Karunadu Studio

ಕರ್ನಾಟಕ

Vishwavani Editorial: ಇದು ನಿರ್ಲಕ್ಷಿಸುವ ಸಂಗತಿಯಲ್ಲ – Kannada News | This is not something to ignore.


ಮಹಾರಾಷ್ಟ್ರದ ಥಾಣೆ ನಗರದ ಬಳಿ ಕಿಕ್ಕಿರಿದು ತುಂಬಿದ್ದ ‘ಲೋಕಲ್ ಟ್ರೇನ್’ನಿಂದ ಕೆಳಗೆ ಜಾರಿ ಬಿದ್ದ ಆರು ಮಂದಿ ಪ್ರಯಾಣಿಕರು ಅಸುನೀಗಿದ ಮತ್ತು ಏಳು ಮಂದಿ ಗಾಯಗೊಂಡ ಸುದ್ದಿಯನ್ನು ನೀವು ಈಗಾಗಲೇ ಓದಿದ್ದೀರಿ. ಮುಂಬೈನ ಲೋಕಲ್ ಟ್ರೇನ್‌ನಲ್ಲಿ ಪ್ರಯಾಣಿಸಿದ ಅನುಭವ ಇರುವವರಿಗೆ, ಜನರು ಅದೆಷ್ಟರ ಮಟ್ಟಿಗೆ ಅವುಗಳಲ್ಲಿ ಕಿಕ್ಕಿರಿದು ತುಂಬಿಕೊಂಡಿರುತ್ತಾರೆ, ನಿರ್ದಿಷ್ಟ ನಿಲ್ದಾಣದಲ್ಲಿ ಹತ್ತುವುದು ಮತ್ತು ಇಳಿಯುವುದು ಅದೆಷ್ಟರ ಮಟ್ಟಿಗೆ ಹರಸಾಹಸವೇ ಆಗಿರುತ್ತದೆ ಎಂಬುದು ಗೊತ್ತಿರುತ್ತದೆ.

ಬೋಗಿಯೊಳಗೆ ನಿಲ್ಲುವುದಕ್ಕೂ ಜಾಗವಿಲ್ಲದೆ, ಕಿಟಕಿಯ ಸರಳಗಳನ್ನು ಹಿಡಿದು ಬಾಗಿಲಲ್ಲಿ ನೇತಾಡುವವರ ಸಂಖ್ಯೆ ಸಾಕಷ್ಟಿರುವುದನ್ನೂ ಇಲ್ಲಿ ಕಾಣಬಹುದು. ಇಂಥ ವೇಳೆ ದಣಿವಿನಿಂದ ಲೋ ಅಥವಾ ಯಾರಾದರೂ ಗೊತ್ತಾಗದೆ ತಳ್ಳಿದಾಗಲೋ ಪ್ರಯಾಣಿಕರು ಕೆಳಗೆ ಬೀಳುವ ಸಾಧ್ಯತೆ ಸಾಕಷ್ಟಿರುತ್ತದೆ. ಹೀಗಾಗಿ ಇಂಥ ಪ್ರಯಾಣ ಯಾವತ್ತಿಗೂ ಅಪಾಯಕಾರಿಯೇ.

ಇದನ್ನೂ ಓದಿ: Vishwavani Editorial: ಉಗ್ರವಾದದ ದಮನವಾಗಲಿ

ಸಾಕಷ್ಟು ವರ್ಷಗಳ ಹಿಂದೆ ಬೆಂಗಳೂರಿನ ನಗರ ಸಾರಿಗೆ ಬಸ್‌ಗಳಲ್ಲೂ ಇಂಥ ದೃಶ್ಯವನ್ನು ಕಾಣ ಬಹುದಿತ್ತು; ಈ ಪೈಕಿ, ಬಸ್ಸಿನೊಳಗೆ ಸಾಕಷ್ಟು ಜಾಗವಿದ್ದರೂ ಶೋಕಿಗಾಗಿ ಬಾಗಿಲಲ್ಲಿ/ಫುಟ್‌ ಬೋರ್ಡ್ ಮೇಲೆ ನಿಂತುಕೊಳ್ಳುವ ಪ್ರಯಾಣಿಕರೂ ಸಾಕಷ್ಟು ಇರುತ್ತಿದ್ದರು ಎನ್ನಿ.

ಆದರೆ ನಗರ ಸಾರಿಗೆ ಬಸ್‌ಗಳಿಗೆ ಸ್ವಯಂಚಾಲಿತ ಬಾಗಿಲು ಅಳವಡಿಸುವ ಪರಿಪಾಠ ಬಂದ ಮೇಲೆ ಇಂಥ ಕಸರತ್ತುಗಳು ಮತ್ತು ಅದರಿಂದಾಗುತ್ತಿದ್ದ ಅಪಘಾತಗಳು ತಗ್ಗಿದವು ಎನ್ನಬೇಕು. ಇದನ್ನು ಮೇಲ್ಪಂಕ್ತಿಯಾಗಿಟ್ಟುಕೊಂಡು, ಮುಂಬೈ ಸೇರಿದಂತೆ ವಿವಿಧೆಡೆಯ ನಗರ ಸಾರಿಗೆಯ ಟ್ರೇನ್‌ ಗಳಲ್ಲೂ ಸ್ವಯಂಚಾಲಿತ ಬಾಗಿಲು ಅಳವಡಿಸುವ ಕುರಿತು ಚಿಂತನೆಯಾಗಬೇಕು.

ಮತ್ತೊಂದೆಡೆ, ಕರ್ನಾಟಕ ಸೇರಿದಂತೆ ಬಹಳಷ್ಟು ರಾಜ್ಯಗಳ ಗ್ರಾಮಾಂತರ ಪ್ರದೇಶಗಳಲ್ಲಿ ಖಾಸಗಿ ಬಸ್ಸಿನೊಳಗೆ ಜಾಗ ಸಿಗದವರು ಚಾವಣಿಯನ್ನೇರಿ ಕೂತು ಊರು ತಲುಪುವ ದೃಶ್ಯವೂ ಸಾಮಾನ್ಯ. ಇದು ಕೂಡ ಬಾಗಿಲಲ್ಲಿ ಜೋತಾಡುವಷ್ಟೇ ಅಪಾಯಕಾರಿ. ಇಂಥ ದುಸ್ಸಾಹಸಗಳು ಇನ್ನಾದರೂ ನಿಲ್ಲಬೇಕು. ಜೀವವು ಎಲ್ಲಕ್ಕಿಂತ ಅಮೂಲ್ಯವಾದುದು ಎಂಬುದನ್ನು ಇಂಥ ಕಸರತ್ತುಗಳಲ್ಲಿ ತೊಡಗುವವರು ಅರಿಯಬೇಕು.



Source link

ADMIN

About Author

Leave a comment

Your email address will not be published. Required fields are marked *

You may also like

ಉತ್ತರ ಕರ್ನಾಟಕ ಕರ್ನಾಟಕ

“ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವದ ದಿನಾಚರಣೆಯಲ್ಲಿ ವಿಭಿನ್ನ ಹಾಗೂ ವಿಶೇಷತೆಯಿಂದ ಆಚರಣೆ”

  • September 16, 2024
ಧಾರವಾಡ ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವದ ದಿನಾಚರಣೆಯಲ್ಲಿ ವಿಭಿನ್ನ ಹಾಗೂ ವಿಶೇಷತೆಯಿಂದ ಆಚರಣೆ ಮಾಡುವ ಮೂಲಕ 95 ಸಾವಿರ ಜನರು ಪ್ರತ್ಯಕ್ಷವಾಗಿ ಭಾಗವಹಿಸಿ ರಾಜ್ಯದಲ್ಲಿಯೇ ನಂಬರ್ 1 ಸ್ಥಾನ ಪಡೆದ
ಕರ್ನಾಟಕ

ನಿಮ್ಮ ವೃತ್ತಿಜೀವನವನ್ನು ನಿರ್ಮಿಸಲು ಮತ್ತು ನಿಮ್ಮ ಭವಿಷ್ಯವನ್ನು ರೂಪಿಸುವಲ್ಲಿ ತಂತ್ರಜ್ಞಾನವನ್ನು ನಿಮ್ಮ ಮಾರ್ಗದರ್ಶಕ ಆಗಿ ಸ್ವೀಕರಿಸಿ

  • September 16, 2024
ಧಾರವಾಡ ಪ್ರಸ್ತುತ ಕಾಲದಲ್ಲಿ ತಂತ್ರಜ್ಞಾನದ ಬದಲಾಗುತ್ತಿರುವ ಮುಖ ಮತ್ತು ಇಂಜಿನಿಯರಗಳು, ತಮ್ಮ ಜ್ಞಾನ ಮತ್ತು ಕೌಶಲ್ಯಗಳನ್ನು ನಿರಂತರವಾಗಿ ನವೀಕರಿಸುವ ಅಗತ್ಯವಾಗಿದೆ ಎಂದು , ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾನಿಲಯ
Translate »