Karunadu Studio

ಕರ್ನಾಟಕ

IND vs ENG: ಶುಭಮನ್‌ ಗಿಲ್‌ಗೆ ನಾಯಕತ್ವ ನೀಡಿರುವ ಬಗ್ಗೆ ಮೈಕಲ್‌ ವಾನ್‌ ಪ್ರತಿಕ್ರಿಯೆ! – Kannada News | Bold Move To Trust A Young Leader After Retirements Of Rohit And Kohli: Vaughan On Gill’s Appointment As Test Captain


ನವದೆಹಲಿ: ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ನಂತರ ಶುಭಮನ್ ಗಿಲ್ (Shubman Gill) ಭಾರತ ಟೆಸ್ಟ್ ತಂಡಕ್ಕೆ (India test taem) ಉತ್ತಮ ನಾಯಕರಾಗಬಹುದು ಎಂದು ಇಂಗ್ಲೆಂಡ್ ಮಾಜಿ ನಾಯಕ ಮೈಕಲ್ ವಾನ್ (Michael Vaughan) ಬಲವಾಗಿ ನಂಬಿದ್ದಾರೆ. ಭಾರತೀಯ ಕ್ರಿಕೆಟ್‌ನಲ್ಲಿ ರೆಡ್‌ ಬಾಲ್‌ ಕ್ರಿಕೆಟ್‌ನಲ್ಲಿ ದೊಡ್ಡ ಬದಲಾವಣೆ ಬರುತ್ತಿದೆ. ರೋಹಿತ್ ನಂತರ ಗಿಲ್ ಅವರನ್ನು ನಾಯಕನನ್ನಾಗಿ ಆಯ್ಕೆ ಮಾಡಲಾಗಿದೆ. ರಿಷಭ್ ಪಂತ್, ಕೆಎಲ್ ರಾಹುಲ್ ಮತ್ತು ಜಸ್‌ಪ್ರೀತ್ ಬುಮ್ರಾ ಅವರ ಬದಲು ಯಂಗ್‌ ಬ್ಯಾಟ್ಸ್‌ಮನ್‌ ಗಿಲ್‌ಗೆ ಆದ್ಯತೆ ನೀಡಲಾಗಿದೆ. ಇಂಗ್ಲೆಂಡ್ ಪ್ರವಾಸದಲ್ಲಿ ಶುಭಮನ್ ಭಾರತ ತಂಡವನ್ನು ಮುನ್ನಡೆಸುವುದು ಕಷ್ಟಕರವಾಗಿರುತ್ತದೆ. ವಿಶೇಷವಾಗಿ ವಿದೇಶಿ ನೆಲದಲ್ಲಿ ಅವರ ಬ್ಯಾಟಿಂಗ್ ಬಗ್ಗೆ ಸಾಕಷ್ಟು ಚರ್ಚೆ ನಡೆಯುತ್ತಿದೆ. ಆದರೆ, ಗಿಲ್ ಕಠಿಣ ಸಮಯದಲ್ಲಿ ಉತ್ತಮ ಪ್ರದರ್ಶನ ನೀಡಿದ್ದಾರೆ ಎಂದು ವಾನ್‌ ಗುಣಗಾನ ಮಾಡಿದ್ದಾರೆ. ಆದರೆ ನಾಯಕನಾದ ಬಳಿಕ ಅವರು ತನ್ನನ್ನು ಇನ್ನೂ ಸಾಬೀತುಪಡಿಸುವುದು ಸಾಕಷ್ಟು ಇದೆ.

“ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ನಂತರ ಶುಭಮನ್ ಗಿಲ್ ಭಾರತೀಯ ಟೆಸ್ಟ್ ಕ್ರಿಕೆಟ್‌ನ ಹೊಸ ಮುಖ. ಅವರನ್ನು ಇಂಗ್ಲೆಂಡ್ ಸರಣಿಗೆ ನಾಯಕರನ್ನಾಗಿ ಆಯ್ಕೆ ಮಾಡಲಾಗಿದೆ. ಇದು ದೊಡ್ಡ ನಿರ್ಧಾರ. ಹೊಸ ತಂಡದ ನಾಯಕತ್ವವನ್ನು ಯುವ ಆಟಗಾರನಿಗೆ ನೀಡಲಾಗಿದೆ. ಗಿಲ್ ವಿಶೇಷವಾಗಿ ತವರಿನ ಹೊರಗೆ ತನ್ನನ್ನು ತಾನು ಸಾಬೀತುಪಡಿಸಬೇಕಾಗುತ್ತದೆ. ಆದರೆ ದೊಡ್ಡ ಸಂದರ್ಭಗಳಲ್ಲಿ ಉತ್ತಮವಾಗಿ ಆಡುವ ಸಾಮರ್ಥ್ಯವನ್ನು ಹೊಂದಿದ್ದಾರೆಂದು ಅವರು ಸಾಕಷ್ಟು ಬಾರಿ ತೋರಿಸಿದ್ದಾರೆ,” ಎಂದು ವಾನ್‌ ಹೇಳಿದ್ದಾರೆ.

IND vs ENG: ಇಂಗ್ಲೆಂಡ್‌ ವಿರುದ್ಧದ ಮೊದಲನೇ ಟೆಸ್ಟ್‌ಗೂ ಮುನ್ನ ರಿಷಭ್‌ ಪಂತ್‌ಗೆ ಗಾಯ!

“ರಿಷಭ್ ಪಂತ್ ಉಪನಾಯಕನಾಗಿ ಮತ್ತು ತಮ್ಮದೇ ಆದ ಛಾಪು ಮೂಡಿಸಲು ಎದುರು ನೋಡುತ್ತಿದ್ದಾರೆ ಹಾಗೂ ತಂಡ ಕೂಡ ನೂತನ ಮೈಲುಗಲ್ಲು ತಲುಪಲು ಕಾಯುತ್ತಿದೆ. ಅಂದ ಹಾಗೆ ಈ ಇಂಗ್ಲೆಂಡ್ ಪ್ರವಾಸವು ಭಾರತದ ಮುಂದಿನ ಪೀಳಿಗೆಗೆ ವಿಶೇಷವಾದದ್ದನ್ನು ಪ್ರಾರಂಭಿಸಬಹುದು. ಯುವ ಆಟಗಾರರು ಉತ್ತಮ ಪ್ರದರ್ಶನವನ್ನು ತೋರಿದರೆ ಯಾವುದೇ ಅಚ್ಚರಿ ಪಡುವ ಅಗತ್ಯವಿಲ್ಲ,” ಎಂದು ಇಂಗ್ಲೆಂಡ್‌ ಮಾಜಿ ನಾಯಕ ತಿಳಿಸಿದ್ದಾರೆ.

ಇಂಗ್ಲೆಂಡ್‌ನ ಐದು ಟೆಸ್ಟ್ ಪಂದ್ಯಗಳ ಟೆಸ್ಟ್‌ ಸರಣಿಯ ಪ್ರವಾಸವು ಜೂನ್ 20 ರಂದು ಲೀಡ್ಸ್‌ನಲ್ಲಿ ಪ್ರಾರಂಭವಾಗಲಿದ್ದು, ಆಗಸ್ಟ್ ತಿಂಗಳಲ್ಲಿ ಅಂತ್ಯವಾಗಲಿದೆ. ಈ ಪ್ರವಾಸವು ಅಭಿಮಾನಿಗಳು ಮತ್ತು ಆಟಗಾರರಿಬ್ಬರಿಗೂ ಕಷ್ಟಕರವಾಗಲಿದೆ. ಪಂದ್ಯಗಳು ಲೀಡ್ಸ್‌ನ ಹೆಡೆಂಗ್ಲಿ, ಬರ್ಮಿಂಗ್‌ಹ್ಯಾಮ್‌ನ ಎಜ್‌ಬಾಸ್ಟನ್, ಲಂಡನ್‌ನ ಲಾರ್ಡ್ಸ್ ಮತ್ತು ಓವಲ್ ಹಾಗೂ ಮ್ಯಾಂಚೆಸ್ಟರ್‌ನ ಓಲ್ಡ್ ಟ್ರಾಫರ್ಡ್‌ನಲ್ಲಿ ಟೆಸ್ಟ್‌ ಪಂದ್ಯಗಳು ನಡೆಯಲಿವೆ.

IND vs ENG: ʻನಾಚಿಕೆಗೇಡಿನ ಸಂಗತಿʼ-ರೋಹಿತ್‌, ಕೊಹ್ಲಿ ಟೆಸ್ಟ್‌ ನಿವೃತ್ತಿ ಬಗ್ಗೆ ಕ್ರಿಸ್‌ ವೋಕ್ಸ್‌ ಪ್ರತಿಕ್ರಿಯೆ!

“ಕಠಿಣ ಸಂದರ್ಭಗಳಲ್ಲಿ ಶಾಂತವಾಗಿರಲು ಶುಭಮನ್‌ ಗಿಲ್‌ಗೆ ಸಾಮರ್ಥ್ಯವಿದೆ. ಆದರೆ ನಾಯಕನಾಗಿ ಗಿಲ್ ಇನ್ನೂ ಕಲಿಯಲು ಬಹಳಷ್ಟು ಇದೆ. ಇಂಗ್ಲೆಂಡ್ ಪ್ರವಾಸವು ಗಿಲ್‌ಗೆ ದೊಡ್ಡ ಸವಾಲಾಗಿರುತ್ತದೆ. ವಿಶೇಷವಾಗಿ ವಿದೇಶಿ ನೆಲದಲ್ಲಿ ಅವರ ಬ್ಯಾಟಿಂಗ್ ಬಗ್ಗೆ ಸಾಕಷ್ಟು ಚರ್ಚೆ ನಡೆಯಲಿದೆ,” ಎಂದು ಮೈಕಲ್‌ ವಾನ್‌ ತಿಳಿಸಿದ್ದಾರೆ.

ಭಾರತೀಯ ತಂಡದ ಯುವ ಆಟಗಾರರ ಬಗ್ಗೆಯೂ ವಾಘನ್ ಮೆಚ್ಚುಗೆ ವ್ಯಕ್ತಪಡಿಸಿದರು. “ಈ ತಂಡವು ಉತ್ತಮ ಪ್ರದರ್ಶನ ನೀಡುವ ಸಾಮರ್ಥ್ಯವನ್ನು ಹೊಂದಿದೆ. ರಿಷಭ್ ಪಂತ್ ಉಪನಾಯಕನಾಗುವುದರಿಂದ ತಂಡವು ಮತ್ತಷ್ಟು ಬಲಗೊಳ್ಳುತ್ತದೆ. ಇಂಗ್ಲೆಂಡ್ ಪ್ರವಾಸವು ಭಾರತೀಯ ತಂಡಕ್ಕೆ ಹೊಸ ಆರಂಭವಾಗಬಹುದು. ಯುವ ಆಟಗಾರರಿಗೆ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಲು ಈ ಸರಣಿಯಲ್ಲಿ ಅವಕಾಶ ಸಿಗಲಿದೆ,” ಎಂದು ಇಂಗ್ಲೆಂಡ್‌ ಮಾಜಿ ನಾಯಕ ಹೇಳಿದ್ದಾರೆ.



Source link

ADMIN

About Author

Leave a comment

Your email address will not be published. Required fields are marked *

You may also like

ಕರ್ನಾಟಕ

Microsoft: Empowering the Digital World

Microsoft is a global technology company known for shaping the modern digital experience. From its iconic Windows operating system to
ಕರ್ನಾಟಕ

Microsoft: Empowering the Digital World

Microsoft is a global technology company known for shaping the modern digital experience. From its iconic Windows operating system to
Translate »