Karunadu Studio

ಕರ್ನಾಟಕ

Indian Premier League: ಐಪಿಎಲ್ ಕ್ರೀಡೆ ಮಾತ್ರವಲ್ಲ ಮನೋರಂಜನೆಯ ಭಾಗ; ಪ್ರಾದೇಶಿಕ ಆರ್ಥಿಕ ವೃದ್ಧಿಗೆ ಬಲ – Kannada News | Not just IPL sports, it also strengthens regional economic growth


| ಕೆ. ರಾಧಾಕೃಷ್ಣ ಹೊಳ್ಳ

ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಇಂದು ಕೇವಲ ಕ್ರಿಕೆಟ್ ಟೂರ್ನಮೆಂಟ್ ಮಾತ್ರವಲ್ಲ. ಇದು ಭಾರತದ ಆರ್ಥಿಕತೆ ಬೆಳವಣಿಗೆಗೆ ಬಲ ನೀಡುವ ಪ್ರಮುಖ ಸಾಧನವಾಗಿದೆ. 2023–2027 ಋತುವಿನ ಪ್ರಸಾರ ಹಕ್ಕುಗಳ ಒಪ್ಪಂದ ₹48,390 ಕೋಟಿಯಷ್ಟಾಗಿದ್ದು, ಪ್ರತಿ ಪಂದ್ಯಕ್ಕೂ ಸರಾಸರಿ ₹140 ಕೋಟಿ ಆದಾಯವನ್ನು ನೀಡುತ್ತಿದೆ. ಈ ಅಂಶವೊಂದೇ ಇದನ್ನು ಜಗತ್ತಿನ ಅತ್ಯಂತ ಲಾಭದಾಯಕ ಕ್ರೀಡಾ ಲೀಗ್‌ಗಳ ಪೈಕಿ ಒಂದಾಗಿ ಸ್ಥಾಪಿಸಿದೆ.

ಇನ್ನೂ ಹಲವು ಸಂಯೋಜನಾ ಸಂಸ್ಥೆಗಳ ಆದಾಯ, ನೇರ ಹಾಗೂ ಪರೋಕ್ಷ ತೆರಿಗೆಗಳಿಂದ ಸರ್ಕಾರಕ್ಕೆ ಬರುವ ಆದಾಯ ಈ ಲೇಖನದಲ್ಲಿ ಸೇರಿಸಿಲ್ಲಾ. ಆದರೆ, ಐಪಿಎಲ್‌ನ ಯಶಸ್ಸು ಇದರಲ್ಲಿಯೇ ನಿಲ್ಲುವುದಿಲ್ಲ. ಇದು ಪ್ರಾದೇಶಿಕ ಆರ್ಥಿಕತೆಯ ಅಂಗಾಂಗಗಳಿಗೆ ಜೀವತುಂಬುತ್ತದೆ, ಉದ್ಯೋಗ ಸೃಷ್ಟಿಸುತ್ತದೆ ಮತ್ತು ಹಲವಾರು ಕ್ಷೇತ್ರಗಳಲ್ಲಿ ಚೈತನ್ಯ ಉಂಟುಮಾಡುತ್ತದೆ.

ವಿವಿಧ ಕ್ಷೇತ್ರಗಳ ಬೆಳವಣಿಗೆಗೆ ಪೂರಕ

  1. ಹೋಟೆಲ್ ಮತ್ತು ಆಹಾರ ಸೇವೆ ಉದ್ಯಮ: ಐಪಿಎಲ್ ತಂಡಗಳು ನಗರದಿಂದ ನಗರಕ್ಕೆ ಪ್ರಯಾಣಿಸುವಾಗ, ಸಾವಿರಾರು ಅಭಿಮಾನಿಗಳು ಕೂಡ ಪ್ರಯಾಣಿಸುತ್ತಾರೆ. ಈ ವೇಳೆಯಲ್ಲಿ ಹೋಟೆಲ್‌ಗಳು, ರೆಸ್ಟೋರೆಂಟ್‌ಗಳು, ಕೆಫೆ, ಸೇವಾ ಸಂಸ್ಥೆಗಳಿಗೆ ಉತ್ತಮ ಆದಾಯ ಬರುತ್ತದೆ.
  2. ಸಾರಿಗೆ ಮತ್ತು ಮೌಲ್ಯವರ್ಧಿತ ಸೇವೆಗಳು, ಚಾರ್ಟೆಡ್ ವಿಮಾನಗಳು, ದೇಶಿ ಹಾಗೂ ಅಂತಾರಾಷ್ಟ್ರೀಯ ವಿಮಾನ ದರಗಳು, ಟ್ಯಾಕ್ಸಿ, ರೈಲು, ಬಸ್ ಸೇವೆಗಳಿಗೆ ಬುಕ್ಕಿಂಗ್‌ಗಳ ಸಂಖ್ಯೆ ಏರಿಕೆ ಆಗುತ್ತದೆ. ಉದಾಹರಣೆಗೆ ಪಂದ್ಯದ ದಿನಗಳಲ್ಲಿ ಮೇಟ್ರೊ ಹಾಗೂ ನಗರ ಸಾರಿಗೆಗಳ ಪ್ರಯಾಣಿಕರ ಸಂಖ್ಯೆಗಳು ಏರಿಕೆ ಆಗುವುದು. ಅಗ್ರಿಗೇಟರ್ ಟ್ಯಾಕ್ಸಿಗಳ ಬಳಕೆ ಹೆಚ್ಚಳ ಆಗುವುದು, ಮಾಲ್‌ಗಳಲ್ಲಿ ವ್ಯಾಪಾರಕ್ಕೆ ಉತ್ತೇಜನ ಸಿಗಲಿದೆ.
  3. ಚಿಲ್ಲರೆ ವ್ಯಾಪಾರ ಮತ್ತು ಐಪಿಎಲ್ ಮರ್ಚಂಡೈಸ್- ಜೆರ್ಸಿ, ಟೋಪಿ, ಬಾಟೆಲ್ ಹಾಗೂ ಕ್ರಿಕೆಟ್ ಸಾಮಗ್ರಿಗಳ ಮಾರಾಟವು ಆನ್‌ಲೈನ್ ಮತ್ತು ಆಫ್‌ಲೈನ್‌ನಲ್ಲಿ ಭಾರೀ ಪ್ರಮಾಣದಲ್ಲಿ ನಡೆಯುತ್ತದೆ.
  4. ಮಾಧ್ಯಮ, ಜಾಹೀರಾತು ಮತ್ತು ಸೃಜನಾತ್ಮಕ ಉದ್ಯಮಗಳು ಐಪಿಎಲ್ ಕಾಲದಲ್ಲಿ ಜಾಹೀರಾತು ಸಂಸ್ಥೆಗಳು, ವಿಡಿಯೋ ಎಡಿಟರ್‌ಗಳು, ಕ್ಯಾಮೆರಾಮೆನ್‌ಗಳಿಗೆ ಹೆಚ್ಚಿನ ಕೆಲಸ ಲಭಿಸುತ್ತದೆ. ಟಿಆರ್‌ಪಿ ಗರಿಷ್ಠ ಮಟ್ಟದಲ್ಲಿ ಏರಿಕೆಯಾಗುತ್ತದೆ.
  5. ಪ್ರವಾಸೋದ್ಯಮ ಮತ್ತು ನಗರ ಬ್ರ್ಯಾಂಡಿಂಗ್: ಐಪಿಎಲ್ ಪಂದ್ಯ ಆಯೋಜಿಸುವ ನಗರಗಳು ತಾತ್ಕಾಲಿಕ ಉತ್ಸವ ಕೇಂದ್ರಗಳಂತೆ ಪರಿವರ್ತನೆಯಾಗುತ್ತವೆ. ಸ್ಥಳೀಯ ಆಕರ್ಷಣೆಗಳು ಹೆಚ್ಚು ಗಮನ ಸೆಳೆಯುತ್ತವೆ, ಮತ್ತು ಪ್ರವಾಸೋದ್ಯಮಕ್ಕೆ ಉತ್ತೇಜನ ದೊರಕುತ್ತದೆ.
  6. ತೆರಿಗೆ ಆದಾಯದ ಮಹತ್ವಪೂರ್ಣ ಮೂಲ: ಐಪಿಎಲ್ ಪಂದ್ಯಗಳ ಆಯೋಜನೆಯಿಂದ ದೇಶ ಮತ್ತು ರಾಜ್ಯಕ್ಕೆ ನೆರ ಹಾಗೂ ಪರೋಕ್ಷ ತೆರಿಗೆ ರೂಪದಲ್ಲಿ ಭಾರೀ ಆದಾಯ ಲಭಿಸುತ್ತದೆ. ಆಟಗಾರರು, ಕೋಚ್‌ಗಳು, ಕಂಪನಿಗಳು ಮತ್ತು ಆಡಳಿತ ಸಂಸ್ಥೆಗಳ ಆದಾಯದ ಮೇಲೆ ಆದಾಯ ತೆರಿಗೆ (Income Tax) ವಿಧಿಸಲಾಗುತ್ತದೆ. ಜಾಹೀರಾತು ಸಂಸ್ಥೆಗಳು, ಸ್ಟಾರ್ಟಪ್‌ಗಳು ಮತ್ತು ಮಾಧ್ಯಮ ಸಂಸ್ಥೆಗಳು ಸಹ ಐಪಿಎಲ್ ಸಮಯದಲ್ಲಿ ಭಾರೀ ಲಾಭ ಗಳಿಸುತ್ತವೆ, ಇದು ನೇರ ತೆರಿಗೆಗಳಿಗೆ ಅವಕಾಶ ಕಲ್ಪಿಸುತ್ತದೆ.
  7. ಪರೋಕ್ಷ ತೆರಿಗೆಗಳು (Indirect Taxes): ಟಿಕೆಟ್ ಮಾರಾಟ, ಹೋಟೆಲ್ ಸೇವೆಗಳು, ಆಹಾರ ಪದಾರ್ಥಗಳು, ಮದ್ಯಮಾರಾಟ, ಟ್ಯಾಕ್ಸಿ ಸೇವೆಗಳು ಮತ್ತಿತರ ಚಟುವಟಿಕೆಗಳಿಂದ ಸರ್ಕಾರಕ್ಕೆ ಪರೋಕ್ಷವಾಗಿ ಭಾರೀ ಆದಾಯವು ಸೇರ್ಪಡೆಯಾಗುತ್ತದೆ.
  8. ರಾಜ್ಯದ ಆರ್ಥಿಕತೆಗೆ ವೇಗ: ಮೈದಾನ ಬಾಡಿಗೆ, ಸ್ಥಳೀಯ ಪರವಾನಗಿ ಶುಲ್ಕ, ನಿರ್ವಹಣಾ ತೆರಿಗೆಗಳು ಇತ್ಯಾದಿಗಳಿಂದ ರಾಜ್ಯದ ಆರ್ಥಿಕತೆಗೆ ಸಹ ಸ್ಪಷ್ಟ ಲಾಭವಿದೆ. ಪ್ರಪಂಚದ ಶ್ರಿಮಂತ ಮನೋರಂಜನೆಯ ಕ್ರೀಡೆ IPL ಆಯೋಜಿಸುವುದರಿಂದ ನಗರಗಳಿಗೆ CSR (Corporate Social Responsibility) ಯೋಜನೆಗಳ ಅಡಿಯಲ್ಲಿ ಮೂಲಸೌಕರ್ಯ ಅಭಿವೃದ್ಧಿಗೆ ಸಹ ಅನೇಕ ಅವಕಾಶಗಳು ದೊರಕುತ್ತವೆ.

ಚಿನ್ನಸ್ವಾಮಿ ಘಟನೆ ಕುರಿತು ನ್ಯಾಯಯುತ ದೃಷ್ಟಿಕೋನ ಅಗತ್ಯ

ಇತ್ತೀಚೆಗೆ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ವಿಜಯೋತ್ಸವದ ಸಂದರ್ಭದಲ್ಲಿ ಸಂಭವಿಸಿದ ದುರ್ಘಟನೆ ಅತ್ಯಂತ ದುಃಖದ ಸಂಗತಿಯಾಗಿದೆ. ಆದರೆ ಈ ಘಟನೆಗೆ ಸಂಬಂಧಿಸಿ ಐಪಿಎಲ್ ಆಡಳಿತ, ಆಟಗಾರರು ಅಥವಾ ಪ್ರಾಂಚೈಸಿಯನ್ನು ಹೊಣೆ ಮಾಡುವುದು ನ್ಯಾಯಯುತವಲ್ಲ.

ಅಭಿಮಾನಿಗಳ ಭಕ್ತಿ, ಕ್ರೀಡಾ ಅಮಲಿನಲ್ಲಿ ಇರುವ ಯುವಜನರ ಉದ್ವೇಗದಲ್ಲಿ ಕಾಲ್ತುಳಿತ ಸಂಭವಿಸಿದೆ. ಆದರೆ, ಸಾರ್ವಜನಿಕ ಭದ್ರತೆ ಹಾಗೂ ನಿಯಂತ್ರಣ ವ್ಯವಸ್ಥೆ ಸ್ಥಳೀಯ ಆಡಳಿತದ ಹೊಣೆಗಾರಿಕೆಯೂ ಆಗಿದೆ. ಅಭಿಮಾನಿಗಳ ಪ್ರೀತಿ ಮತ್ತು ಭಾವನೆಗಳನ್ನು ತಪ್ಪಾಗಿ ಅರ್ಥೈಸದೆ, ಮುಂದಿನ ಸಂದರ್ಭದಲ್ಲಿ ಭದ್ರತಾ ವ್ಯವಸ್ಥೆಗಳನ್ನು ಹೆಚ್ಚು ಪರಿಣಾಮಕಾರಿಯಾಗಿ ರೂಪಿಸುವತ್ತ ಗಮನಹರಿಸಬೇಕಾಗಿದೆ.

ಆರ್ಥಿಕ ಪ್ರಗತಿ ಮತ್ತು ಕ್ರೀಡಾ ಸಂಸ್ಕೃತಿಯ ಸಂಯೋಜನೆ, ಐಪಿಎಲ್ ಕೇವಲ ಕ್ರೀಡಾ ಪಂದ್ಯವಲ್ಲ; ಇದು ಭಾರತದ ಆರ್ಥಿಕತೆ, ಉದ್ಯಮ, ಪ್ರವಾಸೋದ್ಯಮ ಮತ್ತು ಜನಸಾಮಾನ್ಯರ ಬದುಕಿಗೆ ಸ್ಪಂದಿಸುವ ದೊಡ್ಡ ವೇದಿಕೆ. ಪ್ರತಿವರ್ಷವೂ ಇದು ಲಕ್ಷಾಂತರ ಮಂದಿಗೆ ಉದ್ಯೋಗ, ಸಂಕುಚಿತ ವ್ಯಾಪಾರಿಗಳಿಗೆ ಆದಾಯ, ಮತ್ತು ಭಾರತದ ಸೃಜನಶೀಲತೆಗೆ ವೇದಿಕೆ ನೀಡುತ್ತಿದೆ. ಇದು ನಮ್ಮ ದೇಶದ ಯುವ ಜನತೆ ಹೆಚ್ಚಾಗಿ ಅಪ್ಪಿಕೊಂಡಿರುವ ಮನೋರಂಜನೆಯ ಹಬ್ಬವಾಗಿದೆ. ಟೀಮ್ ಪರವಾಗಿ, ಉದ್ಯಮ ಪರವಾಗಿ, ರಾಷ್ಟ್ರದ ಆರ್ಥಿಕತೆ ಪರವಾಗಿ ಅನುಕೂಲವಾಗಿದೆ.

ಈ ಸುದ್ದಿಯನ್ನೂ ಓದಿ |Bengaluru Stampede: ಕಾಲ್ತುಳಿತ ಪ್ರಕರಣ ವಿಚಾರಣೆ ಜೂನ್‌ 12ಕ್ಕೆ ಮುಂದೂಡಿಕೆ, ವರದಿ ನೀಡಲು ಸರಕಾರಕ್ಕೆ ಹೈಕೋರ್ಟ್ ನಿರ್ದೇಶನ

ಅಂತಿಮವಾಗಿ, ಕ್ರೀಡೆ ಮತ್ತು ಮನೋರಂಜನೆಗೆ ಎಷ್ಟು ಬೇಕೊ ಅಷ್ಟೇ ಪ್ರಾಮುಖ್ಯತೆ ನೀಡಬೇಕು. ಮೋಜಿನ ಹೆಸರಲ್ಲಿ ಪ್ರಾಣಕ್ಕೆ ಅಪಾಯ ತಂದುಕೊಳ್ಳುವುದು ಬೇಡ. ಮನೋರಂಜನೆ ಕ್ರೀಡೆಗಳ ಬೆಳವಣಿಗೆಗೆ ಅವಕಾಶ ನೀಡಿ, ಜವಾಬ್ದಾರಿಯೊಂದಿಗೆ ಸಂಭ್ರಮಾಚರಣೆ ಮಾಡುವುದು ಪ್ರತಿಯೊಬ್ಬ ಅಭಿಮಾನಿಯ ಕರ್ತವ್ಯ.

( ಲೇಖನ: ಅಧ್ಯಕ್ಷರು, ಕರ್ನಾಟಕ ರಾಜ್ಯ ಟ್ರಾವೆಲ್ಸ್‌ ಮಾಲೀಕರ ಸಂಘ)



Source link

ADMIN

About Author

Leave a comment

Your email address will not be published. Required fields are marked *

You may also like

ಉತ್ತರ ಕರ್ನಾಟಕ ಕರ್ನಾಟಕ

“ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವದ ದಿನಾಚರಣೆಯಲ್ಲಿ ವಿಭಿನ್ನ ಹಾಗೂ ವಿಶೇಷತೆಯಿಂದ ಆಚರಣೆ”

  • September 16, 2024
ಧಾರವಾಡ ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವದ ದಿನಾಚರಣೆಯಲ್ಲಿ ವಿಭಿನ್ನ ಹಾಗೂ ವಿಶೇಷತೆಯಿಂದ ಆಚರಣೆ ಮಾಡುವ ಮೂಲಕ 95 ಸಾವಿರ ಜನರು ಪ್ರತ್ಯಕ್ಷವಾಗಿ ಭಾಗವಹಿಸಿ ರಾಜ್ಯದಲ್ಲಿಯೇ ನಂಬರ್ 1 ಸ್ಥಾನ ಪಡೆದ
ಕರ್ನಾಟಕ

ನಿಮ್ಮ ವೃತ್ತಿಜೀವನವನ್ನು ನಿರ್ಮಿಸಲು ಮತ್ತು ನಿಮ್ಮ ಭವಿಷ್ಯವನ್ನು ರೂಪಿಸುವಲ್ಲಿ ತಂತ್ರಜ್ಞಾನವನ್ನು ನಿಮ್ಮ ಮಾರ್ಗದರ್ಶಕ ಆಗಿ ಸ್ವೀಕರಿಸಿ

  • September 16, 2024
ಧಾರವಾಡ ಪ್ರಸ್ತುತ ಕಾಲದಲ್ಲಿ ತಂತ್ರಜ್ಞಾನದ ಬದಲಾಗುತ್ತಿರುವ ಮುಖ ಮತ್ತು ಇಂಜಿನಿಯರಗಳು, ತಮ್ಮ ಜ್ಞಾನ ಮತ್ತು ಕೌಶಲ್ಯಗಳನ್ನು ನಿರಂತರವಾಗಿ ನವೀಕರಿಸುವ ಅಗತ್ಯವಾಗಿದೆ ಎಂದು , ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾನಿಲಯ
Translate »