Karunadu Studio

ಕರ್ನಾಟಕ

ಸಿಲಿಕಾನ್ ಸಿಟಿಯಲ್ಲಿ ವೊಡಾಫೋನ್ ನ 5ಜಿ ನೆಟ್ವರ್ಕ್ ಅನಾವರಣ – Kannada News | Vodafone unveils 5G network in Silicon City


ಬೆಂಗಳೂರು: ಟೆಲಿಕಾಂ ನೆಟ್ವರ್ಕ್ ನಲ್ಲಿ ಹೆಚ್ಚು ಹೆಸರು ಗಳಿಸಿರುವ ವಾಲ್ಗ ಇನ್ ಫ್ರ ಕಂಪನಿಯ ಸಿಇಓ,ಎಂಡಿ ನಂಬರ್ 1,ಶ್ರಿಧರ್ ರಾವ್ ಅವರು ಬೆಂಗಳೂರಿನರಿಗೆ ಹೊಸದಾಗಿ 5ಜಿ ನೆಟ್ವರ್ಕ್ ಸೌಲಭ್ಯವನ್ನು ನೀಡುವ ಲೋಗೊ ಉದ್ಘಾಟನೆ ಮಾಡಿದರು.

ದೊಮ್ಮಲೂರಿನ ವೊಡಾಫೋನ್ ನ ಮುಖ್ಯ ಕಚೇರಿಯಲ್ಲಿ 5ಜಿ ಲೋಗೊ ಉದ್ಘಾಟನೆ ಮಾಡಿ ಮಾತನಾಡಿದ ಅವರು, ಬೆಂಗಳೂರು ಸಿಲಿಕಾನ್ ಸಿಟಿ, ಐಟಿ ಹಬ್ ಆಗಿ ಬೆಳೆಯುತ್ತಿರುವ ನಗರ ವಾಗಿದೆ, ಹೀಗಾಗಿ ಎಲ್ಲೆಡೆಯೂ ಸಹ ಟೆಲಿಕಾಂ ನೆಟ್ವರ್ಕ್ಗಳ ಅವಶ್ಯಕತೆಗಳು ಇದ್ದು, ಜನರಿಗೆ ನೆಟ್ವರ್ಕುಗಳ ಸಮಸ್ಯೆ ಆಗದಂತೆ ಕುಂತಲ್ಲಿಯೇ ನೆಟ್ವರ್ಕ್ ಸಿಗುವ ಹಾಗೆ ಮಾಡುವುದೇ ವಾಲ್ಗ ಇನ್ ಫ್ರ ಕಂಪನಿಯ ಮುಖ್ಯ ಉದ್ದೇಶವಾಗಿದೆ.

ಇದನ್ನೂ ಓದಿ: Viral Video: ರೈಲು ಪ್ರಯಾಣದ ವೇಳೆ ಪಿಜ್ಜಾ ಆರ್ಡರ್ ಮಾಡಿದ ವಿದೇಶಿ ಯುವಕ; ಮುಂದೆ ಆಗಿದ್ದೇನು ಗೊತ್ತಾ?

ನಮ್ಮ ಸಂಸ್ಥೆಯು ವೊಡಾಫೋನ್ ಕಂಪನಿಯ ಜೊತೆ ಹೊಂದಾಣಿಕೆ ಮಾಡಿಕೊಂಡು ಬೆಂಗಳೂರಿ ನಲ್ಲಿ ಮೊದಲ ಬಾರಿಗೆ 5g ನೆಟ್ವರ್ಕ್ ಅನ್ನು ಉದ್ಘಾಟಿಸಲಾಗಿದೆ. ವಾಲ್ಗ ಇನ್ ಫ್ರ ಕಂಪನಿಯು ಸಾಮಾನ್ಯ ಜನರಿಗೂ ಬೆರಳ ತುದಿಯಲ್ಲೇ ನೆಟ್ವರ್ಕ್ಗಳು ಸಿಗುವಂತೆ ಮಾಡಲಾಗಿದೆ.  ಈಗಾಗಲೇ ಸಂಸ್ಥೆಯು ಮುಂಬೈ, ನವದೆಹಲಿ, ಪಾಟ್ನ, ಚಂಡೀಗಡ್ ನಲ್ಲಿ ವೊಡಾಫೋನ್ 5g ನೆಟ್ವರ್ಕ್ ಅನ್ನು ಅನಾವರಣ ಮಾಡಿ ಯಶಸ್ವಿಗೊಳಿಸಲಾಗಿದೆ.

ಅದೇ ಮಾದರಿಯಲ್ಲಿ ಕರ್ನಾಟಕದ ಬೆಂಗಳೂರಿನಲ್ಲಿ ಮೊದಲ ಬಾರಿಗೆ ಸಂಸ್ಥೆಯು 5ಜಿ ನೆಟ್ವರ್ಕ್ ಪ್ರಾರಂಭ ಮಾಡಲಾಗಿದೆ. ಸಂಸ್ಥೆಯ ಮುಖ್ಯ ಉದ್ದೇಶ ವೊಡಾಫೋನ್ ಬಳಕೆದಾರರಿಗೆ ಅದರಲ್ಲೂ ಸಂಸ್ಥೆಯ ನೆಟ್ವರ್ಕ್ ಎಲ್ಲೆಡೆಯೂ ಯಾರಿಗೂ ತೊಂದರೆಯಾಗದಂತೆ ಸಿಗುವ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸಿಕೊಂಡು ಬರುತ್ತಿದೆ ಎಂದರು. ವಾಲ್ಗ ಇನ್ ಫ್ರ ಕಂಪನಿಯ ತರಂಗತರದಲ್ಲಿ ಇಲ್ಲಿಯ ವರೆಗೂ ಯಾವುದೇ ದೋಷಗಳು ಕಂಡು ಬಂದಿಲ್ಲ, ಅದರ ವಿಶ್ವಾಸವನ್ನು ಮುಂದೆಯೂ ಉಳಿಸಿಕೊಂಡು ಬರಲಾಗುತ್ತದೆ ಎಂದು ವಿಶ್ವಾಸವನ್ನು ಸಹ ಇದೇ ವೇಳೆ ವ್ಯಕ್ತಪಡಿಸಿದರು.

ವೊಡಾಫೋನ್ 5ಜಿ ನೆಟ್ವರ್ಕ್ ಉದ್ಘಾಟನಾ ಕಾರ್ಯಕ್ರಮದಲ್ಲಿ ವೊಡಪೊನ್ ಕಂಪನಿ ಕರ್ನಾಟಕ ವ್ಯವಹಾರದ ಮುಖ್ಯಸ್ಥರಾದ ಆನಂದ ಧನಿ, ಆಪರೇಷನ್ ನ ಮುಖ್ಯಸ್ಥರಾದ ರೋಹಿತ್ ಟಂಡ, ನೆಟ್ವರ್ಕ್ ವಿಭಾಗದ ಮುಖ್ಯಸ್ಥರಾದ ರಾಜೇಶ್ ಸಿಂಗ್, ಹಬ್ ತಂತ್ರಜ್ಞಾನದ ಮುಖ್ಯಸ್ಥರಾದ ಅರುಣ ಪಿಡಿಕಿಟಿ ಸೇರಿದಂತೆ ಸಂಸ್ಥೆಯ ಮುಖ್ಯಸ್ಥರು, ಪದಾಧಿಕಾರಿಗಳು ಇದೇ ವೇಳೆ ಉಪಸ್ಥಿತರಿದ್ದರು.



Source link

ADMIN

About Author

Leave a comment

Your email address will not be published. Required fields are marked *

You may also like

ಕರ್ನಾಟಕ

Microsoft: Empowering the Digital World

Microsoft is a global technology company known for shaping the modern digital experience. From its iconic Windows operating system to
ಕರ್ನಾಟಕ

Microsoft: Empowering the Digital World

Microsoft is a global technology company known for shaping the modern digital experience. From its iconic Windows operating system to
Translate »