Karunadu Studio

ಕರ್ನಾಟಕ

ಡಬ್ಲ್ಯುಟಿಸಿ ಫೈನಲ್‌ ಪಂದ್ಯದ ಪಿಚ್‌ ರಿಪೋರ್ಟ್‌, ಸಂಭಾವ್ಯ ಆಡುವ ಬಳಗ ಹೀಗಿದೆ – Kannada News | AUS vs SA Weather Forecast, Pitch Report, Head to Head – All you need to know


ಲಂಡನ್‌: ಬಹುನಿರೀಕ್ಷಿತ ಮೂರನೇ ಆವೃತ್ತಿಯ ಐಸಿಸಿ ವಿಶ್ವಕಪ್‌ ಟೆಸ್ಟ್‌ ಚಾಂಪಿಯನ್‌ಶಿಪ್‌ಗೆ(WTC Final 2025) ತೆರೆ ಬೀಳುವ ಹೊತ್ತು ಸಮೀಪಿಸಿದೆ. ಲಂಡನ್‌ನ ಐತಿಹಾಸಿಕ ಲಾರ್ಡ್ಸ್‌ ಅಂಗಳದಲ್ಲಿ ಬುಧವಾರದಿಂದ ಹಾಲಿ ಚಾಂಪಿಯನ್‌ ಆಸ್ಟ್ರೇಲಿಯಾ(AUS vs SA) ಮತ್ತು ದಕ್ಷಿಣ ಆಫ್ರಿಕಾ ಪ್ರಶಸ್ತಿಗಾಗಿ ಕಾದಾಟ ನಡೆಸಲಿದೆ. ಚೊಚ್ಚಲ ಬಾರಿಗೆ ಫೈನಲ್‌ ಆಡುತ್ತಿರುವ ಹರಿಣ ಪಡೆ ಈ ಬಾರಿ ಕಾಂಗರೂ ಮೇಲೆ ಗದಾಪ್ರಹಾರ ಮಾಡಲು ಯಶಸ್ವಿಯಾದೀತೇ ಎಂಬುದು ಎಲ್ಲರ ನಿರೀಕ್ಷೆ. ಇನ್ನೊಂದೆಡೆ ಆಸ್ಟ್ರೇಲಿಯಕ್ಕೆ ಇದು ಸತತ ಎರಡನೇ ಫೈನಲ್‌. ಕಳೆದ ಬಾರಿ ಭಾರತವನ್ನು ಮಣಿಸಿ ಚೊಚ್ಚಲ ಟ್ರೋಫಿ ಗೆದ್ದಿತ್ತು. ಈ ಪಂದ್ಯದ ಪಿಚ್‌ ರಿಪೋರ್ಟ್‌, ಹವಾಮಾನ ಮತ್ತು ಸಂಭಾವ್ಯ ಆಡುವ ಬಳಗದ ಮಾಹಿತಿ ಇಲ್ಲಿದೆ.

ಪಿಚ್‌ ರಿಪೋರ್ಟ್‌

ಲಾರ್ಡ್ಸ್‌ ಮೈದಾನದ ಪಿಚ್‌ ಸಾಮಾನ್ಯವಾಗಿ ಸೀಮರ್‌ಗಳು ಮತ್ತು ಬ್ಯಾಟರ್‌ಗಳಿಗೆ ನೆರವು ನೀಡುತ್ತದೆ. ಸೆಪ್ಟೆಂಬರ್ 2024 ರಲ್ಲಿ ಈ ಸ್ಥಳದಲ್ಲಿ ನಡೆದ ಕೊನೆಯ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ಬ್ಯಾಟ್ಸ್‌ಮನ್ ಜೋ ರೂಟ್ ಶತಕ ಬಾರಿಸಿ ಮಿಂಚಿದ್ದರು. ದಕ್ಷಿಣ ಆಫ್ರಿಕಾ ಇಲ್ಲಿ ಆಡಿರುವ ಏಳು ಟೆಸ್ಟ್‌ಗಳಲ್ಲಿ ಒಮ್ಮೆ ಮಾತ್ರ ಸೋತಿದೆ. ಇನ್ನೊಂದೆಡೆ ಕಳೆದ 10 ವರ್ಷಗಳಲ್ಲಿ ಆಸ್ಟ್ರೇಲಿಯಾ ಲಾರ್ಡ್ಸ್‌ನಲ್ಲಿ ಒಮ್ಮೆಯೂ ಸೋತಿಲ್ಲ. ಹೀಗಾಗಿ ಇತ್ತಂಡಗಳ ನಡುವೆ ದೊಡ್ಡ ಮಟ್ಟದ ಹಣಾಹಣಿ ನಿರೀಕ್ಷಿಸಬಹುದು.

ಮಳೆ ಭೀತಿ ಇಲ್ಲ

ಜೂನ್ 11ರ ಪಂದ್ಯದ ವೇಳೆ ತಾಪಮಾನವು 24 ಸೆಲ್ಸಿಯಸ್‌ನಿಂದ 25 ರಷ್ಟು ಗರಿಷ್ಠವಾಗಿರುತ್ತದೆ. ದಿನವಿಡೀ ಮಳೆ ಅಥವಾ ಗುಡುಗು ಸಹಿತ ಮಳೆಯಾಗುವ ನಿರೀಕ್ಷೆಯಿಲ್ಲ. ಹೀಗಾಗಿ ಪಂದ್ಯ ಸಂಪೂರ್ಣವಾಗಿ ನಡೆಯಲಿದೆ. ಪಂದ್ಯಕ್ಕೆ ಒಂದು ದಿನದ ಮೀಸಲು ದಿನ ಕೂಡ ಇದೆ.

ವಿಶ್ವ ಟೆಸ್ಟ್‌ನಲ್ಲಿ ಉಭಯ ತಂಡಗಳ ಸಾಧನೆ

ದಕ್ಷಿಣ ಆಫ್ರಿಕಾ

ಪಂದ್ಯ-12

ಗೆಲುವು-8

ಸೋಲು-3

ಡ್ರಾ-1

ಆಸ್ಟ್ರೇಲಿಯಾ

ಪಂದ್ಯ-19

ಗೆಲುವು-13

ಸೋಲು-4

ಡ್ರಾ-3

ಮುಖಾಮುಖಿ

ಇತ್ತಂಡಗಳು ಇದುವರೆಗೆ ಟೆಸ್ಟ್‌ ಕ್ರಿಕೆಟ್‌ನಲ್ಲಿ ಒಟ್ಟು 101 ಪಂದ್ಯಗಳನ್ನು ಆಡಿದೆ. ಈ ಪೈಕಿ ಆಸ್ಟ್ರೇಲಿಯಾ 54 ಪಂದ್ಯ ಗೆದ್ದಿದ್ದರೆ, ದಕ್ಷಿಣ ಆಫ್ರಿಕಾ 26 ಪಂದ್ಯ ಜಯಿಸಿದೆ. 21 ಪಂದ್ಯ ಡ್ರಾ ಗೊಂಡಿದೆ.

ಸಂಭಾವ್ಯ ಆಡುವ ಬಳಗ

ಆಸ್ಟ್ರೇಲಿಯಾ: ಉಸ್ಮಾನ್ ಖವಾಜಾ, ಮಾರ್ನಸ್ ಲಬುಶೇನ್‌, ಕ್ಯಾಮರೂನ್ ಗ್ರೀನ್, ಸ್ಟೀವನ್‌ ಸ್ಮಿತ್, ಟ್ರಾವಿಸ್ ಹೆಡ್, ಅಲೆಕ್ಸ್ ಕ್ಯಾರಿ (ವಿ.ಕೀ.), ಬ್ಯೂ ವೆಬ್‌ಸ್ಟರ್, ಪ್ಯಾಟ್ ಕಮ್ಮಿನ್ಸ್ (ನಾಯಕ), ಮಿಚೆಲ್ ಸ್ಟಾರ್ಕ್, ಜೋಶ್ ಹ್ಯಾಜಲ್‌ವುಡ್, ನಾಥನ್ ಲಿಯಾನ್.

ದಕ್ಷಿಣ ಆಫ್ರಿಕಾ: ಐಡೆನ್ ಮಾರ್ಕ್ರಾಮ್, ರಿಯಾನ್ ರಿಕೆಲ್ಟನ್, ಟೋನಿ ಡಿ ಜೋರ್ಜಿ, ಟೆಂಬಾ ಬವುಮಾ, ಟ್ರಿಸ್ಟಾನ್ ಸ್ಟಬ್ಸ್, ಕೈಲ್ ವೆರ್ರೆನ್ನೆ (ವಿ.ಕೀ.), ವಿಯಾನ್ ಮುಲ್ಡರ್, ಮಾರ್ಕೊ ಜಾನ್ಸೆನ್, ಕೇಶವ್ ಮಹಾರಾಜ್, ಕಗಿಸೊ ರಬಾಡ, ಲುಂಗಿ ಎನ್‌ಗಿಡಿ.

ಇದನ್ನೂ ಓದಿ ICC WTC 2025 Final: ನಾಳೆಯಿಂದ ವಿಶ್ವ ಟೆಸ್ಟ್‌ ಫೈನಲ್‌ ಫೈಟ್‌; ಚೋಕರ್ಸ್ ಹಣೆಪಟ್ಟಿ ಕಳಚುವುದೇ ದಕ್ಷಿಣ ಆಫ್ರಿಕಾ?



Source link

ADMIN

About Author

Leave a comment

Your email address will not be published. Required fields are marked *

You may also like

ಕರ್ನಾಟಕ

Microsoft: Empowering the Digital World

Microsoft is a global technology company known for shaping the modern digital experience. From its iconic Windows operating system to
ಉತ್ತರ ಕರ್ನಾಟಕ ಕರ್ನಾಟಕ

“ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವದ ದಿನಾಚರಣೆಯಲ್ಲಿ ವಿಭಿನ್ನ ಹಾಗೂ ವಿಶೇಷತೆಯಿಂದ ಆಚರಣೆ”

  • September 16, 2024
ಧಾರವಾಡ ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವದ ದಿನಾಚರಣೆಯಲ್ಲಿ ವಿಭಿನ್ನ ಹಾಗೂ ವಿಶೇಷತೆಯಿಂದ ಆಚರಣೆ ಮಾಡುವ ಮೂಲಕ 95 ಸಾವಿರ ಜನರು ಪ್ರತ್ಯಕ್ಷವಾಗಿ ಭಾಗವಹಿಸಿ ರಾಜ್ಯದಲ್ಲಿಯೇ ನಂಬರ್ 1 ಸ್ಥಾನ ಪಡೆದ
Translate »