Karunadu Studio

ಕರ್ನಾಟಕ

WTC Final: ಅರ್ಧಶತಕ ಸಿಡಿಸಿ ಸಚಿನ್ ತೆಂಡೂಲ್ಕರ್ ದಾಖಲೆ ಮುರಿದ ಸ್ಟೀವನ್ ಸ್ಮಿತ್! – Kannada News | Steve Smith goes past Sachin Tendulkar in elite list after gutsy fifty in WTC Final


ಲಂಡನ್: ಇಲ್ಲಿನ ಲಾರ್ಡ್ಸ್ ಕ್ರೀಡಾಂಗಣದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ನಡೆಯುತ್ತಿರುವ ಮೂರನೇ ಆವೃತ್ತಿಯ ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್ ಫೈನಲ್‌ ಪಂದ್ಯದ ಮೊದಲ ದಿನದಾಟದಲ್ಲಿ ಆಸ್ಟ್ರೇಲಿಯಾದ ಸ್ಟಾರ್ ಬ್ಯಾಟ್ಸ್‌ಮನ್‌ ಸ್ಟೀವನ್ ಸ್ಮಿತ್ (Steven Smith) ಆಕರ್ಷಕ ಅರ್ಧಶತಕ ಸಿಡಿಸಿದ್ದಾರೆ. ಆ ಮೂಲಕ ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ (Sachin Tendulkar) ಹೆಸರಿನಲ್ಲಿದ್ದ ಮಹತ್ತರ ದಾಖಲೆ ಮುರಿದಿದ್ದಾರೆ. ಸ್ಮಿತ್‌ ಪ್ರಥಮ ಇನಿಂಗ್ಸ್‌ನಲ್ಲಿ 112 ಎಸೆತಗಳಲ್ಲಿ 66 ರನ್‌ಗಳಿಸಿ ಆಸ್ಟ್ರೇಲಿಯಾ 212 ರನ್ ಗಳಿಸಲು ನೆರವು ನೀಡಿದ್ದರು.

ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್‌ ಫೈನಲ್‌ನಲ್ಲಿಸ್ಮಿತ್ ಸತತ ಎರಡನೇ ಬಾರಿ 50 ಕ್ಕೂ ಹೆಚ್ಚು ರನ್ ಗಳಿಸಿದ್ದಾರೆ. 2023ರ ಡಬ್ಲ್ಯೂಟಿಸಿ ಫೈನಲ್ ಪಂದ್ಯದಲ್ಲಿ ಬಲಿಷ್ಠ ಟೀಮ್ ಇಂಡಿಯಾ ವಿರುದ್ಧ ಶತಕ ಸಿಡಿಸಿದ್ದ ಅವರು, ಆಸ್ಟ್ರೇಲಿಯಾ ತಂಡ ಚಾಂಪಿಯನ್ ಪಟ್ಟ ಅಲಂಕರಿಸಲು ನೆರವು ನೀಡಿದ್ದರು. ಇದೀಗ ದಕ್ಷಿಣ ಆಫ್ರಿಕಾ ವಿರುದ್ಧವೂ ಪ್ರಥಮ ಇನಿಂಗ್ಸ್‌ನಲ್ಲಿ ಅರ್ಧಶತಕ ಬಾರಿಸಿ ಐಸಿಸಿ ವಿಶ್ವಕಪ್ ಟೂರ್ನಿಯಲ್ಲಿ 7ನೇ ಅರ್ಧಶತಕ ದಾಖಲಿಸಿದ್ದಾರೆ. ಇದರೊಂದಿಗೆ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಅವರ ಅರ್ಧಶತಕ (6) ಗಳ ದಾಖಲೆ ಮುರಿದಿದ್ದಾರೆ. ಭಾರತ ತಂಡದ ಮಾಜಿ ನಾಯಕ ವಿರಾಟ್ ಕೊಹ್ಲಿ 11 ಅರ್ಧಶತಕ ಬಾರಿಸಿ ಅಗ್ರ ಸ್ಥಾನದಲ್ಲಿದ್ದಾರೆ.

WTC final: 5 ವಿಕೆಟ್‌ ಕಿತ್ತು ಅಲಾನ್‌ ಡೊನಾಲ್ಡ್‌ ದಾಖಲೆ ಮುರಿದ ಕಗಿಸೊ ರಬಾಡ!

650 ರನ್ ದಾಖಲಿಸಿದ ಸ್ಮಿತ್

ಆಸ್ಟ್ರೇಲಿಯಾ ತಂಡವು ಐಸಿಸಿ ವಿಶ್ವಕಪ್ ಟೂರ್ನಿ ಗೆಲ್ಲುವಲ್ಲಿ ಪ್ರಮುಖ ಪಾತ್ರ ಹೊಂದಿರುವ ಸ್ಟೀವನ್ ಸ್ಮಿತ್ 13 ನಾಕೌಟ್ ಪಂದ್ಯಗಳಲ್ಲಿ 59.09ರ ಸರಾಸರಿಯಲ್ಲಿ 650 ರನ್ ಬಾರಿಸಿದ್ದು, ಎರಡು ಶತಕ ಹಾಗೂ 5 ಅರ್ಧಶತಕಗಳಿವೆ.

ವಾರೆನ್ ಬಾರ್ಡ್ಸ್ಲೆ ದಾಖಲೆ ಮುರಿದ ಸ್ಮಿತ್

ಲಂಡನ್‌ನ ಲಾರ್ಡ್ಸ್ ಮೈದಾನದಲ್ಲಿ ಅದ್ಭುತ ದಾಖಲೆ ಹೊಂದಿರುವ ಸ್ಟೀವನ್ ಸ್ಮಿತ್, ಇದುವರೆಗೂ 10 ಇನಿಂಗ್ಸ್‌ಗಳಿಂದ 59.10ರ ಸರಾಸರಿಯಲ್ಲಿ ಎರಡು ಶತಕ ಹಾಗೂ 3 ಅರ್ಧಶತಕಗಳ ನೆರವಿನಿಂದ 591 ರನ್ ಬಾರಿಸಿದ್ದಾರೆ. ಆ ಮೂಲಕ ಆಸ್ಟ್ರೇಲಿಯಾದ ಮಾಜಿ ಆಟಗಾರ ವಾರೆನ್ ಬಾರ್ಡ್ಸ್ಲೆ (575 ರನ್) ದಾಖಲೆಯನ್ನು ಮುರಿದಿದ್ದಾರೆ.

ಸ್ಟೀವನ್ ಸ್ಮಿತ್ ಅವರ ಅತ್ಯಧಿಕ ಟೆಸ್ಟ್ ರನ್ ಹರಿದು ಬಂದಿರುವುದು ಕೂಡ ಲಾರ್ಡ್ಸ್ ಮೈದಾನದಲ್ಲೇ. 2015ರ ಆಷಸ್ ಟೆಸ್ಟ್ ಸರಣಿಯ ಎರಡನೇ ಟೆಸ್ಟ್‌ನ ಪ್ರಥಮ ಇನಿಂಗ್ಸ್‌ನಲ್ಲಿ 215 ರನ್ ಗಳಿಸಿದ್ದಾರೆ. 2023ರ ಆಷಸ್ ಟೆಸ್ಟ್ ಪಂದ್ಯದಲ್ಲಿ ಇದೇ ಮೈದಾನದಲ್ಲಿ ಮತ್ತೊಂದು ಶತಕ ಸಿಡಿಸಿದ್ದ ಸ್ಮಿತ್, ಆಸ್ಟ್ರೇಲಿಯಾ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.

WTC Final: ಲಾರ್ಡ್ಸ್‌ ಅಂಗಣದಲ್ಲಿ ಅರ್ಧಶತಕ ಸಿಡಿಸಿ ಗ್ಯಾರಿ ಸೋಬರ್ಸ್‌ ದಾಖಲೆ ಮುರಿದ ಸ್ಟೀವನ್‌ ಸ್ಮಿತ್‌!

79 ರನ್‌ಗಳ ಜೊತೆಯಾಟ

ದಕ್ಷಿಣ ಆಫ್ರಿಕಾದ ವಿರುದ್ಧ ನಡೆಯುತ್ತಿರುವ ಡಬ್ಲ್ಯುಟಿಸಿ ಫೈನಲ್ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡುವಂತಾಗಿದ್ದ ಆಸ್ಟ್ರೇಲಿಯಾ, ಹರಿಣಿಗಳ ವೇಗದ ಬೌಲಿಂಗ್‌ ದಾಳಿಗೆ ನಲುಗಿ 67 ರನ್‌ಗಳಿಗೆ ಪ್ರಮುಖ 4 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಆದರೆ 5ನೇ ವಿಕೆಟ್‌ಗೆ ಸ್ಮಿತ್ (66 ರನ್) ಹಾಗೂ ಬೇ ವೆಬ್‌ಸ್ಟರ್ (72 ರನ್) ತಾಳ್ಮೆಯುತ ಆಟವಾಡಿ 79 ರನ್ ಜೊತೆಯಾಟ ನೀಡಿ ತಂಡದ ಮೊತ್ತ 212 ರನ್ ಗಳಿಗೆ ತಲುಪಿಸಿದ್ದರು. ದ್ವಿತೀಯ ದಿನದಾಟದಲ್ಲಿ ದಕ್ಷಿಣ ಆಫ್ರಿಕಾ 41 ಓವರ್‌ಗಳ ಅಂತ್ಯಕ್ಕೆ 5 ವಿಕೆಟ್ ಕಳೆದುಕೊಂಡು 95 ರನ್ ಗಳಿಸಿತ್ತು.



Source link

ADMIN

About Author

Leave a comment

Your email address will not be published. Required fields are marked *

You may also like

ಕರ್ನಾಟಕ

Microsoft: Empowering the Digital World

Microsoft is a global technology company known for shaping the modern digital experience. From its iconic Windows operating system to
ಕರ್ನಾಟಕ

Microsoft: Empowering the Digital World

Microsoft is a global technology company known for shaping the modern digital experience. From its iconic Windows operating system to
Translate »