Karunadu Studio

ಕರ್ನಾಟಕ

Nicholas Pooran: 29 ವರ್ಷಕ್ಕೆ ದಿಢೀರ್‌ ಕ್ರಿಕೆಟ್‌ ನಿವೃತ್ತಿ ಘೋಷಿಸಿದ ವಿಂಡೀಸ್‌ನ ಮಾಜಿ ನಾಯಕ ಪೂರನ್‌ – Kannada News | Nicholas Pooran announces shock retirement from international cricket at 29


ಬಾರ್ಬಡೋಸ್‌: ಕಳೆದ ವಾರವಷ್ಟೇ ಆಸ್ಟ್ರೇಲಿಯಾದ ಗ್ಲೆನ್‌ ಮ್ಯಾಕ್ಸ್‌ವೆಲ್‌ ಏಕದಿನ ಕ್ರಿಕೆಟ್‌ಗೆ, ದಕ್ಷಿಣ ಆಫ್ರಿಕಾದ ಹೆನ್ರಿಚ್‌ ಕ್ಲಾಸೆನ್‌ ಎಲ್ಲ ಮಾದರಿಯ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿ ಅಚ್ಚರಿ ಮೂಡಿಸಿದ್ದರು. ಉಭಯ ಆಟಗಾರರ ಈ ನಿವೃತ್ತಿ ಘೋಷಿಸಿ ಒಂದು ವಾರ ಕಳೆಯುವ ಮುನ್ನವೇ ಇದೀಗ ವೆಸ್ಟ್‌ ಇಂಡೀಸ್‌ನ ಯುವ ಸ್ಫೋಟಕ ಬ್ಯಾಟರ್‌ ನಿಕೋಲಸ್‌ ಪೂರನ್‌(Nicholas Pooran Retirement) ದಿಢೀರ್‌ ಆಗಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಪ್ರಕಟಿಸಿದ್ದಾರೆ. ಈ ಹಿಂದೆ ವೆಸ್ಟ್ ಇಂಡೀಸ್ ತಂಡದ ಟಿ20 ನಾಯಕತ್ವ ವಹಿಸಿದ್ದ ಪೂರನ್(Nicholas Pooran), ಭಾರತ ಮತ್ತು ಶ್ರೀಲಂಕಾ ಜಂಟಿಯಾಗಿ ಆಯೋಜಿಸಲಿರುವ ಮುಂದಿನ ಟಿ20 ವಿಶ್ವಕಪ್‌ಗೆ ಕೇವಲ ಎಂಟು ತಿಂಗಳು ಬಾಕಿ ಇರುವಾಗ ನಿವೃತ್ತಿ ಘೋಷಿಸಿದ್ದು ನಿಜಕ್ಕೂ ಅಚ್ಚರಿ ಮೂಡಿಸಿದೆ.

29 ವರ್ಷದ ಪೂರನ್‌, ವೆಸ್ಟ್‌ ಇಂಡೀಸ್‌ ತಂಡದ ಪರ 61 ಟಿ20 ಮತ್ತು 106 ಏಕದಿನ ಪಂದ್ಯಗಳಲ್ಲಿ 4,000 ಕ್ಕೂ ಹೆಚ್ಚು ರನ್ ಗಳಿಸಿದ್ದರು. ಅವರ ಈ ದಿಢೀರ್‌ ನಿವೃತ್ತಿ ಕ್ರಿಕೆಟ್‌ ಲೋಕದಲ್ಲಿ ಆಘಾತ ಉಂಟು ಮಾಡಿದೆ. ಮಂಗಳವಾರ ಬೆಳಗ್ಗೆ ತಮ್ಮ ನಿವೃತ್ತಿ ಪ್ರಕಟಿಸಿದ ಪೂರನ್‌ “ತುಂಬಾ ಕಠಿಣ ನಿರ್ಧಾರ. ಬಹಳಷ್ಟು ಚಿಂತನೆಯ ನಂತರ, ನಾನು ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ನನ್ನ ನಿವೃತ್ತಿಯನ್ನು ಘೋಷಿಸಲು ನಿರ್ಧರಿಸಿದ್ದೇನೆ” ಎಂದು ಇನ್‌ಸ್ಟಾಗ್ರಾಮ್‌ನಲ್ಲಿ ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.

2025 ರ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ನಲ್ಲಿ ಲಕ್ನೋ ಸೂಪರ್ ಜೈಂಟ್ಸ್ ಪರ ಆಡಿದ್ದ ಪೂರನ್‌, ಆ ಬಳಿಕ ಇಂಗ್ಲೆಂಡ್‌ನಲ್ಲಿ ಇತ್ತೀಚೆಗೆ ಮುಕ್ತಾಯಗೊಂಡ ವೈಟ್-ಬಾಲ್ ಸರಣಿಯಿಂದ ವಿಶ್ರಾಂತಿ ಕೋರಿದ್ದರು. ಆದರೆ ಅನಿರೀಕ್ಷಿತವಾಗಿ ನಿವೃತ್ತಿ ಘೋಷಣೆ ಮಾಡಿದ್ದಾರೆ. ಐಪಿಎಲ್‌ನಲ್ಲಿ 14 ಪಂದ್ಯಗಳಲ್ಲಿ ಸುಮಾರು 200 ಸ್ಟ್ರೈಕ್ ರೇಟ್‌ನಲ್ಲಿ 524 ರನ್ ಗಳಿಸಿದ್ದರು.

“ನಾನು ಪ್ರೀತಿಸುವ ಈ ಆಟವು ನನಗೆ ಬಹಳಷ್ಟು ನೆನಪುಗಳನ್ನು ನೀಡಿದೆ. ಮತ್ತು ನೀಡುತ್ತಲೇ ಇರುತ್ತದೆ. ಸಂತೋಷ, ಉದ್ದೇಶ, ಮರೆಯಲಾಗದ ನೆನಪುಗಳು ಮತ್ತು ವೆಸ್ಟ್ ಇಂಡೀಸ್ ತಂಡವನ್ನು ಪ್ರತಿನಿಧಿಸುವ ಅವಕಾಶ. ರಾಷ್ಟ್ರಗೀತೆಗಾಗಿ ನಿಂತು, ಮತ್ತು ನಾನು ಪ್ರತಿ ಬಾರಿ ಮೈದಾನಕ್ಕೆ ಕಾಲಿಟ್ಟಾಗಲೂ ನನ್ನಲ್ಲಿದ್ದ ಎಲ್ಲವನ್ನೂ ನೀಡುವುದು… ಅದು ನನಗೆ ನಿಜವಾಗಿಯೂ ಏನನ್ನು ಸೂಚಿಸುತ್ತದೆ ಎಂಬುದನ್ನು ಪದಗಳಲ್ಲಿ ಹೇಳುವುದು ಕಷ್ಟ. ನಾಯಕನಾಗಿ ತಂಡವನ್ನು ಮುನ್ನಡೆಸಿದ್ದು ನನಗೆ ಸಿಕ್ಕ ಸೌಭಾಗ್ಯ. ನನ್ನ ಕ್ರಿಕೆಟ್‌ ಜರ್ನಿಯಲ್ಲಿ ಸಹಕರಿಸಿದ ಎಲ್ಲ ಸಹ ಆಟಗಾರರಿಗೂ, ಕೋಚಿಂಗ್‌ ಸಿಬ್ಬಂದಿಗಳು, ಕುಟುಂಬ ಸದಸ್ಯರಿಗೆ ಧನ್ಯವಾದಗಳು” ಎಂದು ಪೂರನ್‌ ಬರೆದುಕೊಂಡಿದ್ದಾರೆ.

ಪೂರನ್ 2016 ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದರು. ಕೊನೆಯ ಬಾರಿಗೆ ಜುಲೈ 2023 ರಲ್ಲಿ ವೆಸ್ಟ್ ಇಂಡೀಸ್ ತಂಡವನ್ನು ಏಕದಿನ ಪಂದ್ಯದಲ್ಲಿ ಪ್ರತಿನಿಧಿಸಿದ್ದರು.



Source link

ADMIN

About Author

Leave a comment

Your email address will not be published. Required fields are marked *

You may also like

ಕರ್ನಾಟಕ

Microsoft: Empowering the Digital World

Microsoft is a global technology company known for shaping the modern digital experience. From its iconic Windows operating system to
ಉತ್ತರ ಕರ್ನಾಟಕ ಕರ್ನಾಟಕ

“ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವದ ದಿನಾಚರಣೆಯಲ್ಲಿ ವಿಭಿನ್ನ ಹಾಗೂ ವಿಶೇಷತೆಯಿಂದ ಆಚರಣೆ”

  • September 16, 2024
ಧಾರವಾಡ ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವದ ದಿನಾಚರಣೆಯಲ್ಲಿ ವಿಭಿನ್ನ ಹಾಗೂ ವಿಶೇಷತೆಯಿಂದ ಆಚರಣೆ ಮಾಡುವ ಮೂಲಕ 95 ಸಾವಿರ ಜನರು ಪ್ರತ್ಯಕ್ಷವಾಗಿ ಭಾಗವಹಿಸಿ ರಾಜ್ಯದಲ್ಲಿಯೇ ನಂಬರ್ 1 ಸ್ಥಾನ ಪಡೆದ
Translate »