Karunadu Studio

ಕರ್ನಾಟಕ

SSMB29 Movie: ರಾಜಮೌಳಿ-ಮಹೇಶ್‌ ಬಾಬು ಚಿತ್ರಕ್ಕೆ ಮಾಧವನ್ ಎಂಟ್ರಿ? – Kannada News | SS Rajamouli’s upcoming film ‘SSMB29: R Madhavan has reportedly joined the team


ನವದೆಹಲಿ: ಮಹೇಶ್ ಬಾಬು (Mahesh Babu) ನಟನೆಯ ಎಸ್ಎಸ್ಎಂಬಿ 29 (SSMB 29) ಬಗ್ಗೆ ದಿನೇ ದಿನೆ ಹೊಸ ಅಪ್‌ಡೇಟ್‌ ಕೇಳಿ ಬರುತ್ತಲೇ ಇದೆ. ಪ್ಯಾನ್ ಇಂಡಿಯಾ ಹೊರತಾಗಿ ಪ್ಯಾನ್ ವರ್ಲ್ಡ್ ಮಟ್ಟದಲ್ಲಿ ತೆರೆಗೆ ತರಲು ನಿರ್ದೇಶಕ ರಾಜಮೌಳಿ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ದೇಶ ವಿದೇಶಗಳಲ್ಲಿ ಸಿನಿಮಾದ ಚಿತ್ರೀಕರಣ ಭರದಿಂದ ನಡೆಯುತ್ತಿದೆ. ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಖ್ಯಾತಿಯ ಕಲಾವಿದರು ಈ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಸುಧಾರಿತ ಟೆಕ್ನಾಲಜಿಯ ಮೂಲಕ ವಿಭಿನ್ನವಾಗಿ ಈ ಸಿನಿಮಾ ತೆರೆ ಮೇಲೆ ತರಲು ಚಿತ್ರತಂಡ ಸಕಲ ಸಿದ್ಧತೆ ಮಾಡಿಕೊಂಡಿದೆ. ಬಾಲಿವುಡ್, ಹಾಲಿವುಡ್‌ನಲ್ಲಿ ಮಿಂಚುತ್ತಿರಯವ ಪ್ರಿಯಾಂಕಾ ಚೋಪ್ರಾ ಈ ಸಿನಿಮಾದಲ್ಲಿ ನಾಯಕಿಯಾಗಿ ಹಾಗೂ ಪೃಥ್ವಿರಾಜ್ ಸುಕುಮಾರನ್ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಇದರ ಬೆನ್ನಲ್ಲೆ ಪ್ಯಾನ್ ಇಂಡಿಯಾ ಮಟ್ಟದ ಸ್ಟಾರ್ ನಟರೊಬ್ಬರು ಈ ಸಿನಿಮಾಕ್ಕೆ ಎಂಟ್ರಿ ಕೊಟ್ಟಿದ್ದಾರೆ.

ನಿರ್ದೇಶಕ ರಾಜಮೌಳಿ ಅವರ ಸಿನಿಮಾ ಎಂದಾಗ ಪಾತ್ರವರ್ಗಗಳ ಆಯ್ಕೆ ಬಗ್ಗೆ ಕುತೂಹಲ ಇರುವುದು ಸಹಜ. ಅಂತೆಯೇ ʼಎಸ್ಎಸ್ಎಂಬಿ 29ʼ ಸಿನಿಮಾಕ್ಕೆ ನಾಯಕನಾಗಿ ಮಹೇಶ್ ಬಾಬು, ನಾಯಕಿಯಾಗಿ ಪ್ರಿಯಾಂಕಾ ಚೋಪ್ರಾ, ಮುಖ್ಯ ಪಾತ್ರದಲ್ಲಿ ಮಲಯಾಳಂ ಸ್ಟಾರ್ ನಟ ಪೃಥ್ವಿರಾಜ್ ಸುಕುಮಾರನ್ ನಟಿಸುದು ಪಕ್ಕಾ ಆಗಿದೆ. ಅದೇ ರೀತಿ ಇದೀಗ ಈ ಸಿನಿಮಾಕ್ಕೆ ಬಹುಭಾಷಾ ನಟ ಆರ್.ಮಾಧವನ್ ಕೂಡ ಆಯ್ಕೆಯಾಗಿದ್ದಾರೆ ಎನ್ನಲಾಗಿದೆ. 

ಕೆ.ಎಲ್.ನಾರಾಯಣ್ ನಿರ್ಮಾಣದಲ್ಲಿ ಮೂಡಿ ಬರುತ್ತಿರುವ ʼಎಸ್​ಎಸ್​ಎಂಬಿ 29ʼ ಸಿನಿಮಾದಲ್ಲಿ ಪಾತ್ರವರ್ಗಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗುತ್ತಿದೆ. ಇತ್ತೀಚೆಗಷ್ಟೇ ಸಿನಿಮಾದ ಮುಖ್ಯ ಪಾತ್ರದಲ್ಲಿ ನಟಿಸಲು ಆರ್ .ಮಾಧವನ್ ಅವರಿಗೆ ನಿರ್ಮಾಪ ಕರು ಆಫರ್ ನೀಡಿದ್ದರು ಎನ್ನುವ ಗಾಸಿಪ್ ಹರಿದಾಡಿದೆ. ಮಹೇಶ್ ಬಾಬು ಜತೆಗೆ ನಟ ಆರ್.ಮಾಧವನ್ ಅವರ ಪಾತ್ರಕ್ಕೂ ಸಾಕಷ್ಟು ಒತ್ತು ನೀಡಲಾಗಗಿದೆ ಎಂದು ಮೂಲಗಳು ತಿಳಿಸಿವೆ. ಆದರೆ ಆರ್. ಮಾಧವನ್ ಸೇರ್ಪಡೆ ಆಗಿರುವ ಬಗ್ಗೆ ಚಿತ್ರತಂಡದಿಂದ ಅಧಿಕೃತ ಮಾಹಿತಿ ಹೊರ ಬಿದ್ದಿಲ್ಲ.

ಇದನ್ನು ಓದಿ:Kannada New Movie: ಸಿನಿಮಾ ರೂಪದಲ್ಲಿ ಬರಲಿದೆ ಪದ್ಮಶ್ರೀ ಸಾಲುಮರದ ತಿಮ್ಮಕ್ಕ ಅವರ ಜೀವನ ಚರಿತ್ರೆ

ಒಂದು ಸಾವಿರ ಕೋಟಿ ರೂಪಾಯಿ ಬಜೆಟ್​ನಲ್ಲಿ ಈ ಸಿನಿಮಾ ಸಿದ್ಧವಾಗುತ್ತಿದ್ದು, ಕಲಾವಿದರಿಗೆ ಭಾರಿ ಮೊತ್ತದ ಸಂಭಾವನೆ ನೀಡಲಾಗುತ್ತಿದೆ ಎಂಬ ಸುದ್ದಿ ಕೂಡ ಸೋಶಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿದೆ. ರಾಜಮೌಳಿ ಅವರ ತಂದೆ ವಿಜಯೇಂದ್ರ ಪ್ರಸಾದ್ ʼಎಸ್ಎಸ್ಎಂಬಿ 29ʼ ಚಿತ್ರಕ್ಕೆ ಕಥೆ ಬರೆದಿದ್ದಾರೆ. ʼಬಾಹುಬಲಿʼ, ʼಮಗಧೀರʼ, ʼಆರ್​ಆರ್​ಆರ್ʼನಂತಹ ಬ್ಲಾಕ್ ಬ್ಲಸ್ಟರ್ ಹಿಟ್ ಸಿನಿಮಾಗಳನ್ನು ನೀಡಿರುವ ರಾಜಮೌಳಿ ಅವರ ಈ ಚಿತ್ರದ ಬಗ್ಗೆ ಸಾಕಷ್ಟು ಕುತೂಹಲ ಮೂಡಿದೆ. ಒಡಿಶಾದ ಕೊರಾಪುಟ್‌ನಲ್ಲಿ ಮಹೇಶ್ ಬಾಬು ಮತ್ತು ಪ್ರಿಯಾಂಕಾ ಅವರ ಆ್ಯಕ್ಷನ್ ಚಿತ್ರೀಕರಣವನ್ನು ಪೂರ್ಣಗೊಳಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ʼಆರ್‌ಆರ್‌ಆರ್‌ʼ ಚಿತ್ರದ ʼನಾಟು ನಾಟುʼ ಹಾಡಿನ ಮೂಲಕ ಆಸ್ಕರ್‌ ಪ್ರಶಸ್ತಿ ಪಡೆದ ಎಂ.ಎಂ. ಕೀರವಾಣಿ ʼಎಸ್ಎಸ್ಎಂಬಿ 29ʼ ಸಿನಿಮಾಕ್ಕೆ ಸಂಗೀತ ಸಂಯೋಜಿಸಲಿದ್ದಾರೆ.



Source link

ADMIN

About Author

Leave a comment

Your email address will not be published. Required fields are marked *

You may also like

ಉತ್ತರ ಕರ್ನಾಟಕ ಕರ್ನಾಟಕ

“ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವದ ದಿನಾಚರಣೆಯಲ್ಲಿ ವಿಭಿನ್ನ ಹಾಗೂ ವಿಶೇಷತೆಯಿಂದ ಆಚರಣೆ”

  • September 16, 2024
ಧಾರವಾಡ ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವದ ದಿನಾಚರಣೆಯಲ್ಲಿ ವಿಭಿನ್ನ ಹಾಗೂ ವಿಶೇಷತೆಯಿಂದ ಆಚರಣೆ ಮಾಡುವ ಮೂಲಕ 95 ಸಾವಿರ ಜನರು ಪ್ರತ್ಯಕ್ಷವಾಗಿ ಭಾಗವಹಿಸಿ ರಾಜ್ಯದಲ್ಲಿಯೇ ನಂಬರ್ 1 ಸ್ಥಾನ ಪಡೆದ
ಕರ್ನಾಟಕ

ನಿಮ್ಮ ವೃತ್ತಿಜೀವನವನ್ನು ನಿರ್ಮಿಸಲು ಮತ್ತು ನಿಮ್ಮ ಭವಿಷ್ಯವನ್ನು ರೂಪಿಸುವಲ್ಲಿ ತಂತ್ರಜ್ಞಾನವನ್ನು ನಿಮ್ಮ ಮಾರ್ಗದರ್ಶಕ ಆಗಿ ಸ್ವೀಕರಿಸಿ

  • September 16, 2024
ಧಾರವಾಡ ಪ್ರಸ್ತುತ ಕಾಲದಲ್ಲಿ ತಂತ್ರಜ್ಞಾನದ ಬದಲಾಗುತ್ತಿರುವ ಮುಖ ಮತ್ತು ಇಂಜಿನಿಯರಗಳು, ತಮ್ಮ ಜ್ಞಾನ ಮತ್ತು ಕೌಶಲ್ಯಗಳನ್ನು ನಿರಂತರವಾಗಿ ನವೀಕರಿಸುವ ಅಗತ್ಯವಾಗಿದೆ ಎಂದು , ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾನಿಲಯ
Translate »