
ಉತ್ತರ ಕರ್ನಾಟಕ ಕರ್ನಾಟಕ

“ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವದ ದಿನಾಚರಣೆಯಲ್ಲಿ ವಿಭಿನ್ನ ಹಾಗೂ ವಿಶೇಷತೆಯಿಂದ ಆಚರಣೆ”

  • September 16, 2024
ಧಾರವಾಡ ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವದ ದಿನಾಚರಣೆಯಲ್ಲಿ ವಿಭಿನ್ನ ಹಾಗೂ ವಿಶೇಷತೆಯಿಂದ ಆಚರಣೆ ಮಾಡುವ ಮೂಲಕ 95 ಸಾವಿರ ಜನರು ಪ್ರತ್ಯಕ್ಷವಾಗಿ ಭಾಗವಹಿಸಿ ರಾಜ್ಯದಲ್ಲಿಯೇ ನಂಬರ್ 1 ಸ್ಥಾನ ಪಡೆದ
Translate »