Karunadu Studio

ಕರ್ನಾಟಕ

ರೈತರನ್ನು ಪಾಲುದಾರರನ್ನಾಗಿ ಮಾಡುವ ಯೋಜನೆ ಜಾರಿಗೊಳಿಸಿ : ಎನ್.ಹೆಚ್.ಶಿವಶಂಕರ್‌ರೆಡ್ಡಿ ಅಭಿಮತ – Kannada News | Implement a scheme to make farmers partners: N.H. Sivashankar Reddy’s opinion


ಚಿಕ್ಕಬಳ್ಳಾಪುರ : ಪಿ.ಎಂ.ಕುಸುಮ್ ಕಾಂಪೋನೆಂಟ್ -ಸಿ ಅಡಿಯಲ್ಲಿ ಅನುಷ್ಠಾನವಾಗುತ್ತಿರುವ ಸೌರೀಕರಣ ಯೋಜನೆಯಲ್ಲಿ ರೈತರ ಭೂಮಿಗೆ 25 ಸಾವಿರ ಬಾಡಿಗೆ ನೀಡುವ ಜತೆಗೆ ಅವರನ್ನು ಈ ಯೋಜನೆಯ ಪಾಲುದಾರರನ್ನಾಗಿ ಮಾಡುವ ಮೂಲಕ ಅವರಿಗೂ ಇದರ ಲಾಭ ಬರುವಂತೆ ಮಾಡಬೇಕಿದೆ ಎಂದು ಮಾಜಿ ಸಚಿವ ಹೆಚ್.ಎನ್.ಅಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ಎನ್.ಹೆಚ್. ಶಿವಶಂಕರ್‌ರೆಡ್ಡಿ ಅವರಿಗೆ ಮನವಿ ಮಾಡಿದರು.

ನಗರದ ನೇತಾಜಿ ಕ್ರೀಡಾಂಗಣದಲ್ಲಿ ಇಂಧನ ಇಲಾಖೆ ಮತ್ತು ಬೆಸ್ಕಾಂವತಿಯಿAದ ಏರ್ಪಡಿಸಿದ್ದ  ಸ್ಥಾಪಿಸಿರುವ ಸೋಲಾರ್ ಘಟಕ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಗೌರಿಬಿದನೂರು ನಗರದ ಶೇ 90ರಷ್ಟು ಅಭಿವೃದ್ದಿಗೆ ಅನುದಾನ ನೀಡಿ ಆಶೀರ್ವಾದ ಮಾಡಿರುವ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ನಮ್ಮ ನಗರಕ್ಕೆ ಬಂದಿರುವುದು ಭಾಗ್ಯದ ಬಾಗಿಲು ತೆರೆದಂತಾಗಿದೆ.ನನ್ನನ್ನು ಹೆಚ್.ಎನ್.ಅಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷರನ್ನಾಗಿ ನೇಮಕ ಮಾಡಿದ್ದ ಕ್ಕಾಗಿ ತಾಲೂಕಿನ ಜನತೆಯ ಪರವಾಗಿ ಅಭಿನಂದನೆಗಳನ್ನು ಅರ್ಪಿಸುತ್ತೇನೆ ಎಂದರು.

ಇದನ್ನೂ ಓದಿ:Chikkaballapur News: ತಾತ್ಕಾಲಿಕ ಹಾರಾಟ ನಿಷೇಧ ವಲಯ: ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ ಆದೇಶ

ಹೆಚ್.ಎನ್.ಅಭಿವೃದ್ದಿ ಪ್ರಾಧಿಕಾರಕ್ಕೆ ೫೦ ಕೋಟಿ ಅನುದಾನ ಮಂಜೂರು ಮಾಡಲು ನಂದಿಗಿರಿಧಾಮದ ಸಂಪುಟ ಸಭೆಯಲ್ಲಿ ಘೋಷಣೆ ಮಾಡಬೇಕು. ನಮ್ಮ ತಾಲೂಕಿನಲ್ಲಿ ರಾಮಕೃಷ್ಣಾಶ್ರಮ ಶಾಲೆಗೆ ಜಕ್ಕೇನಹಳ್ಳಿ ಸರ್ವೆನಂಬರ್‌ನಲ್ಲಿ ೮ ಎಕರೆ ಭೂಮಿ ಗುರುತಿಸಿದ್ದು ಸರಕಾರ ಪ್ರಸ್ತಾವನೆ ಸಲ್ಲಿಸಲಾಗಿದೆ. ಕೂಡಲೇ ಈ ಭೂಮಿಯನ್ನು ಮಂಜೂರು ಮಾಡಿ ಒದಗಿಸಿಕೊಡುವ ಕೆಲಸ ಮಾಡಬೇಕು.

ಶಾದಿಮಹಲ್ ಅಪೂರ್ಣವಾಗಿದ್ದು ಅದರ ಅಭಿವೃದ್ದಿಗೆ ೩ ಕೋಟಿ ಅನುದಾನ ಕೊಡಬೇಕು. ಕುಡುಮಲಕುಂಟೆ ಕೈಗಾರಿಕಾ ಪ್ರದೇಶಕ್ಕೆ ಕುಡಿಯುವ ನೀರಿನ ಸಮಸ್ಯೆಯಿದೆ.ಹೆಚ್.ಎನ್.ವ್ಯಾಲಿ ಯೋಜನೆಯಲ್ಲಿ ಕನಿಷ್ಟ ೧೦ ಎಂಎಲ್‌ಡಿ ನೀರನ್ನು ಒದಗಿಸಿಕೊಡಬೇಕು.ಬೆಂಗಳೂರಿನ ನ್ಯಾಷನಲ್ ಕಾಲೇಜು ಮೆಟ್ರೋ ಸ್ಟೇಷನ್ನಿಗೆ ಡಾ.ಹೆಚ್.ಎನ್.ಮೆಟ್ರೋ ಸ್ಟೇಷನ್ ಎಂದು ಹೆಸರಿಡಲು ಮನವಿ ಮಾಡುತ್ತೇನೆ.

ಮುದ್ದೇನಹಳ್ಳಿಯಲ್ಲಿರುವ ವಿಶ್ವೇಶ್ವರಯ್ಯ ಅವರ ಮನೆ, ಸ್ಮಾರಕ ಅಭಿವೃದ್ಧಿಪಡಿಸಲು ನಂದಿ ಬೆಟ್ಟದಲ್ಲಿ ನಡೆಯುವ ಸಂಪುಟ ಸಭೆಯಲ್ಲಿ ತೀರ್ಮಾನ ತೆಗೆದುಕೊಳ್ಳಬೇಕು ಎಂದು ಮನವಿ ಮಾಡಿದರು. ಹೆಚ್.ಎನ್ ಹುಟ್ಟುಹಬ್ಬವನ್ನು ವೈಚಾರಿಕ ದಿನಾಚರಣೆಯಾಗಿ ಆಚರಿಸಲು ಘೋಷಣೆ ಮಾಡಬೇಕು.ವಿಧುರಾಶ್ವತ್ಥದಲ್ಲಿ ಗಾಂಧೀ ಭಾರತ ಯೋಜನೆಯಲ್ಲಿ ಅಭಿವೃದ್ಧಿಗೆ ಅವಕಾಶ ಮಾಡಿಕೊಡಬೇಕು ಎಂದು ಮನವಿ ಮಾಡಿದರು.



Source link

ADMIN

About Author

Leave a comment

Your email address will not be published. Required fields are marked *

You may also like

ಕರ್ನಾಟಕ

Microsoft: Empowering the Digital World

Microsoft is a global technology company known for shaping the modern digital experience. From its iconic Windows operating system to
ಕರ್ನಾಟಕ

Microsoft: Empowering the Digital World

Microsoft is a global technology company known for shaping the modern digital experience. From its iconic Windows operating system to
Translate »