Karunadu Studio

ಕರ್ನಾಟಕ

Shiva Rajkumar: ಶಿವಣ್ಣ ಸಿನಿ ಜರ್ನಿಗೆ ವಿಶ್ ಮಾಡಿದ ನಟ ಕಿಚ್ಚ ಸುದೀಪ್ – Kannada News | Shivarajkumar Celebrates 40 Years in Film Journey: Kichcha Sudeep Wish


ಬೆಂಗಳೂರು: ನಟ ಸಾರ್ವಭೌಮ ರಾಜಕುಮಾರ್ (Rajkumar)​ ಅವರ ಹಿರಿಯ ಪುತ್ರ ಹ್ಯಾಟ್ರಿಕ್ ಹೀರೋ ಶಿವ ರಾಜ್​ಕುಮಾರ್ (Shivaraj Kumar) ಬಣ್ಣದ ಲೋಕಕ್ಕೆ ಕಾಲಿಟ್ಟು 40 ವರ್ಷ ಆಗಿದೆ. ಶಿವಣ್ಣ ಸಿನಿಮಾ ಜರ್ನಿಗೆ 40 ವರ್ಷ ಆಗಿದ್ದು, ಚಿತ್ರರಂಗದ ಅನೇಕ ಸೆಲೆಬ್ರಿಟಿಗಳು ವಿಶ್ ಮಾಡಿದ್ದಾರೆ. ವಿಶೇಷ ಏನೆಂದರೆ, ಪರಭಾಷೆಯ ಸ್ಟಾರ್ ಕಲಾವಿದರು ಶಿವಣ್ಣ ಬಗ್ಗೆ ಪ್ರೀತಿಯ ಮಾತುಗಳನ್ನಾಡಿದ್ದಾರೆ. ಮೆಗಾ ಸ್ಟಾರ್ ಚಿರಂಜೀವಿ ನಾಗಾರ್ಜುನ, ವಿಜಯ್ ದೇವರಕೊಂಡ, ನಾನಿ, ಪುರಿ ಜಗನ್ನಾಥ್, ಬುಚ್ಚಿ ಬಾಬು ಸನಾ, ಕಮಲ್ ಹಾಸನ್ ಸೇರಿದಂತೆ ಹಲವರು ಶಿವ ರಾಜ್​ಕುಮಾರ್ ಸಿನಿಪಯಣಕ್ಕೆ ಅಭಿನಂದನೆ ಸಲ್ಲಿಸಿದ್ದಾರೆ. ಜತೆಗೆ ಈ ಸಂಭ್ರಮದ ದಿನದಂದು ನಟ ಕಿಚ್ಚ ಸುದೀಪ್‌ ಅವರು ಶಿವಣ್ಣ ಅವರಿಗೆ ಸ್ಪೆಷಲ್‌ ಆಗಿ ವಿಶ್‌ ಮಾಡಿದ್ದಾರೆ.



ಶಿವ ರಾಜ್​ಕುಮಾರ್ ಜತೆ ಅನೇಕ ನಟ-ನಟಿಯರು ಉತ್ತಮ ಬಾಂಧವ್ಯ ಹೊಂದಿದ್ದಾರೆ. ಅಂತೆಯೇ ನಟ ಸುದೀಪ್ ಅವರು ಶಿವಣ್ಣ ಅವರಿಗೆ ಸೋಶಿಯಲ್ ಮೀಡಿಯಾ ಪೋಸ್ಟ್ ಮೂಲಕ ಸ್ಪೆಷಲ್‌ ಆಗಿ ವಿಶ್‌ ಮಾಡಿದ್ದಾರೆ. ʼʼನಿಮ್ಮ 40 ವರ್ಷಗಳ ಅದ್ಭುತ ಚಲನಚಿತ್ರ ಪ್ರಯಾಣದ ಒಂದು ಭಾಗವನ್ನು ಹತ್ತಿರದಿಂದ ನೋಡಿ, ಅನುಭವಿಸುವ ಅವಕಾಶ ಪಡೆದಿರುವುದು ನನಗೆ ತುಂಬಾ ಗೌರವದ ವಿಚಾರ. ನೀವು ಈ ಚಿತ್ರರಂಗಕ್ಕೆ ಅಪಾರ ಶ್ರಮ ಮತ್ತು ಘನತೆಯಿಂದ ಸೇವೆ ಸಲ್ಲಿಸಿದ್ದೀರಿ. ನೀವು ಯಶಸ್ಸನ್ನು ಸದಾ ಸರಳವಾಗಿ ನಿಭಾಯಿಸಿದ್ದೀರಿ, ಎಲ್ಲಕಿಂತ ಮಿಗಿಲಾಗಿ, ನೀವು ಸದಾ ಒಬ್ಬ ಉತ್ತಮ ಮನುಷ್ಯರಾಗಿ ಬಾಳಿದ್ದೀರಿ. ನಿಮ್ಮ ಆರೋಗ್ಯ ಸದಾ ಉತ್ತಮವಾಗಿರಲಿ ಮತ್ತು ನಿಮ್ಮ ಅಭಿನಯದಿಂದ ನಮಗೆ ಮನರಂಜನೆ ದೊರೆಯುತ್ತಿರಲಿʼʼ ಎಂದು ಬರೆದುಕೊಂಡಿದ್ದಾರೆ.

ಇದನ್ನು ಓದಿ: Shivarajkumar: 40 ವರ್ಷದ ಸಂಭ್ರಮ: ಕಲರ್ಸ್​​ನ ದಶಕದ ಮಹೋತ್ಸವದಲ್ಲಿ ಶಿವಣ್ಣ-ಗೀತಕ್ಕ

ಶಿವ ರಾಜ್​ಕುಮಾರ್ ನಟಿಸಿದ ಮೊದಲ ಚಿತ್ರ ‘ಆನಂದ್’. ಈ ಸಿನಿಮಾ 1986ರ ಜೂನ್ 19ರಂದು ತೆರೆ ಮೇಲೆ ಬಂದಿತ್ತು. ಸಿಂಗೀತಮ್ ಶ್ರೀನಿವಾಸ್ ರಾವ್ ಈ ಚಿತ್ರ ನಿರ್ದೇಶನ ಮಾಡಿದ್ದರು. ಈ ಸಿನಿಮಾಕ್ಕೆ ಸುಧಾರಾಣಿ ನಾಯಕಿಯಾಗಿದ್ದು, ಚಿತ್ರ ಸೂಪರ್ ಹಿಟ್ ಆಗಿತ್ತು. ಸಿನಿ ಜರ್ನಿಯಲ್ಲಿ ಅವರು ʼಓಂ,ʼ ʼಜೋಗಿʼ, ʼಅಂಡಮಾನ್ʼ, ʼಎಕೆ 47ʼ, ʼಜನುಮದ ಜೋಡಿʼ, ʼತವರಿಗೆ ಬಾ ತಂಗಿʼ, ʼಟಗರುʼ, ʼಭಜರಂಗಿʼ ಸೇರಿದಂತೆ ಹಲವು ಸೂಪರ್​ ಹಿಟ್​ ಸಿನಿಮಾಗಳನ್ನು ನೀಡಿದ್ದಾರೆ. ಈಗಲೂ ನಟ ಶಿವ ರಾಜ್​ಕುಮಾರ್ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿ ಆಗಿದ್ದಾರೆ.





Source link

ADMIN

About Author

Leave a comment

Your email address will not be published. Required fields are marked *

You may also like

ಕರ್ನಾಟಕ

Microsoft: Empowering the Digital World

Microsoft is a global technology company known for shaping the modern digital experience. From its iconic Windows operating system to
ಉತ್ತರ ಕರ್ನಾಟಕ ಕರ್ನಾಟಕ

“ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವದ ದಿನಾಚರಣೆಯಲ್ಲಿ ವಿಭಿನ್ನ ಹಾಗೂ ವಿಶೇಷತೆಯಿಂದ ಆಚರಣೆ”

  • September 16, 2024
ಧಾರವಾಡ ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವದ ದಿನಾಚರಣೆಯಲ್ಲಿ ವಿಭಿನ್ನ ಹಾಗೂ ವಿಶೇಷತೆಯಿಂದ ಆಚರಣೆ ಮಾಡುವ ಮೂಲಕ 95 ಸಾವಿರ ಜನರು ಪ್ರತ್ಯಕ್ಷವಾಗಿ ಭಾಗವಹಿಸಿ ರಾಜ್ಯದಲ್ಲಿಯೇ ನಂಬರ್ 1 ಸ್ಥಾನ ಪಡೆದ
Translate »