Karunadu Studio

ಕರ್ನಾಟಕ

ದಯಾ ಕಿರಣ ಪೋಷಕರ ಆಶಾಕಿರಣ: ಅನಾಥ ಮಕ್ಕಳ ಪಾಲಿಗೆ ಸುರಕ್ಷಿತ ತಾಣ – Kannada News | Daya Kirana is a ray of hope for parents: a safe haven for orphaned children


ರಂಗನಾಥ ಕೆ.ಹೊನ್ನಮರಡಿ, ತುಮಕೂರು

ಮಕ್ಕಳ ರಕ್ಷಣೆಯಲ್ಲಿ ರಾಜ್ಯದಲ್ಲೇ ಪ್ರಥಮ

ಅನಾಥ ಮಕ್ಕಳ ಪಾಲಿನ ಬೆಳಕು ದತ್ತು ಸಂಸ್ಥೆ

ಸಮಾಜಮುಖಿ ಸೇವೆಯ ಒಂದು ಎನ್‌ಜಿಒ

ಉಭಯ ಸರಕಾರಗಳಿಂದ ಪ್ರಶಂಸೆ ಗಳಿಸಿದೆ.

ಅನಾಥ ಮಕ್ಕಳನ್ನು ರಕ್ಷಿಸಿ ಆರೈಕೆ ಮಾಡುತ್ತಿರುವ ಜಿಲ್ಲೆಯ ಕುಣಿಗಲ್ ತಾಲೂಕಿನ ವಾಣಿಗೆರೆಯ ದಯಾಕಿರಣ ಸಂಸ್ಥೆ ರಾಜ್ಯದಲ್ಲಿಯೇ ಮಾದರಿಯಾಗಿದೆ. ಏಡ್ಸ್ ಪೀಡಿತ ಮಕ್ಕಳನ್ನು ಪೋಷಿಸು ತ್ತಿರುವ ದಯಾಭವನ ಸಂಸ್ಥೆಯಡಿ 2019ರಿಂದ ಸೇವೆ ಮಾಡುತ್ತಿರುವ ‘ದಯಾ ಕಿರಣ’ ಸಂಸ್ಥೆ ಇಲ್ಲಿಯವರೆಗೂ 210 ಅನಾಥ ಮಕ್ಕಳನ್ನು ರಕ್ಷಿಸಿದೆ.

ಮಕ್ಕಳ ಆರೈಕೆಯೇ ಆದ್ಯತೆ

ಈಗಾಗಲೇ 119 ಮಕ್ಕಳನ್ನು ದೇಶ, ವಿದೇಶದ ಪೋಷಕರಿಗೆ ಕಾನೂನಾತ್ಮಕವಾಗಿ ದತ್ತು ನೀಡಿದೆ. ಪ್ರಸ್ತುತ ಕೇಂದ್ರದಲ್ಲಿ ವಿಶೇಷ ಮಕ್ಕಳು ಸೇರಿದಂತೆ 18 ಮಕ್ಕಳಿದ್ದಾರೆ. ಪೋಷಕರಿಗಿಂತ ಮಿಗಿಲಾಗಿ ಕೇಂದ್ರದಲ್ಲಿ ಮಕ್ಕಳನ್ನು ಆರೈಕೆ ಮಾಡುತ್ತಿದ್ದಾರೆ. ದಯಾಕಿರಣ ಸಂಸ್ಥೆಯ ಕಾರ್ಯದರ್ಶಿ -. ಜಿನೇಶ್.ಕೆ ವರ್ಕಿ ನೇತೃತ್ವದಲ್ಲಿ ಅನಾಥ ಮಕ್ಕಳಿಗೆ ಕಿಂಚಿತ್ತೂ ಕೊರತೆಯಾಗದಂತೆ ಸುಂದರವಾದ ಪರಿಸರದಲ್ಲಿ ನೋಡಿಕೊಳ್ಳಲಾಗುತ್ತಿದೆ.

ಏಕೈಕ ದತ್ತು ಸಂಸ್ಥೆ

ಕೇಂದ್ರ ದತ್ತು ಸಂಪನ್ಮೂಲ ಪ್ರಾಧಿಕಾರ (ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಇಲಾಖೆ, ಭಾರತ ಸರಕಾರ) ಹಾಗೂ ರಾಜ್ಯ ದತ್ತು ಸಂಪನ್ಮೂಲ ಪ್ರಾಧಿಕಾರದ ಆಡಳಿತ, ಪ್ರಾಧಿಕಾರಕ್ಕೆ ಒಳಪಟ್ಟಿರುವ ಜಿಲ್ಲೆಯ ಏಕೈಕ ದತ್ತು ಸಂಸ್ಥೆ ಇದು. ವಿವಿಧ ರಾಜ್ಯ, ವಿದೇಶದ ಪೋಷಕರಿಗೆ ಅನಾಥ ಮಕ್ಕಳನ್ನು ದತ್ತು ನೀಡಿ ಕೇಂದ್ರ, ರಾಜ್ಯ ಸರಕಾರಗಳಿಂದ ಪ್ರಶಂಸೆ ಗಳಿಸಿದೆ.

ಇದನ್ನೂ ಓದಿ: Harish Kera Column: ಓ ಹೆಣ್ಣೇ, ಗಂಡನನ್ನು ಏಕೆ ಕೊಂದೆ ?

ವಿಶೇಷ ಮಕ್ಕಳ ರಕ್ಷಣೆ

ವಿಶೇಷ ಮಕ್ಕಳನ್ನು ಪಡೆಯಲು ಹಲವು ಪೋಷಕರು ಮುಂದೆ ಬಂದಿದ್ದಾರೆ. ಕಾನೂನು ಪ್ರಕ್ರಿಯೆ ಮುಗಿದ ನಂತರ ದತ್ತು ನೀಡಲಾಗುವುದು. ಪೋಷಕರಿಗೆ ನೀಡಿದ ನಂತರವೂ ಕಾನೂನಿನನ್ವಯ ಮಕ್ಕಳ ಬೆಳವಣಿಗೆ ಬಗ್ಗೆ ಸಂಸ್ಥೆಯ ವತಿಯಿಂದ ಕಾಳಜಿ ವಹಿಸಲಾಗುವುದು. ಈಗಾಗಲೇ ಮಕ್ಕಳನ್ನು ದತ್ತು ಪಡೆಯಲು ಹಲವು ಅರ್ಜಿ ಬಂದಿದ್ದು, ಪ್ರಕ್ರಿಯೆಯಲ್ಲಿವೆ.

ವೈದ್ಯರ ಉಚಿತ ಚಿಕಿತ್ಸೆ

ದಯಾಕಿರಣ ಸಂಸ್ಥೆಯಲ್ಲಿನ ಅನಾಥ ಮಕ್ಕಳಿಗೆ ಕುಣಿಗಲ್‌ನ ಮಕ್ಕಳ ತಜ್ಞ ಡಾ.ಮಂಜುನಾಥ್ ಅವರು ಉಚಿತವಾಗಿ ಚಿಕಿತ್ಸೆ ನೀಡುತ್ತಿದ್ದಾರೆ. ಕೆಂದ್ರದಿಂದ ದತ್ತು ನೀಡುವವರೆಗೂ ಇವರು ಮಕ್ಕಳ ಆರೋಗ್ಯವನ್ನು ಬಹಳ ಕಾಳಜಿಯಿಂದ ನೋಡಿಕೊಳ್ಳುತ್ತಾರೆ.

ಮಕ್ಕಳನ್ನು ಬಿಸಾಕಬೇಡಿ

ಮಕ್ಕಳನ್ನು ಸಾಕಲಾಗದ ಪೋಷಕರು ಭವಿಷ್ಯದ ಕುಡಿಗಳನ್ನು ಅನಾಥ ಮಾಡಬೇಡಿ. ಇಂತಹ ಮಕ್ಕಳ ಪಾಲಿಗೆ ದಯಾಕಿರಣ ಸಂಸ್ಥೆ ಹಗಲಿರುಳು ಕಾರ್ಯನಿರ್ವಹಿಸುತ್ತಿದೆ. ಕೆಲವರು ಎಲ್ಲೆಂದ ರಲ್ಲಿ ಹುಟ್ಟಿದ ಮಕ್ಕಳನ್ನು ಬಿಸಾಕಿ ಹೋಗುತ್ತಾರೆ. ಇದೊಂದು ಅಮಾನವೀಯ ಕೃತ್ಯ. ನಿಮಗೆ ಮಕ್ಕಳು ಬೇಡವಾಗಿದ್ದರೆ ನಮ್ಮ ಸಂಸ್ಥೆಗೆ ತಂದು ಕೊಡಿ. ಇಲ್ಲಿ ತಂದು ಬಿಡಿ ಎಂದು ದಯಾಕಿರಣ ಸಂಸ್ಥೆಯ ವ್ಯವಸ್ಥಾಪಕ ರಮೇಶ್ ಮನವಿ ಮಾಡಿಕೊಂಡಿದ್ದಾರೆ.

210 ಅನಾಥ ಮಕ್ಕಳ ರಕ್ಷಣೆ

ಇದು ಜಿಲ್ಲೆಯ ಏಕೈಕ ದತ್ತು ಸಂಸ್ಥೆ. ಕಾನೂನಾತ್ಮಕವಾಗಿ ಕಾರ್ಯನಿರ್ವಹಿಸುತ್ತಿರುವ ದಯಾಕಿರಣ ಒಂದು ಎನ್‌ಜಿಒ. ಇದುವರೆಗೆ 210 ಅನಾಥ ಮಕ್ಕಳ ರಕ್ಷಣೆ ಮಾಡಿದೆ. 119 ಮಕ್ಕಳನ್ನು ದೇಶ, ವಿದೇಶದ ಪೋಷಕರಿಗೆ ದತ್ತು ನೀಡಲಾಗಿದೆ. ದೇಶದ ವ್ಯಾಪ್ತಿಯಲ್ಲಿ 108 ಮಕ್ಕಳನ್ನು ದತ್ತು ನೀಡ ಲಾಗಿದೆ. ವಿದೇಶದ ಪೋಷಕರಿಗೆ 11 ಮಕ್ಕಳನ್ನು ದತ್ತು ನೀಡಲಾಗಿದೆ. ಪ್ರಸ್ತುತ 18 ಮಕ್ಕಳು ಕೇಂದ್ರ ದಲ್ಲಿದ್ದಾರೆ. ವಿಶೇಷ ಮಕ್ಕಳ ಆರೈಕೆ ಮೂಲಕವೂ ಮಾನವೀಯತೆಯನ್ನು ಮೆರೆಯುತ್ತಿದೆ.

*

18 ವರ್ಷಗಳಿಂದ ಏಡ್ಸ್ ಪೀಡಿತ ಮತ್ತು ಎರಡ್ಮೂರು ವರ್ಷದಿಂದ ಅನಾಥ ಮಕ್ಕಳನ್ನು ಬೆಳೆಸುವ ಕಾರ್ಯ ದೇವರ ಸೇವೆಗೆ ಸಮಾನ. ದಯಾಕಿರಣ ಸಂಸ್ಥೆಗೆ ಬಂದ ಮಕ್ಕಳು ಅನಾಥರಲ್ಲ. ಅವರನ್ನು ಪೋಷಕರಿಗಿಂತಲೂ ಹೆಚ್ಚು ಕಾಳಜಿಯಿಂದ ನೋಡಿಕೊಳ್ಳಲಾಗುತ್ತದೆ. ಅನಾಥ ಮಕ್ಕಳಿದ್ದರೆ ದಯಾಕಿರಣ ಸಂಸ್ಥೆಗೆ ತಂದುಕೊಡಿ.

-ಫಾ.ಜಿನೇಶ್.ಕೆ ವರ್ಕಿ, ಕಾರ್ಯದರ್ಶಿ, ದಯಾಭವನ



Source link

ADMIN

About Author

Leave a comment

Your email address will not be published. Required fields are marked *

You may also like

ಕರ್ನಾಟಕ

Microsoft: Empowering the Digital World

Microsoft is a global technology company known for shaping the modern digital experience. From its iconic Windows operating system to
ಕರ್ನಾಟಕ

Microsoft: Empowering the Digital World

Microsoft is a global technology company known for shaping the modern digital experience. From its iconic Windows operating system to
Translate »