Karunadu Studio

ಕರ್ನಾಟಕ

Rishabh Pant: ಸಿಕ್ಸರ್‌ ಸಿಡಿಸಿ ಕ್ರೀಡಾಂಗಣದ ಚಾವಣಿ ಪುಡಿ ಮಾಡಿದ ಪಂತ್‌; ಇಲ್ಲಿದೆ ವಿಡಿಯೊ – Kannada News | Rishabh Pant Breaks Stadium’s Roof With Gigantic Six In Practice Session


ಲಂಡನ್‌: ಇಂಗ್ಲೆಂಡ್‌ ಎದುರಿನ ಟೆಸ್ಟ್‌ ಸರಣಿಗೆ ಅಭ್ಯಾಸ ನಡೆಸುತ್ತಿರುವ ಗಾಯಗೊಂಡಿದ್ದ ಉಪನಾಯಕ ರಿಷಭ್‌ ಪಂತ್‌ ಚೇರಿಸಿಕೊಂಡು ಮತ್ತೆ ಅಭ್ಯಾಸಕ್ಕೆ ಮರಳಿದ್ದು ಸಿಕ್ಸರ್‌ ಮೂಲಕ ಕ್ರೀಡಾಂಗಣದ ಚಾವಣಿಗೆ ಹಾನಿ ಉಂಟುಮಾಡಿದ್ದಾರೆ. ಈ ವಿಡಿಯೊ ವೈರಲ್‌ ಆಗಿದೆ. ನೆಟ್‌ನಲ್ಲಿ ವಾಷಿಂಗ್ಟನ್ ಸುಂದರ್ ಅವರ ಎಸೆತಗಳನ್ನು ಎದುರಿಸುತ್ತಿದ್ದ ಪಂತ್, ಈ ವೇಳೆ ಬೃಹತ್ ಸಿಕ್ಸರ್ ಸಿಡಿಸಿದರು. ಅವರು ಬಾರಿಸಿದ ಈ ಸಿಕ್ಸರ್‌ ಚೆಂಡು ಕ್ರೀಡಾಂಗಣದ ಚಾವಣಿಗೆ ಬಿದ್ದ ಪರಿಣಾಮ ಚಾವಣಿಯ ಒಂದು ಭಾಗ ಪುಡಿಪುಡಿಯಾಗಿದೆ.

ತರಬೇತಿ ಅವಧಿಗಳಿಗೆ ಸಂಬಂಧಿಸಿದಂತೆ, ಭಾರತೀಯ ಕ್ರಿಕೆಟ್ ತಂಡದ ಇನ್‌ಸ್ಟಾಗ್ರಾಮ್ ಹ್ಯಾಂಡಲ್‌ನಲ್ಲಿ ಆಟಗಾರರ ವಿಡಿಯೊವನ್ನು ಪೋಸ್ಟ್ ಮಾಡಲಾಗಿದ್ದು, ನಾಯಕ ಶುಭಮನ್ ಗಿಲ್, ರಿಷಭ್ ಪಂತ್, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್ ಮತ್ತು ರವೀಂದ್ರ ಜಡೇಜಾ ಸೇರಿದಂತೆ ಹಲವಾರು ಆಟಗಾರರು ಅಭ್ಯಾಸ ನಡೆಸುತ್ತಿರುವುದನ್ನು ಕಾಣಬಹುದು.

ಇಂಗ್ಲೆಂಡ್‌ ಸರಣಿಗೂ ಮುನ್ನ ಪಂತ್ ಅವರನ್ನು ಭಾರತದ ಟೆಸ್ಟ್‌ ತಂಡದ ಹೊಸ ಉಪನಾಯಕರನ್ನಾಗಿ ನೇಮಿಸಲಾಗಿತ್ತು. ಇಂಗ್ಲೆಂಡ್‌ನಲ್ಲಿ ಪಂತ್‌ ಅವರ ಹಿಂದಿನ ಪ್ರದರ್ಶನಗಳನ್ನು ಗಮನಿಸಿದರೆ, ಸರಣಿಯಲ್ಲಿ ತಂಡದ ಯಶಸ್ಸಿಗೆ ಅವರ ಫಾರ್ಮ್ ಅತ್ಯಂತ ನಿರ್ಣಾಯಕವಾಗಿದೆ. ಇಂಗ್ಲೆಂಡ್‌ನಲ್ಲಿ 17 ಇನ್ನಿಂಗ್ಸ್‌ಗಳಿಂದ 32.70 ಸರಾಸರಿಯಲ್ಲಿ 556 ರನ್ ಗಳಿಸಿರುವ ಪಂತ್, ತಲಾ ಎರಡು ಶತಕಗಳು ಮತ್ತು ಅರ್ಧಶತಕ ಬಾರಿಸಿದ್ದಾರೆ.

18ನೇ ಆವೃತ್ತಿಯ ಐಪಿಎಲ್‌ನಲ್ಲಿ ಲಕ್ನೋ ಸೂಪರ್‌ ಜೈಂಟ್ಸ್‌ ತಂಡವನ್ನು ಮುನ್ನಡೆಸಿದ್ದ ಪಂತ್‌ ನಿರೀಕ್ಷಿತ ಬ್ಯಾಟಿಂಗ್‌ ಪ್ರದರ್ಶನ ತೋರುವಲ್ಲಿ ವಿಫಲರಾಗಿ ಭಾರೀ ಟೀಕೆ ಎದುರಿಸಿದ್ದರು. ಆದರೆ ಕೊನೆಯ ಲೀಗ್‌ ಪಂದ್ಯದಲ್ಲಿ ಶತಕ ಬಾರಿಸಿ ಬ್ಯಾಟಿಂಗ್‌ ಫಾರ್ಮ್‌ ಕಂಡುಕೊಂಡಿದ್ದರು.

ಆಸ್ಟ್ರೇಲಿಯಾ ಟೆಸ್ಟ್‌ ಸರಣಿಯಲ್ಲಿ ಆರಂಭಿಕನಾಗಿ ಆಡಿದ್ದ ಕನ್ನಡಿಗ ಕೆ.ಎಲ್‌ ರಾಹುಲ್‌ ಮತ್ತು ಯಶಸ್ವಿ ಜೈಸ್ವಾಲ್‌ ಇನಿಂಗ್ಸ್‌ ಆರಂಭಿಸುವುದು ಖಚಿತ. ಶುಭಮನ್‌ ಗಿಲ್‌ ವನ್‌ಡೌನ್‌ನಲ್ಲಿ ಆಡಿದರೆ, ವಿರಾಟ್‌ ಕೊಹ್ಲಿ ಸ್ಥಾನದಲ್ಲಿ ಕರುಣ್‌ ನಾಯರ್‌ ಮತ್ತು ಸಾಯಿ ಸುದರ್ಶನ್‌ ಮಧ್ಯೆ ತೀವ್ರ ಪೈಪೋಟಿ ಇದ್ದರೂ ಅನುಭವದ ಆಧಾರದಲ್ಲಿ ಮತ್ತು ಇಂಗ್ಲೆಂಡ್‌ ಲಯನ್ಸ್‌ ವಿರುದ್ಧದ ಮೊದಲ ಅಭ್ಯಾಸ ಪಂದ್ಯದಲ್ಲಿ ದ್ವಿಶತಕ ಬಾರಿಸಿದ್ದ ಕರುಣ್‌ಗೆ ಅವಕಾಶ ಸಿಗಬಹುದು.



Source link

ADMIN

About Author

Leave a comment

Your email address will not be published. Required fields are marked *

You may also like

ಕರ್ನಾಟಕ

Microsoft: Empowering the Digital World

Microsoft is a global technology company known for shaping the modern digital experience. From its iconic Windows operating system to
ಉತ್ತರ ಕರ್ನಾಟಕ ಕರ್ನಾಟಕ

“ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವದ ದಿನಾಚರಣೆಯಲ್ಲಿ ವಿಭಿನ್ನ ಹಾಗೂ ವಿಶೇಷತೆಯಿಂದ ಆಚರಣೆ”

  • September 16, 2024
ಧಾರವಾಡ ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವದ ದಿನಾಚರಣೆಯಲ್ಲಿ ವಿಭಿನ್ನ ಹಾಗೂ ವಿಶೇಷತೆಯಿಂದ ಆಚರಣೆ ಮಾಡುವ ಮೂಲಕ 95 ಸಾವಿರ ಜನರು ಪ್ರತ್ಯಕ್ಷವಾಗಿ ಭಾಗವಹಿಸಿ ರಾಜ್ಯದಲ್ಲಿಯೇ ನಂಬರ್ 1 ಸ್ಥಾನ ಪಡೆದ
Translate »