Karunadu Studio

ಕರ್ನಾಟಕ

Online Scam: ‘ಗರ್ಭಿಣಿ ಮಾಡಿ 5 ಲಕ್ಷ ರೂ. ಪಡೆಯಿರಿ’- ಎಚ್ಚರ… ಎಚ್ಚರ… ಯುವಕರೇ ನೀವೇ ಇವ್ರ ಟಾರ್ಗೆಟ್‌! – Kannada News | The Sick Social Media Scam Targeting India’s Youth


ನವಾಡಾ: ಬಿಹಾರದ (Bihar) ನವಾಡಾದಲ್ಲಿ ‘ಆಲ್ ಇಂಡಿಯಾ ಪ್ರೆಗ್ನೆಂಟ್ ಜಾಬ್’ (All India Pregnant Job) ಎಂಬ ಕಂಪನಿಯು ಮಹಿಳೆಯರನ್ನು ಗರ್ಭಿಣಿಯಾಗಿಸಿದರೆ (Pregnant) 5 ಲಕ್ಷ ರೂ. ಪುರಸ್ಕಾರ ಎಂಬ ವಿಕೃತ ಜಾಹೀರಾತಿನ ಮೂಲಕ ಜನರನ್ನು ವಂಚಿಸಿರುವ ಆಘಾತಕಾರಿ ಸೈಬರ್ ವಂಚನೆ ಪ್ರಕರಣ ಬೆಳಕಿಗೆ ಬಂದಿದೆ. ಆನ್‌ಲೈನ್ ಶೋಷಣೆ ಮತ್ತು ಸಾರ್ವಜನಿಕ ಮೋಸದ ಬಗ್ಗೆ ಗಂಭೀರ ಕಳವಳ ವ್ಯಕ್ತಪಡಿಸಿದೆ.

ವಂಚನೆಯ ವಿವರ

ಸಾಮಾಜಿಕ ಜಾಲತಾಣಗಳಲ್ಲಿ ಮಹಿಳೆಯರ ಫೋಟೋಗಳೊಂದಿಗೆ ತಪ್ಪುದಾರಿಗೆಳೆಯುವ ಜಾಹೀರಾತುಗಳನ್ನು ಪ್ರಕಟಿಸಿ, ಗರ್ಭಿಣಿಯಾಗಿಸಲು ಒಪ್ಪಿದವರಿಗೆ 5 ಲಕ್ಷ ರೂ. ನೀಡುವುದಾಗಿ ಕಂಪನಿಯು ಆಮಿಷವೊಡ್ಡಿತು. ಈ ಕೊಡುಗೆಯು ನಿರುದ್ಯೋಗಿ ಯುವಕರು ಮತ್ತು ವಿದ್ಯಾರ್ಥಿಗಳನ್ನು ಸೆಳೆಯಿತು. ಆದರೆ, ಕಂಪನಿಯನ್ನು ಸಂಪರ್ಕಿಸಿದವರಿಂದ ನೋಂದಣಿ, ದಾಖಲಾತಿ, ಮತ್ತು ಇತರ ಕಾರಣಗಳಿಗಾಗಿ ಶುಲ್ಕ ವಸೂಲಿ ಮಾಡಲಾಯಿತು. ಗರ್ಭಧಾರಣೆ ಸಾಧ್ಯವಾಗದ ಮಹಿಳೆಯರಿಗೆ ಸಹಾಯ ಮಾಡುವ ಸಾಮಾಜಿಕ ಸೇವಾ ಸಂಸ್ಥೆಯಂತೆ ಕಂಪನಿಯು ತನ್ನನ್ನು ತೋರಿಸಿಕೊಂಡಿತು. ಬಹುತೇಕ ಬಲಿಪಶುಗಳು ಯುವಕರು ಮತ್ತು ನಿರುದ್ಯೋಗಿಗಳಾಗಿದ್ದರು.

ಪೊಲೀಸ್ ಕಾರ್ಯಾಚರಣೆ

ವಂಚನೆಯ ಬಗ್ಗೆ ದೂರು ಬಂದ ನಂತರ, ಎಸ್‌ಪಿ ಅಭಿನವ್ ಧೀಮನ್ ಆದೇಶದಂತೆ ಸೈಬರ್ ಡಿಎಸ್‌ಪಿ ಪ್ರಿಯಾ ಜ್ಯೋತಿ ನೇತೃತ್ವದಲ್ಲಿ ವಿಶೇಷ ತನಿಖಾ ತಂಡ (SIT) ರಚಿಸಲಾಯಿತು. ತಂಡವು ಮುಖ್ಯ ಆರೋಪಿ ರಾಜೇಶ್ ಕುಮಾರ್ (26) ಸೇರಿದಂತೆ ನಾಲ್ವರನ್ನು ಬಂಧಿಸಿತು. ಇಬ್ಬರು 16 ಮತ್ತು 17 ವರ್ಷದ ಅಪ್ರಾಪ್ತರೂ ಸೇರಿದಂತೆ ಒಟ್ಟು ಮೂವರು ಅಪ್ರಾಪ್ತರನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ. ಆರೋಪಿಗಳಿಂದ ಐದು ಮೊಬೈಲ್ ಫೋನ್‌ಗಳು ಮತ್ತು ಒಂದು ಕೀಪ್ಯಾಡ್ ವಶಪಡಿಸಿಕೊಳ್ಳಲಾಗಿದೆ. ಸೈಬರ್ ಪೊಲೀಸ್ ಠಾಣೆಯಲ್ಲಿ ವಿವಿಧ ಸೆಕ್ಷನ್‌ಗಳಡಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.

ಇತರ ವಂಚನೆಗಳು

‘ಆಲ್ ಇಂಡಿಯಾ ಪ್ರೆಗ್ನೆಂಟ್ ಜಾಬ್’ ಜೊತೆಗೆ, ಆರೋಪಿಗಳು ಖ್ಯಾತ ಟೆಲಿಕಾಂ ಕಂಪನಿಗಳಲ್ಲಿ ನಕಲಿ ಉದ್ಯೋಗಗಳು, 5G-ಸಂಬಂಧಿತ ಉದ್ಯೋಗಾವಕಾಶಗಳ ಆಮಿಷವೊಡ್ಡಿ ಜನರನ್ನು ವಂಚಿಸಿದ್ದಾರೆ. 22,500 ರಿಂದ 75,500 ರೂ.ವರೆಗಿನ ಆದಾಯದ ಕೆಲಸ, ವರ್ಕ್‌ ಫ್ರಮ್ ಹೋಮ್ ಆಯ್ಕೆಯ ಜಾಹೀರಾತುಗಳನ್ನು ಪ್ರಕಟಿಸಲಾಗಿತ್ತು. ನೋಂದಣಿ ಶುಲ್ಕ, ಮೊಬೈಲ್ ಫೋನ್ ಮತ್ತು ಲ್ಯಾಪ್‌ಟಾಪ್‌ಗಾಗಿ ಭದ್ರತಾ ಠೇವಣಿಯ ಆಸೆಯಿಂದ ಯುವಕರು, ಮಹಿಳೆಯರು, ವಿದ್ಯಾರ್ಥಿಗಳು ಮತ್ತು ನಿರುದ್ಯೋಗಿಗಳು ಸಾವಿರಾರು ರೂಪಾಯಿಗಳನ್ನು ಕಳೆದುಕೊಂಡಿದ್ದಾರೆ.



Source link

ADMIN

About Author

Leave a comment

Your email address will not be published. Required fields are marked *

You may also like

ಉತ್ತರ ಕರ್ನಾಟಕ ಕರ್ನಾಟಕ

“ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವದ ದಿನಾಚರಣೆಯಲ್ಲಿ ವಿಭಿನ್ನ ಹಾಗೂ ವಿಶೇಷತೆಯಿಂದ ಆಚರಣೆ”

  • September 16, 2024
ಧಾರವಾಡ ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವದ ದಿನಾಚರಣೆಯಲ್ಲಿ ವಿಭಿನ್ನ ಹಾಗೂ ವಿಶೇಷತೆಯಿಂದ ಆಚರಣೆ ಮಾಡುವ ಮೂಲಕ 95 ಸಾವಿರ ಜನರು ಪ್ರತ್ಯಕ್ಷವಾಗಿ ಭಾಗವಹಿಸಿ ರಾಜ್ಯದಲ್ಲಿಯೇ ನಂಬರ್ 1 ಸ್ಥಾನ ಪಡೆದ
ಕರ್ನಾಟಕ

ನಿಮ್ಮ ವೃತ್ತಿಜೀವನವನ್ನು ನಿರ್ಮಿಸಲು ಮತ್ತು ನಿಮ್ಮ ಭವಿಷ್ಯವನ್ನು ರೂಪಿಸುವಲ್ಲಿ ತಂತ್ರಜ್ಞಾನವನ್ನು ನಿಮ್ಮ ಮಾರ್ಗದರ್ಶಕ ಆಗಿ ಸ್ವೀಕರಿಸಿ

  • September 16, 2024
ಧಾರವಾಡ ಪ್ರಸ್ತುತ ಕಾಲದಲ್ಲಿ ತಂತ್ರಜ್ಞಾನದ ಬದಲಾಗುತ್ತಿರುವ ಮುಖ ಮತ್ತು ಇಂಜಿನಿಯರಗಳು, ತಮ್ಮ ಜ್ಞಾನ ಮತ್ತು ಕೌಶಲ್ಯಗಳನ್ನು ನಿರಂತರವಾಗಿ ನವೀಕರಿಸುವ ಅಗತ್ಯವಾಗಿದೆ ಎಂದು , ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾನಿಲಯ
Translate »