Karunadu Studio

ಕರ್ನಾಟಕ

ಭಾರತದಲ್ಲಿ ಕೌಶಲ ಆಧರಿತ ಗೇಮಿಂಗ್‌ನ ಚಾಂಪಿಯನ್ ಆಗಲು ಕೃಷ್ಣ ಅಭಿಷೇಕ್ ಜೊತೆಗೆ #ಚಲೋಜೀತ್‌ಕಿಚಾಲ್‌ ಎಂಬ ಅಭಿಯಾನ ಆರಂಭಿಸಿದ ರಶ್ ಬೈ ಹೈಕ್ – Kannada News | Rush by Hike launches #ChalojeetKiChaal campaign with Krishna Abhishek to champion skill-based gaming in India


ಭಾರತದ ರಿಯಲ್ ಮನಿ ಗೇಮಿಂಗ್ ವಲಯವು ಖುಷಿ ಮತ್ತು ದೇಸಿ ಸಂಭ್ರಮದಿಂದ ಇನ್ನಷ್ಟು ಉತ್ತೇಜಿತವಾಗಿದೆ. ಹೈಕ್‌ನ ಪ್ರಮುಖ ಕೌಶಲ ಆಧರಿತ ಕ್ಯಾಶುವಲ್ ಗೇಮಿಂಗ್ ಪ್ಲಾಟ್‌ಫಾರಂ ಆಗಿರುವ ರಷ್ ತನ್ನ ಪ್ರಪ್ರಥಮ ಬ್ರ್ಯಾಂಡ್ ಕ್ಯಾಂಪೇನ್ #ಚಲೋಜೀತ್‌ಕಿಚಾಲ್‌ ಅನ್ನು ಅನಾವರಣ ಗೊಳಿಸಿದ್ದು, ಇದರಲ್ಲಿ ಜನಪ್ರಿಯ ನಟ ಹಾಗೂ ಕಾಮಿಡಿಯನ್ ಕೃಷ್ಣ ಅಭಿಷೇಕ್ ಕಾಣಿಸಿಕೊಂಡಿ ದ್ದಾರೆ. ಇದರಲ್ಲಿ ಹಾಸ್ಯ, ಖುಷಿ ಮತ್ತು ಕ್ಲಾಸಿಕ್ ಆದ ದೈನಂದಿನ ಜಂಜಾಟವೆಲ್ಲವೂ ಇವೆ. ಭಾರತದ ತೀಕ್ಷ್ಣಮತಿಯ ಆಟಗಾರರಲ್ಲಿ ಉತ್ಸಾಹ ಮೂಡಿಸುವ ಉದ್ದೇಶವನ್ನು ಈ ಅಭಿಯಾನವು ಹೊಂದಿದೆ.

ಈವರೆಗೆ ರಶ್ ಕೈಗೊಂಡ ಸಂವಹನ ವಿಧಾನಗಳೆಲ್ಲಕ್ಕಿಂತ ಅತ್ಯಂತ ಹೆಚ್ಚು ಮಹತ್ವಾಕಾಂಕ್ಷಿ ಆಗಿರುವ ಈ ಐದು ವಾರದ ಅಭಿಯಾನವು ಟಿವಿ, ರೇಡಿಯೋ ಮತ್ತು ಡಿಜಿಟಲ್‌ ಮಾಧ್ಯಮದಲ್ಲಿ ನಡೆಯಲಿದ್ದು, ಜೂನ್ 10 ರಿಂದ ಆರಂಭವಾಗಲಿದೆ. ವೇಗವಾಗಿ ಬೆಳೆಯುತ್ತಿರುವ ಹಿಂದಿ ಭಾಷಿಕ ಮಾರ್ಕೆಟ್‌ಗಳಲ್ಲಿನ 20 ಮಿಲಿಯನ್ ಬಳಕೆದಾರರನ್ನು ತಲುಪುವ ಗುರಿಯನ್ನು ಹಾಕಿಕೊಳ್ಳಲಾಗಿದೆ.

ಇದನ್ನೂ ಓದಿ: Vishweshwar Bhat Column: ವಿಮಾನ ನೀರಿನ ಮೇಲಿಳಿದರೆ….?

ವಾಸ್ತವವಾಗಿ #ಚಲೋಜೀತ್‌ಕಿಚಾಲ್ ಅಭಿಯಾನವು ಪ್ರತಿ ದಿನವೂ ಚಾಂಪಿಯನ್ ಆಗಿರುವವ ರನ್ನೇ ಗುರಿಯಾಗಿಸಿದೆ. ಜೀವನದ ಕ್ಷಣಗಳನ್ನು ತಮ್ಮ ಕೌಶಲ, ವಿಶಿಷ್ಟತೆ ಮತ್ತು ಆತ್ಮೀಯ ಭಾವ ದಿಂದ ಎದುರಿಸುವವರು ಮತ್ತು ದೈನಂದಿನ ಸವಾಲುಗಳನ್ನೇ ವಿಜಯದ ಕ್ಷಣಗಳನ್ನಾಗಿ ಪರಿವರ್ತಿ ಸುವವರನ್ನು ಇದು ಗುರಿಯಾಗಿಸಿಕೊಂಡಿದೆ. ರಷ್‌ನ ಫ್ಲಾಗ್‌ಶಿಪ್ ಗೇಮ್ ಲುಡೋ ಆಗಿದ್ದು, ಕೃಷ್ಣ ಅಭಿಷೇಕ್ ಇದಕ್ಕೆ ತನ್ನ ಉತ್ಸಾಹವನ್ನು ಧಾರೆಯೆರೆಯಲಿದ್ದಾರೆ. ಅಲ್ಲದೆ, ಅವರ ಜೊತೆಗೆ ಹಾಸ್ಯ ವಂತೂ ಪ್ರಮುಖವಾಗಿ ಇರಲಿದೆ. ಹೀಗಾಗಿ, ಜೀವನ ಮತ್ತು ಆಟ ಇವೆರಡೂ ಮುಖ್ಯ ಎಂಬುದನ್ನು ಇದು ಸಾಬೀತುಪಡಿಸುತ್ತದೆ. ಮೂವ್ ಮತ್ತು ಸ್ಮಾರ್ಟ್ ಆಗಿ ಚಿಂತನೆ ಮಾಡುವು ದೆರಡೂ ಅತ್ಯುತ್ತಮ ಸಂಯೋಜನೆ ಎಂಬುದನ್ನು ಇದು ಸೂಚಿಸುತ್ತದೆ.

ಸ್ಮಾರ್ಟ್ ಆಗಿ ಆಟವನ್ನಾಅಡುವ, ಕಠಿಣ ಪರಿಶ್ರಮ ವಹಿಸುವ ಮತ್ತು ಯಾವ ಕಾರ್ಯತಂತ್ರ ಹಾಗೂ ಕೌಶಲವನ್ನು ಬಳಸಿಕೊಂಡು ಆಟವನ್ನು ಗೆಲ್ಲಬೇಕು ಎಂದು ತಿಳಿದಿರುವ ಭಾರತೀಯರನ್ನು ಈ #ಚಲೋಜೀತ್‌ಕಿಚಾಲ್ ಕೇಂದ್ರೀಕರಿಸಿದೆ. ಈ ಅಭಿಯಾನವು ಎಷ್ಟು ಸಾಧ್ಯವೋ ಅಷ್ಟು ಮೋಜಿನದಾಗಿರಬೇಕು ಮತ್ತು ಅತ್ಯಂತ ವೇಗದ್ದಾಗಿರಬೇಕು. ಯಾಕೆಂದರೆ, ಗೇಮ್ ಅನ್ನು ಒಂದು ಮುಗುಳ್ನಗೆಯೊಂದಿಗೆ ಆಡಬೇಕು ಎಂಬ ಧ್ಯೇಯವನ್ನು ಈ ಪ್ಲಾಟ್‌ಫಾರಂ ಬಯಸುತ್ತದೆ” ಎಂದು ಹೈಕ್‌ನ ಸಿಎಫ್‌ಒ ಮನೀಶ್ ಕುಮಾರ್ ಹೇಳುತ್ತಾರೆ.

ಆಕರ್ಷಕ ವಿಧಾನದಲ್ಲಿ ಕಥೆ ಹೇಳುವ ಈ ಅಭಿಯಾನವು 2ನೇ ಮತ್ತು 3ನೇ ಹಂತದ ನಗರಗಳಲ್ಲಿ ರುವ ಯುವಕರು, ಮಹತ್ವಾಕಾಂಕ್ಷೆ ಇರುವ ಭಾರತೀಯರನ್ನು ಗುರಿಯಾಗಿಸಿಕೊಂಡಿದೆ. ಈ ಯುವಕರಿಗೆ ಮೌಲ್ಯ, ಸ್ಟೇಟಸ್ ಮತ್ತು ಮನರಂಜನೆ ಎಲ್ಲವೂ ಮುಖ್ಯವಾಗಿರುತ್ತವೆ.

“ಭಾರತದ ರಿಯಲ್ ಮನಿ ಗೇಮಿಂಗ್ ಉದ್ಯಮವು ತ್ವರಿತವಾಗಿ ಬೆಳವಣಿಗೆ ಕಾಣಿಸುತ್ತಿದೆ. ಇದು ಕೌಶಲ, ಸಂಸ್ಕೃತಿ ಮತ್ತು ಸುಲಭ ಲಭ್ಯತೆಯನ್ನು ಆಧರಿಸಿದೆ. ಈ ಅಭಿಯಾನಕ್ಕೆ ಕೃಷ್ಣ ಅತ್ಯಂತ ಸಹಜ ಆಯ್ಕೆಯಾಗಿದ್ದಾರೆ. ಅವರು ಭಾರತದ ಉತ್ಸಾಹ, ಮೋಜು, ಬಾಂಧವ್ಯ ಮತ್ತು ಖುಷಿಯನ್ನು ಪ್ರತಿನಿಧಿಸುತ್ತಾರೆ. ಅವರ ಧ್ಯೇಯವನ್ನು ಈ ಜಾಹೀರಾತು ಪ್ರತಿಫಲಿಸುತ್ತದೆ. ಈ ಗೇಮಿಂಗ್ ಅನುಭವ ದಲ್ಲಿ ಕೌಶಲಕ್ಕೆ ಪ್ರಮುಖ ಆದ್ಯತೆ ನೀಡಲಾಗಿದ್ದು, ಮೋಜು ಕೂಡ ಇರುತ್ತದೆ. ಇದು ಭವಿಷ್ಯದ ಭಾರತವು ಎದುರು ನೋಡುತ್ತಿರುವ ಗೇಮಿಂಗ್ ವಲಯವಾಗಿದೆ” ಎಂದು ಹೈಕ್ ಸಿಎಫ್‌ಒ ಮನೀಶ್ ಕುಮಾರ್ ಹೇಳಿದ್ದಾರೆ.



Source link

ADMIN

About Author

Leave a comment

Your email address will not be published. Required fields are marked *

You may also like

ಕರ್ನಾಟಕ

Microsoft: Empowering the Digital World

Microsoft is a global technology company known for shaping the modern digital experience. From its iconic Windows operating system to
ಉತ್ತರ ಕರ್ನಾಟಕ ಕರ್ನಾಟಕ

“ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವದ ದಿನಾಚರಣೆಯಲ್ಲಿ ವಿಭಿನ್ನ ಹಾಗೂ ವಿಶೇಷತೆಯಿಂದ ಆಚರಣೆ”

  • September 16, 2024
ಧಾರವಾಡ ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವದ ದಿನಾಚರಣೆಯಲ್ಲಿ ವಿಭಿನ್ನ ಹಾಗೂ ವಿಶೇಷತೆಯಿಂದ ಆಚರಣೆ ಮಾಡುವ ಮೂಲಕ 95 ಸಾವಿರ ಜನರು ಪ್ರತ್ಯಕ್ಷವಾಗಿ ಭಾಗವಹಿಸಿ ರಾಜ್ಯದಲ್ಲಿಯೇ ನಂಬರ್ 1 ಸ್ಥಾನ ಪಡೆದ
Translate »