ಚಿಕ್ಕಬಳ್ಳಾಪುರ: ರೆಸಾರ್ಟ್ನಲ್ಲಿ ಕೆಲಸ ಮಾಡುತ್ತಿದ್ದವರ ನಡುವಿನ ಜಗಳ ಒಬ್ಬನ ಕೊಲೆಯಲ್ಲಿ ಪರ್ಯಾವಸಾನವಾಗಿ ಪೋಲಿಸರು ಮೂವರನ್ನು ಬಂಧಿಸಿರುವ ಘಟನೆ ತಾಲೂಕಿನ ಅಗಲಿಗುರ್ಕಿ ಬಳಿಯಲ್ಲಿರುವ ಹ್ಯಾಪಿ ರಿಟ್ರೀಟ್ ಹೋಂಸ್ಟೇ ರೆಸಾರ್ಟ್ನಲ್ಲಿ ಭಾನುವಾರ ರಾತ್ರಿ ನಡೆದಿದೆ.
ಕೊಲೆಯಾದ ವ್ಯೆಕ್ತಿಯನ್ನು ಅಸ್ಸಾಂ ರಾಜ್ಯದ ಹೈಲಕಂಡಿ ಜಿಲ್ಲೆಯ ಮೂಲದ ಮೋಹನ್(27) ಎಂದು ಗುರ್ತಿಸಲಾಗಿದೆ. ಅಸ್ಸಾಂ ರಾಜ್ಯದ ಹೈಲಕಂಡಿ ಜಿಲ್ಲೆಯ ಮೂಲದ ಹರಿಧನ್, ದಿನೇಶ್ ಮತ್ತು ಧ್ಯಾನಚಂದ್ ಬಂಧಿತ ಕೊಲೆ ಆರೋಪಿಗಳಾಗಿದ್ದಾರೆ.
ಇದನ್ನೂ ಓದಿ: Chikkaballapur (Chinthamani) News: ಕಲಿತ ವಿದ್ಯೆ ಮಾತ್ರ ಕೊನೆಯವರೆಗೂ ಜತೆಗಿರುತ್ತದೆ
ಹ್ಯಾಪಿ ರಿಟ್ರೀಟ್ ಹೋಂಸ್ಟೇಯಲ್ಲಿ ಎಲ್ಲಾ ಆರೋಪಿಗಳು ಮತ್ತು ಮೃತನು 3 ತಿಂಗಳಿನಿಂದ ಮನೆ ಗೆಲಸದ ಸಿಬ್ಬಂದಿಯಾಗಿ ಕೆಲಸ ಮಾಡುತ್ತಿದ್ದರು ಭಾನುವಾರ ರಾತ್ರಿರೆಲ್ಲ ನಾಲ್ವರು ಮದ್ಯ ಸೇವಿಸಿ ದ್ದಾರೆ. ನಂತರ ಜಗಳವಾಗಿದೆ. ಜಗಳವಾಡುವ ಸಮಯದಲ್ಲಿ, ಹರಿಧನ್ ನ ತನ್ನ ಮನೆಗೆ ಪೋನ್ ಮಾಡಿ ಮನೆಯವರ ಜೊತೆ ಮಾತನಾಡುತ್ತಿದ್ದ ಈ ವೇಳೆ ಮೃತ ಮೋಹನ್ ಹರಿಧನ್ ನ ಮೊಬೈಲ್ ಅನ್ನು ಕಸಿದುಕೊಂಡು ಹರಿಧನ್ ಬಗ್ಗೆ ಅವಹೇಳನಕಾರಿ ಹೇಳಿಕೆಗಳನ್ನು ನೀಡಿದ್ದಾರೆ ಎಂದು ಆರೋಪಿಸಲಾಗಿದೆ. ಕೋಪದ ಭರದಲ್ಲಿ, ಹರಿಧನ್ ಮರದ ತುಂಡನ್ನು ಎತ್ತಿಕೊಂಡು ಮೋಹನ್ ಕುತ್ತಿಗೆಯ ಎಡಭಾಗಕ್ಕೆ ಇರಿದಾಗ ಆತ ಸ್ಥಳದಲ್ಲೆ ಸಾವನ್ನಪ್ಪಿದ್ದಾನೆ.
ಬೆಳಗ್ಗೆ ಬೇರೆ ಕೆಲಸದವರು ಬಂದು ನೋಡಲಾಗಿ ರೂಂ ನಲ್ಲಿ ಮೋಹನ್ ಸಾವನ್ನಪ್ಪಿದ್ದು ಕಂಡು ಮಾಲಿಕರಿಗೆ ವಿಷಯ ತಿಳಿಸಿದಾಗ, ಅವರು ಸಿಸಿ ಕ್ಯಾಮರಾ ಚೆಕ್ ಮಾಡಿ ಮೋಹನ್ ಜೊತೆಗೆ ಕೆಲಸ ಮಾಡುವ ಸ್ನೇಹಿತರು ಹೊಡೆದಾಡಿರುವುದು ಕಂಡುಬಂದಿದ್ದನ್ನು ಕಂಡು ಪೋಲಿಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕಾಗಮಿಸಿದ ನಂದಿ ಗಿರಿಧಾಮ ಪೊಲೀಸರು ಮೃತನ ಶವವನ್ನು ಮರಣೋತ್ತರ ಪರೀಕ್ಷೆಗೆ ಜಿಲ್ಲಾಸ್ಪತ್ರೆಯ ಶವಾಗಾರಕ್ಕೆ ಸಾಗಿಸಿ, ಮೂವರನ್ನು ಬಂಧಿಸಿದ್ದಾರೆ.
ಘಟನಾ ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕುಶಾಲ್ ಚೌಕ್ಸೆ ಬೇಟಿ ನೀಡಿದ್ದರು.