Karunadu Studio

ಕರ್ನಾಟಕ

NAREGA: ನರೇಗಾ ಅಕ್ರಮ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ತನಿಖೆಯಾಗಬೇಕು : ಸಿಪಿಎಂ ಪಕ್ಷದ ಜಿಲ್ಲಾ ಕಾರ್ಯದರ್ಶಿ ಜಿ.ಸಿದ್ದಗಂಗಪ್ಪ – Kannada News | NREGA should be investigated under the leadership of illegal district magistrates: CPM district secretary G. Siddagangappa


ಗೌರಿಬಿದನೂರು: ತಾಲ್ಲೂಕಿನಲ್ಲಿ ಅನೇಕ ಸಮಸ್ಯೆಗಳಿದ್ದು ಈಡೇರಿಸುವಲ್ಲಿ ಅಧಿಕಾರಿಗಳು ವಿಫಲ ವಾಗಿದ್ದಾರೆ ಜಲಯಾನ ಇಲಾಖೆಯಲ್ಲಿ ನರೇಗ ಯೋಜನೆಯಲ್ಲಿ ಕೋಟ್ಯಾಂತರ ರೂಪಾಯಿ ಅಕ್ರಮವಾಗಿ ಹಣ ಡ್ರಾ ಮಾಡಿದ್ದಾರೆ. ಇದನ್ನು ಜಿಲ್ಲಾಧಿಕಾರಿಗಳು ಸಮಗ್ರ ತನಿಖೆ ಮಾಡಬೇಕು ಹಾಗೂ ತಕ್ಷಣವೇ ನರೇಗಾ ಕೂಲಿ ಕಾರ್ಮಿಕರಿಗೆ ವೇತನ ನೀಡಬೇಕೆಂದು  ಸಿಪಿಎಂ ಪಕ್ಷದ ಜಿಲ್ಲಾ ಕಾರ್ಯದರ್ಶಿ ಜಿ.ಸಿದ್ದಗಂಗಪ್ಪ ಅವರು ಒತ್ತಾಯ ಮಾಡಿದ್ದರು.

ನಗರದ ಹೊರವಲಯದಲ್ಲಿರುವ ತಾಲ್ಲೂಕು ಕಚೇರಿ ಎದುರು ನಡೆಸಿದ ಸಿಪಿಎಂ ಪಕ್ಷದಿಂದ ನಡೆಸಿದ ಪ್ರತಿಭಟನೆ ಉದ್ದೇಶಿಸಿ ಅವರು ಮಾತನಾಡಿದರು.

2006ರಲ್ಲಿ ಯುಪಿಎ ಸರ್ಕಾರ ಇದ್ದಾಗ ನಮ್ಮ ಪಕ್ಷ ಅದಕ್ಕೆ ಬೆಂಬಲ ನೀಡಿತ್ತು. ಅದರಂತೆ ನಾವು ಗ್ರಾಮಾಂತರ ಪ್ರದೇಶದ ಕೂಲಿ ಕಾರ್ಮಿಕರಿಗೆ ಕೆಲಸ ಸಿಗಲು ನರೇಗಾ ಯೋಜನೆ ವರದಾನವಾಗಲಿ ಎಂದು ಅಂದಿನ ಪ್ರಧಾನಿಗಳಿಗೆ ಒತ್ತಾಯ ಮಾಡಿದ ಪರಿಣಾಮ ಇಂದು ನರೇಗಾ ಅನುಷ್ಥಾನದಲ್ಲಿದೆ. ಅದರೆ ಗ್ರಾಮ ಪಂಚಾಯಿತಿಯಲ್ಲಿ ನಡೆಯುತ್ತಿರುವ ಅಕ್ರಮದಲ್ಲಿ ಅಧಿಕಾರಿಗಳು ಶಾಮೀಲಾಗಿ ಕೋಟ್ಯಾಂತರ ರೂಪಾಯಿಗಳ ಹಣವನ್ನು ಗುಳಂ ಮಾಡಿದ್ದಾರೆ. ಜಲಾನಯಾನ ಇಲಾಖೆಯಲ್ಲಿ ಸರಿ ಸುಮಾರು ೬ ಕೋಟಿ ರೂಪಾಯಿಗಳ ಅಕ್ರಮ ನಡೆದಿದ್ದು, ಈ ಬಗ್ಗೆ ಸಮಗ್ರ ತನಿಖೆ ಮಾಡಬೇಕು ಎಂದು ಒತ್ತಾಯಿಸಿದರು.

ಇದನ್ನೂ ಓದಿ: Tumkur (Chikkanayakanahalli) News: ಹಂದನಕೆರೆ ಗುರುಗಿರಿಸಿದ್ದೇಶ್ವರ ಮಠದ ರುದ್ರರಾಧ್ಯರಿಗೆ ಕರ್ನಾಟಕ ರತ್ನ ಪ್ರಶಸ್ತಿ ಪ್ರದಾನ

ಬಗರ್ ಹುಕುಂ ಸಮಿತಿ ರಚನೆ ಅಗಿಲ್ಲ; ಕಳೆದ ಹಲವು ವರ್ಷಗಳಿಂದ ತಾಲ್ಲೂಕಿನಲ್ಲಿ 20 ವರ್ಷ ಗಳಿಂದ ಉಳಿಮೆ ಮಾಡಿಕೊಂಡು ಬರುತ್ತಿರುವ ರೈತರಿಗೆ ಸಾಗುವಳಿ ಚೀಟಿ ಕೊಟ್ಟಿಲ್ಲ ಕಾರಣ ಇಲ್ಲಿ ಬಗರ್ ಹುಕುಂ ಸಮಿತಿ ರಚನೆ ಅಗಿಲ್ಲ ಕಾರಣ ಹಾಲಿ ಮತ್ತು ಮಾಜಿ ಶಾಸಕ ಕಚ್ಚಾಟದಿಂದ ನೆನೆಗುದಿಗೆ ಬಿದ್ದದೆ ಇದು ಯಾವ ನ್ಯಾಯ? ಅವರ ಸ್ವಪ್ರತಿಷ್ಥಗೆ ರೈತರಿಗೆ ಅನ್ಯಾಯ ಅಗಿದೆ ಈ ಕೂಡಲೆ ಜಿಲ್ಲಾಧಿಕಾರಿಗಳು ಮುನ್ನೆಲೆ ಬರಬೇಕು ಸಮಿತಿ ರಚನೆಗೆ ಸೂಚನೆ ನೀಡಬೇಕು ಎಂದು ಅವರು ಒತ್ತಾಯ ಮಾಡಿದರು.

20 ಸಾವಿರ ನಿವೇಶನ ರಹಿತರಿಗೆ ನಿವೇಶನ ನೀಡಬೇಕು; ತಾಲ್ಲೂಕಿನಲ್ಲಿ 20 ಸಾವಿರ ಬಡವರಿಗೆ ನಿವೇಶನ ನೀಡಬೇಕು ಈಗಿನ ಪರಿಸ್ಥಿತಿಯಲ್ಲಿ ನಿವೇಶನ ಕೊಳ್ಳಲು ಲಕ್ಷಾಂತರ ರೂಪಾಯಿ ಬೇಕು. ಜೀವನ ನಡೆಸುವುದೇ ಕಷ್ಟವಾಗಿದೆ. ಇಂತಹ ಪರಿಸ್ಥಿತಿಯಲ್ಲೀ ತಾಲ್ಲೂಕು ಅಡಳಿತ ಇವರಿಗೆ ನಿವೇಶನ ನೀಡಬೇಕು ಎಂದರು.

ಜಿಲ್ಲೆಯಲ್ಲಿ ಮೈಕ್ರೋ ಫೈನಾನ್ಸ್ ಕಂಪನಿಗಳ ಮಿತಿಮೀರಿದ್ದು ಈ ಬಗ್ಗೆ ಇನ್ನಷ್ಟು ಉಗ್ರ ಕ್ರಮಕ್ಕೆ ಜಿಲ್ಲಾಧಿಕಾರಿಗಳು ಮುಂದಾಗಬೇಕು ಎಂದು ಈ ಸಂದರ್ಭದಲ್ಲಿ ಅವರು ತಿಳಿಸಿದರು.

ನಂತರ ಪ್ರತಿಭಟನಾಕಾರರು ತಮ್ಮ ಬೇಡಿಕೆಗಳ ಮನವಿ ಪತ್ರವನ್ನು ತಹಶಿಲ್ದಾರ್ ಮಹೇಶ್ ಪತ್ರಿ ಮುಖಾಂತರ ಸರ್ಕಾರಕ್ಕೆ ಸಲ್ಲಿಸಿದರು.

ಪ್ರತಿಭಟನೆಯಲ್ಲಿ ಕರ್ನಾಟಕ ಪ್ರಾಂತ ರೈತ ಸಂಘಟನೆಯ ಜಿಲ್ಲಾಧ್ಯಕ್ಷ ಮುನಿಕೃಷ್ಣಪ್ಪ ಸಿಪಿಎಂ ಮುಖಂಡರಾದ ಸಿಸಿ ಅಶ್ವಥ್ಥಪ್ಪ, ಅನೂಡಿ ನಾಗರಾಜ್, ಬಾಬುರೆಡ್ಡಿ ವೆಂಕಟಸ್ವಾಮಿ, ಚಿಕ್ಕನಾಯುಡು, ಲಕ್ಷ್ಮೀನಾರಾಯಣಪ್ಪ ಸತೀಶ್ ಕುಮಾರಪ್ಪ ಮಹಿಳಾ ಘಟಕದ ರಾಧಮ್ಮ ಮಾಳಮ್ಮ ರೂಪ ಮುಂತಾದವರು ಹಾಜರಿದ್ದರು.



Source link

ADMIN

About Author

Leave a comment

Your email address will not be published. Required fields are marked *

You may also like

ಕರ್ನಾಟಕ

Microsoft: Empowering the Digital World

Microsoft is a global technology company known for shaping the modern digital experience. From its iconic Windows operating system to
ಕರ್ನಾಟಕ

Microsoft: Empowering the Digital World

Microsoft is a global technology company known for shaping the modern digital experience. From its iconic Windows operating system to
Translate »