Karunadu Studio

ಕರ್ನಾಟಕ

Good News: ಸರಕಾರಿ ನೌಕರರಿಗೆ ಸಿಹಿ ಸುದ್ದಿ, 13 ಸಾವಿರ ಸಿಬ್ಬಂದಿಗೆ ಹಳೆಯ ಪಿಂಚಣಿ ಯೋಜನೆ ಜಾರಿ – Kannada News | good news 13000 government employees in bwssb to get old pension scheme


ಬೆಂಗಳೂರು: ಸರಕಾರಿ ನೌಕರರಿಗೆ ಇಲ್ಲಿ ಸಿಹಿ ಸುದ್ದಿ (Good news) ನೀಡಲಾಗಿದೆ. 2006ರ ಏಪ್ರಿಲ್ 4ಕ್ಕಿಂತ ಮೊದಲು ನೇಮಕಗೊಂಡ ರಾಜ್ಯದ 13 ಸಾವಿರ ಎನ್‌ಪಿಎಸ್ ನೌಕರರಿಗೆ (government employees) ಹಳೆಯ ಪಿಂಚಣಿ ಯೋಜನೆ (Old pension scheme) ಮರುಜಾರಿಗೊಳಿಸಿ ಸರ್ಕಾರ ಆದೇಶಿಸಿದೆ. ಈ ಕುರಿತು ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ (BWSSB) ಸಭೆಯಲ್ಲಿ ತೆಗೆದುಕೊಂಡ ನಿರ್ಧಾರವನ್ನು ಮಂಡಳಿಯ ನೌಕರರಿಗೆ ಅನ್ವಯಿಸಿ ಆದೇಶ ಹೊರಡಿಸಲಾಗಿದೆ.

ಕರ್ನಾಟಕ ರಾಜ್ಯ ಸರ್ಕಾರವು ಉಲ್ಲೇಖ-(2) ಮತ್ತು (4) ರ ಆದೇಶದಲ್ಲಿ ದಿನಾಂಕ: 01.04.2006 ಮತ್ತು ತದನಂತರ ಸೇವೆಗೆ ಸೇರಿದ ನೌಕರರಿಗೆ ನೂತನ ಅಂಶದಾಯಿ ಕೊಡುಗೆ ಯೋಜನೆಗಳನ್ನು (ರಾಷ್ಟ್ರೀಯ ಪಿಂಚಣಿ ಯೋಜನೆ-ಎನ್.ಪಿ.ಎಸ್) ಜಾರಿಗೊಳಿಸಿರುತ್ತದೆ. ಈ ಯೋಜನೆಯಲ್ಲಿ ಒಳಪಡುವ ನೌಕರರ ವೇತನದಲ್ಲಿ ಪ್ರತಿ ತಿಂಗಳು ಮೂಲ ವೇತನ ಮತ್ತು ತುಟ್ಟಿಭತ್ಯೆಯ ಮೇಲೆ ಶೇಕಡ 10 ರಷ್ಟು ವಂತಿಗೆಯನ್ನು ಕಟಾವಣೆಗೊಳಿಸಿ, ಸದರಿ ಮೊತ್ತಕ್ಕೆ ಸರ್ಕಾರದ ವತಿಯಿಂದ ವೇತನ ಮತ್ತು ತುಟ್ಟಿಭತ್ಯೆಯ ಮೇಲೆ ಶೇಕಡ 14 ರಷ್ಟು ವಂತಿಗೆಯನ್ನು ಕೊಡುಗೆಯಾಗಿ ನೀಡಿ, ಈ ಕ್ರೋಢೀಕೃತ ನಿಧಿಯನ್ನು (Employee & Govt Contribution) ಪೆನ್‌ಷನ್ ಫಂಡ್ ರೆಗ್ಯೂಲೆಟರಿ ಅಂಡ್ ಡೆವಲಪ್ಮೆಂಟ್ ಅಥಾರಿಟಿಯ (ಪಿ.ಎಫ್.ಆರ್.ಡಿ.ಎ) ಅಧೀನದಲ್ಲಿರುವ ಎನ್.ಪಿ.ಎಸ್ ಟ್ರಸ್ಟ್, ಮುಂಬೈ, ರವರ ಮುಖಾಂತರ ಸಂಬಂಧಿಸಿದ ನೌಕರರ ಪ್ರಾನ್ ಖಾತೆಗಳಿಗೆ (ಪರ್ಮನೆಂಟ್ ರಿಟೈರ್ ಮೆಂಟ್ ಆಕೌಂಟ್ ನಂಬರ್) ಸರ್ಕಾರದಿಂದ ಜಮೆ ಮಾಡಲಾಗುತ್ತಿದೆ.

ಈ ಸಂಬಂಧ, ರಾಜ್ಯ ಸರ್ಕಾರದ ಮಾದರಿಯಂತೆ ಮೇಲಿನ ಎನ್.ಪಿ.ಎಸ್ ಯೋಜನೆಯನ್ನು ಉಲ್ಲೇಖ-(3) ಮತ್ತು (5) ರಲ್ಲಿ ಮಂಡಳಿಯಲ್ಲಿಯೂ ಸಹಾ ಯಥಾವತ್ತಾಗಿ ಅಳವಡಿಸಿಕೊಳ್ಳಲಾಗಿತ್ತು. ಹಾಗೂ ಉಲ್ಲೇಖ-(3)ರಲ್ಲಿ ಎನ್.ಪಿ.ಎಸ್ ಯೋಜನೆಗೆ ಸಂಬಂಧಿಸಿದಂತೆ, ರಾಜ್ಯ ಸರ್ಕಾರವು ಕಾಲಕಾಲಕ್ಕೆ ನೀಡುವ ಮಾರ್ಗಸೂಚಿಗಳನ್ನು ಯಥಾವತ್ತಾಗಿ ಮಂಡಳಿಯಲ್ಲಿ ಅಳವಡಿಸಿಕೊಳ್ಳಲು ಆದೇಶವಾಗಿರುತ್ತದೆ.

ಮುಂದುವರೆದು, ರಾಜ್ಯ ಸರ್ಕಾರವು ಉಲ್ಲೇಖ-(6)ರ ಆದೇಶದಲ್ಲಿ ದಿನಾಂಕ: 01.04.2006ರ ಪೂರ್ವದಲ್ಲಿ ರಾಜ್ಯ ಸಿವಿಲ್ ಸೇವೆಗಳಲ್ಲಿನ ಖಾಲಿ ಹುದ್ದೆಗಳ ಭರ್ತಿಗಾಗಿ ಹೊರಡಿಸಿದ ನೇಮಕಾತಿ ಅಧಿಸೂಚನೆಗಳ ಮೇರೆಗೆ ಆಯ್ಕೆ ಹೊಂದಿ ದಿನಾಂಕ: 01.04.2006 ರಂದು ಅಥವಾ ಆ ದಿನಾಂಕದ ನಂತರ ಸೇವೆಗೆ ಸೇರಿರುವ ಕಾರಣದಿಂದ ಎನ್.ಪಿ.ಎಸ್ ಯೋಜನೆಗೆ ವ್ಯಾಪ್ತಿಗೊಳಪಟ್ಟಿರುವ ನೌಕರರನ್ನು ಸರ್ಕಾರವು ಅವರ ಅಭಿಮತದ ಮೇರೆಗೆ ಕೆಲವು ಷರತ್ತುಗಳಿಗೊಳಪಟ್ಟು ಒಂದು ಬಾರಿಯ ಕ್ರಮವಾಗಿ ಹಿಂದಿನ ಹಳೆಯ ಡಿಫೈನ್ಸ್ ಪಿಂಚಣಿ ಯೋಜನೆಗೆ (ಓ.ಪಿ.ಎಸ್) ವ್ಯಾಪ್ತಿಗೊಳಪಡಿಸಲು ಒಪ್ಪಿಗೆ ನೀಡಿ ಆದೇಶಿಸಲಾಗಿರುತ್ತದೆ. ತತ್ಸಂಬಂಧದಲ್ಲಿ, ಮಂಡಳಿಯಲ್ಲಿ ಸದರಿ ಆದೇಶವನ್ನು ಯಥಾವತ್ತಾಗಿ ಉಲ್ಲೇಖ-(7)ರಲ್ಲಿ ಅಳವಡಿಸಿಕೊಳ್ಳಲಾಗಿರುತ್ತದೆ.

ದಿನಾಂಕ: 01.04.2006ರ ಪೂರ್ವದಲ್ಲಿ ಮಂಡಳಿಯಲ್ಲಿ ಉಲ್ಲೇಖ-(1)ರ ಬ್ಯಾಕ್‌ಲಾಗ್ ನೇಮಕಾತಿ ಅಧಿಸೂಚನೆ ಮೂಲಕ 104 ನೌಕರರು ಆಯ್ಕೆ ಹೊಂದಿ ದಿನಾಂಕ: 01.04.2006ರ ನಂತರದಲ್ಲಿ ಮಂಡಳಿಯ ಸೇವೆಗೆ ಸೇರಿದವರಾಗಿರುತ್ತಾರೆ. ಸದರಿ 104 ನೌಕರರ ಪೈಕಿ 102 ನೌಕರರು ಮಾತ್ರ ಮಂಡಳಿಯ ಸೇವೆಯಲ್ಲಿರುತ್ತಾರೆ. ಉಳಿದ 02 ನೌಕರರು ಮಂಡಳಿಯ ಸೇವೆಯಿಂದ ವಯೋಮಿತಿ ಮೇರೆಗೆ ನಿವೃತ್ತಿ ಹೊಂದಿರುತ್ತಾರೆ (ಶ್ರೀ ಹೆಚ್ ತಿಮ್ಮಪ್ಪ, ರವರ ನಿವೃತ್ತಿ ದಿನಾಂಕ: 31.05.2022 ಮತ್ತು ಶ್ರೀ ಬರಡ್ಡಿ ಶಿವಪ್ಪ ರವರ ನಿವೃತ್ತಿ ದಿನಾಂಕ: 31.01.2023). ಈ ಸಂಬಂಧ, ಉಲ್ಲೇಖ-(6) ಮತ್ತು (7)ರ ಆದೇಶಗಳನ್ವಯ ಎನ್.ಪಿ.ಎಸ್ ನಿಂದ ಓ.ಪಿ.ಎಸ್ ಗೆ ಒಳಪಡುವ ಮಂಡಳಿಯ 104 ನೌಕರರಿಂದ ದಿನಾಂಕ: 30.06.2024 ರೊಳಗೆ ಅಭಿಮತವನ್ನು ಪಡೆಯಲಾಗಿತ್ತು.

ಈ ಕುರಿತು ಉಲ್ಲೇಖ-(8)ರ ಪತ್ರದಲ್ಲಿ ನಗರಾಭಿವೃದ್ಧಿ ಇಲಾಖೆಯು ಎನ್.ಪಿ.ಎಸ್ ನಿಂದ ಓ.ಪಿ.ಎಸ್ ಗೆ ಒಳಪಡುವ ನೌಕರರ ಮಾಹಿತಿನ್ನೊಳಗೊಂಡಂತೆ ಪ್ರಸ್ತಾವನೆಯನ್ನು ಸಲ್ಲಿಸುವಂತೆ ನಿರ್ದೇಶಿಸಿತ್ತು. ಅದರಂತೆ ಮಂಡಳಿಯ 104 ನೌಕರರನ್ನು ಎನ್.ಪಿ.ಎಸ್ ನಿಂದ ಓ.ಪಿ.ಎಸ್ ಗೆ ಒಳಪಡಿಸುವ ಬಗ್ಗೆ ಪ್ರಸ್ತಾವನೆಯನ್ನು ಉಲ್ಲೇಖ-(9)ರಲ್ಲಿ ನಗರಾಭಿವೃದ್ಧಿ ಇಲಾಖೆಗೆ ಕಳುಹಿಸಲಾಗಿತ್ತು.

ತತ್ಸಂಬಂಧ, ಉಲ್ಲೇಖ-(9)ರ ಪ್ರಸ್ತಾವನೆಗೆ ಪ್ರತ್ಯುತ್ತರವಾಗಿ ನಗರಾಭಿವೃದ್ಧಿ ಇಲಾಖೆಯು ಉಲ್ಲೇಖ-(13) ಮತ್ತು (14) ರ ಪತ್ರದಲ್ಲಿ ಎನ್.ಪಿ.ಎಸ್ ನಿಂದ ಓ.ಪಿ.ಎಸ್ ಗೆ ಒಳಪಡುವ ಅರ್ಹ ನೌಕರರ ಪ್ರಾನ್ ಖಾತೆಯಲ್ಲಿರುವ ಎನ್.ಪಿ.ಎಸ್ ವಂತಿಗೆಗಳನ್ನು ಹಿಂಪಡೆದು ಇತ್ಯರ್ಥಪಡಿಸಲು ಸರ್ಕಾರದ ಉಲ್ಲೇಖ-(10)ರಲ್ಲಿನ ಅಂಶಗಳನ್ನು ಪರಿಶೀಲಿಸಿ ನಿಯಮಾನುಸಾರ ಮಂಡಳಿಯ ಹಂತದಲ್ಲಿಯೇ ಅಗತ್ಯ ಕ್ರಮ ಕೈಗೊಳ್ಳುವಂತೆ ನಿರ್ದೇಶನ ನೀಡಿರುತ್ತದೆ.

ಈ ಬಗ್ಗೆ ಮಂಡಳಿಯ ನೌಕರರ ಸಂಘ ಹಾಗೂ ಎನ್.ಪಿ.ಎಸ್ ನೌಕರರ ಸಂಘದವರು ಉಲ್ಲೇಖ-(11) ಮತ್ತು (12) ರಲ್ಲಿ ಪ್ರತ್ಯೇಕ ಮನವಿಗಳನ್ನು ಸಲ್ಲಿಸಿ ಸರ್ಕಾರದ ಆದೇಶಗಳಂತೆ ಮಂಡಳಿಯ ಅರ್ಹ ನೌಕರರಿಗೂ ಎನ್.ಪಿ.ಎಸ್ ನಿಂದ ಓ.ಪಿ.ಎಸ್ ಯೋಜನೆಗೆ ಒಳಪಡಿಸಲು ಕೋರಿರುತ್ತಾರೆ.

ಈ ಹಿನ್ನೆಲೆಯಲ್ಲಿ ದಿನಾಂಕ: 01.04.2006ರ ಪೂರ್ವದಲ್ಲಿ ಉಲ್ಲೇಖ-(1)ರ ಬ್ಯಾಕ್‌ಲಾಗ್ ನೇಮಕಾತಿ ಅಧಿಸೂಚನೆ ಮೂಲಕ ಆಯ್ಕೆ ಹೊಂದಿ ದಿನಾಂಕ: 01.04.2006ರ ನಂತರದಲ್ಲಿ ಮಂಡಳಿಯ ಸೇವೆಗೆ ಸೇರಿರುವ ಮಂಡಳಿಯ ಒಟ್ಟು 104 ನೌಕರರನ್ನು ಉಲ್ಲೇಖ-(6)ರ ಸರ್ಕಾರದ ಆದೇಶದನ್ವಯ ಓ.ಪಿ.ಎಸ್ ಯೋಜನೆಗೆ ವ್ಯಾಪ್ತಿಗೊಳಪಡಿಸಲು ಹಾಗೂ ಸದರಿ ನೌಕರರ ಪ್ರಾನ್ ಖಾತೆಯಲ್ಲಿರುವ ಎನ್.ಪಿ.ಎಸ್ ವಂತಿಗೆಗಳನ್ನು ಹಿಂಪಡೆದು ಇತ್ಯರ್ಥಪಡಿಸಲು ಉಲ್ಲೇಖ-(10)ರ ಸರ್ಕಾರದ ಆದೇಶದಲ್ಲಿನ ಮಾರ್ಗಸೂಚಿಗಳನ್ನು ಯಥಾವತ್ತಾಗಿ ಮಂಡಳಿಯಲ್ಲಿ ಅಳವಡಿಸಿಕೊಳ್ಳಲು ದಿನಾಂಕ: 25.04.2025 ರಂದು ನಡೆದ ಮಂಡಳಿ ಸಭೆಯಲ್ಲಿ ನಿರ್ಣಯವಾಗಿರುತ್ತದೆ. ಆದ್ದರಿಂದ, ಈ ಕೆಳಕಂಡಂತೆ ಆದೇಶಿಸಲಾಗಿದೆ.

ಆದೇಶ: ಪ್ರಸ್ತಾವನೆಯಲ್ಲಿ ವಿವರಿಸಿರುವ ಅಂಶಗಳ ಹಿನ್ನೆಲೆಯಲ್ಲಿ, ರಾಷ್ಟ್ರೀಯ ಪಿಂಚಣಿ ಯೋಜನೆಗೊಳಪಟ್ಟ ಈ ಕೆಳಕಂಡ ಅಧಿಕಾರಿ/ ನೌಕರರು ದಿನಾಂಕ: 01.04.2006ರ ಪೂರ್ವದಲ್ಲಿನ ಉಲ್ಲೇಖ (1)ರ ಬ್ಯಾಕ್‌ ಲಾಗ್ ನೇಮಕಾತಿ ಅಧಿಸೂಚನೆ ಮೂಲಕ ಆಯ್ಕೆ ಹೊಂದಿ ದಿನಾಂಕ: 01.04.2006ರ ನಂತರದಲ್ಲಿ ಮಂಡಳಿಯ ಸೇವೆಗೆ ಸೇರಿರುವುದರಿಂದ ಉಲ್ಲೇಖ-(6)ರ ಸರ್ಕಾರದ ಆದೇಶದನ್ವಯ ಅವರನ್ನು ಹಿಂದಿನ ಹಳೆಯ ಡಿಫೈನ್ಸ್ ಪಿಂಚಣಿ ಯೋಜನೆಗೆ (ಓ.ಪಿ.ಎಸ್) ವ್ಯಾಪ್ತಿಗೊಳಪಡಿಸಿ ಆದೇಶಿಸಿದೆ.

ಇದನ್ನೂ ಓದಿ: Caste Census: ಜಾತಿಗಣತಿ ವರದಿ; ಮರು ಗಣತಿಗೆ ರಾಜ್ಯ ಸರ್ಕಾರ ನಿರ್ಧಾರ, ಜೂ.12ಕ್ಕೆ ವಿಶೇಷ ಕ್ಯಾಬಿನೆಟ್‌ ಸಭೆ



Source link

ADMIN

About Author

Leave a comment

Your email address will not be published. Required fields are marked *

You may also like

ಕರ್ನಾಟಕ

Microsoft: Empowering the Digital World

Microsoft is a global technology company known for shaping the modern digital experience. From its iconic Windows operating system to
ಕರ್ನಾಟಕ

Microsoft: Empowering the Digital World

Microsoft is a global technology company known for shaping the modern digital experience. From its iconic Windows operating system to
Translate »