Karunadu Studio

ಕರ್ನಾಟಕ

Viral Video: ವರದಿ ಮಾಡ್ತಿದ್ದ ರಿಪೋರ್ಟರ್‌ ಮೇಲೆ ಗುಂಡಿನ ದಾಳಿ; ಶಾಕಿಂಗ್‌ ವಿಡಿಯೊ ಇಲ್ಲಿದೆ – Kannada News | Viral Video: Attack on the journalist with a rubber bullet


ವಾಷಿಂಗ್ಟನ್: ಲಾಸ್ ಏಂಜಲೀಸ್‍ನಲ್ಲಿ ನಡೆದ ಪ್ರತಿಭಟನೆಯ ಬಗ್ಗೆ ವರದಿ ಮಾಡುತ್ತಿದ್ದ ಆಸ್ಟ್ರೇಲಿಯಾದ ನೈನ್ ನ್ಯೂಸ್ ವರದಿಗಾರ್ತಿ ಲಾರೆನ್ ಟೊಮಾಸಿ ಮೇಲೆ ರಬ್ಬರ್ ಗುಂಡನ್ನು ಹಾರಿಸಲಾಗಿದೆ. ಇದರ ಪರಿಣಾಮ ಅವಳ ಕಾಲಿಗೆ ಗುಂಡು ತಗುಲಿದೆಯಂತೆ.ಈ ಸುದ್ದಿ ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್(Viral Video)ಆಗಿದೆ.ವೈರಲ್ ಆದ ವಿಡಿಯೊ ದೃಶ್ಯಗಳಲ್ಲಿ ಪೊಲೀಸ್ ಅಧಿಕಾರಿಯೊಬ್ಬರು ಲಾರೆನ್ ಟೊಮಾಸಿ ಮತ್ತು ಅವಳ ಕ್ಯಾಮೆರಾ ಆಪರೇಟರ್ ಮೇಲೆ ಗುರಿಯಿಟ್ಟು ಗುಂಡು ಹಾರಿಸುವುದು ಕಂಡುಬಂದಿದೆ.ಗುಂಡು ತಗುಲಿದ ಕಾರಣ ಟೊಮಾಸಿ ನೋವಿನಿಂದ ಕಿರುಚಿದ್ದಾಳೆ.ರಬ್ಬರ್ ಗುಂಡು ತಗುಲಿದ್ದರಿಂದ ಟೊಮಾಸಿ ಬೇಗನೆ ಚೇತರಿಸಿಕೊಂಡು ಕ್ಯಾಮೆರಾಮನ್ ಜೊತೆ ಸುರಕ್ಷಿತ ಸ್ಥಳಕ್ಕೆ ತೆರಳಿದ್ದಾಳಂತೆ.

ಲಾರೆನ್ ಟೊಮಾಸಿ ಈ ಘಟನೆಯ ಬಗ್ಗೆ ಯಾವುದೇ ಹೇಳಿಕೆ ನೀಡಿಲ್ಲವಾದರೂ, ಲಾಸ್ ಏಂಜಲೀಸ್‌ನಲ್ಲಿ ನಡೆಯುತ್ತಿರುವ ಪ್ರತಿಭಟನೆಗಳ ಕುರಿತು ಅವಳು ಪೋಸ್ಟ್ ಮಾಡಿದ್ದಾಳೆ. ಈ ಘಟನೆಯು ಪ್ರತಿಭಟನೆಗಳನ್ನು ವರದಿ ಮಾಡುವಾಗ ಪತ್ರಕರ್ತರು ಎದುರಿಸಬಹುದಾದ ಅಪಾಯಗಳ ಸ್ಪಷ್ಟ ಅರಿವು ಮೂಡಿಸುತ್ತದೆ.

ವಿಡಿಯೊ ಇಲ್ಲಿದೆ ನೋಡಿ…



ಲಾಸ್‌ ಏಂಜಲೀಸ್‌ನಲ್ಲಿ ಅಕ್ರಮ ವಲಸಿಗರನ್ನು ಪತ್ತೆಹಚ್ಚುವ ಕಾರ್ಯಾಚರಣೆಯಲ್ಲಿ ತೊಡಗಿದ್ದ ಫೆಡರಲ್‌ ಸಿಬ್ಬಂದಿಗಳನ್ನು ವಿರೋಧಿಸಿ ಪ್ರತಿಭಟನೆ ನಡೆಯುತ್ತಿತ್ತು. ಈ ಹಿಂಸಾತ್ಮಕ ಪ್ರತಿಭಟನೆಯನ್ನು ನಿಯಂತ್ರಿಸಲು ಹಾಗೂ ಶಾಂತಿ ಸ್ಥಾಪನೆಗಾಗಿ ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಲಾಸ್‌ ಏಂಜಲೀಸ್‌ಗೆ ಸೈನ್ಯದ ತುಕಡಿಗಳನ್ನು ಕಳುಹಿಸಿದ್ದರು. ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ನಿರ್ಧಾರವನ್ನು ಸಾವಿರಾರು ಜನರು ಪ್ರತಿಭಟಿಸಿದ್ದರಿಂದ ಇತ್ತೀಚೆಗೆ ಲಾಸ್ ಏಂಜಲೀಸ್‌ನಲ್ಲಿ ಉದ್ವಿಗ್ನ ಪರಿಸ್ಥಿತಿ ಉಂಟಾಗಿತ್ತು. ‌

ಈ ಸುದ್ದಿಯನ್ನೂ ಓದಿ:Viral Video: ಅಡುಗೆ ಮಾಡುತ್ತಲೇ ಬಾಲಿವುಡ್‌ ಹಾಡಿಗೆ ವಿದೇಶಿ ಪತಿಯೊಂದಿಗೆ ಸಖತ್‌ ಸ್ಟೆಪ್ಸ್‌ ಹಾಕಿದ ಪತ್ನಿ; ವಿಡಿಯೊ ಇಲ್ಲಿದೆ ನೋಡಿ…

ಕ್ಯಾಲಿಫೋರ್ನಿಯಾ ಗವರ್ನರ್ ಗ್ಯಾವಿನ್ ನ್ಯೂಸಮ್ ಈ ಕ್ರಮವನ್ನು “ಉದ್ದೇಶಪೂರ್ವಕವಾಗಿ ಪ್ರಚೋದನಕಾರಿ” ಎಂದು ಖಂಡಿಸಿದ್ದಾರೆ. ಎಲ್‍ಎಪಿಡಿ(LAPD)ಇಡೀ ಡೌನ್‌ಟೌನ್ ಲಾಸ್ ಏಂಜಲೀಸ್ ಪ್ರದೇಶವನ್ನು “ಕಾನೂನುಬಾಹಿರ ಸಭೆ” ಎಂದು ಘೋಷಿಸಿದೆ.ಜನರು ತಕ್ಷಣ ಡೌನ್‌ಟೌನ್ ಪ್ರದೇಶವನ್ನು ತೊರೆಯಬೇಕು ಎಂದು ಪೊಲೀಸರು ಸೋಶಿಯಲ್ ಮೀಡಿಯಾ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.





Source link

ADMIN

About Author

Leave a comment

Your email address will not be published. Required fields are marked *

You may also like

ಕರ್ನಾಟಕ

Microsoft: Empowering the Digital World

Microsoft is a global technology company known for shaping the modern digital experience. From its iconic Windows operating system to
ಉತ್ತರ ಕರ್ನಾಟಕ ಕರ್ನಾಟಕ

“ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವದ ದಿನಾಚರಣೆಯಲ್ಲಿ ವಿಭಿನ್ನ ಹಾಗೂ ವಿಶೇಷತೆಯಿಂದ ಆಚರಣೆ”

  • September 16, 2024
ಧಾರವಾಡ ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವದ ದಿನಾಚರಣೆಯಲ್ಲಿ ವಿಭಿನ್ನ ಹಾಗೂ ವಿಶೇಷತೆಯಿಂದ ಆಚರಣೆ ಮಾಡುವ ಮೂಲಕ 95 ಸಾವಿರ ಜನರು ಪ್ರತ್ಯಕ್ಷವಾಗಿ ಭಾಗವಹಿಸಿ ರಾಜ್ಯದಲ್ಲಿಯೇ ನಂಬರ್ 1 ಸ್ಥಾನ ಪಡೆದ
Translate »