ಇಂದೋರ್: ಸೋನಮ್(Sonam) ಮತ್ತು ರಾಜಾ ರಘುವಂಶಿ (Raja Raghuvanshi) ದಂಪತಿ ಹನಿಮೂನ್‌ಗೆ ತೆರಳಿದ್ದ ಸಮಯದಲ್ಲಿ ರಾಜಾ ರಘುವಂಶಿ ಕೊಲೆ ನಡೆದಿದೆ. ನಂತರ ಸೋನಮ್ ತನ್ನ ಪತಿ ರಾಜಾ ರಘುವಂಶಿಯ ಕೊಲೆ ತಾನೇ ಮಾಡಿರುವುದಾಗಿ ಒಪ್ಪಿಕೊಂಡಿದ್ದಾಳೆ. ಆಕೆ ಕೊಲೆ(Murder)ಯ ವಿಚಾರದಲ್ಲಿ ಶರಣಾದ ಕೆಲವೇ ಗಂಟೆಗಳ ನಂತರ, ಸೋನಮ್ ಮತ್ತು ರಾಜಾ ರಘುವಂಶಿ ಅವರ ವಿವಾಹದ ವಿಡಿಯೊವೊಂದು ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್(Viral Video) ಆಗಿದೆ. ಅದರಲ್ಲಿ ಸೋನಮ್ ಮುಖದಲ್ಲಿ ಸ್ವಲ್ಪವೂ ನಗುವಿಲ್ಲದ ಕಾರಣ ಆಕೆಗೆ ಮದುವೆ ಇಷ್ಟವಿರಲಿಲ್ಲ ಎಂದು ನೆಟ್ಟಿಗರು ಅಭಿಪ್ರಾಯಪಟ್ಟಿದ್ದಾರೆ.
ವೈರಲ್ ಆದ ವಿಡಿಯೊದಲ್ಲಿ ರಾಜಾ ರಘುವಂಶಿ ಖುಷಿಯಿಂದ ಸೋನಂ ಹಣೆಯ ಮೇಲೆ ಸಿಂಧೂರ ಹಚ್ಚುವುದು ಕಾಣಬಹುದು. ಆದರೆ ಸೋನಮ್ ಮುಖದಲ್ಲಿ ಸ್ವಲ್ಪವೂ ಖುಷಿಯಾಗಲಿ, ಸಂಭ್ರಮವಾಗಲಿ ಇಲ್ಲ. ಈ ವಿಡಿಯೊ ನೆಟ್ಟಿಗರ ಗಮನ ಸೆಳೆದಿದೆ ಮತ್ತು ರಾಜಾ ರಘುವಂಶಿ ಹತ್ಯೆಗೆ ಸೋನಮ್ ಪೋಷಕರೇ ಕಾರಣ ಎಂದು ಹಲವರು ದೂಷಿಸಿದ್ದಾರೆ.
ವಿಡಿಯೊ ಇಲ್ಲಿದೆ ನೋಡಿ…
Just take a look at this wedding video of Sonam and Raja Raghuvanshi and you will agree that Sonam was clearly not happy with this marriage.
Raja Raghuvanshi would have been alive if Sonam had said No to the marriage. She had the courage to hire contract killers but didn’t had… pic.twitter.com/NbHlQQWzXK
— Incognito (@Incognito_qfs) June 9, 2025
ನೆಟ್ಟಿಗರೊಬ್ಬರು ಕಾಮೆಂಟ್ ಮಾಡಿ, “ಸೋನಮ್ ಮತ್ತು ರಾಜಾ ರಘುವಂಶಿಯ ಈ ಮದುವೆಯ ವಿಡಿಯೊವನೊಮ್ಮೆ ನೋಡಿ, ಸೋನಮ್‌ಗೆ ಈ ಮದುವೆಯಲ್ಲಿ ಇಷ್ಟವಿರಲಿಲ್ಲ ಎನ್ನುವುದು ತಿಳಿಯುತ್ತದೆ. ಸೋನಮ್ ಮದುವೆ ಬೇಡ ಎಂದು ಹೇಳಿದ್ದರೆ ರಾಜಾ ರಘುವಂಶಿ ಜೀವಂತವಾಗಿರುತ್ತಿದ್ದನು. ಆಕೆಗೆ ಕೊಲೆ ಮಾಡಲು ಸುಪಾರಿ ಕೊಡುವ ಧೈರ್ಯವಿತ್ತು ಆದರೆ ತನ್ನ ಗೆಳೆಯನೊಂದಿಗೆ ಓಡಿಹೋಗುವ ಧೈರ್ಯವಿರಲಿಲ್ಲ… ಎಂತಹ ಸೈಕೋ.ಅದು ಅಲ್ಲದೇ, ಸೋನಮ್ ಪೋಷಕರು ಕೂಡ ಈ ಕೊಲೆಗೆ ಹೊಣೆಗಾರರೇ ಎಂದು ದೂಷಿಸಿದ್ದಾರೆ.
ಇನ್ನೊಬ್ಬರು, “ಈ ಕೊಲೆಗೆ ಸೋನಮ್ ಮತ್ತು ಆಕೆ ಕುಟುಂಬ ಸಂಪೂರ್ಣ ಜವಾಬ್ದಾರರು…. ಅವರು ಬಲವಂತವಾಗಿ ಮದುವೆ ಆಗುವಂತೆ ಮಾಡಿದ್ದಾರೆ ಮತ್ತು ಈಗ ಅದರ ಫಲವನ್ನು ಅನುಭವಿಸುತ್ತಿದ್ದಾರೆ ” ಎಂದು ಹೇಳಿದ್ದಾರೆ.
ಈ ಸುದ್ದಿಯನ್ನೂ ಓದಿ:Viral Video: ತುತ್ತಿಟ್ಟವನ ಶವದ ಮುಂದೆ ಕೋತಿಯ ಮೂಕವೇದನೆ; ಈ ಮನಕಲುಕುವ ವಿಡಿಯೊ ನೋಡಿ
ಇಂದೋರ್ ನಿವಾಸಿಗಳಾದ ನವವಿವಾಹಿತ ದಂಪತಿಯಾದ ರಾಜಾ ರಘುವಂಶಿ ಮತ್ತು ಸೋನಮ್ ರಘುವಂಶಿ ತಮ್ಮ ಹನಿಮೂನ್‌ಗಾಗಿ ಮೇಘಾಲಯಕ್ಕೆ ತೆರಳಿದ್ದರು. ಪತ್ನಿ ಸೋನಮ್ ತನ್ನ ಪತಿ ರಾಜನನ್ನು ಕೊಲ್ಲಲು ಸುಫಾರಿ ನೀಡಿ ನಂತರ ಉತ್ತರ ಪ್ರದೇಶದ ಘಾಜಿಪುರದಲ್ಲಿ ಪೊಲೀಸರಿಗೆ ಶರಣಾಗಿದ್ದಾಳೆ ಎಂದು ಆರೋಪಿಸಲಾಗಿದೆ. ಪೊಲೀಸ್ ತನಿಖೆಯಲ್ಲಿ, ಸೋನಮ್ ಮತ್ತು ಇತರ ನಾಲ್ವರು ಜನರನ್ನು ಈ ಪ್ರಕರಣದಲ್ಲಿ ಬಂಧಿಸಲಾಗಿದೆ.