Karunadu Studio

ಕರ್ನಾಟಕ

Viral News: ಹಾಲ್‌ನಲ್ಲಿ ಎಸಿ ಇಲ್ಲ ಎಂದು ಮದುವೆ ಕ್ಯಾನ್ಸಲ್‌ ಮಾಡಿದ ವಧು! – Kannada News | The bride canceled the marriage for this reason


ಲಖನೌ: ಸೋಶಿಯಲ್ ಮೀಡಿಯಾದಲ್ಲಿ ಮದುವೆಗೆ ಸಂಬಂಧಪಟ್ಟ ಹಲವು ವಿಡಿಯೊಗಳು ವೈರಲ್ ಆಗುತ್ತಿರುತ್ತದೆ. ಸಿಂದೂರ ಹಚ್ಚುವಾಗ ವರನ ಕೈ ನಡುಗಿತು ಎಂದು, ವರನು ಮೆರವಣಿಗೆ ಸಮಯದಲ್ಲಿ ಡ್ಯಾನ್ಸ್‌ ಮಾಡಿದ್ದಾನೆ ಎಂದು ಹೀಗೆ ಕ್ಷುಲಕ ಕಾರಣಕ್ಕೆ ಮದುವೆ ಕ್ಯಾನ್ಸಲ್‌ ಆದ ವಿಡಿಯೊಗಳು ಸೋಶಿಯಲ್‌ ಮೀಡಿಯಾದಲ್ಲಿ ಆಗಾಗ ವೈರಲ್‌ ಆಗುತ್ತಿರುತ್ತವೆ. ಇದೀಗ ಉತ್ತರ ಪ್ರದೇಶದ ಆಗ್ರಾದಲ್ಲಿ ವಧು ಒಬ್ಬಳು ವರನ ಕುಟುಂಬವು ಮದುವೆಗೆ ಬುಕ್‍ ಮಾಡಿದ ಹಾಲ್‌ನಲ್ಲಿ ಎಸಿ ಇಲ್ಲದ ಕಾರಣ ಗರಂ ಆಗಿ ಸಂಬಂಧವನ್ನೇ ಮುರದುಕೊಂಡಿದ್ದಾಳೆ. ಇಷ್ಟು ಸಾಲದಕ್ಕೆ ವಧುವಿನ ಕುಟುಂಬವು ವರದಕ್ಷಿಣೆ ದೂರು ದಾಖಲಿಸಿದೆ. ಈ ಸುದ್ದಿ ಈಗ ವೈರಲ್‌ (Viral Video) ಆಗಿದೆ.

ವರದಿಗಳ ಪ್ರಕಾರ, ಮದುವೆ ಹಾಲ್‌ನಲ್ಲಿ ಸಿಕ್ಕಾಪಟ್ಟೆ ಸೆಕೆ ಇದ್ದಿತ್ತಂತೆ. ಅದು ಅಲ್ಲದೆ ಗಾಳಿ ಕೂಡ ಬೀಸದ ಕಾರಣ ವಧುವಿಗೆ ಉಸಿರುಗಟ್ಟಿದ ಅನುಭವವಾಗಿದೆ. ಇದರಿಂದ ಕೋಪಗೊಂಡ ವಧು ವರನ ಕುಟುಂಬವು ಸ್ಥಳದಲ್ಲಿ ಎಸಿ ವ್ಯವಸ್ಥೆ ಮಾಡಬೇಕೆಂದು ಒತ್ತಾಯಿಸಿದ್ದಾಳೆ. ಇದು ವಾಗ್ವಾದಕ್ಕೆ ಕಾರಣವಾಯಿತು. ಈ ಸಮಯದಲ್ಲಿ ವರನ ಕಡೆಯವರು ವಧು ಮತ್ತು ಆಕೆಯ ಕುಟುಂಬವನ್ನು ನಿಂದಿಸಿದ್ದಾರೆ.

ನಂತರ ಪರಿಸ್ಥಿತಿಯು ವಿಕೋಪಕ್ಕೆ ಹೋಗಿ ವಧು ಮದುವೆಯನ್ನು ರದ್ದುಗೊಳಿಸಿ ಮಂಟಪದಿಂದ ಹೊರ ನಡೆದಿದ್ದಾಳೆ. ಈ ಮದುವೆಯು ತನಗೆ ಗೌರವವನ್ನು ತರುವುದಿಲ್ಲ ಮತ್ತು ಅದು ಮುಂದುವರಿದರೆ ತನ್ನ ಜೀವನವು ನರಕವಾಗುತ್ತದೆ ಎಂದು ಹೇಳಿದ್ದಾಳೆ. ವಿಷಯ ಇಲ್ಲಿಗೆ ಮುಗಿಯದೆ, ಕೊನೆಗೆ ಪೊಲೀಸರನ್ನು ಸ್ಥಳಕ್ಕೆ ಕರೆಸಲಾಯಿತು. ವಧುವಿನ ತಾಯಿ ಕೂಡ ವರನ ಕುಟುಂಬದಿಂದ ಹೆಚ್ಚಿನ ವರದಕ್ಷಿಣೆ ಬೇಡಿಕೆ ಇದೆ ಎಂದು ಆರೋಪಿಸಿ ದೂರು ದಾಖಲಿಸಿದ್ದಾಳೆ. ಈ ಬಗ್ಗೆ ಪೊಲೀಸರು ತನಿಖೆ ನಡೆಸಿದ್ದಾರೆ.

ಈ ರೀತಿಯ ಕ್ಷುಲಕ ಕಾರಣಕ್ಕೆ ಮದುವೆ ರದ್ದಾಗಿರುವುದು ಇದೇ ಮೊದಲಲ್ಲ. ಇತ್ತೀಚಿನ ಪ್ರಕರಣವೊಂದರಲ್ಲಿ, ವರದಕ್ಷಿಣೆಯ ರೂಪದಲ್ಲಿ ನೀಡಲಾದ ವಸ್ತುಗಳ ಬಗ್ಗೆ ವರನು ಅವಮಾನಿಸಿದ ನಂತರ ವಧುವಿನ ಕುಟುಂಬವು ಮದುವೆ ಸಮಾರಂಭಕ್ಕೆ ಕೇವಲ 10 ದಿನಗಳ ಮೊದಲು ಮದುವೆಯನ್ನು ರದ್ದುಗೊಳಿಸಿತ್ತು. ವಧುವಿನ ಕುಟುಂಬವು ವರನ ಮನೆಗೆ ವರದಕ್ಷಿಣಿಯ ರೂಪದಲ್ಲಿ ಪೀಠೋಪಕರಣಗಳನ್ನು ಕಳುಹಿಸಿತ್ತು. ಅದನ್ನು ಆತ ತುಂಬಾ ಚೀಪ್ ಕ್ವಾಲಿಟಿ ಎಂದು ಹೀಯಾಳಿಸಿದ್ದಾನೆ. ಇದರಿಂದಾಗಿ ಕುಟುಂಬವು ಮದುವೆಯನ್ನು ರದ್ದುಗೊಳಿಸಿತು. ಮತ್ತು ವಧುವಿನ ಕಡೆಯ ಈ ನಿರ್ಧಾರಕ್ಕೆ ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ಬೆಂಬಲ ವ್ಯಕ್ತವಾಗಿತ್ತು.

ಈ ಸುದ್ದಿಯನ್ನೂ ಓದಿ:‌Viral Video: ಬರೋಬ್ಬರಿ 10 ವರ್ಷಗಳ ನಂತರ ಹೆತ್ತವರ ಮಡಿಲು ಸೇರಿದ ಮಗ; ಹೃದಯಸ್ಪರ್ಶಿ ವಿಡಿಯೊ ವೈರಲ್!

ಅಲ್ಲದೇ ಬಿಹಾರದ ಕೈಮೂರ್ ಜಿಲ್ಲೆಯಲ್ಲಿ ವರನು ವಧುವಿನ ಹಣೆಗೆ ಸಿಂದೂರ ಹಚ್ಚುವಾಗ ಅವನ ಕೈ ನಡುಗಿದೆ. ಇದರಿಂದ ಕೋಪಗೊಂಡ ವಧು, ವರನಿಗೆ ಹುಚ್ಚು ಹಿಡಿದಿದೆ ಎಂದು ಹೇಳಿ ಆತನನ್ನು ಮದುವೆಯಾಗಲು ನಿರಾಕರಿಸಿದ್ದಾಳೆ. ಈ ಸುದ್ದಿ ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿತ್ತು.



Source link

ADMIN

About Author

Leave a comment

Your email address will not be published. Required fields are marked *

You may also like

ಉತ್ತರ ಕರ್ನಾಟಕ ಕರ್ನಾಟಕ

“ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವದ ದಿನಾಚರಣೆಯಲ್ಲಿ ವಿಭಿನ್ನ ಹಾಗೂ ವಿಶೇಷತೆಯಿಂದ ಆಚರಣೆ”

  • September 16, 2024
ಧಾರವಾಡ ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವದ ದಿನಾಚರಣೆಯಲ್ಲಿ ವಿಭಿನ್ನ ಹಾಗೂ ವಿಶೇಷತೆಯಿಂದ ಆಚರಣೆ ಮಾಡುವ ಮೂಲಕ 95 ಸಾವಿರ ಜನರು ಪ್ರತ್ಯಕ್ಷವಾಗಿ ಭಾಗವಹಿಸಿ ರಾಜ್ಯದಲ್ಲಿಯೇ ನಂಬರ್ 1 ಸ್ಥಾನ ಪಡೆದ
ಕರ್ನಾಟಕ

ನಿಮ್ಮ ವೃತ್ತಿಜೀವನವನ್ನು ನಿರ್ಮಿಸಲು ಮತ್ತು ನಿಮ್ಮ ಭವಿಷ್ಯವನ್ನು ರೂಪಿಸುವಲ್ಲಿ ತಂತ್ರಜ್ಞಾನವನ್ನು ನಿಮ್ಮ ಮಾರ್ಗದರ್ಶಕ ಆಗಿ ಸ್ವೀಕರಿಸಿ

  • September 16, 2024
ಧಾರವಾಡ ಪ್ರಸ್ತುತ ಕಾಲದಲ್ಲಿ ತಂತ್ರಜ್ಞಾನದ ಬದಲಾಗುತ್ತಿರುವ ಮುಖ ಮತ್ತು ಇಂಜಿನಿಯರಗಳು, ತಮ್ಮ ಜ್ಞಾನ ಮತ್ತು ಕೌಶಲ್ಯಗಳನ್ನು ನಿರಂತರವಾಗಿ ನವೀಕರಿಸುವ ಅಗತ್ಯವಾಗಿದೆ ಎಂದು , ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾನಿಲಯ
Translate »