Karunadu Studio

ಕರ್ನಾಟಕ

Dr M C Sudhakar: ಮುಖ್ಯಮಂತ್ರಿಗಳ ದೆಹಲಿ ಪ್ರವಾಸ ಕುತೂಹಲ ಸಲ್ಲದು: ಡಾ.ಎಂ.ಸಿ.ಸುಧಾಕರ್ – Kannada News | Chief Minister’s Delhi visit not interesting: Dr. M.C. Sudhakar


ಚಿಕ್ಕಬಳ್ಳಾಪುರ: ಮುಖ್ಯಮಂತ್ರಿಗಳು ಉಪಮುಖ್ಯಮಂತ್ರಿಗಳು ದೆಹಲಿಗೆ ತೆರಳಿರುವ ವಿಚಾರದಲ್ಲಿ ಪ್ರತಿಪಕ್ಷಗಳು ಸೇರಿದಂತೆ ಮಾಧ್ಯಮಗಳಲ್ಲಿ ಸಾಕಷ್ಟು ಉಹಾಪೋಹಗಳು ನಡೆಯುತ್ತಿರುವುದು ಕಾಣುತ್ತಿದ್ದೇವೆ.ಇದೊಂದು ಸಹಜವಾದ ಬೇಟಿಯಾಗಿದ್ದು ಈ ಬಗ್ಗೆ ಅನಗತ್ಯ ಕುತೂಹಲ ಸಲ್ಲದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಸಿ.ಸುಧಾಕರ್ ತಿಳಿಸಿದರು.

ಗೌರಿಬಿದನೂರು ನಗರದಲ್ಲಿ ಮಾಧ್ಯಮದೊಂದಿಗೆ ಅವರು ಮಾತನಾಡಿದರು.

ಪಕ್ಷದ ವರಿಷ್ಟರು ಕರೆಯುವುದು ಕರೆದಿದ್ದಾರೆ. ಅದಕ್ಕಾಗಿಯೇ ಅವರು ಹೋಗಿದ್ದಾರೆ. ನಾನೂ ಕೂಡ ಅವರೊಟ್ಟಿಗೆ ಹೋಗಬೇಕಿತ್ತು. ಇಲ್ಲಿ ಕಾರ್ಯಕ್ರಮ ಇರುವ ಕಾರಣದಿಂದ ನಾನು ಹೋಗಲಾಗಿಲ್ಲ. ದೆಹಲಿಯಿಂದ ಬಂದ ನಂತರವೇ ಯಾವ ವಿಚಾರಕ್ಕೆ ವರಿಷ್ಟರು ಕರೆದಿದ್ದರು, ಅಲ್ಲಿ ಏನು ಚರ್ಚೆ ಯಾಯಿತು ಎಂಬುದು ತಿಳಿಯಲಿದೆ ಎಂದರು.

ಸAಪುಟ ಪುನಾರಚನೆ ವಿಚಾರ ಲೋಕಸಭೆ ಚುನಾವಣೆ ಫಲಿತಾಂಶ ಹೊರಬಿದ್ದ ಕಾಲದಿಂದಲೂ ಕೇಳಿಬರುತ್ತಿದೆ.ಆದರೆ ಈ ಒಂದು ವರ್ಷದಲ್ಲಿ ಆ ರೀತಿ ಏನೂ ಆಗಿಲ್ಲ. ಅಂತಿಮವಾಗಿ ವರಿಷ್ಟರು ಏನು ತೀರ್ಮಾನ ತೆಗೆದುಕೊಳ್ಳುವರರೋ ಅದಕ್ಕೆ ನಾವೆಲ್ಲಾ ಬದ್ಧ ಎಂದರು.

ಇದನ್ನೂ ಓದಿ: Vishweshwar Bhat Column: ಒಂದೇ ವರ್ಷದಲ್ಲಿ ನಮ್ಮ ಬದುಕನ್ನು ಬದಲಿಸಿಕೊಳ್ಳಬಹುದೇ ? ಅದು ಹೇಗೆ ?

ಕಾಲ್ತುಳಿತ ಪ್ರಕರಣದಿಂದ ನಮಗೆಲ್ಲಾ ತುಂಬಾ ನೋವಾಗಿದೆ. ವಿರೋಧ ಪಕ್ಷಗಳು ಸರಕಾರದ ಮೇಲೆ ಗೂಬೆಕೂರಿಸುವ ಕೆಲಸ ಮಾಡುತ್ತಿವೆ. ಈ ಘಟನೆಯಿಂದ ಸರಕಾರಕ್ಕೆ ಕೆಟ್ಟ ಹೆಸರು ಬಂತು ಎಂಬು ದಕ್ಕಿಂತ, 11 ಕುಟುಂಬಗಳ ದು:ಖದಲ್ಲಿ ಸರಕಾರ ಭಾಗಿಯಾಗಿದೆ. ನಮಗೂ ತುಂಬಾ ನೋವಾಗಿದೆ. ಈಗಾಗಲೇ ಮೃತಪಟ್ಟಿರುವ ಕುಟುಂಬಗಳಿಗೆ 25 ಲಕ್ಷ ಪರಿಹಾರದ ಚೆಕ್ ವಿತರಣೆ ಮಾಡಲಾಗಿದೆ. ಈ ಘಟನೆ ಏಕೆ ಆಯಿತು ಎಂಬ ಬಗ್ಗೆ ನಿಖರವಾದ ಮಾಹಿತಿ ಪಡೆಯಲು ತನಿಖೆಗೆ ಆದೇಶಿಸಲಾಗಿದೆ ಎಂದರು.

ವಿರೋಧ ಪಕ್ಷಗಳಿಗೆ ಮನವಿ ಮಾಡುತ್ತೇನೆ. ಈ ರೀತಿಯ ಘಟನೆಗಳನ್ನು ರಾಜಕೀಯವಾಗಿ ಬಳಸಿ ಕೊಳ್ಳುವುದು ಸರಿಯಿಲ್ಲ. ಸರಕಾರದ ಭಾಗವಾಗಿ ನಾವು ತುಂಬಾ ಜವಾಬ್ದಾರಿಯಿಂದ ನಡೆದು ಕೊಂಡಿದ್ದೇವೆ. ಹಿಂದಿನ ಬಿಜೆಪಿ ಸರಕಾರದಲ್ಲಿ ಸಾಕಷ್ಟು ಘಟನೆಗಳು ನಡೆದಿವೆ. ಚಾಮರಾಜ ನಗರ ದಲ್ಲಿ 23 ಮಂದಿ ಆಕ್ಸಿಜನ್ ಇಲ್ಲದೆ ಮೃತಪಟ್ಟಿದ್ದರು. ಇದೇ ರೀತಿ ದೇಶದಲ್ಲಿ ಬೇರೆ ಬೇರೆ ಸಂದರ್ಭ ಗಳಲ್ಲಿ ಇಂತಹ ಸಾವು ನೋವುಗಳು ಆಗಿವೆ.

ಪಹಲ್ಗಾಮ್ ದಾಳಿ, ಪ್ರಯಾಗ್‌ರಾಜ್‌ನ ಕುಂಭಮೇಳ ಹೀಗೆ ನಡೆದಿವೆ. ಇವೆಲ್ಲಾ ನೋಡಿದಾಗ ಒಂದು ಕಡೆ ಮುಂಜಾಗೃತಾ ಕ್ರಮಗಳು ತೆಗೆದುಕೊಂಡಿಲ್ಲ, ಗೂಢಚರ್ಯೆ ವೈಫಲ್ಯ ಎಂದು ಹೇಳುತ್ತಾರೆ. ಈ ರೀತಿ ಎಲ್ಲಾ ಸಂದರ್ಭಗಳಲ್ಲೂ ಯಾರೂ ನಿರೀಕ್ಷೆ, ಊಹೆ ಮಾಡದ ರೀತಿಯಲ್ಲಿ ಕೆಲವು ಘಟನೆಗಳು ಎಷ್ಟೇ ಮುಂಜಾಗೃತಾ ಕ್ರಮಗಳ ನಡುವೆ ಘಟಿಸುತ್ತವೆ. ಬೆಂಗಳೂರಿನಲ್ಲಿ ಕೂಡ ನಮ್ಮ ನಿರೀಕ್ಷೆ ಮಿರಿ ಜನತೆ ಬಂದಿದ್ದರಿಂದ ಈರೀತಿ ಘಟನೆಗಳಾಗಿವೆ. ಆದ್ದರಿಂದ ನಾವೆಲ್ಲಾ ಬಹಳ ಜವಾಬ್ದಾರಿ ಯಿಂದ ಇಂತಹ ಘಟನೆಗಳಾದಾಗ ನಡೆದುಕೊಳ್ಳುವುದು ಉತ್ತಮ ಎಂದು ಅಭಿಪ್ರಾಯಪಟ್ಟರು.



Source link

ADMIN

About Author

Leave a comment

Your email address will not be published. Required fields are marked *

You may also like

ಉತ್ತರ ಕರ್ನಾಟಕ ಕರ್ನಾಟಕ

“ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವದ ದಿನಾಚರಣೆಯಲ್ಲಿ ವಿಭಿನ್ನ ಹಾಗೂ ವಿಶೇಷತೆಯಿಂದ ಆಚರಣೆ”

  • September 16, 2024
ಧಾರವಾಡ ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವದ ದಿನಾಚರಣೆಯಲ್ಲಿ ವಿಭಿನ್ನ ಹಾಗೂ ವಿಶೇಷತೆಯಿಂದ ಆಚರಣೆ ಮಾಡುವ ಮೂಲಕ 95 ಸಾವಿರ ಜನರು ಪ್ರತ್ಯಕ್ಷವಾಗಿ ಭಾಗವಹಿಸಿ ರಾಜ್ಯದಲ್ಲಿಯೇ ನಂಬರ್ 1 ಸ್ಥಾನ ಪಡೆದ
ಕರ್ನಾಟಕ

ನಿಮ್ಮ ವೃತ್ತಿಜೀವನವನ್ನು ನಿರ್ಮಿಸಲು ಮತ್ತು ನಿಮ್ಮ ಭವಿಷ್ಯವನ್ನು ರೂಪಿಸುವಲ್ಲಿ ತಂತ್ರಜ್ಞಾನವನ್ನು ನಿಮ್ಮ ಮಾರ್ಗದರ್ಶಕ ಆಗಿ ಸ್ವೀಕರಿಸಿ

  • September 16, 2024
ಧಾರವಾಡ ಪ್ರಸ್ತುತ ಕಾಲದಲ್ಲಿ ತಂತ್ರಜ್ಞಾನದ ಬದಲಾಗುತ್ತಿರುವ ಮುಖ ಮತ್ತು ಇಂಜಿನಿಯರಗಳು, ತಮ್ಮ ಜ್ಞಾನ ಮತ್ತು ಕೌಶಲ್ಯಗಳನ್ನು ನಿರಂತರವಾಗಿ ನವೀಕರಿಸುವ ಅಗತ್ಯವಾಗಿದೆ ಎಂದು , ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾನಿಲಯ
Translate »