Karunadu Studio

ಕರ್ನಾಟಕ

Indi (Vijayapura) News: ವಿಕಲಚೇತನರಿಗೆ, ವಯೋವೃದ್ದರಿಗೆ ಕಾಳಜಿ ವಹಿಸಿ: ಉಪವಿಭಾಗಾಧಿಕಾರಿ ಅನುರಾಧಾ ವಸ್ತ್ರದ – Kannada News | Take care of the disabled and the elderly: Sub-Divisional Officer Anuradha Vastra


ಇಂಡಿ: ಸರಕಾರವು ಬಡವರಿಗಾಗಿ ವೃದ್ದರಿಗಾಗಿ ,ವಿಕಲಚೇತನರಿಗಾಗಿ ಅನೇಕ ಯೋಜನೆಗಳು ಮಾಡಿದ್ದು ಅಧಿಕಾರಿಗಳು ಪ್ರಮಾಣಿಕವಾಗಿ ತಲುಪಿಸಿ ಇಂತಹ ಜನಸಮುದಾಯಕ್ಕೆ ಬಹಳ ಕಾಳಜಿ ವಹಿಸಿ ಎಂದು ಉಪವಿಭಾಗಾಧಿಕಾರಿ ಅನುರಾಧಾ ವಸ್ತ್ರದ ಹೇಳಿದರು.

ಸಂಗೋಗಿ ಗ್ರಾಮದಲ್ಲಿ ಹಮ್ಮಿಕೊಂಡ ಪಿಂಚಣಿ ಅದಾಲತ್ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಇಂದು ೨೨ ಅರ್ಜಿಗಳು ಸ್ವೀಕರಿಸಿದ್ದು ೨೨ ಅರ್ಜಿಗಳು ಮಂಜೂರಾತಿ ನೀಡಿದೆ ಅದರಲ್ಲಿ ವಯೋವೃದ್ದರಿಗೆ ಮಾಶಾಸನ ೧೫ ವಿಕಲಚೇತನ ೧ ಸೇರಿದಂತೆ ೨೨ ಮಂಜೂರಾತಿ ನೀಡಲಾಗಿದೆ ಎಂದರು. ಗ್ರೇಡ್ ೨ ತಹಶೀಲ್ದಾರ ಧನಪಾಲ ದೇವೂರ ,ಎ.ಎ ಗುನ್ನಾಪೂರ ಮಾತನಾಡಿದರು. ಅಭಿವೃದ್ದಿ ಅಧಿಕಾರಿ ಅಶೋಕ ಹೊನ್ನವಾಡ ಸ್ವಾಗತಿಸಿ, ಪ್ರಸ್ತಾವಿಕ ಮಾತನಾಡಿದರು.

ಮಲ್ಲು ಪೂಜಾರಿ, ಗ್ರಾ.ಪಂ ಅಭಿವೃದ್ದಿ ಅಧಿಕಾರಿ ಅಶೋಕ ಹೊನವಾಡ, ಎನ್ ಕೆ ಪೂಜಾರಿ, ಚೌಡಪ್ಪ ಕುಂಬಾರ, ಅಶೋಕಗೌಡ ಬಿರಾದಾರ, ಬಳಾಸಾಹೇಬ ಪಾಟೀಲ, ಎನ್.ಜಿ ಬಿಸನಾಳ, ಎಚ್.ಡಿ ಗೌರ, ಸಿದ್ದು ಕುಂಬಾರ, ರಮೇಶ ಕುಂಬಾರ, ಶ್ರೀಶೈಲ ಬಿರಾದಾರ, ನಿಂಗು ಭಂಡಾರಿ ಸೇರಿದಂತೆ ಗ್ರಾಮಸ್ಥರು ಗ್ರಾ.ಪಂ ಅಧ್ಯಕ್ಷರು ಸದಸ್ಯರು ಇದ್ದರು.



Source link

ADMIN

About Author

Leave a comment

Your email address will not be published. Required fields are marked *

You may also like

ಕರ್ನಾಟಕ

Microsoft: Empowering the Digital World

Microsoft is a global technology company known for shaping the modern digital experience. From its iconic Windows operating system to
ಉತ್ತರ ಕರ್ನಾಟಕ ಕರ್ನಾಟಕ

“ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವದ ದಿನಾಚರಣೆಯಲ್ಲಿ ವಿಭಿನ್ನ ಹಾಗೂ ವಿಶೇಷತೆಯಿಂದ ಆಚರಣೆ”

  • September 16, 2024
ಧಾರವಾಡ ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವದ ದಿನಾಚರಣೆಯಲ್ಲಿ ವಿಭಿನ್ನ ಹಾಗೂ ವಿಶೇಷತೆಯಿಂದ ಆಚರಣೆ ಮಾಡುವ ಮೂಲಕ 95 ಸಾವಿರ ಜನರು ಪ್ರತ್ಯಕ್ಷವಾಗಿ ಭಾಗವಹಿಸಿ ರಾಜ್ಯದಲ್ಲಿಯೇ ನಂಬರ್ 1 ಸ್ಥಾನ ಪಡೆದ
Translate »