Karunadu Studio

ಕರ್ನಾಟಕ

ʻಪ್ರಬುದ್ದತೆಯನ್ನು ತರುತ್ತದೆʼ:ನಾಯಕತ್ವದ ಬಗ್ಗೆ ತಮ್ಮದೇ ನಿಲುವು ವ್ಯಕ್ತಪಡಿಸಿದ ಶ್ರೇಯಸ್‌ ಅಯ್ಯರ್‌! – Kannada News | ‘I love the fact to come out and lead’: Shreyas Iyer Opens Up About Team India’s Captaincy


ನವದೆಹಲಿ: ಮುಂಬೈ ಬ್ಯಾಟ್ಸ್‌ಮನ್ ಶ್ರೇಯಸ್ ಅಯ್ಯರ್ (Shryas Iyer) ಅವರ ನಾಯಕತ್ವವನ್ನು ಕ್ರಿಕೆಟ್ ಜಗತ್ತಿನಲ್ಲಿ ಸಾಕಷ್ಟು ಪ್ರಶಂಸೆಗೆ ಒಳಗಾಗಿದೆ. ಅವರು ಮುನ್ನಡೆಸಿದ ಪ್ರತಿಯೊಂದು ತಂಡಕ್ಕೂ ಅವರು ಯಶಸ್ಸನ್ನು ತಂದುಕೊಟ್ಟಿದ್ದಾರೆ. 2024ರಲ್ಲಿ 10 ವರ್ಷಗಳ ನಂತರ ಕೋಲ್ಕತ್ತಾ ನೈಟ್ ರೈಡರ್ಸ್‌ಗೆ (KKR) ಮೂರನೇ ಐಪಿಎಲ್ ಟ್ರೋಫಿ ತಂದುಕೊಟ್ಟಿದ್ದರು. ನಂತರ 2025ರ ಟೂರ್ನಿಯಲ್ಲಿ 11 ವರ್ಷಗಳ ಬಳಿಕ ಇದೇ ಮೊದಲ ಬಾರಿ ಪಂಜಾಬ್ ಕಿಂಗ್ಸ್ (Punjab Kings) ತಂಡವನ್ನು ಫೈನಲ್‌ಗೆ ತಂದಿದ್ದರು. ಇದರ ಜೊತೆಗೆ ಅಯ್ಯರ್ ಅವರ ಹೆಸರಿನಲ್ಲಿ ವಿಶೇಷ ದಾಖಲೆಯಿದೆ. ಅವರು ಮೂರು ವಿಭಿನ್ನ ತಂಡಗಳನ್ನು ಐಪಿಎಲ್ ಫೈನಲ್‌ಗೆ ಕೊಂಡೊಯ್ದ ಏಕೈಕ ನಾಯಕರಾಗಿದ್ದಾರೆ. 2020ರಲ್ಲಿ ಮೊಟ್ಟ ಮೊದಲ ಬಾರಿ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಫೈನಲ್‌ಗೆ ತಂದಿದ್ದರು.

ಶ್ರೇಯಸ್‌ ಅಯ್ಯರ್‌ ಅವರು ಪ್ರಸ್ತುತ ಟಿ20 ಮುಂಬೈ ಲೀಗ್‌ನಲ್ಲಿ ಸೋಬೊ ಮುಂಬೈ ಫಾಲ್ಕನ್ಸ್ ತಂಡವನ್ನು ಮುನ್ನಡೆಸುತ್ತಿದ್ದಾರೆ ಮತ್ತು ನಾಯಕತ್ವದ ಬಗ್ಗೆ ತಮ್ಮ ಆಲೋಚನೆಗಳನ್ನು ಹಂಚಿಕೊಂಡಿದ್ದಾರೆ. “ನಾಯಕತ್ವವು ಬಹಳಷ್ಟು ಪ್ರಬುದ್ಧತೆ ಮತ್ತು ಜವಾಬ್ದಾರಿಯನ್ನು ತರುತ್ತದೆ. ನೀವು ಯಾವಾಗಲೂ ತಂಡಕ್ಕೆ ಅತ್ಯುತ್ತಮ ಪ್ರದರ್ಶನ ನೀಡುವ ನಿರೀಕ್ಷೆಯಿದೆ, ವಿಶೇಷವಾಗಿ ತಂಡವು ಯಾವುದೇ ತೊಂದರೆ ಅಥವಾ ಸವಾಲನ್ನು ಎದುರಿಸಿದಾಗ, ನಾಯಕನನ್ನು ಮೊದಲು ನೋಡಲಾಗುತ್ತದೆ. ನಾನು 22ನೇ ವಯಸ್ಸಿನಿಂದ ನಾಯಕತ್ವ ವಹಿಸಿಕೊಂಡಿದ್ದೇನೆ ಮತ್ತು ಅದು ನನಗೆ ಬಹಳಷ್ಟು ಅನುಭವವನ್ನು ನೀಡಿದೆ. ನಾನು ಪ್ರತಿ ಕ್ಷಣವನ್ನು ಆನಂದಿಸಿದ್ದೇನೆ ಮತ್ತು ಅದನ್ನು ಸ್ವೀಕರಿಸಿದ್ದೇನೆ. ತಂಡವನ್ನು ಮುಂಚೂಣಿಯಿಂದ ಮುನ್ನಡೆಸುವುದು ನನಗೆ ತುಂಬಾ ಇಷ್ಟ,” ಎಂದು ಶ್ರೇಯಸ್‌ ಅಯ್ಯರ್‌ ಹೇಳಿದ್ದಾರೆ.

IND vs ENG: ಶುಭಮನ್‌ ಗಿಲ್‌ಗೆ ನಾಯಕತ್ವ ನೀಡಿರುವ ಬಗ್ಗೆ ಮೈಕಲ್‌ ವಾನ್‌ ಪ್ರತಿಕ್ರಿಯೆ!

ಅಯ್ಯರ್ ತಮ್ಮದೇ ಆದ ವಲಯದಲ್ಲೇ ಇರುತ್ತಾರೆ

ನಾಯಕನಾಗಿ ಮೈದಾನದಲ್ಲಿ ತಮ್ಮ ‘ವಲಯ’ಕ್ಕೆ ಪ್ರವೇಶಿಸಲು ಪ್ರಯತ್ನಿಸುತ್ತೇನೆ ಮತ್ತು ಸಂದರ್ಭಗಳಿಗೆ ಅನುಗುಣವಾಗಿ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾರೆ ಎಂದು ಅವರು ಹೇಳಿದ್ದಾರೆ. ಎರಡನೇ ಕ್ವಾಲಿಫೈಯರ್‌ನಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ 204 ರನ್‌ಗಳ ಗುರಿಯನ್ನು ಬೆನ್ನಟ್ಟುವಾಗ, ಅಯ್ಯರ್ ತಮ್ಮ ತಂಡವನ್ನು ಐತಿಹಾಸಿಕ ಗೆಲುವಿನತ್ತ ಮುನ್ನಡೆಸಿದರು. ಐಪಿಎಲ್ ಇತಿಹಾಸದಲ್ಲಿ ಮುಂಬೈ ಇಂಡಿಯನ್ಸ್ 200 ಕ್ಕಿಂತ ಹೆಚ್ಚು ಸ್ಕೋರ್ ಒಳಗೆ ಎದುರಾಳಿ ತಂಡವನ್ನು ಕಟ್ಟಿ ಹಾಕುವಲ್ಲಿ ವಿಫಲವಾಗಿದ್ದು ಇದೇ ಮೊದಲು.

“ನಾನು ನನ್ನ ವಲಯಕ್ಕೆ ಪ್ರವೇಶಿಸಿ ನನ್ನ ಮುಂದೆ ಇರುವುದನ್ನು ಮಾಡಲು ಪ್ರಯತ್ನಿಸುತ್ತೇನೆ. ನಾನು ಸಾಧ್ಯವಾದಷ್ಟು ಗಮನಹರಿಸಲು ಪ್ರಯತ್ನಿಸುತ್ತೇನೆ, ವರ್ತಮಾನದಲ್ಲಿ ಉಳಿಯಲು ಪ್ರಯತ್ನಿಸುತ್ತೇನೆ, ಪರಿಸ್ಥಿತಿಯನ್ನು ಸ್ವೀಕರಿಸುತ್ತೇನೆ. ಜನಸಮೂಹವನ್ನು ಸಹ ಅಪ್ಪಿಕೊಳ್ಳಿ ಏಕೆಂದರೆ ಕೆಲವೊಮ್ಮೆ ಅವರು ತುಂಬಾ ಉತ್ಸುಕರಾಗುತ್ತಾರೆ ಮತ್ತು ನಿಮಗೆ ಶಕ್ತಿಯನ್ನು ನೀಡುತ್ತಾರೆ. ಜನಸಮೂಹವು ನನ್ನ ಹೆಸರನ್ನು ಜಪಿಸಬೇಕೆಂದು ನಾನು ಬಯಸುತ್ತೇನೆ ಮತ್ತು ಅದು ನನ್ನನ್ನು ಪ್ರೇರೇಪಿಸುತ್ತದೆ,” ಎಂದು ಶ್ರೇಯಸ್‌ ಅಯ್ಯರ್‌ ತಿಳಿಸಿದ್ದಾರೆ.

IND vs ENG ಟೆಸ್ಟ್‌ ಸರಣಿಯಲ್ಲಿ ಭಾರತ ತಂಡಕ್ಕೆ ಕೀ ಬೌಲರ್‌ ಆರಿಸಿದ ಮ್ಯಾಥ್ಯೂ ಹೇಡನ್‌!

ಟೆಸ್ಟ್‌ ತಂಡದಲ್ಲಿ ಸ್ಥಾನ ಕಳೆದುಕೊಂಡಿದ್ದ ಅಯ್ಯರ್‌

ಇಂಗ್ಲೆಂಡ್‌ ಪ್ರವಾಸದ ಟೆಸ್ಟ್‌ ಸರಣಿಯ ಭಾರತ ತಂಡದಲ್ಲಿ ಸ್ಥಾನ ಪಡೆಯುವಲ್ಲಿ ಶ್ರೇಯಸ್‌ ಅಯ್ಯರ್‌ ವಿಫಲರಾದರು. ಇವರ ಬದಲು ಕರುಣ್‌ ನಾಯರ್‌ ಹಾಗೂ ಸಾಯಿ ಸುದರ್ಶನ್‌ ಅವರನ್ನು ಆರಿಸಿಕೊಳ್ಳಲಾಗಿದೆ. ಆ ಮೂಲಕ ಅಜಿತ್‌ ಅಗರ್ಕರ್‌ ಸಾರಥ್ಯದ ಬಿಸಿಸಿಐ ಆಯ್ಕೆ ಸಮಿತಿ ಅಭಿಮಾನಿಗಳಿಗೆ ಅಚ್ಚರಿ ಮೂಡಿಸಿತ್ತು. ಜೂನ್‌ 20 ರಂದು ಟೆಸ್ಟ್‌ ಸರಣಿ ಆರಂಭವಾಗಲಿದೆ.



Source link

ADMIN

About Author

Leave a comment

Your email address will not be published. Required fields are marked *

You may also like

ಉತ್ತರ ಕರ್ನಾಟಕ ಕರ್ನಾಟಕ

“ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವದ ದಿನಾಚರಣೆಯಲ್ಲಿ ವಿಭಿನ್ನ ಹಾಗೂ ವಿಶೇಷತೆಯಿಂದ ಆಚರಣೆ”

  • September 16, 2024
ಧಾರವಾಡ ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವದ ದಿನಾಚರಣೆಯಲ್ಲಿ ವಿಭಿನ್ನ ಹಾಗೂ ವಿಶೇಷತೆಯಿಂದ ಆಚರಣೆ ಮಾಡುವ ಮೂಲಕ 95 ಸಾವಿರ ಜನರು ಪ್ರತ್ಯಕ್ಷವಾಗಿ ಭಾಗವಹಿಸಿ ರಾಜ್ಯದಲ್ಲಿಯೇ ನಂಬರ್ 1 ಸ್ಥಾನ ಪಡೆದ
ಕರ್ನಾಟಕ

ನಿಮ್ಮ ವೃತ್ತಿಜೀವನವನ್ನು ನಿರ್ಮಿಸಲು ಮತ್ತು ನಿಮ್ಮ ಭವಿಷ್ಯವನ್ನು ರೂಪಿಸುವಲ್ಲಿ ತಂತ್ರಜ್ಞಾನವನ್ನು ನಿಮ್ಮ ಮಾರ್ಗದರ್ಶಕ ಆಗಿ ಸ್ವೀಕರಿಸಿ

  • September 16, 2024
ಧಾರವಾಡ ಪ್ರಸ್ತುತ ಕಾಲದಲ್ಲಿ ತಂತ್ರಜ್ಞಾನದ ಬದಲಾಗುತ್ತಿರುವ ಮುಖ ಮತ್ತು ಇಂಜಿನಿಯರಗಳು, ತಮ್ಮ ಜ್ಞಾನ ಮತ್ತು ಕೌಶಲ್ಯಗಳನ್ನು ನಿರಂತರವಾಗಿ ನವೀಕರಿಸುವ ಅಗತ್ಯವಾಗಿದೆ ಎಂದು , ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾನಿಲಯ
Translate »