Karunadu Studio

ಕರ್ನಾಟಕ

ಟಿ20ಐ ಶ್ರೇಯಾಂಕದಲ್ಲಿ ಅಗ್ರ ಐದರಿಂದ ಹೊರಬಿದ್ದ ಸೂರ್ಯಕುಮಾರ್‌ ಯಾದವ್‌! ಅಗ್ರ ಸ್ಥಾನ ಯಾರಿಗೆ? – Kannada News | ICC T20I Rankings: Team India Skipper Suryakumar Yadav drops to sixth, Adil Rashid roars to no. 2


ನವದೆಹಲಿ: ಭಾರತ ಟಿ20ಐ ತಂಡದ ನಾಯಕ ಸೂರ್ಯಕುಮಾರ್‌ ಯಾದವ್‌ (Suryakumar Yadav) ಅಂತಾರಾಷ್ಟ್ರೀಯ ಟಿ20ಐ ಬ್ಯಾಟ್ಸ್‌ಮನ್‌ಗಳ ಶ್ರೇಯಾಂಕದಲ್ಲಿ (ICC T20I Rankings) ಭಾರಿ ಹಿನ್ನಡೆ ಅನುಭವಿಸಿದ್ದಾರೆ. ಶ್ರೇಯಾಂಕದಲ್ಲಿ ಅಗ್ರ ಐದರೊಳಗೆ ತಮ್ಮ ಸ್ಥಾನವನ್ನು ಕಳೆದುಕೊಂಡಿದ್ದಾರೆ. ಆದರೆ, ವೆಸ್ಟ್‌ ಇಂಡೀಸ್‌ ವಿರುದ್ದದ ಇತ್ತೀಚಿನ ಟಿ20ಐ ಸರಣಿಯಲ್ಲಿ ಅತ್ಯುತ್ತಮ ಬೌಲಿಂಗ್‌ ಪ್ರದರ್ಶನವನ್ನು ತೋರಿದ್ದ ಇಂಗ್ಲೆಂಡ್‌ ತಂಡದ ಸ್ಪಿನ್ನರ್‌ ಆದಿಲ್‌ ರಶೀದ್‌ (Adil Rashid) ಎರಡನೇ ಸ್ಥಾನಕ್ಕೆ ಲಗ್ಗೆ ಇಟ್ಟಿದ್ದಾರೆ. ಇನ್ನು ಬ್ಯಾಟ್ಸ್‌ಮನ್‌ಗಳ ಶ್ರೇಯಾಂಕದ ಅಗ್ರ ಐದರೊಳಗೆ ಭಾರತದ ಅಭಿಷೇಕ್‌ ಶರ್ಮಾ ಹಾಗೂ ತಿಲಕ್‌ ವರ್ಮಾ ಇದ್ದಾರೆ.

ಇತ್ತೀಚೆಗೆ ಮುಗಿದಿದ್ದ ಟಿ20ಐ ಸರಣಿಯಲ್ಲಿ ವೆಸ್ಟ್‌ ಇಂಡೀಸ್‌ ವಿರುದ್ದ ಇಂಗ್ಲೆಂಡ್‌ ತಂಡ 3-0 ಅಂತರದಲ್ಲಿ ಕ್ಲೀನ್‌ ಸ್ವೀಪ್‌ ಮಾಡಿಕೊಂಡಿತ್ತು. ಈ ಸರಣಿಯಲ್ಲಿ ಅತ್ಯುತ್ತಮ ಪ್ರದರ್ಶನ ತೋರಿದ್ದ ಆಟಗಾರರು ಕೂಡ ಶೇಯಾಂಕದಲ್ಲಿ ಪ್ರಗತಿ ಕಂಡಿದ್ದಾರೆ. ಇದರಲ್ಲಿ ಸ್ಪಿನ್ನರ್‌ ಆದಿಲ್‌ ರಶೀದ್‌ ಮೊದಲನೇ ಪಂದ್ಯದಲ್ಲಿ 22 ಕ್ಕೆ ಒಂದು ವಿಕೆಟ್‌ ಕಿತ್ತಿದ್ದರೆ, ಬ್ರಿಸ್ಟಲ್‌ನಲ್ಲಿ 59 ರನ್‌ ನೀಡಿ ಒಂದು ವಿಕೆಟ್‌ ಪಡೆದಿದ್ದರು. ನಂತರ ಮೂರನೇ ಪಂದ್ಯದಲ್ಲಿ ಅವರು 30 ರನ್‌ ನೀಡಿ ಎರಡು ವಿಕೆಟ್‌ಗಳನ್ನು ಕಬಳಿಸಿದ್ದರು. ಇವರ ಈ ಪ್ರದರ್ಶನದ ಬಲದಿಂದ ಟಿ20ಐ ಬೌಲಿಂಗ್‌ ಶ್ರೇಯಾಂಕದಲ್ಲಿ ವಾನಿಂದು ಹಸರಂಗ ಹಾಗೂ ವರುಣ್‌ ಚಕ್ರವರ್ತಿಯನ್ನು ಹಿಂದಿಕ್ಕಿ ಎರಡನೇ ಸ್ಥಾನಕ್ಕೆ ಪ್ರವೇಶ ಮಾಡಿದ್ದಾರೆ. ನ್ಯೂಜಿಲೆಂಡ್‌ ತಂಡದ ಜಾಕೋಬ್‌ ಡಫಿ ಅವರು ಅಗ್ರ ಸ್ಥಾನದಲ್ಲಿದ್ದಾರೆ. ಇನ್ನು ಆದಿಲ್‌ ರಶೀದ್‌ ಸಹ ಆಟಗಾರ ಬ್ರೈಡನ್‌ ಕಾರ್ಸ್‌ ಅವರು ಎರಡು ವಿಕೆಟ್‌ ಕಿತ್ತುದ್ದರ ಫಲವಾಗಿ 52ನೇ ಸ್ಥಾನದಿಂದ 16ನೇ ಸ್ಥಾನಕ್ಕೇರಿದ್ದಾರೆ.

IND vs ENG: ಇಂಗ್ಲೆಂಡ್‌ ಟೆಸ್ಟ್‌ ಸರಣಿಯಲ್ಲಿ ಮಿಂಚಬಲ್ಲ ಭಾರತೀಯ ಆಟಗಾರರನ್ನು ಆರಿಸಿದ ಸೌರವ್‌ ಗಂಗೂಲಿ!

ಇನ್ನು ಟೀಮ್‌ ಇಂಡಿಯಾ ನಾಯಕ ಸೂರ್ಯಕುಮಾರ್‌ ಯಾದವ್‌ ಅವರು ಆರನೇ ಸ್ಥಾನ್ಕಕ್ಕೆ ಇಳಿದಿದ್ದಾರೆ. ಇವರನ್ನು ಇಂಗ್ಲೆಂಡ್‌ ಬ್ಯಾಟ್ಸ್‌ಮನ್‌ ಜೋಸ್‌ ಬಟ್ಲರ್‌ ಹಿಂದಿಕ್ಕಿದ್ದಾರೆ. ಜೋಸ್‌ ಬಟ್ಲರ್‌ ಖಾತೆಯಲ್ಲಿ 772 ಅಂಕಗಳಿದ್ದರೆ, ಸೂರ್ಯಕುಮಾರ್‌ ಯಾದವ್‌ ಖಾತೆಯಲ್ಲಿ 739 ಅಂಕಗಳಿವೆ. ಭಾರತ ತಂಡದ ತಿಲಕ್‌ ವರ್ಮಾಅವರು ಫಿಲ್‌ ಸಾಲ್ಟ್‌ ಅರವರನ್ನು ಹಿಂದಿಕ್ಕಿ ಮೂರನೇ ಸ್ಥಾನಕ್ಕೆ ಲಗ್ಗೆ ಇಟ್ಟಿದ್ದಾರೆ. 804 ಅಂಕಗಳನ್ನು ಹೊಂದಿರುವ ಅವರು, ಟ್ರಾವಿಸ್‌ ಹೆಡ್‌, ಅಭಿಷೇಕ್‌ ಶರ್ಮಾ ಅವರ ಜೊತೆ ಅಗ್ರ ಮೂರನೇ ಸ್ಥಾನಕ್ಕೆ ಪ್ರವೇಶ ಮಾಡಿದ್ದಾರೆ. 791 ಅಂಕಗಳೊಂದಿಗೆ ಫಿಲ್‌ ಸಾಲ್ಟ್‌ ನಾಲ್ಕನೇ ಸ್ಥಾನಕ್ಕೆ ಇಳಿದಿದ್ದಾರೆ. ಭಾರತದ ಅಭಿಷೇಕ್‌ ಶರ್ಮಾ 829 ಅಂಕಗಳೊಂದಿಗೆ ಎರಡನೇ ಸ್ಥಾನದಲ್ಲಿದ್ದಾರೆ.

ಇಂಗ್ಲೆಂಡ್‌ ತಂಡದ ಬೆನ್‌ ಡಕೆಟ್‌ ಅವರು ಮೂರನೇ ಟಿ20ಐ ಪಂದ್ಯದಲ್ಲಿ 46 ಎಸೆತಗಳಲ್ಲಿ 84 ರನ್‌ಗಳನ್ನು ಸಿಡಿಸಿದ್ದರು ಹಾಗೂ ಇದರ ಫಲವಾಗಿ ಅವರು 48 ಸ್ಥಾನಗಳಲ್ಲಿ ಏರಿಕೆ ಕಂಡಿದ್ದು, 16ನೇ ಸ್ಥಾನಕ್ಕೆ ಪ್ರವೇಶ ಮಾಡಿದ್ದಾರೆ. ಹ್ಯಾರಿ ಬ್ರೂಕ್‌ ಅವರು 6 ಸ್ಥಾನಗಳಲ್ಲಿ ಏರಿಕೆ ಕಂಡಿದ್ದಾರೆ. ಅವರು ಇದೀಗ ಜಂಟಿ 38ನೇ ಸ್ಥಾನವನ್ನು ಅಲಂಕರಿಸಿದ್ದಾರೆ. ಇವರು ವಿಂಡೀಸ್‌ ವಿರುದ್ಧ ಟಿ20ಐ ಸರಣಿಯಲ್ಲಿ ಅಜೇಯ 35 ರನ್‌ ಹಾಗೂ 34 ರನ್‌ ಗಳಿಸಿದ್ದರು.

IND vs ENG: ಶುಭಮನ್‌ ಗಿಲ್‌ಗೆ ನಾಯಕತ್ವ ನೀಡಿರುವ ಬಗ್ಗೆ ಮೈಕಲ್‌ ವಾನ್‌ ಪ್ರತಿಕ್ರಿಯೆ!

ಇನ್ನು ವೆಸ್ಟ್‌ ಇಂಡೀಸ್‌ ತಂಡದ ನಾಯಕ ಶೇಯ್‌ ಹೋಪ್‌ ಅವರು 15ನೇ ಸ್ಥಾನಕ್ಕೆ ಪ್ರವೇಶ ಮಾಡಿದ್ದಾರೆ. ಈ ಸರಣಿಯಲ್ಲಿ ಅವರು 97 ರನ್‌ಗಳನ್ನು ಕಲೆ ಹಾಕಿದ್ದರು. ಇವರು ಎರಡು ಇನಿಂಗ್ಸ್‌ಗಳಲ್ಲಿ 40ಕ್ಕೂ ಅಧಿಕ ರನ್‌ಗಳನ್ನು ಗಳಿಸಿದ್ದರು. ರೊವ್ಮನ್‌ ಪೊವೆಲ್‌ ಅವರು ಕೂಡ ಅಗ್ರ 20ರ ಒಳಗೆ ಪ್ರವೇಶ ಮಾಡಿದ್ದಾರೆ. ಮೂರನೇ ಹಾಗೂ ಕೊನೆಯ ಟಿ20ಐ ಪಂದ್ಯದಲ್ಲಿ ಅವರು 45 ಎಸೆತಗಳಲ್ಲಿ 79 ರನ್‌ಗಳನ್ನು ಬಾರಿಸಿದ್ದರು.

ಆಲ್‌ರೌಂಡರ್‌ಗಳ ಶ್ರೇಯಾಂಕದಲ್ಲಿ ಭಾರತ ತಂಡದ ಹಾರ್ದಿಕ್‌ ಪಾಂಡ್ಯ 252 ಅಂಕಗಳೊಂದಿಗೆ ಅಗ್ರ ಸ್ಥಾನವನ್ನು ಅಲಂಕರಿಸಿದ್ದಾರೆ. ವೆಸ್ಟ್‌ ಇಂಡೀಸ್‌ ವಿರುದ್ಧದ ಟಿ20ಐ ಸರಣಿಯನ್ನು ಕಳೆದುಕೊಂಡಿದ್ದ ಇಂಗ್ಲೆಂಡ್‌ ಆಲ್‌ರೌಂಡರ್‌ ಲಿಯಾಮ್‌ ಲಿವಿಂಗ್‌ಸ್ಟೋನ್‌ ಮೂರು ಸ್ಥಾನಗಳಲ್ಲಿ ಹಿನ್ನಡೆ ಅನುಭವಿಸಿದ್ದು, ಆರನೇ ಸ್ಥಾನಕ್ಕೆ ಇಳಿದಿದ್ದಾರೆ.



Source link

ADMIN

About Author

Leave a comment

Your email address will not be published. Required fields are marked *

You may also like

ಉತ್ತರ ಕರ್ನಾಟಕ ಕರ್ನಾಟಕ

“ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವದ ದಿನಾಚರಣೆಯಲ್ಲಿ ವಿಭಿನ್ನ ಹಾಗೂ ವಿಶೇಷತೆಯಿಂದ ಆಚರಣೆ”

  • September 16, 2024
ಧಾರವಾಡ ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವದ ದಿನಾಚರಣೆಯಲ್ಲಿ ವಿಭಿನ್ನ ಹಾಗೂ ವಿಶೇಷತೆಯಿಂದ ಆಚರಣೆ ಮಾಡುವ ಮೂಲಕ 95 ಸಾವಿರ ಜನರು ಪ್ರತ್ಯಕ್ಷವಾಗಿ ಭಾಗವಹಿಸಿ ರಾಜ್ಯದಲ್ಲಿಯೇ ನಂಬರ್ 1 ಸ್ಥಾನ ಪಡೆದ
ಕರ್ನಾಟಕ

ನಿಮ್ಮ ವೃತ್ತಿಜೀವನವನ್ನು ನಿರ್ಮಿಸಲು ಮತ್ತು ನಿಮ್ಮ ಭವಿಷ್ಯವನ್ನು ರೂಪಿಸುವಲ್ಲಿ ತಂತ್ರಜ್ಞಾನವನ್ನು ನಿಮ್ಮ ಮಾರ್ಗದರ್ಶಕ ಆಗಿ ಸ್ವೀಕರಿಸಿ

  • September 16, 2024
ಧಾರವಾಡ ಪ್ರಸ್ತುತ ಕಾಲದಲ್ಲಿ ತಂತ್ರಜ್ಞಾನದ ಬದಲಾಗುತ್ತಿರುವ ಮುಖ ಮತ್ತು ಇಂಜಿನಿಯರಗಳು, ತಮ್ಮ ಜ್ಞಾನ ಮತ್ತು ಕೌಶಲ್ಯಗಳನ್ನು ನಿರಂತರವಾಗಿ ನವೀಕರಿಸುವ ಅಗತ್ಯವಾಗಿದೆ ಎಂದು , ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾನಿಲಯ
Translate »