ಬೆಂಗಳೂರು: ರಾಜಧಾನಿಯ ಬೀದಿಯಲ್ಲಿ (Bengaluru Crime News) ಹಾಗೂ ಪಾರ್ಕ್‌ನಲ್ಲಿ ಎದುರು ಕಂಡ ಹೆಣ್ಣು ಮಕ್ಕಳನ್ನು ತಬ್ಬಿಕೊಂಡು ಮುತ್ತು ನೀಡಿ ವಿಕೃತವಾಗಿ ವರ್ತಿಸಿದ್ದ (Woman Harassment) ʼಸೀರಿಯಲ್ ಕಿಸ್ಸರ್ʼ ಒಬ್ಬನನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ. ಪುಲಕೇಶಿನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡಿದ್ದರು. ಪಾರ್ಕ್, ರೋಡ್ ಎನ್ನದೇ ಮಹಿಳೆಯರಿಗೆ ಮುತ್ತು ಕೊಡುತ್ತಿದ್ದ ಈ ಕಾಮುಕನಿಗೆ ಹದಿಹರೆಯದ ಹುಡುಗಿಯರೇ ಟಾರ್ಗೆಟ್ ಆಗಿದ್ದರು ಎಂದು ತಿಳಿದುಬಂದಿದೆ. ಆರೋಪಿಯನ್ನು 37 ವರ್ಷದ ಮದನ್ ಎಂದು ಗುರುತಿಸಲಾಗಿದೆ.
ಇತ್ತೀಚೆಗೆ ಬೆಂಗಳೂರಿನಲ್ಲಿ ಇಬ್ಬರು ಹುಡುಗಿಯರು ರಸ್ತೆಯಲ್ಲಿ ಹೋಗುತ್ತಿದ್ದಾಗ ಯುವಕನೊಬ್ಬ ಅಸಭ್ಯವಾಗಿ ವರ್ತಿಸಿದ್ದ. ಈ ಪ್ರಕರಣ ಭಾರೀ ಸಂಚಲನ ಸೃಷ್ಟಿಸಿತ್ತು. ಇದೀಗ ಇಂಥದ್ದೇ ಪ್ರಕರಣ ಮತ್ತೆ ಬೆಂಗಳೂರಿನಲ್ಲಿ ನಡೆದಿದೆ. ಇದೇ ತಿಂಗಳ 6ನೇ ತಾರೀಕಿನಂದು ಸಂಜೆ 7 ಗಂಟೆ ಸುಮಾರಿಗೆ ಘಟನೆ ನಡೆದಿತ್ತು. ಕುಟುಂಬದ ಜೊತೆಗೆ ವಾಕ್ ಬಂದಿದ್ದ ಮಹಿಳೆಯೊಂದಿಗೆ ಈತ ಅಸಭ್ಯವಾಗಿ ವರ್ತಿಸಿದ್ದಾನೆ. ನಂತರ ಪಾರ್ಕ್‌ನಲ್ಲಿ ಇನ್ನೊಬ್ಬ ಮಹಿಳೆಯನ್ನು ಬಲವಂತಾಗಿ ತಬ್ಬಿಕೊಂಡು ತುಟಿಗೆ ಮುತ್ತು ಕೊಟ್ಟಿದ್ದಾನೆ ಎಂದು ಹೇಳಲಾಗಿದೆ. ಇದನ್ನು ಮಹಿಳೆ ಪ್ರತಿಭಟಿಸಿದಾಗ ಎಸ್ಕೇಪ್ ಆಗಿದ್ದ ಈ ಕಿರಾತಕ.
ಪಾರ್ಕ್, ರೋಡ್ ಎನ್ನದೇ ಮಹಿಳೆಯರಿಗೆ ಮುತ್ತು ಕೊಡುತ್ತಿದ್ದ ಈತನ ದುರ್ವರ್ತನೆಗೆ ಬೆಂಗಳೂರು ಬೆಚ್ಚಿಬಿದ್ದಿದೆ. ಇಷ್ಟು ದಿನ ತನ್ನ ಕಾಮುಕ ಬುದ್ಧಿ ತೋರಿಸಿ ಎಸ್ಕೇಪ್ ಆಗುತ್ತಿದ್ದವನನ್ನು ಹೆಡೆಮುರಿ ಕಟ್ಟಲಾಗಿದೆ. ಈ ಬಗ್ಗೆ ಪೂರ್ವ ವಿಭಾಗ ಡಿಸಿಪಿ ದೇವರಾಜ್ ವಿವರ ನೀಡಿದ್ದಾರೆ. ಆರನೇ ತಾರೀಕು ಸಂಜೆ 112ಗೆ ಒಂದು ಫೋನ್ ಬಂದಿದ್ದು, ಘಟನೆಯ ವಿವರ ನೀಡಿದ್ದರು. ಸ್ಥಳದಲ್ಲಿ ಇನ್ನೂ ಕೆಲ ಮಹಿಳೆಯರಿಗೆ ಈ ರೀತಿ ಆಗಿರೋದು ತಿಳಿದುಬಂದಿತ್ತು.
ನಂತರ ಆರೇಳು ಕಿ.ಮೀ. ಸಿಸಿ ಟಿವಿ ಪರಿಶೀಲನೆ ಮಾಡಲಾಗಿತ್ತು. ಸಿಸಿಟಿವಿ ಮತ್ತು ತನಿಖೆಯ ಮೇಲೆ 37 ವರ್ಷದ ಮದನ್ ಎಂಬಾತನನ್ನು ಬಂಧನ ಮಾಡಲಾಗಿದೆ. ಈತ ಬಿಎಸ್ಸಿ ಕಂಪ್ಯೂಟರ್ ಸೈನ್ಸ್ ಪದವೀಧರ ಆಗಿದ್ದು, ಬಾಣಸವಾಡಿಯಲ್ಲಿ ವಾಸವಾಗಿದ್ದ. ಸಾಫ್ಟ್ ವೇರ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದು, ಇತ್ತೀಚೆಗೆ ಈ ಕೆಲಸವನ್ನೂ ಬಿಟ್ಟಿದ್ದ. ತನಿಖೆ ವೇಳೆ, ಮೂರ್ನಾಲ್ಕು ಠಾಣೆ ವ್ಯಾಪ್ತಿಯಲ್ಲಿ ಈ ರೀತಿ ಮಾಡಿರುವುದಾಗಿ ಹೇಳಿದ್ದಾನೆ. ಹೆಣ್ಣೂರು, ಬಾಣಸವಾಡಿ, ರಾಮಮೂರ್ತಿ ನಗರ ಭಾಗದಲ್ಲಿ ಕೃತ್ಯ ಎಸಗಿದ್ದಾನೆ.
ಇದನ್ನೂ ಓದಿ: Murder Case: ಬೆಂಗಳೂರಿನಲ್ಲಿ ಮಾರಕಾಸ್ತ್ರಗಳಿಂದ ಕೊಚ್ಚಿ ರೌಡಿಶೀಟರ್ ಕೊಲೆ