Karunadu Studio

ಕರ್ನಾಟಕ

ಗಿಲ್‌ಗೆ ಸ್ಥಾನ, ಭವಿಷ್ಯದ ಫ್ಯಾಬ್‌ 5 ಆಟಗಾರರನ್ನು ಆರಿಸಿದ ಕೇನ್‌ ವಿಲಿಯಮ್ಸನ್‌! – Kannada News | Not Sai Sudharsan! Kane Williamson Picks Two Indians; Predicts Five Players As ‘Fab Four’ Successors


ನವದೆಹಲಿ: ಪ್ರಸ್ತುತ ವಿಶ್ವದ ಫ್ಯಾಬ್‌ (Fab 4) ಆಟಗಾರರ ಪಟ್ಟಿಯಲ್ಲಿ ವಿರಾಟ್‌ ಕೊಹ್ಲಿ (Virat Kohli), ಸ್ಟೀವನ್‌ ಸ್ಮಿತ್‌, ಜೋ ರೂಟ್‌ ಹಾಗೂ ಕೇನ್‌ ವಿಲಿಯಮ್ಸನ್‌ (Kane Williamson) ಇದ್ದಾರೆ. ಆದರೆ, ಈ ನಾಲ್ವರು ಆಟಗಾರರು ತಮ್ಮ-ತಮ್ಮ ವೃತ್ತಿ ಜೀವನದ ಕೊನೆಯ ಹಂತದಲ್ಲಿದ್ದಾರೆ. ಇವರ ತಲೆ ಮಾರು ಮುಗಿದ ಬಳಿಕ ಭವಿಷ್ಯದ ಫ್ಯಾಬ್‌ ಆಟಗಾರರು ಯಾರೆಂಬ ಬಗ್ಗೆ ಸಾಕಷ್ಟು ಚರ್ಚೆಗಳು ನಡೆಯುತ್ತಿವೆ. ಅದರಂತೆ ನ್ಯೂಜಿಲೆಂಡ್‌ ತಂಡದ ಮಾಜಿ ನಾಯಕ ಕೇನ್‌ ವಿಲಿಯಮ್ಸನ್‌, ಫ್ಯಾನ್‌ ಆಟಗಾರರ ಬಗ್ಗೆ ದೊಡ್ಡ ಭವಿಷ್ಯವನ್ನು ನುಡಿದಿದ್ದಾರೆ. ತಮ್ಮ ನೆಚ್ಚಿನ ಫ್ಯಾಬ್‌ ಆಟಗಾರರ ಪಟ್ಟಿಯಲ್ಲಿ ಐವರಿಗೆ ಸ್ಥಾನವನ್ನು ನೀಡಿದ್ದಾರೆ.

ನ್ಯೂಜಿಲೆಂಡ್‌ ಕ್ರಿಕೆಟ್‌ನ ಸೆಂಟ್ರಲ್‌ ಗುತ್ತಿಗೆಯಲ್ಲಿ ಕೇನ್‌ ವಿಲಿಯಮ್ಸನ್‌ ಇಲ್ಲ. ಏಕದಿನ ಕ್ರಿಕೆಟ್‌ಗೆ ಸ್ಟೀವನ್‌ ಸ್ಮಿತ್‌ ವಿದಾಯ ಹೇಳಿದ್ದಾರೆ. ವಿರಾಟ್‌ ಕೊಹ್ಲಿ ಟೆಸ್ಟ್‌ ಹಾಗೂ ಟಿ20ಐ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದಾರೆ. ಪ್ರಸ್ತುತ ಫ್ಯಾಬ್‌ 4 ಆಟಗಾರರು ಮುಳುಗುವ ಹಂತದಲ್ಲಿದ್ದಾರೆ. ಇದೀಗ ಯುವ ಆಟಗಾರರಲ್ಲಿ ಯಾವು ಭವಿಷ್ಯದ ಫ್ಯಾನ್‌ ಆಟಗಾರರಾಗುತ್ತಾರೆಂದು ಕಾದು ನೋಡಬೇಕಾಗಿದೆ.

IND vs ENG: ʻಕೇವಲ 5 ವಿಕೆಟ್‌ ಅಗತ್ಯʼ-ವಿಶೇಷ ದಾಖಲೆ ಬರೆಯುವ ಸನಿಹದಲ್ಲಿ ಜಸ್‌ಪ್ರೀತ್‌ ಬುಮ್ರಾ!

ಇಎಸ್‌ಪಿಎನ್‌ ಕ್ರಿಕ್‌ಇನ್ಪೋ ಜೊತೆ ಮಾತನಾಡಿದ ಕೇನ್‌ ವಿಲಿಯಮ್ಸನ್‌, “ಮೂರೂ ಸ್ವರೂಪದ ಆಟಗಾರರು ನನ್ನ ಮನಸಿಗೆ ಬರುತ್ತಾರೆ. ಯಶಸ್ವಿ ಜೈಸ್ವಾಲ್‌, ಶುಭಮನ್‌ ಗಿಲ್‌, ರಚಿನ್‌ ರವೀಂದ್ರ, ಹ್ಯಾರಿ ಬ್ರೂಕ್‌ ಹಾಗೂ ಕ್ಯಾಮೆರಾನ್‌ ಗ್ರೀನ್‌ ಕೂಡ ಸೇರುತ್ತಾರೆ. ಎಲ್ಲಾ ಸ್ವರೂಪದ ಕ್ರಿಕೆಟ್‌ನಲ್ಲಿಯೂ ಇವರೆಲ್ಲರೂ ಅಸಾಧಾರಣ ಪ್ರತಿಭೆಗಳಾಗಿದ್ದಾರೆ. ಇವರು ಇನ್ನೂ ಯುವ ಆಟಗಾರರಾಗಿದ್ದು, ಮುಂದೆ ದೊಡ್ಡ ಭವಿಷ್ಯವಿದೆ,” ಎಂದು ಹೇಳಿದ್ದಾರೆ.

ಈ ನಾಲ್ವರೂ ಈಗಾಗಲೇ ಎಲ್ಲಾ ಮಾದರಿಯ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಬಲವಾದ ಛಾಪು ಮೂಡಿಸಿದ್ದರೂ, ಅವರು ನಿಧಾನವಾಗಿ ನಾಯಕತ್ವದ ಯುಗವನ್ನು ಪ್ರವೇಶಿಸುತ್ತಿದ್ದಾರೆ. ಕಳೆದ ಕೆಲವು ತಿಂಗಳುಗಳಲ್ಲಿ ಹ್ಯಾರಿ ಬ್ರೂಕ್ ಅವರನ್ನು ಇಂಗ್ಲೆಂಡ್‌ನ ಹೊಸ ವೈಟ್-ಬಾಲ್ ತಂಡದ ನಾಯಕನನ್ನಾಗಿ ನೇಮಿಸಲಾಯಿತು ಮತ್ತು ಗಿಲ್ ಭಾರತ ಟೆಸ್ಟ್ ತಂಡದ ಹೊಸ ನಾಯಕನಾಗಿ ಅಧಿಕಾರ ವಹಿಸಿಕೊಂಡಿದ್ದಾರೆ.

IND vs ENG Test Series: ಮೊದಲ ಟೆಸ್ಟ್‌ಗೆ ಭಾರತ ಆಡುವ ಬಳಗ ಹೇಗಿದ್ದೀತು?

ಕೇನ್‌ ವಿಲಿಯಮ್ಸನ್ 2025 ರ ಚಾಂಪಿಯನ್ಸ್ ಟ್ರೋಫಿಯ ನಂತರ ಅವರು ಯಾವುದೇ ಅಂತಾರಾಷ್ಟ್ರೀಯ ಕ್ರಿಕೆಟ್ ಆಡಿಲ್ಲ. ಫೈನಲ್‌ ಪಂದ್ಯದಲ್ಲಿ ನ್ಯೂಜಿಲೆಂಡ್, ಭಾರತದ ವಿರುದ್ಧ ಸೋಲು ಅನುಭವಿಸಿತ್ತು. ಆ ಮೂಲಕ ರನ್ನರ್‌ ಅಪ್‌ಗೆ ತೃಪ್ತಿಪಟ್ಟುಕೊಂಡಿತ್ತು. ಮುಂದಿನ ತಿಂಗಳು ನ್ಯೂಜಿಲೆಂಡ್ ತಂಡ, ದಕ್ಷಿಣ ಆಫ್ರಿಕಾ ಒಳಗೊಂಡ ಟಿ20ಐ ತ್ರಿಕೋನ ಸರಣಿಗಾಗಿ ಜಿಂಬಾಬ್ವೆ ಪ್ರವಾಸ ಕೈಗೊಳ್ಳಲಿದೆ. ವಿಲಿಯಮ್ಸನ್ ಇಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆಯಿದೆ. ನಂತರ ಬ್ಲ್ಯಾಕ್ ಕ್ಯಾಪ್ಸ್, ಆತಿಥೇಯ ರಾಷ್ಟ್ರದ ವಿರುದ್ಧ ಎರಡು ಟೆಸ್ಟ್ ಪಂದ್ಯಗಳನ್ನು ಆಡಲಿದೆ.



Source link

ADMIN

About Author

Leave a comment

Your email address will not be published. Required fields are marked *

You may also like

ಉತ್ತರ ಕರ್ನಾಟಕ ಕರ್ನಾಟಕ

“ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವದ ದಿನಾಚರಣೆಯಲ್ಲಿ ವಿಭಿನ್ನ ಹಾಗೂ ವಿಶೇಷತೆಯಿಂದ ಆಚರಣೆ”

  • September 16, 2024
ಧಾರವಾಡ ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವದ ದಿನಾಚರಣೆಯಲ್ಲಿ ವಿಭಿನ್ನ ಹಾಗೂ ವಿಶೇಷತೆಯಿಂದ ಆಚರಣೆ ಮಾಡುವ ಮೂಲಕ 95 ಸಾವಿರ ಜನರು ಪ್ರತ್ಯಕ್ಷವಾಗಿ ಭಾಗವಹಿಸಿ ರಾಜ್ಯದಲ್ಲಿಯೇ ನಂಬರ್ 1 ಸ್ಥಾನ ಪಡೆದ
ಕರ್ನಾಟಕ

ನಿಮ್ಮ ವೃತ್ತಿಜೀವನವನ್ನು ನಿರ್ಮಿಸಲು ಮತ್ತು ನಿಮ್ಮ ಭವಿಷ್ಯವನ್ನು ರೂಪಿಸುವಲ್ಲಿ ತಂತ್ರಜ್ಞಾನವನ್ನು ನಿಮ್ಮ ಮಾರ್ಗದರ್ಶಕ ಆಗಿ ಸ್ವೀಕರಿಸಿ

  • September 16, 2024
ಧಾರವಾಡ ಪ್ರಸ್ತುತ ಕಾಲದಲ್ಲಿ ತಂತ್ರಜ್ಞಾನದ ಬದಲಾಗುತ್ತಿರುವ ಮುಖ ಮತ್ತು ಇಂಜಿನಿಯರಗಳು, ತಮ್ಮ ಜ್ಞಾನ ಮತ್ತು ಕೌಶಲ್ಯಗಳನ್ನು ನಿರಂತರವಾಗಿ ನವೀಕರಿಸುವ ಅಗತ್ಯವಾಗಿದೆ ಎಂದು , ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾನಿಲಯ
Translate »