Karunadu Studio

ಕರ್ನಾಟಕ

Mahanati Season 2: ಬರುತ್ತಿದೆ ಮಹಾನಟಿ ಎರಡನೇ ಸೀಸನ್: ಕಿರುತೆರೆಗೆ ಮತ್ತೆ ಮರಳಿದ ಪ್ರೇಮಾ – Kannada News | Mahanati Season 2 is coming Actress Prema returns to television


‘ಮಹಾನಟಿ’ (Mahanati) ಕನ್ನಡದ ಒಂದು ವಿಶಿಷ್ಟ ರಿಯಾಲಿಟಿ ಶೋ ಆಗಿದ್ದು, ಮಹತ್ವಾಕಾಂಕ್ಷಿ ನಟಿಯರಿಗೆ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಲು ಮತ್ತು ಕರ್ನಾಟಕದ ಮುಂದಿನ ದೊಡ್ಡ ತಾರೆಯಾಗಿ ಮಿಂಚುವ ಅವಕಾಶಕ್ಕಾಗಿ ಸ್ಪರ್ಧಿಸಲು ಒಂದು ವೇದಿಕೆಯಾಗಿದೆ. ಝೀ ಕನ್ನಡ ಇಂತಹ ಒಂದು ಅದ್ಭುತ ಶೋ ಅನ್ನು ಆಯೋಜಿಸುತ್ತಿದೆ. ಈ ಹಿಂದೆ ಮೊದಲ ಸೀಸನ್ ಅದ್ಧೂರಿಯಾಗಿ ನಡೆದಿತ್ತು. ಇದೀಗ ಮೊದಲ ಸೀಸನ್​ನ ಯಶಸ್ಸಿನ ನಂತರ ವಾಹಿನಿ ಎರಡನೇ ಸೀಸನ್ ಶುರುಮಾಡಲು ಹೊರಟಿದೆ. ಈಗಾಗಲೇ ಮಹಾನಟಿ ಸೀಸನ್ 2ನ ಪ್ರೊಮೋ ಕೂಡ ಬಿಡುಗಡೆ ಆಗಿದೆ.

ಕಳೆದ ವಾರ ಸ ರಿ ಗ ಮ ಪ ರಿಯಾಲಿಟಿ ಶೋ ಮುಕ್ತಾಯಗೊಂಡಿತು. ಇದೀಗ ಜೂನ್ 14 ರಿಂದ ಅದೇ ಸಮಯಕ್ಕೆ ಅಂದರೆ ರಾತ್ರಿ 7.30ಕ್ಕೆ ಮಹಾನಟಿ ಸೀಸನ್ 2 ಪ್ರಸಾರ ಕಾಣಲಿದೆ. ಒಂದೂವರೆ ಗಂಟೆಗಳ ಕಾಲ ಕಲಾವಿದೆಯರು ತಮ್ಮ ಪ್ರತಿಭೆಯನ್ನು ಅಭಿವ್ಯಕ್ತಪಡಿಸಲಿದ್ದಾರೆ. ಇತ್ತೀಚೆಗಷ್ಟೆ ರಾಜ್ಯಾದ್ಯಂತ ಆಡಿಷನ್ ಕೂಡ ನಡೆಲಾಗಿತ್ತು. ಈ ಆಡಿಷನ್ ಮೂಲಕ ಆಯ್ಕೆ ಆದವರ ಪೈಕಿ ಒಂದಷ್ಟು ಮಂದಿಯನ್ನು ಈ ಶೋಗೆ ಆಯ್ಕೆ ಮಾಡಿಕೊಳ್ಳಲಾಗುತ್ತದೆ.

ಕಲೆಯನ್ನು ಹೊರಹಾಕಲಾಗದೆ, ಸರಿಯಾದ ವೇದಿಕೆ ಸಿಗದೇ ಒದ್ದಾಡುತ್ತಿರುವ ಅನೇಕ ಕಲಾವಿದರಿಗೆ ಈ ಶೋ ದಾರಿದೀಪವಾಗಲಿದೆ. ಈ ಹಿಂದೆ ರಮೇಶ್ ಅರವಿಂದ್ ಅವರು ಈ ಬಾರಿ ಜಡ್ಜ್ ಸ್ಥಾನದಲ್ಲಿ ಇರುವುದು ಖಚಿತ ಎನ್ನಲಾಗಿತ್ತು. ಯಾಕೆಂದರೆ ರಮೇಶ್ ಅರವಿಂದ್ ಅವರು ಈ ಮೊದಲು ಸರಿಗಮಪ ವೇದಿಕೆ ಮೇಲೆ ಈ ಬಗ್ಗೆ ಘೋಷಣೆ ಮಾಡಿದ್ದರು. ಶೀಘ್ರವೇ ಮಹಾನಟಿ ಹೊಸ ಸೀಸನ್ ಬರಲಿದೆ ಎಂದು ಹೇಳಿದ್ದರು. ಇದೀಗ ರಮೇಶ್ ಅರವಿಂದ್ ಜೊತೆಗೆ ಇತರೆ ಜಡ್ಜ್ ಅನ್ನು ಝೀ ವಾಹಿನಿ ಪರಿಚಯಿಸಿದೆ.

ಅದು ಮತ್ಯಾರು ಅಲ್ಲ.. ನಟಿ ಪ್ರೇಮಾ. ಹಿರಿತೆರೆಯಿಂದ ದೂರವಾಗಿರುವ ಇವರು ಈಗ ಕಿರುತೆರೆಯಲ್ಲಿ ಮಿಂಚಲು ರೆಡಿ ಆಗಿದ್ದಾರೆ. ಅಂದಹಾಗೆ ಪ್ರೇಮಾ ಅವರು ಮಹಾನಟಿ ಮೊದಲ ಸೀಸನ್​ಗೆ ಕೂಡ ಜಡ್ಜ್ ಸ್ಥಾನದಲ್ಲಿ ಇದ್ದರು. ಈಗ ಈ ರಿಯಾಲಿಟಿ ಶೋನ ಎರಡನೇ ಸೀಸನ್​ಗೂ ಇವರಿಗೆ ಜಡ್ಸ್ ಸ್ಥಾನ ನೀಡಲಾಗಿದೆ. ರಮೇಶ್ ಅರವಿಂದ್, ಪ್ರೇಮಾ ಜೊತೆಗೆ ತರುಣ್ ಸುಧೀರ್ ಹಾಗೂ ನಿಶ್ವಿಕಾ ನಾಯ್ಡು ಕೂಡ ಜಡ್ಜ್ ಸ್ಥಾನದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

Bhagya Lakshmi Serial: ಪೂಜಾ-ಕಿಶನ್ ಮದುವೆ ನಿಲ್ಲಿಸಬೇಕೆಂದು ಭಾಗ್ಯಾಳ ಮೇಲೆ ಹಣದ ಮಳೆ ಸುರಿಸಿದ ಆದೀಶ್ವರ್



Source link

ADMIN

About Author

Leave a comment

Your email address will not be published. Required fields are marked *

You may also like

ಕರ್ನಾಟಕ

Microsoft: Empowering the Digital World

Microsoft is a global technology company known for shaping the modern digital experience. From its iconic Windows operating system to
ಕರ್ನಾಟಕ

Microsoft: Empowering the Digital World

Microsoft is a global technology company known for shaping the modern digital experience. From its iconic Windows operating system to
Translate »